ರಾಘವೇಂದ್ರ ಅಡಿಗ ಎಚ್ಚೆನ್.

KD The Devil: “ಕೆಡಿ – ದಿ ಡೆವಿಲ್” ಎಂಬುದು ಪ್ರೇಮ್ ನಿರ್ದೇಶನದ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರೋ  ಕನ್ನಡ ಆಕ್ಷನ್ ಡ್ರಾಮಾ  ಸಿನಿಮಾ ಆಗಿದೆ. . ಧ್ರುವ ಸರ್ಜಾ ಮತ್ತು ರೀಷ್ಮಾ ನಾಣಯ್ಯ ಮುಖ್ಯ ಪಾತ್ರಗಳಲ್ಲಿ ನಟಿಸಿರೋ ಈ ಸಿನಿಮಾದ ಬಗ್ಗೆ ಡೇ ಬೈ ಡೇ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಬಿಲ್ಡ್ ಆಗುತ್ತಿದೆ.

images (1)

ಇಂದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ದಿಲ್ ಖುಷ್ ಆಗೋ ಮ್ಯಾಟರ್ ಸಿಕ್ಕಿದೆ. ಅದುವೇ ಜುಲೈ 10ಕ್ಕೆ KD ಸಿನಿಮಾದ ಟೀಸರ್ ಮುಂಬೈನಲ್ಲಿ ಬಹಳ ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ. ಈಗಾಗಲೇ ರಿಲೀಸ್ ಆಗಿರೋ “ಸೆಟ್ ಆಗೋಲ್ಲ ಹೋಗೇ“ ಮತ್ತು ”ಶಿವ ಶಿವ“ ಹಾಡು ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿ ಜನರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಜೊತೆಗೆ ಟ್ರೆಂಡಿಂಗ್ ನಲ್ಲಿದೆ ಈ ಎರಡು ಹಾಡುಗಳು.

download (5)

KD ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ಅತೀ ಶೀಘ್ರದಲ್ಲಿ ರಿಲೀಸ್ ಆಗಲಿದೆ. ಟೀಸರ್ ರಿಲೀಸ್ ದಿನವೇ ಚಿತ್ರತಂಡ ಸಿನಿಮಾ ತೆರೆಗೆ ಯಾವಾಗ ಅನ್ನೋದನ್ನ ರಿವಿಲ್ ಮಾಡಲಿದೆ.
ಧ್ರುವ ಸರ್ಜಾ , ರೀಷ್ಮಾ ನಾಣಯ್ಯ , ಜೊತೆಗೆ ಕ್ರೇಜಿ ಸ್ಟಾರ್ ರವಿಚಂದ್ರನ್ , ರಮೇಶ್ ಅರವಿಂದ್ , ಸಂಜಯ್ ದತ್ , ಪೂನಂ ಜಾವರ್, ಶಿಲ್ಪಾ ಶೆಟ್ಟಿ ಮತ್ತು ನೋರಾ ಫತೇಹಿಮುಂತಾದವರ ತಾರಾಗಣವಿದೆ . ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದರೆ , ಛಾಯಾಗ್ರಹಣ ಮತ್ತು ಸಂಕಲನವನ್ನು ಕ್ರಮವಾಗಿ ವಿಲಿಯಂ ಡೇವಿಡ್ ಮತ್ತು ಸಂಕೇತ್ ಆಚಾರ್ ನಿರ್ವಹಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ