ನೀವು ಸಹ ಸೀಳು ತುದಿಯ ಕೂದಲಿನ ಸಮಸ್ಯೆಯಿಂದ ಬೇಸತ್ತಿದ್ದೀರಾ? ಹಾಗಿದ್ದರೆ ಸಲಹೆಗಳನ್ನು ಅಗತ್ಯ ಅನುಸರಿಸಿ……..!

ಸಾಮಾನ್ಯವಾಗಿ ಕೂದಲಿನ ಹೊರಗಿನ ಪದರಕ್ಕೆ ಯಾವುದೇ ಕಾರಣದಿಂದ ಹಾನಿ ಉಂಟಾದರೂ ಈ ಸೀಳು ತುದಿಯ ಕೂದಲಿನ ಸಮಸ್ಯೆ ಉಂಟಾಗುತ್ತದೆ. ಇದರಲ್ಲಿ ಮುಖ್ಯವಾಗಿ ಕೂದಲನ್ನು ಸ್ಟೈಲಿಂಗ್‌ಸ್ಟ್ರೇಟ್‌ ನಿಂಗ್‌ ಮಾಡುವ ಉಪಕರಣಗಳ ಬಳಕೆ, ಡ್ರೈಯರ್‌ ನ ಸತತ ಬಳಕೆಯಿಂದ ಹೆಚ್ಚು ಕೃತಕ ಶಾಖ ಒದಗಿಸುವುದು, ಹೆಚ್ಚು ಕೆಮಿಕಲ್ಸ್ ಯುಕ್ತ ಹೇರ್‌ ಕೇರ್‌ ಪ್ರಾಡಕ್ಟ್ಸ್ ಬಳಕೆ, ಅನಗತ್ಯವಾಗಿ ಆಗಾಗ ಶಾಂಪೂ ಬಳಸಿ ತಲೆಸ್ನಾನ, ಟ್ರಿಮಿಂಗ್‌ ಮಾಡದಿರುವುದು, ಪರಿಸರ ಮಾಲಿನ್ಯ ಇತ್ಯಾದಿ ಕಾರಣಗಳೆಲ್ಲ ಸೇರಿ ಈ ಸಮಸ್ಯೆ ಹೆಚ್ಚುತ್ತದೆ. ಹೀಗಾಗಿ ನೀವು ಇಲ್ಲಿನ ಸಲಹೆಗಳನ್ನು ಅನುಸರಿಸಿ, ಹೆಲ್ದಿ ಕೂದಲ ಹೊಂದಿ, ಈ ಸೀಳು ತುದಿಯಿಂದಲೂ ಮುಕ್ತರಾಗುವಿರಿ.

ಕೊಬ್ಬರಿ ಎಣ್ಣೆ

ಇದಂತೂ ಸೀಳು ತುದಿ ಕೂದಲಿನ ಸಮಸ್ಯೆಗೆ ರಾಮಬಾಣ. ಏಕೆಂದರೆ ಇದು ಶುಷ್ಕ, ಸೀಳು ತುದಿ ಕೂದಲಿನ ಸಮಸ್ಯೆಯನ್ನು ಬುಡ ಸಮೇತ ನಿವಾರಿಸಿ, ಅದರಲ್ಲಿ ಸದಾ ಆರ್ದ್ರತೆ ಉಳಿಸುತ್ತದೆ. ಇದಕ್ಕಾಗಿ ನೀವು ಕೊಬ್ಬರಿ ಎಣ್ಣೆಯನ್ನು ತುಸು ಉಗುರುಬೆಚ್ಚಗೆ ಬಿಸಿ ಮಾಡಿ, ಕೂದಲಿನ ಬುಡ ಭಾಗದಿಂದ ಹಿಡಿದು ಪೂರ್ತಿ ಕೂದಲಿಗೆ ಚೆನ್ನಾಗಿ ಹಚ್ಚಿ ತೀಡಿ ಮಸಾಜ್‌ ಮಾಡಿ.

ಸಂಜೆ ಹೊತ್ತು ಹೀಗೆ ಹಚ್ಚಿಕೊಂಡ ನಂತರ ಇಡೀ ರಾತ್ರಿ ತಲೆಯಲ್ಲಿ ಎಣ್ಣೆ ಊರಲು ಬಿಡಿ. ಮರುದಿನ ಬೆಳಗ್ಗೆ ತಲೆಸ್ನಾನ ಮಾಡಿ. ಇದರಿಂದ ನಿಧಾನವಾಗಿ ಕೂದಲಿನ ಡ್ರೈನೆಸ್‌ ದೂರವಾಗಿ, ಸೀಳು ತುದಿಯ ಸಮಸ್ಯೆ ಸಹ ನಿವಾರಣೆ ಆಗಿಬಿಡುತ್ತದೆ. ಕೊಬ್ಬರಿ ಎಣ್ಣೆಯಲ್ಲಿನ ಕಾಪರ್‌, ಐರನ್‌, ಮೆಗ್ನೀಶಿಯಂ, ಪೊಟಾಶಿಯಂ ಮುಂತಾದ ಖನಿಜಗಳು, ಹೆಲ್ದಿ ಫ್ಯಾಟ್ಸ್ ಇದ್ದು ಸ್ವಸ್ಥ ಕೂದಲಿಗೆ ಪೂರಕ. ಈಗ ಈ ಎಣ್ಣೆ ಬೆರೆತ ಶಾಂಪೂ ಸಹ ಮಾರ್ಕೆಟ್‌ ನಲ್ಲಿ ಲಭ್ಯ, ಇದು ನಿಮ್ಮ ಕೂದಲಿಗೆ ಹೆಚ್ಚು ಲಾಭಕರ.

ನೆಲ್ಲಿಕಾಯಿ

ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್‌ ರಿಚ್‌ ವಿಟಮಿನ್‌ ಸಿ, ಹೇರ್‌ ಫಾಲಿಕ್ಸ್‌ ನ್ನು ರಿಪೇರಿ ಮಾಡುವುದರ ಜೊತೆ, ಕೂದಲಿನ ಬೆಳವಣಿಗೆಗೂ ಹೆಚ್ಚು ಪೂರಕ. ಜೊತೆಗೆ ಫ್ರೀ ರಾಡಿಕಲ್ಸ್ ಕಾರಣ ಕೂದಲಿಗೆ ಆಗಿರುವ ಹಾನಿ ತಪ್ಪಿಸುವಲ್ಲಿಯೂ ಮುಂದು. ನೆಲ್ಲಿಯಲ್ಲಿ ವಿಟಮಿನ್‌ ಸಿ, ಗ್ಯಾಲಿಕ್‌ ಆ್ಯಸಿಡ್‌, ಆ್ಯಂಟಿ ಆಕ್ಸಿಡೆಂಟ್ಸ್ ಇತ್ಯಾದಿ ಅಡಗಿದ್ದು, ಇವು ಕೂದಲಿಗೆ ಬೇಕಾದ ಎಲ್ಲಾ ಪೋಷಕಾಂಶಗಳನ್ನೂ ಒದಗಿಸುತ್ತವೆ.

ಹೀಗಾಗಿ ನೀವು ನೆಲ್ಲಿಯುಕ್ತ ಶಾಂಪೂ ಅಗತ್ಯ ಬಳಸಿರಿ ಅಥವಾ ಬೆಟ್ಟದ ಹಸಿ ನೆಲ್ಲಿಯನ್ನು ಚೆನ್ನಾಗಿ ಜಜ್ಜಿ ದೊಡ್ಡ ಬಟ್ಟಲ ನೀರಿನಲ್ಲಿ ಚೆನ್ನಾಗಿ ಕುದಿಸಿ, ಆರಿದ ನಂತರ ಅದರಿಂದ ತಲೆಗೆ ಮಸಾಜ್‌ ಮಾಡಿ. ಇದರಿಂದ ಕೂದಲಿನ ಡ್ರೈನೆಸ್‌ ದೂರವಾಗಿ, ಕಾಂತಿ ಹೆಚ್ಚುತ್ತದೆ ಹಾಗೂ ನಿಧಾನವಾಗಿ ಸೀಳು ತುದಿಯ ಕೂದಲಿನ ಸಮಸ್ಯೆ ತಂತಾನೇ ದೂರವಾಗುತ್ತದೆ.

ಸೀಗೆಚಿಗರೆಪುಡಿ

ನಮ್ಮ ಅಜ್ಜಿಯರ ಅಜ್ಜಿ ಕಾಲದಿಂದಲೂ ತಲೆಗೆ ಎಣ್ಣೆ ಸ್ನಾನ ಎಂದಾಕ್ಷಣ ಬಳಸುತ್ತಿದ್ದುದು ಈ ಎರಡೂ ಪುಡಿಗಳ ಪೇಸ್ಟ್! ಇದು ತಲೆಹೊಟ್ಟು ಓಡಿಸಿ, ಡ್ರೈನೆಸ್‌, ಹೇರ್‌ ಫಾಲ್ ನಿಯಂತ್ರಿಸುವಲ್ಲಿ ಮುಂದು. ಏಕೆಂದರೆ ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಆ್ಯಂಟಿ ಫಂಗಲ್ ಗುಣಗಳಿದ್ದು, ಆಯುರ್ವೇದಿಕ್‌ ಮೂಲವಾಗಿದೆ. ಡ್ಯಾಂಡ್ರಫ್‌ ಕಾರಣದಿಂದಲೇ ಕೂದಲು ಉದುರುವಿಕೆ, ತುಂಡುರಿಸುವಿಕೆ, ನೆತ್ತಿಯಲ್ಲಿ ನವೆ, ಕಡಿತಗಳು ಹೆಚ್ಚುತ್ತವೆ. ವಿಶೇಷಜ್ಞರ ಸಲಹೆ ಎಂದರೆ, ನಿಮ್ಮ ಕೂದಲಲ್ಲಿ ಹೊಟ್ಟು, ಡ್ರೈನೆಸ್‌, ಸೀಳುತುದಿಯ ಸಮಸ್ಯೆ ಇದ್ದರೆ ಇದನ್ನು ಬಳಸಿ ತಲೆಸ್ನಾನ ಮಾಡಿ. ಈಗೀಗ ಸೀಗೆ ಶ್ಯಾಂಪೂ ಸಹ ಕಾಮನ್‌ ಆಗಿದೆ. ಕೂದಲು ನಿರ್ಜೀವ ಆಗುದವುರಿಂದಲೇ ಈ ಸೀಳು ತುದಿ ಸಮಸ್ಯೆ ಹೆಚ್ಚುವುದು, ಹಾಗಿರುವಾಗ ಸೀಗೆ-ಚಿಗರೆಯ ಪೇಸ್ಟ್ಟ ನಿಮ್ಮ ಕೂದಲಿನ ಸಮಸ್ಯೆ ನಿವಾರಿಸಿ, ಪುಷ್ಟಿಗೊಳಿಸುತ್ತದೆ.

ಆರ್ಗನ್ಆಯಿಲ್

‌ಪರಿಸರ ಮಾಲಿನ್ಯ, ಧೂಳು ಮಣ್ಣಿನ ಕಾರಣ ಆಗುವ ಹಾನಿಯನ್ನು ಹೋಗಲಾಡಿಸುವಲ್ಲಿ ಇದು ಸದಾ ಮುಂದು. ಜೊತೆಗೆ ಇದು ಡ್ಯಾಮೇಜ್ಡ್ ಕೂದಲನ್ನು ಮತ್ತಷ್ಟು ತೆಳುವಾಗದಂತೆ ರಕ್ಷಿಸುತ್ತದೆ. ಇದರಿಂದಾಗಿ ಕೂದಲು ಉದುರುವಿಕೆ ತಪ್ಪುತ್ತದೆ, ನೆತ್ತಿ ಸಶಕ್ತಗೊಳ್ಳುತ್ತದೆ. ಇದರಲ್ಲಿ ಪವರ್‌ ಫುಲ್‌ ಆ್ಯಂಟಿ ಆಕ್ಸಿಡೆಂಟ್ಸ್, ಫೈಬರ್ಸ್‌. ನರಿಶಿಂಗ್‌ ಫ್ಯಾಟಿ ಆ್ಯಸಿಡ್ಸ್ ಅಡಗಿದ್ದು, ಕೂದಲನ್ನು ಫ್ರೀ ರಾಡಿಕಲ್ಸ್ ಮತ್ತು ಸ್ಟೈಲಿಂಗ್‌ ನಿಂದ ಆಗುವ ಹಾನಿ ಕಾಡದಂತೆ ರಕ್ಷಿಸಬಲ್ಲದು. ಇದರಿಂದಾಗಿ ಕೂದಲು ತುಂಡುರಿಸುವುದು, ಸೀಳು ತುದಿಯ ಸಮಸ್ಯೆ ಇತ್ಯಾದಿ ಕಂಟ್ರೋಲ್ ‌ಗೆ ಬರುತ್ತದೆ.

ಭೃಂಗರಾಜ

ಆಯುರ್ವೇದ ಮೂಲದ ಈ ಗಿಡಮೂಲಿಕೆ ಕಳೆದುಕೊಂಡ ಮಾಯಿಶ್ಚರ್‌ ನ್ನು ಪುನಃ ವಾಪಸ್ಸು ತಂದು, ಕೂದಲಿನ ಫ್ರಿಜಿನೆಸ್‌ ಮತ್ತು ಸೀಳು ತುದಿಯ ಸಮಸ್ಯೆ ನೀಗಿಸುತ್ತದೆ. ಜೊತೆಗೆ ಇದು ನೆತ್ತಿಯಲ್ಲಿನ ರಕ್ತ ಸಂಚಾರ ತೀವ್ರಗೊಳಿಸಿ, ಕೂದಲಿನ ಬೆಳವಣಿಗೆಗೆ ಪೂರಕವಾಗಿದೆ. ಹೆಚ್ಚು ಕೆಮಿಕಲ್ಸ್ ಯುಕ್ತ ಹೇರ್‌ ಕೇರ್‌ ಪ್ರಾಡಕ್ಟ್ಸ್ ಬಳಸಿದರ ಕಾರಣ, ಕೂದಲು ಬೆಳ್ಳಗಾಗಿ ಕಳಾಹೀನವಾಗುವ ಸಮಸ್ಯೆಯನ್ನೂ ಇದು ಅಟ್ಟುತ್ತದೆ. ಹೀಗಾಗಿ ನೀವು ಭೃಂಗರಾಜ ಅಡಗಿರುವ ಹರ್ಬಲ್ ಶಾಂಪೂ ಹೇರ್‌ ಆಯಿಲ್ ‌ಬಳಸುವುದೇ ಉತ್ತಮ.

ಅವಕ್ಯಾಡೋ

ಈ ಬೆಣ್ಣೆಹಣ್ಣು ಆರೋಗ್ಯಕ್ಕೆ ಎಷ್ಟು ಹಿತಕರವೋ, ಅದೇ ತರಹ ಕೂದಲಿಗೂ ಪೋಷಣೆ ಒದಗಿಸುವಲ್ಲಿ ಮುಂದು. ಏಕೆಂದರೆ ಇದರಲ್ಲಿ ವಿಟಮಿನ್‌ಅಂಶಗಳು ತುಂಬಿದ್ದು, ಕೂದಲನ್ನು ದಟ್ಟ, ಒತ್ತಾಗಿಡುವಲ್ಲಿ ಸಹಕರಿಸಿ, ಸೀಳು ತುದಿಯ ಸಮಸ್ಯೆ ನೀಗುತ್ತದೆ. ಅಷ್ಟು ಮಾತ್ರವಲ್ಲದೆ, ಇದರಲ್ಲಿನ ಪೊಟ್ಯಾಶಿಯಂ, ಮೆಗ್ನಿಶಿಯಂನಂಥ ಮಿನರಲ್ಸ್ ಕ್ಯುಟಿಕಲ್ ಸೆಲ್ಸ್ ನ್ನು ಸೀಲ್ ‌ಮಾಡುವುದಲ್ಲದೆ, ಕೂದಲನ್ನು ಸಾಫ್ಟ್, ಸ್ಮೂಥ್‌, ಸ್ಟ್ರಾಂಗ್‌ ಮಾಡುವುದಲ್ಲದೆ ಅದು ತುಂಡರಿಸದಂತೆ ಕಾಪಾಡುತ್ತದೆ. ಹೀಗಾಗಿ ನೀವು ಸ್ವಸ್ಥ ಕೂದಲಿಗಾಗಿ ಆರಿಸುವ ಹರ್ಬಲ್ ಶ್ಯಾಂಪೂನಲ್ಲಿ ಅವಕ್ಯಾಡೋ ಅಡಗಿದೆಯೇ ಎಂಬುದನ್ನು ಅಗತ್ಯ ಗಮನಿಸಿಕೊಳ್ಳಿ.

ಪರಿಮಳಾ 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ