ಸ್ಟಾಂಡ್ ಅಪ್ ಕಾಮಿಡಿ, ಡಿಸೆಬಿಲಿಟಿ ಇನ್ ಕ್ಲೂಶನ್ ಅಡ್ವೋಕೇಟ್
ಬ್ಯಾರಿಯರ್ ಬ್ರೇಕರ್ ಅವಾರ್ಡ್
``ಅಂಗೈಕಲ್ಯವನ್ನು ತನ್ನ ದೌರ್ಬಲ್ಯಕ್ಕೆ ಬದಲಾಗಿ, ಪರಿವರ್ತನೆಯ ಶಕ್ತಿ ಆಗಿಸಿಕೊಂಡ ದಿಟ್ಟ ಮಹಿಳೆ....''
ನಿಧೀ ಗೋಯಲ್ ಒಬ್ಬ ಭಾರತೀಯ ಸ್ಟಾಂಡ್ ಅಪ್ ಕಮೆಡಿಯನ್ ಆಗಿ ದೇಶವಿಡೀ ಶೋ ನಡೆಸುತ್ತಾ ಯಶಸ್ವೀ ಎನಿಸಿದ್ದಾರೆ. ತಮ್ಮ ವೈಯಕ್ತಿಕ ಅನುಭವ, ತೀವ್ರ ಸಾಮಾಜಿಕ ಟೀಕೆ ಟಿಪ್ಪಣಿಗಳನ್ನು ಒಟ್ಟಿಗೆ ಬೆರೆಸಿ, ಸಾಹಸಪೂರ್ವಕವಾಗಿ ಎಲ್ಲರ ಮುಂದೆ ಪ್ರಸ್ತುತಪಡಿಸುತ್ತಾರೆ. ಈಕೆ ಭಾರತದ ಪ್ರಪ್ರಥಮ ಅಂಧ ಮಹಿಳಾ ಸ್ಟಾಂಡ್ ಅಪ್ ಕಮೆಡಿಯನ್ ಎನಿಸಿದ್ದಾರೆ. ತಮ್ಮ ಕಂಟೆಂಟ್ ನಲ್ಲಿ ಹಾಸ್ಯ, ವ್ಯಂಗ್ಯದ ಜೊತೆ ಕ್ರಾಂತಿಕಾರಕ ಮೆಸೇಜ್ ನೀಡುವುದೇ ಈಕೆಯ ಹೆಗ್ಗಳಿಕೆ.
ಪ್ರಾರಂಭಿಕ ಹಂತ : ಮುಂಬೈನಲ್ಲಿ ಹುಟ್ಟಿ ಬೆಳೆದ ನಿಧೀ, 15ರ ಹರೆಯದಲ್ಲೇ ರೆಟಿನೈಟಿಸ್ ಪಿಗ್ಮೆಂಟೋಸಾ ಎಂಬ ನೇತ್ರರೋಗಕ್ಕೆ ತುತ್ತಾಗಿ, ದೃಷ್ಟಿ ಕಳೆದುಕೊಂಡರು. ಪೇಂಟಿಂಗ್ ನಲ್ಲಿ ಸಕ್ರಿಯರಾಗಿ, ಸಾರ್ವಜನಿಕರೊಂದಿಗೆ ಬೆರೆತರು. 2015ರಲ್ಲಿ ಸ್ಟಾಂಡ್ ಅಪ್ ಕಾಮಿಡಿಗೆ ಡೆಬ್ಯುಗೊಂಡರು. ಫ್ರೌಢ ಸಂಭಾಷಣೆ ಇವರ ಕಾಮಿಡಿಯನ್ನು ಶಕ್ತಿಶಾಲಿ ಆಗಿಸಿತು.
ಕಾರ್ಯಕಲಾತ್ಮಕ ಅಭ್ಯಾಸ : ತಮ್ಮದೇ ವ್ಯಕ್ತಿಗತ ದೃಷ್ಟಿಕೋನದಿಂದ ಕಾಮಿಡಿ ವಿಶ್ಲೇಷಿಸುವ ಈಕೆ, ಸಾಮಾಜಿಕ ಮೆಸೇಜ್ ನೀಡಲು ಮರೆಯುವುದಿಲ್ಲ. ಟೀಕೆಟಿಪ್ಪಣಿ ಜೊತೆ ಹಾಸ್ಯ ವ್ಯಂಗ್ಯ ಬೆರೆಸುತ್ತಾರೆ. ಸಂದರ್ಭ, ಸನ್ನಿವೇಶಕ್ಕೆ ತಕ್ಕಂತೆ ಸಮ್ಮೇಳನಗಳ ಸಭಿಕರನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ. ಇವರ ಪರ್ಫಾರ್ಮೆನ್ಸ್ `ಅಂಗವೈಕಲ್ಯ ಶಾಪವಲ್ಲ' ಎಂಬುದನ್ನು ದಟ್ಟವಾಗಿ ನಿರೂಪಿಸುತ್ತದೆ.
ಇದನ್ನು ಕಾಮಿಡಿ ಕ್ಲಬ್ ಗಳಿಗಷ್ಟೇ ಸೀಮಿತಗೊಳಿಸದೆ, ಸಹಕಮೆಡಿಯನ್ ಅದಿತಿ ಮಿತ್ತಲ್ ರ ಜೊತೆ ಬೆರೆತು `ಬ್ಯಾಡ್ ಗರ್ಲ್ಸ್' ವೆಬ್ ಸೀರೀಸ್ ನಲ್ಲೂ ಕಾಣಿಸಿಕೊಂಡಿದ್ದಾರೆ. ತಮ್ಮ ಮೊನಚಾದ ಮಾತುಗಳಿಂದ, ಯಾವುದೇ ಸಂಕೋಚವಿಲ್ಲದೆ ಕಾಮಿಡಿಗೆ ರಂಗು ತುಂಬುತ್ತಾರೆ.
ಸಾಮಾಜಿಕ ಬದಲಾವಣೆಯಲ್ಲಿ ಪಾತ್ರ : ಅಂಗವಿಕಲರ ಹಕ್ಕು ಹಾಗೂ ಹಾಸ್ಯದ ನಡುವೆ ಸ್ಪಷ್ಟ ಸಂಬಂಧ ಸ್ಥಾಪಿಸುವ ನಿಧೀ, ಆ ನಿಟ್ಟಿನಲ್ಲಿ ಭಾರತದ ಪ್ರಥಮ ಕಮೆಡಿಯನ್. ಈ ರೀತಿ ಇಡೀ ವೇದಿಕೆಯನ್ನೇ ತಮ್ಮ ಕಾಮಿಡಿ ಮಾಧ್ಯಮ ಆಗಿಸಿಕೊಳ್ಳುತ್ತಾರೆ. ಇವರ ಮಾತು ವೀಕ್ಷಕರನ್ನು ನಗಿಸುತ್ತಲೇ, ಆಳವಾದ ವಿಚಾರ ಮಂಥನಕ್ಕೆ ಇಳಿಸುತ್ತದೆ. ಪ್ರೇಮ, ಕಾಮ, ಅಂಗೈಕಲ್ಯ ಎಲ್ಲವನ್ನೂ ಮೇಳೈಸಿ ಹೇಳುತ್ತಾರೆ. ಇದರಿಂದಾಗಿ ಇತರ ಹಲವಾರು ವಿಕಲಚೇತನ ಕಲಾವಿದರು ಇವರಿಂದ ಪ್ರಭಾವಿತರಾಗಿ, ಪ್ರೇರಣೆ ಪಡೆದಿದ್ದಾರೆ.
ವಿಶೇಷ ಐಡೆಂಟಿಟಿ : ಪುರುಷಪ್ರಧಾನ ಎನಿಸಿರುವ ಸ್ಟಾಂಡ್ ಅಪ್ ಕಾಮಿಡಿಯನ್ನು ಮೊದಲ ಅಂಗವಿಕಲ ಅಂಧ ಮಹಿಳೆಯಾಗಿ ಸುಲಭ ಸಾಧ್ಯಗೊಳಿಸಿದ್ದಾರೆ. ವೆಬ್‌ಹಾಗೂ ಮೀಡಿಯಾ ಫಾರ್ಮ್ಯಾಟ್ ನಲ್ಲಿ ಅಂಗೈಕಲ್ಯವನ್ನು ಹಾಸ್ಯದ ವಕಾಲತ್ತಿನಿಂದ, ವಿಶೇಷ ರೂಪದಲ್ಲಿ ಪ್ರದರ್ಶನ ನೀಡುತ್ತಾರೆ. ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಸಂಘಸಂಸ್ಥೆಗಳ ಜೊತೆ ಸಲಹಾಗಾರರಾಗಿ ಪ್ರಧಾನ ಪಾತ್ರ ವಹಿಸಿದ್ದಾರೆ. ಈಕೆ ತಮ್ಮ ವಿಕಲಚೇತನ ಹಾಗೂ ಲಿಂಗಭೇದ ತಾರತಮ್ಯದ ಹಕ್ಕುಗಳ ಕುರಿತಾಗಿ ಹೆಚ್ಚು ಸಕ್ರಿಯರಾಗಿ ಹೋರಾಡುತ್ತಾ, ಅಂತಾರಾಷ್ಟ್ರೀಯ ಮಟ್ಟದಲ್ಲಿ, ಒಬ್ಬ ಅಂಧ ಮಹಿಳೆ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟ ದಿಟ್ಟ, ಧೀರ ವನಿತೆಯಾಗಿದ್ದಾರೆ!





