ಇದೀಗ ಗುಟ್ಟಿನ ವಿಷಯ ಏನಲ್ಲ : ಸ್ಕಿನ್‌ ಕೇರ್‌ ಕೇವಲ ಇಂಜೆಕ್ಷನ್ಸ್ ಟ್ಯಾಬ್ಲೆಟ್ಸ್ ಗೆ ಸರಿ ಹೋಗುವಂಥದ್ದಲ್ಲ. ಇದಕ್ಕಾಗಿ ಬೆಸ್ಟ್ ಸ್ಪಾ   ಏಸ್ಥೆಟಿಕ್‌ ಚಿಕಿತ್ಸೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಕ್ರಿಸ್ಟೀನ್‌ ಹನಿಯನ್‌ ಹೇಳುವುದೆಂದರೆ, ತನ್ನ ಕ್ಲಿನಿಕ್‌ ನಲ್ಲಿ ಇಂಜೆಕ್ಷನ್‌ ಗಳ ಗೊಡವೆ ಇಲ್ಲದೆ ಸ್ಕಿನ್‌ ಸರಿಹೋಗುತ್ತೆ ಅಂತ! ಒಬ್ಬ ಟಿವಿ ಇನ್‌ ಫ್ಲೂಯೆನ್ಸರ್‌ ಡೋಲೋರೇಸ್‌ ಈ ಕುರಿತಾಗಿ ಒಂದು ಶೋನಲ್ಲಿ, ಕ್ರಿಸ್ಟೀನ್ ತನ್ನ ಸ್ಕಿನ್‌ ಗುರು ಎಂದು ಹೇಳಿದಾಗ, ಇಬ್ಬರೂ ಖುಷಿಗೊಂಡಿದ್ದರು. ಇತ್ತೀಚೆಗೆ ಹೆಂಗಸರು ತಮ್ಮ ಚಿರಯೌವನ ಉಳಿಸಿಕೊಳ್ಳಲೆಂದು ಚರ್ಮದ ಆರೈಕೆಯತ್ತ ಬಹಳ ಗಮನ ಕೊಡುತ್ತಿದ್ದಾರೆ. ಸುಕ್ಕು ನಿರಿಗೆ ಮುಖದೊಡನೆ ಮೀಡಿಯಾದಲ್ಲಿ ಮಿಂಚಲು ಸಾಧ್ಯವೇ? ಹಾಗೆಯೇ ಲೀಡರ್‌ ಗಳಾಗಿ ಬೀಗುತ್ತಿರುವ ಗಂಡಸರು ಸಹ ಇಂಥ ಚಿಕಿತ್ಸೆಗಳಿಗೆ ಮೊರೆ ಹೋಗುತ್ತಾರೆಂಬುದು ಈಗ ಗುಟ್ಟಿನ ಸಂಗತಿಯಲ್ಲ. ಎಲ್ಲಾ ಚುನಾವಣೆ ಮಹಿಮೆ!

swoon-adsmith-broker

ಗೋಡೆಯೇ ಮಾತನಾಡಿದಾಗ! : ಬೀದಿ ಬದಿ ಕಲೆ ಇದೀಗ ವಿಶ್ವವಿಡೀ ಕಲಾವಿದರ ಭಾಗಳಿಗೆ ಜೀವ ನೀಡುತ್ತಿದೆ. ಮುರಿದ, ಸೊಟ್ಟಂಪಟ್ಟ ಖಾಲಿ ಗೋಡೆಗಳು ಇದೀಗ ಇವರ ಹೊಸ ಕ್ವಾನ್ವಾಸ್‌! ಬಹಳಷ್ಟು ತೆರೆಮರೆಯ ಕಲಾವಿದರು ಇಂಥ ಒಂದು ಮಹಾನ್‌ ಪ್ರಯತ್ನಕ್ಕೆ ತಮ್ಮ ಶ್ರಮ, ಸಮಯ ನೀಡುತ್ತಿದ್ದಾರೆ. ಇದರಿಂದ ಅವರ ಭಾವ ಹೊರಬಂದು, ಕೆಟ್ಟ ಗೋಡೆಗೆ ಒಳ್ಳೆ ಶೋಭೆ ಸಹ ಬರುತ್ತದೆ. ಪ್ಲಾಸ್ಟರ್‌ ಜಡಿದ ಒಂದು ಗೋಡೆ ಮೇಲೆ ಸನ್‌ ಎಂಬ ಕಲಾವಿದ, ಒಬ್ಬ ಅಸಹಾಯಕ ಅಬಲೆಯ ಕುರಿತಾಗಿ ಹೀಗೆ ಪೇಂಟ್‌ ಮಾಡಿದಾಗ, ಸಾವಿರಾರು ಹುಡುಗಿಯರ ಭಾವನೆಗಳನ್ನು ಸಮಾಜದೆದುರು ತೋರಿಸಿದಂತಾಯಿತು.

enice-favella-berseth-fashion-g

ಇವರಿಂದ ಕಲಿಯಬಾರದೇಕೆ? : ಯಂಗ್‌ ಫ್ಯಾಷನ್‌ ಡಿಸೈನರ್‌ ಆ್ಯನಿಸ್‌ ಮಾರ್ ಲೆಲಾ, ಮಿಲಾನ್‌ ನಲ್ಲಿ ಸ್ಥಾಪಿತಗೊಂಡ ಬರ್ಸೇಥ್ ಫ್ಯಾಷನ್‌ ಕಂಪನಿಯನ್ನು ಅಮೆರಿಕಾದ ಒಂದು ದೊಡ್ಡ ಕಂಪನಿ ಖರೀದಿಸಿದಾಗ, ಇವಳು ಬಹಳ ಖುಷಿ ಹಂಚಿಕೊಂಡಳು. ಅವಳ ಪೋರ್ಟ್‌ ಪೋಲಿಯೋದಲ್ಲಿ ಫ್ಯಾಷನ್‌ ಡ್ರೆಸೆಸ್‌ ಸಹ ಬೇರೆ ಉದ್ಯಮಗಳಂತೆಯೇ ಕೂಡಿಕೊಳ್ಳುತ್ತವೆ ಎಂದಳು. ಈಗೆಲ್ಲ ಪಾಶ್ಚಾತ್ಯ ದೇಶಗಳಲ್ಲಿ ಬಣ್ಣ, ಧರ್ಮ, ಮೂಲ, ವಯಸ್ಸು ಇತ್ಯಾದಿಗಳಿಗೆ ಯಾರೂ ಮಹತ್ವ ಕೊಡುವುದಿಲ್ಲ. ಇಂಗ್ಲೆಂಡ್‌ಸ್ಕಾಟ್ ಲ್ಯಾಂಡ್‌ ಗಳಲ್ಲಿ ಭಾರತೀಯ ನೇತಾರರು ಬೇಕಾದಷ್ಟಿದ್ದಾರೆ. ಅಮೆರಿಕಾದ ಉಪರಾಷ್ಟ್ರಪತಿಯಲ್ಲಿ ಭಾರತೀಯ ಮೂಲದ ರಕ್ತವಿದೆ. ಇವರೆಲ್ಲ ತಂತಮ್ಮ ದೇಶಗಳಿಗೆ ಏನಾದರೂ ಮಾಡಲೇಬೇಕೆನ್ನುವ ಹುಮ್ಮಸ್ಸಿನಲ್ಲಿದ್ದಾರೆ. ಆ್ಯನಿಸ್‌ ಎಲ್ಲಿಯವಳು, ಕರಿಯಳೇ ಎಂಬುದಿಲ್ಲಿ ಮುಖ್ಯವಲ್ಲ. ಇವಳ ಡಿಸೈನಿಂಗ್‌ ಸೆನ್ಸ್ ಅಷ್ಟೇ ಮುಖ್ಯ. ನಾವಿಲ್ಲಿ ಧರ್ಮದ ಹೆಸರಲ್ಲಿ ತಲೆ ಚಚ್ಚಿಕೊಳ್ಳುತ್ತೇವೆ, ಜಾತಿ ಹೆಸರಲ್ಲಿ ಕಲಹ ಹಬ್ಬಿಸುತ್ತೇವೆ. ಇಂಥವರಿಂದ ನಾವು ಕಲಿಯುವುದು ಯಾವಾಗ?

pressrelease_524165

ಬಾಡಿ ಅಲ್ಲ ಎನರ್ಜಿ ನೋಡಿ : ಕೇಚ ಡ್ಯಾನ್ಸ್ ಪ್ರಾಜೆಕ್ಟ್ ಪ್ರಕಾರ, ಡ್ಯಾನ್ಸ್ ನಿಂದ ಎಲ್ಲಾ ಕ್ಷೇತ್ರದ ಹೆಂಗಸರಲ್ಲೂ ಅದ್ಭುತ ಸೆಲ್ಫ್ ಕಾನ್ಛಿಡೆನ್ಸ್ ಇಮ್ಯೂನಿಟಿ ಕೆಪ್ಯಾಸಿಟಿ ಹೆಚ್ಚುತ್ತದಂತೆ! ಡ್ಯಾನ್ಸ್ ನಿಂದ ಕೇವಲ ಬಾಡಿಗೆ ಮಾತ್ರವಲ್ಲ, ಮೈಂಡ್‌ ಗೂ ಹೊಸ ಎನರ್ಜಿ ಸಿಗುತ್ತದೆ. ಇದು ಎಲ್ಲಾ ವಯಸ್ಸಿನ, ವರ್ಗದ ಹೆಣ್ಣಿನ ಹಕ್ಕಾಗಿದೆ. ಹೀಗಾಗಿ ಅವಳು ಜನ ಏನಂತಾರೋ ಏನೋ ಇತ್ಯಾದಿ ಕಂದಾಚಾರಿಗಳ ಕೂಗಿಗೆ ಕಿವಿಗೊಡಬಾರದು. ತಾನು ಇದಕ್ಕೆ ಫಿಟ್‌ ಅಲ್ಲ ಎಂಬ ರಾಗ ಬೇಡ. ಈ ಪ್ರಾಜೆಕ್ಟ್ ಫೌಂಡರ್‌ ಪಮೇಲಾಳ ಪ್ರಕಾರ, ಆಕೆ ಕೇವಲ ಕ್ಲಾಸ್‌ ತೆಗೆದುಕೊಳ್ಳುವುದಿಲ್ಲ, ಬದಲಿಗೆ ಸಮುದಾಯ ಕಟ್ಟುತ್ತೇನೆ ಅಂತಾಳೆ! ಇಲ್ಲಿಗೆ ಸೇರಿದ ಅಬಲೆಯರು ಎಂಥ ಸಬಲೆಯರಾಗಿದ್ದಾರೆ ನೋಡಿ!

Gabrielle-Mariella

ಕಲೆಯ ಆರಾಧಕರಿಗೇನೂ ಕೊರತೆ ಇಲ್ಲ : ಅಮೆರಿಕಾದ ಬ್ರಾಡ್ವೇಯ ಗಾಬ್ರಿಯೇಲಾ ಮರಿಯಾಲಾ ಎಂಬಾಕೆಯು ವೈಶಿಷ್ಟ್ಯ ಎಂದರೆ, ಆಕೆ ಅಲ್ಲಿಯ ಬಹುತೇಕ ಕಲಾವಿದರ ಮಿಮಿಕ್ರಿ ಮಾಡಬಲ್ಲಳು. ಹೀಗಾಗಿ ಈಕೆಯ ಟಿಕ್‌ ಟಾಕ್‌ ಫಾಲೋಯರ್ಸ್‌ ಸಂಖ್ಯೆ ಲಕ್ಷಾಂತರ ದಾಟಿದೆಯಂತೆ. ಇವಳ ಮಿಮಿಕ್ರಿ ಶೋ ಅಂದಾಕ್ಷಣ ಟಿಕೆಟ್‌ ಗಳು ಕೆಲಲೇ ಗಂಟೆಗಳಲ್ಲಿ ಮಾರಾಟ ಆಗಿಬಿಡುತ್ತವೆ. ಈಕೆ ಅನೇಕ ಕಲಾವಿದರ ಕಂಠದಲ್ಲಿ ಹಾಡಬಲ್ಲಳು, ಸಂಭಾಷಣೆಯ ಗಿಣಿಪಾಠ ಒಪ್ಪಿಸಬಲ್ಲಳು! ಈ ರೀತಿಯ ಸೋಲೋ ಎಂಟರ್ ಟೇನರ್ಸ್‌ ವಿಶ್ವವಿಡೀ ಫೇಮಸ್‌ ಆಗ್ತಿದ್ದಾರೆ. ನಮ್ಮ ದೇಶದಲ್ಲೂ ಸಹ ಸ್ಟಾಂಡ್‌ ಅಪ್‌ ಕಮೆಡಿಯನ್ಸ್ ಎಷ್ಟು ಖ್ಯಾತಿ ಗಳಿಸುತ್ತಿದ್ದಾರೆಂದರೆ ಸರ್ಕಾರಕ್ಕೆ ಅಂಥವರ ಭಯ ಇದೆ, ಕಾರಣವಿಲ್ಲದೆ ಕೆಲವರು ಜೇಲು ಸೇರುತ್ತಿದ್ದಾರೆ!

Food

ಇದು ಸರಿಯಾಗಿದೆ ತಾನೇ? : ನೀವು ಖ್ಯಾತಿವೆತ್ತ ಬ್ರಾಂಡ್‌ ನ ವಸ್ತುಗಳನ್ನು ಮಾತ್ರ ಯಾವುದೇ ಸೆಲ್ಫ್ ಸರ್ವೀಸ್‌ ಸ್ಟೋರ್‌ ಗಳಿಂದ ಕೊಳ್ಳಿರಿ, ಈ ಕುರಿತು ವರ್ಷಗಟ್ಟಲೇ ರಿಸರ್ಚ್‌ ನಡೆಯುತ್ತಲೇ ಇದೆ. ಅದರ ಪ್ಯಾಕಿಂಗ್‌ ಸರಿ ಇದ್ದು, ಗ್ರಾಹಕರಿಗೆ ಬ್ರಾಂಡ್ ಗೊತ್ತಿದ್ದರೆ, ಆಗ ಮಾತ್ರ ಅಂಥವನ್ನು ಕೊಳ್ಳಬೇಕು. 75% ಇಂಥ ಗ್ಯಾರಂಟಿ ಮಾರಾಟವಾಗುತ್ತವೆ ಎಂದರ್ಥ. ಹೀಗಾಗಿ ಖಾಸಗಿ ಕಂಪನಿಗಳು ಲಕ್ಷಾಂತರ ಡಾಲರ್‌ ಗಳನ್ನು ಪ್ಯಾಕಿಂಗ್‌ಡಿಸೈನ್‌ ಗೆಂದೇ ಖರ್ಚು ಮಾಡುತ್ತವೆ, ಪಬ್ಲಿಸಿಟಿಗಾಗಿ ಕೋಟ್ಯಂತರ ಖರ್ಚು ಮಾಡಿ ಗ್ರಾಹಕರಿಗೆ ಅವನ್ನು ಪರಿಚಯಿಸುತ್ತವೆ. ಈ ಪ್ರಕರಣಗಳಲ್ಲಿ ಗ್ರಾಹಕರು ಕೊಳ್ಳುವ ಎಷ್ಟೋ ವಸ್ತುಗಳು, ಈಗಾಗಲೇ ಬೇರೆ ಹೆಸರಲ್ಲಿ ಮನೆಯಲ್ಲಿ ಕೊಳೆಯುತ್ತಿರುತ್ತವೆ ಹಾಗೂ ಎಕ್ಸ್ ಪೈರಿ ಡೇಟ್ಸ್ ಸಹ ಮುಗಿದಿರುತ್ತವೆ, ಎಂಬುದು ಬೇರೆ ಮಾತು. ಈ ಡಿಸೈನ್‌ ಎಕ್ಸ್ ಪರ್ಟ್‌ ಇದನ್ನೇ ಗಮನಿಸುತ್ತಿದ್ದಾನೆ!

corporate-guests-at-event

ನಶೆ ಅಗತ್ಯವೇನಲ್ಲ : ಯಾವ ಕಾರ್ಪೊರೇಟ್‌ ಗೆಸ್ಟ್ ಅತ್ತ ಡ್ರಿಂಕ್ಸ್ ಮಾಡದೆ, ಇತ್ತ ಸ್ಮೋಕ್‌ ಇಲ್ಲದೆ, ಲಿವರ್‌ ಪೂಲ್‌, ಇಂಗ್ಲೆಂಡ್‌ ನ `ಬೀ ದಿ ಸ್ಪಿರಿಟ್‌ ಇವೆಂಟ್‌ ಚಾರ್ಟ್‌’ನಿಂದ ಔಟ್‌ ಆಗಿದ್ದಾರೋ ಅಂಥವರು ಅಲ್ಲಿನ ಹಾಡು, ನೃತ್ಯ, ಊಟ. ಮ್ಯೂಸಿಕ್‌ ಗಳಲ್ಲಿ ಮಜಾ ಕಾಣುವುದಿಲ್ಲ ಎಂಬುದು ಭ್ರಮೆ. ಬಹುತೇಕರಿಗೆ ಈ ರೀತಿ ಬಿಟ್ಟಿ ಪಾರ್ಟಿಗಳಲ್ಲಿ ಮಜಾ ಉಡಾಯಿಸದಿದ್ದರೆ ಅವರುಗಳು ವೇಸ್ಟ್ ಬಾಡಿಗಳು! ಬದಲಿಗೆ ಉಲ್ಟಾ ಆದೀತು, ಕುಡಿತದ ಅಮಲಿನಲ್ಲಿ ಜನ ಉಲ್ಟಾ ಸೀದಾ ಮಾತನಾಡೋದೇ ಹೆಚ್ಚು. ಇವೆಂಟ್‌ ಕಂಪನಿಯ ಈ ಯುವಜನತೆ ಹೊಸತನಕ್ಕಾಗಿ ತುಡಿಯುತ್ತಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ