ಶರತ್ ಚಂದ್ರ
ಜೆನಿಲಿಯಾ ಡಿಸೋಜಾ ಮತ್ತೆ ಕನ್ನಡಕ್ಕೆ ಬಂದಿದ್ದಾರೆ.ಮುಂಬೈ ನಲ್ಲಿ ಹುಟ್ಟಿ ಬೆಳೆದು ಮಾಡಲಿಂಗ್ ಕ್ಷೇತ್ರದ ಮೂಲಕ ಗ್ಲಾಮರ್ ವರ್ಲ್ಡ್ ಗೆ ಎಂಟ್ರಿ ಕೊಟ್ಟಿದ್ದ ಜೇನಿಲಿಯಾ, ಹಿಂದಿ ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟರೂ ಕೂಡ ಯಾವುದೇ ಮಾಡಿರೋ ಅತೀ ಹೆಚ್ಚು ನಟಿಸಿದ್ದು ತೆಲುಗು ಚಿತ್ರಗಳಲ್ಲಿ. ‘ಬೊಮ್ಮರಿಲ್ಲು’ ಚಿತ್ರದ ಯಶಸ್ಸಿನ ನಂತರ ತೆಲುಗಿನ ಮೋಸ್ಟ್ ವಾಂಟೆಡ್ ಹೀರೋಯಿನ್ ಆಗಿ ತೆಲುಗಿನಲ್ಲೇ ಸೆಟ್ಲ್ ಆಗಿದ್ರು.
ರಿತೇಶ್ ದೇಶಮುಖ್ ಜೊತೆ ಲವ್ವಲ್ಲಿ ಬಿದ್ದು 2012ರಲ್ಲಿ ಮದುವೆಯಾಗಿ ಮತ್ತೆ ಮುಂಬೈಗೆ ಶಿಫ್ಟ್ ಆಗಿದ್ದರು. ಮದುವೆಯಾದ ನಂತರ ಒಂದಷ್ಟು ಬೆರಳೆಣಿಕೆಯ ಹಿಂದೆ ಮತ್ತು ಮರಾಠಿ ಚಿತ್ರಗಳಲ್ಲಿ ಮಾತ್ರ ನಟಿಸಿದ್ದರು.
. ಈಗ ಮತ್ತೆ ‘ಜೂನಿಯರ್ ‘ಚಿತ್ರದ ಮೂಲಕ ದಕ್ಷಿಣಕ್ಕೆ ವಾಪಸಾಗಿದ್ದಾರೆ. ಗಾಲಿ ಜನಾರ್ದನ್ ರೆಡ್ಡಿ ಅವರ ಪುತ್ರ ಕಿರೀಟಿಯ ಮೊದಲ ಚಿತ್ರ ‘ಜೂನಿಯರ್ ‘ನಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ತಯಾರಾಗುತ್ತಿರುವ ಈ ಚಿತ್ರ ಇದೇ ತಿಂಗಳು 18ರಂದು ಬಿಡುಗಡೆಯಾಗಲಿದೆ.
ತೆಲುಗಿನಲ್ಲಿ ನಾಯಕಿಯಾಗಿ ಒಂದಷ್ಟು ವರ್ಷ ಮೆರೆದ ಜೆನೀಲಿಯ ಈ ಬಾರಿ ಪ್ರಮುಖವಾದ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
2008 ರಲ್ಲಿ ಬಿಡುಗಡೆಯಾದ ಶಿವಣ್ಣ ಅಭಿನಯದ ‘ಸತ್ಯ ಇನ್ ಲವ್’ ಚಿತ್ರದಲ್ಲಿ ಪ್ರಪ್ರಥಮ ಬಾರಿಗೆ ಕನ್ನಡದಲ್ಲಿ ಕಾಣಿಸಿಕೊಂಡಿದ್ದರು.
ಇತ್ತೀಚೆಗೆ ಬಿಡುಗಡೆಯಾಗಿ ಬಾಲಿವುಡ್ ನಲ್ಲಿ ಪ್ರೇಕ್ಷಕರ ಮೆಚ್ಚಿಕೆ ಪಡೆದು ಉತ್ತಮ ಗಳಿಕೆ ಪಡೆಯುತ್ತಿರುವ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಅಭಿನಯದ ‘ಸಿತಾರೆ ಜಮೀನ್ ಪರ್’ ಚಿತ್ರದಲ್ಲಿ ಅಮೀರ್ ಖಾನ್ ಪತ್ನಿಯಾಗಿ ಉತ್ತಮ ಅಭಿನಯ ನೀಡಿ ಗಮನ ಸೆಳೆದಿದ್ದಾರೆ.
ಜೆನಿಲಿಯಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು ಪತಿ ರಿತೇಶ್ ದೇಶಮುಖ್ ಜೊತೆ ಮಾಡುತ್ತಿರುವ ರೀಲ್ಸ್ ಮೂಲಕ ಕಪಲ್ ಅಂದರೆ ಹೀಗಿರಬೇಕು ಎಂದು ಜನ ಮಾತಾಡುವುದರ ಮೂಲಕ ಈ ಜೋಡಿಗೆ ಫ್ಯಾನ್ ಆಗಿದ್ದಾರೆ
ನಿಜ ಜೀವನದಲ್ಲೂ ಕೂಡ ಸಾಕಷ್ಟು ಸಾಮರಸ್ಯ ಉಳಿಸಿಕೊಂಡು ಈ ಜೋಡಿ ಬಾಲಿವುಡ್ ನ ಫೇವರೆಟ್ ಅಪ್ ಸ್ಕ್ರೀನ್ ಜೋಡಿಯಾಗಿ ಎಲ್ಲರ ಮನಸ್ಸು ಗೆದ್ದಿದ್ದಾರೆ.
ಒಟ್ಟಿನಲ್ಲಿ ದಕ್ಷಿಣ ದ ಮತ್ತೆ ಮುಖ ಮಾಡಿರುವ
ಜೇನಿಲಿಯಾ ಡಿಸೋಜಾ ರಿಂದ ಮತ್ತಷ್ಟು ದಕ್ಷಿಣ ದ ಚಿತ್ರಗನ್ನು ನಿರೀಕ್ಷಿಸಬಹುದೇನೊ.