ಸ್ಯಾಂಡಲ್‌ವುಡ್‌ನ ‘ಯು ಟರ್ನ್‌’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಂಗಭೂಮಿ ಕಲಾವಿದೆ ಶ್ರದ್ಧಾ ಶ್ರೀನಾಥ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.ಯು ಟರ್ನ್‌, ಆಪರೇಷನ್‌ ಅಲಮೈಲಮ್ಮ, ಡಿಯರ್ ವಿಕ್ರಮ್ ಸಿನಿಮಾದ ಮೂಲಕ ಸಖತ್​ ಫೇಮಸ್​ ಆಗಿರುವ ನಟಿ ಶ್ರದ್ಧಾ ಶ್ರೀನಾಥ್ ಸದ್ಯ ಜಾಲಿ ಮೂಡ್​ನಲ್ಲಿದ್ದಾರೆ.
ಕನ್ನಡ ಸಿನಿಮಾದಲ್ಲಿ ನಟಿಸಿದ ನಂತರ ಪರಭಾಷೆಯಿಂದಲೂ ಸಾಕಷ್ಟು ಅವಕಾಶಗಳು ಹರಿದುಬಂದವು. ಡಿಯರ್ ವಿಕ್ರಮ್, ರುಸ್ತಮ್, ದಿ ವಿಲನ್, ಉರ್ವಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿ ಸಕ್ರಿಯರಾಗಿದ್ದಾರೆ.ಸದ್ಯ ಮಾಲ್ಡೀವ್ಸ್ ಕಡೆ ಮೂಖ ಮಾಡಿರುವ ಶ್ರದ್ಧಾ ಶ್ರೀನಾಥ್‌, ಮಾಲ್ಡೀವ್ಸ್​ನಲ್ಲಿ ಕಾಲ ಕಳೆಯುತ್ತಿರೋ ಹಾಟ್​ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದು, ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.ನಟಿ ಇದೇ ಮೊದಲ ಬಾರಿಗೆ ಸಖತ್ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಾಲ್ಡೀವ್ಸ್‌ ಪ್ರವಾಸದ ಫೋಟೋಗಳ ಜೊತೆಗೆ ‘ಅದು ಕನಸಾಗಿರಲಿಲ್ಲ’ ಎಂದು ಬರೆದುಕೊಂಡಿದ್ದಾರೆ. ಅದು ಯಾವ ಕನಸೆಂದು ಮಾತ್ರ ರಿವೀಲ್​ ಮಾಡಿಲ್ಲ.
ನಟಿ ಸಖತ್​ ಬೋಲ್ಡ್​ ಲುಕ್​ನಲ್ಲಿ ಫೋಟೋಗೆ ಪೋಸ್​ ಕೊಟ್ಟು ಇನ್​ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಇದೇ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.ತಮಿಳು ಮತ್ತು ತೆಲುಗಿನಲ್ಲಿ ಹೆಚ್ಚೆಚ್ಚು ಸಿನಿಮಾಗಳನ್ನು ಮಾಡುತ್ತಿರುವ ಶ್ರದ್ಧಾ, ಸದ್ಯ ಕನ್ನಡದತ್ತ ಅವರು ಮುಖ ಮಾಡಿಲ್ಲ. 2022ರಲ್ಲಿ ತೆರೆಕಂಡಿದ್ದ ‘ಡಿಯರ್ ವಿಕ್ರಮ್’ ಸಿನಿಮಾವೇ ಕೊನೇ. ಆನಂತರ ಶ್ರದ್ಧಾ ಸ್ಯಾಂಡಲ್‌ವುಡ್‌ನಲ್ಲಿ ನಟಿಸಿಲ್ಲ.“ಯು ಟರ್ನ್‌” ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ್ದ ಶ್ರದ್ಧಾ, ಆನಂತರ ಪರಭಾಷೆಯಿಂದಲೂ ಸಾಕಷ್ಟು ಅವಕಾಶಗಳು ಹರಿದುಬಂದವು. ಸದ್ಯ ಅವರೀಗ ಕನ್ನಡಕ್ಕಿಂತಲೂ ಪರಭಾಷೆಯಲ್ಲಿಯೇ ಸಕ್ರಿಯವಾಗಿದ್ದಾರೆ. ಅವರು ಇತ್ತೀಚೆಗೆ ಮಾಲ್ಡೀವ್ಸ್‌ಗೆ ಪ್ರವಾಸಕ್ಕೆ ಹೋಗಿದ್ದರು. ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಮಾಲ್ಡೀವ್ಸ್ ಪ್ರವಾಸದ ಒಂದು ವಿಡಿಯೋಗೆ ‘ವಾಸ್ತವದಲ್ಲಿ ಒಂದು ಕಾಲು, ಇನ್ನೂ ಒಂದು ಮರಳಿನಲ್ಲಿ..’ ಎಂದು ಕ್ಯಾಪ್ಷನ್ ನೀಡಿರುವ ಶ್ರದ್ಧಾ ಫೋಟೋಗಳಿಗೆ ಸೆಲೆಬ್ರಿಟಿಗಳು ಮಾತ್ರವಲ್ಲ, ನೂರಾರು ಮಂದಿ ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ. 1.೫೦ ಲಕ್ಷ ಲೈಕ್ಸ್ ಕೂಡಾ ಸಿಕ್ಕಿವೆ. ಈ ವರ್ಷ ನಂದಮೂರಿ ಬಾಲಕೃಷ್ಣ ಜೊತೆ ಶ್ರದ್ಧಾ ಶ್ರೀನಾಥ್ ನಟಿಸಿದ್ದ ಡಾಕು ಮಹಾರಾಜ್ ಸಿನಿಮಾ ಹಿಟ್ ಆಗಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ