ಹೆಂಗಸರು ಮುಖ್ಯವಾಗಿ ಈ ಮಳೆಗಾಲದಲ್ಲಿ ತಮ್ಮ ಒಳ ವಸ್ತ್ರಗಳಿಂದಾಗುವ ಸೋಂಕು ತಪ್ಪಿಸಲು ಇಂಟಿಮೇಟ್ ಹೈಜೀನ್ ಕಡೆ ಹೆಚ್ಚಿನ ಗಮನ ಕೊಡುವ ಅಗತ್ಯ ನಿಜಕ್ಕೂ ಇದೆಯೇ…..?
ಹೆಂಗಸರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಐಡೆಂಟಿಟಿ ಪಡೆಯುತ್ತಿದ್ದಾರೆ. ಆದರೆ ತಮ್ಮ ದೇಹದಲ್ಲಾಗುವ ವ್ಯತ್ಯಾಸ, ಬಾಧೆಗಳ ಕುರಿತು ಇಂದಿಗೂ ಮುಕ್ತವಾಗಿ ಚರ್ಚಿಸಲಾರರು. ಮುಖ್ಯವಾಗಿ ಗುಪ್ತಾಂಗದ ಸಮಸ್ಯೆ, ಒಳವಸ್ತ್ರಗಳ ಕುರಿತು. 35 ವರ್ಷದ ಒಬ್ಬಾಕೆ ಲೇಡಿ ಡಾಕ್ಟರ್ ಬಳಿ ಬಂದು, ತನ್ನ ಈ ಸಮಸ್ಯೆ ಬಗ್ಗೆ ಅರ್ಧಂಬರ್ಧ ಹೇಳುತ್ತಿದ್ದಳೇ ವಿನಾ ಪೂರ್ತಿ ವಿವರ ಒದಗಿಸಲಿಲ್ಲ. ಡಾಕ್ಟರ್ ಗದರಿಸಿ ಪೂರ್ತಿ ಚೆಕ್ ಮಾಡಿದಾಗ, ಆಂತರಿಕವಾಗಿ ಆಕೆಗೆ ಮಹಾ ಸೋಂಕು ತಗುಲಿ, ನಿವಾರಣೆಗಾಗಿ ಬೇಗ ಚಿಕಿತ್ಸೆ ಆರಂಭಿಸಬೇಕಿತ್ತು.
ಈ ಕುರಿತು ಆಧುನಿಕ ಸ್ತ್ರೀರೋಗ ತಜ್ಞರ ಅಭಿಪ್ರಾಯವೆಂದರೆ, ಇಂದಿಗೂ ಹೋಬಳಿ ತಾಲ್ಲೂಕಿನ ಮಟ್ಟದ ಗ್ರಾಮೀಣ ಮಹಿಳೆಯರು, ಪುರುಷ ಗೈನಕಾಲಜಿಸ್ಟರ ಬಳಿ ಹೋಗಲು ಸಂಕೋಚ ಪಡುತ್ತಾರೆ. ಅವರ ಬಳಿ ಡೆಲಿವರಿ ಮಾಡಿಸಿಕೊಳ್ಳುವುದಂತೂ ದೂರದ ಮಾತು.
ಅಸಲಿಗೆ ಆಂತರಿಕ ಸ್ವಚ್ಛತೆ ಮತ್ತು ಮೇಂಟೆನೆನ್ಸ್ ಕುರಿತು ನಿರ್ಲಕ್ಷ್ಯ ತೋರಿದರೆ, ಅಂಥವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಆಗುತ್ತದೆ. ಹೀಗಾಗಿ ಸಕಾಲಕ್ಕೆ ಜಾಗೃತಿ ವಹಿಸಿದರೆ, ಜೈನ್ ಇನ್ ಫೆಕ್ಷನ್ ಹೆಚ್ಚು ಬಾಧಿಸದು. ಇಲ್ಲದಿದ್ದರೆ ಮುಖ್ಯವಾಗಿ ಮಳೆಗಾಲದಲ್ಲಿ ಇಂಟಿಮೇಟ್ ಹೈಜೀನ್ ಕಡೆ ಹೆಚ್ಚಿನ ಗಮನ ಕೊಡಬೇಕು. ಏಕೆಂದರೆ ಗುಪ್ತಾಂಗಗಳ ಬಳಿ ಬೆವರಿನಿಂದಾಗಿ ಸೋಂಕು ತಪ್ಪದು. ಹೀಗಾಗಿ ಈ ಭಾಗದ ಸ್ವಚ್ಛೆತೆ ಶುಭ್ರತೆಗಳ ಕಡೆ ಅತ್ಯಗತ್ಯವಾಗಿ ಹೆಚ್ಚಿನ ನಿಗಾ ವಹಿಸಲೇಬೇಕು.
ಧಾರ್ಮಿಕ ನೆಪಗಳ ಒಡ್ಡದಿರಿ
ಹೆಂಗಸರು ನಮ್ಮ ಸಮಾಜ ಹೇರಿರುವ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಅಡ್ಡಿ ಅಡಚಣೆಗಳಿಂದ ಸಹಜವಾಗಿ ದೂರ ಬರಬೇಕು. ಏಕೆಂದರೆ ಇವುಗಳ ಒತ್ತಡದಿಂದಾಗಿ ಹೆಂಗಸರು ಮುಕ್ತವಾಗಿ ಇಂಥ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬಹಳ ಸಂಕೋಚ ಪಡುತ್ತಾರೆ. ಹೀಗಾಗಿ ಅಂತರಂಗ ಸಾಧನಗಳ ಬಳಕೆಗೆ ಇಲ್ಲಿ ಅವಕಾಶವೇ ಇರುವುದಿಲ್ಲ. ಏನೋ ತಮಗೆ ತಿಳಿದ ಮನೆಮದ್ದು ಮಾಡಿಕೊಂಡು ಸುಮ್ಮನಾಗುತ್ತಾರೆ. ಇದರಿಂದ ರೋಗ ಹೆಚ್ಚಾಗಿ ಸೋಂಕಿನ ಭೀತಿ ಕಾಡುತ್ತದೆ. ಅದು ಸಾವಿನಲ್ಲಿ ಮುಕ್ತಾಯ ಆಗದಂತೆ ಸಕಾಲಕ್ಕೆ ಎಚ್ಚರ ವಹಿಸುವುದೊಂದೇ ದಾರಿ.
ಇಂಟಿಮೇಟ್ ಹೈಜೀನ್ ಗರ್ಭಕೋಶದ ಹೊರ ಪದರದಿಂದ ಹಿಡಿದು, ಯೋನಿಯ ತುದಿವರೆಗಿನ ಭಾಗ ಜೈನ್ ಮ್ಯೂಕಸ್ (ಯೋನಿ ಶ್ಲೇಷ್ಮ) ಎನಿಸಿದೆ. ಇದು ಸಹಜವಾಗಿ ಸ್ರವಿಸಲ್ಪಡುವ ದ್ರಾವಣಗಳ ಕಾರಣ, ತನ್ನಿಂತಾನೇ ಶುಚಿಗೊಳಿಸಿ ಕೊಳ್ಳುತ್ತದೆ. ಹೀಗಿದ್ದಾಗಿಯೂ, ಯೋನಿ ಭಾಗದಲ್ಲಿನ ಗುಡ್ ಬ್ಯಾಕ್ಟೀರಿಯಾ, ಸೋಂಕನ್ನು ಕಂಟ್ರೋಲ್ ಮಾಡುತ್ತಾ ಮೈಕ್ರೋಬಿಯಲ್ ಬ್ಯಾಲೆನ್ಸ್ ಗಮನಿಸುತ್ತದೆ. ಎಷ್ಟೋ ಸಲ ಈ ಬ್ಯಾಲೆನ್ಸ್ ಡಿಸ್ಟರ್ಬ್ ಆಗುತ್ತದೆ, ಬ್ಯಾಡ್ ಬ್ಯಾಕ್ಟೀರಿಯಾ ಯಾವುದೋ ರೂಪದಲ್ಲಿ ಈ ಭಾಗ ಆಕ್ರಮಿಸಿದಾಗ, ಮೂತ್ರದ ಸೋಂಕು ತಗುಲಿ ಯೋನಿ ಭಾಗ ಉರಿ, ನೋವುಗಳ ಹಿಂಸೆ ಎದುರಿಸಬೇಕಾಗುತ್ತದೆ.ಹೀಗಾಗಿ ಯೋನಿ ಭಾಗದ ಶುಚಿತ್ವಕ್ಕಾಗಿ ಅದನ್ನು ದಿನ ತೊಳೆಯುತ್ತಾ, ಶೌಚದ ನಂತರ ಟಿಶ್ಯು ಪೇಪರ್ ಯಾ ವೆಟ್ ವೈಪ್ಸ್ ಬಳಸಿ, ಸ್ನಾನದ ನಂತರ ನೀಟಾಗಿ ಒಣ ಬಟ್ಟೆಯಿಂದ ಒರೆಸಿ, ಶುಭ್ರ ಅಂಡರ್ ಗಾರ್ಮೆಂಟ್ಸ್ ಧರಿಸಬೇಕು. ಮುಟ್ಟಾದಾಗ ಈ ಸ್ವಚ್ಛತೆ ಶುಭ್ರತೆ ಇನ್ನಷ್ಟು ಚುರುಕಾಗಬೇಕು. ಇದಕ್ಕಾಗಿ ಮೆಡಿಕಲ್ ಸ್ಟೋರ್ ಗಳಲ್ಲಿ ಲಭ್ಯವಿರುವ `ವಜೈನ್ ವಾಶ್’ ಕೊಂಡು, ನೀರಿನಿಂದ ಆ ಭಾಗ ತೊಳೆದ ನಂತರ, ಅಗತ್ಯ ವಾಶ್‌ಬಳಸಬೇಕು. ನಂತರ ಒಣ ಬಟ್ಟೆಯಿಂದ ಒರೆಸಬೇಕು.
ಅದೇ ತರಹ ಸಂಗಾತಿಯೊಂದಿಗೆ ಯಾವಾಗ ಸಮಾಗಮ ನಡೆಸಿದರೂ, ಮೊದಲು ಮತ್ತು ನಂತರ ಆ ಭಾಗವನ್ನು ಹೀಗೇ ಶುಚಿಗೊಳಿಸಬೇಕು. ಹೀಗೆ ಸದಾ ಸರ್ವದಾ ಎಚ್ಚರಿಕೆ ವಹಿಸಿದಾಗ ಮಾತ್ರ ಯೋನಿ ಮತ್ತು ಸಂಬಂಧಿಸಿದ ಅಂಗಗಳು ಸುರಕ್ಷಿತವಾಗಿರಲು ಸಾಧ್ಯ. ಇದಕ್ಕೂ ಮೀರಿದ ಬಿಳಿ ಸೆರಗು ಮುಂತಾದ ಸಮಸ್ಯೆ ಕಾಡಿದರೆ, ತಕ್ಷಣ ಸ್ತ್ರೀ ವೈದ್ಯರನ್ನು ಸಂಪರ್ಕಿಸಿ.
b
ಸ್ವಚ್ಛತೆ ಶುಭ್ರತೆ
ಪ್ರತಿ ಸಲ ಮೂತ್ರ ವಿಸರ್ಜನೆ ನಂತರ, ಮುಂಭಾಗದಿಂದ ಹಿಂಭಾಗದವರೆಗೂ ಯೋನಿಯನ್ನು ಸ್ವಚ್ಛ ನೀರಿನಿಂದ ತೊಳೆಯಿರಿ. ತಮ್ಮ ದೇಹದ ಇತರ ಅಂಗಗಳಂತೆಯೇ, ಯೋನಿ ಭಾಗದ ಚರ್ಮದ ಸ್ವಚ್ಛತೆ ಬಲು ಮುಖ್ಯ ಎಂದು ತಿಳಿಯಿರಿ. ಹೀಗಾಗಿ, ಸ್ನಾನದ ಸಮಯದಲ್ಲಿ ದೇಹದ ಇತರ ಅಂಗಗಳಂತೆಯೇ ಸಾಮಾನ್ಯ ಸಾಬೂನು ಯಾ ಬಾಡಿವಾಶ್ ಬಳಸಿ, ಮುಂಭಾಗದಿಂದ ಹಿಂಭಾಗದವರೆಗೆ ಈ ಭಾಗವನ್ನು ಸ್ವಚ್ಛಗೊಳಿಸಿ. ಹಿಂಭಾಗ ಬೇಗ ಬ್ಯಾಕ್ಟೀರಿಯಾಗಳ ಆಕ್ರಮಣಕ್ಕೆ ತುತ್ತಾಗುತ್ತದೆ, ಹೀಗಾಗಿ ಅದರ ದೆಸೆಯಿಂದ ಮುಂಭಾಗಕ್ಕೆ ಸೋಂಕು ತಗುಲಲು ತಡವಾಗದು.
ಇನ್ನರ್ ವೇರ್ : ಪರ್ಫೆಕ್ಟ್ ಆಯ್ಕೆ ಹೆಂಗಸರಿಗೆ ಕಾಟನ್ ಪ್ಯಾಂಟಿ ಎಲ್ಲಕ್ಕಿಂತಲೂ ಉತ್ತಮ ಆಯ್ಕೆ. ಇದು ಆರ್ದ್ರತೆಯನ್ನು ಬೇಗ ಹೀರಿಕೊಂಡು, ಇಂಟಿಮೇಟ್ ಭಾಗವನ್ನು ಡ್ರೈ ಆಗಿರಿಸುವಲ್ಲಿ ಸಹಾಯಕ. ಅದೇ ತರಹ ಅತಿ ಬಿಗಿಯಾದ, ತೀರಾ ಡಾರ್ಕ್ ಕಲರಿನ, ಹೀರುವ ಗುಣವಿಲ್ಲದ ಬ್ರಾ, ಪ್ಯಾಂಟಿ ಆರಿಸಲೇಬಾರದು. ಇಂಥ ಒಳವಸ್ತ್ರಗಳನ್ನು ಒಗೆದ ನಂತರ ಚೆನ್ನಾಗಿ ಬಿಸಿಲಲ್ಲಿ ಒಣಗಿವೆ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ ಇಲ್ಲದಿದ್ದರೆ, ಆಂತರಿಕ ಭಾಗಗಳು ಈ ಒದ್ದೆ ವಸ್ತ್ರ ಧರಿಸಿದ ಮೇಲೆ, ಬೇಗ ಸೊಂಕಿಗೆ ಈಡಾಗುತ್ತವೆ.
ಸಾರ್ವಜನಿಕ ಶೌಚಾಲಯ ಬಳಕೆ
ಇಂಥ ಕಡೆ ನಾನಾ ಬಗೆಯ ಬ್ಯಾಕ್ಟೀರಿಯಾಗಳಿದ್ದು ಅದು ಹೆಂಗಸರ ತೊಡೆ ಭಾಗದಿಂದ, ಬೇಗ ಆಕ್ರಮಣಕ್ಕೆ ದಾರಿ ಮಾಡಿಕೊಳ್ಳುತ್ತವೆ. ಹೀಗಾಗಿ UTI (ಯೂರಿನರಿ ಟ್ರಾಕ್ಟ್ ಇನ್ ಫೆಕ್ಷನ್) ತೊಂದರೆ ತಪ್ಪಿದ್ದಲ್ಲ. ಹೊರ ಭಾಗದಿಂದ ಈ ಶೌಚಾಲಯಗಳು ಶುಭ್ರವಾಗಿ ಕಂಡರೂ, ಟಾಯ್ಲೆಟ್ ಸೀಟ್, ಫ್ಲಶ್, ವಾಟರ್ ನಾಬ್ಸ್, ಬಾಗಿಲ ಹಿಡಿಯಂಥ ಜಾಗಗಳಲ್ಲಿ ಎಲ್ಲರೂ ಮತ್ತೆ ಮತ್ತೆ ಮುಟ್ಟುವ ಕಾರಣ ಕೀಟಾಣುಗಳ ಬಾಧೆ ತಪ್ಪಿದ್ದಲ್ಲ.
ಹೀಗಾಗಿ ಇದರಿಂದ ಪಾರಾಗಲು ಅಗತ್ಯ ಎಚ್ಚರಿಕೆಯ ಕ್ರಮ ಕೈಗೊಳ್ಳಿ. ಟಾಯ್ಲೆಟ್ ಸೀಟ್ ಮೇಲೆ ಟಿಶ್ಯು ಪೇಪರ್ ಬಳಕೆ, ಬಟ್ಟೆ ದೇಹವನ್ನು ಮುಟ್ಟುವ ಮೊದಲು, ನಿಮ್ಮ ಕೈಗಳಿಗೆ ಅಗತ್ಯ ಸ್ಯಾನಿಟೈಸರ್ ಬಳಸಿರಿ. ಇಂಥ ಶೌಚಾಲಯ ಬಳಸಿದ ನಂತರ ಲ್ಯಾಕ್ಟಿಕ್ ಆ್ಯಸಿಡ್ ಬೇಸ್ಡ್ ವಜೈನ್ ವಾಶ್ ಬಳಸಿ ಯೋನಿ ಶುಚಿಗೊಳಿಸಿ.
ಸಮಾಗಮಕ್ಕೆ ಮುನ್ನ
ಗಂಡಸರು ಈ ವಿಷಯದಲ್ಲಿ ಹೆಂಗಸರಷ್ಟು ಎಚ್ಚರ ವಹಿಸದ ಕಾರಣ, ಹೆಂಗಸರ ಗುಪ್ತಾಂಗ ಬೇಗ ಸೋಂಕಿಗೆ ತುತ್ತಾಗುತ್ತದೆ. ಹೀಗಾಗಿ ಸಮಾಗಮದ ಮೊದಲು ಮತ್ತು ನಂತರ, ಮೂತ್ರ ವಿಸರ್ಜನೆಗೆ ಅಗತ್ಯ ಪ್ರಯತ್ನಿಸಿ, ನಂತರ ನೀಟಾಗಿ ಸ್ವಚ್ಛಗೊಳಿಸಿ. ಎಲ್ಲದಕ್ಕೂ ಬೆಸ್ಟ್ ಆಪ್ಶನ್ ಎಂದರೆ, ರಿಸ್ಕ್ ಬೇಡ ಎನಿಸಿದಾಗ ಕಾಂಡೋಮ್ ಬಳಕೆ! ಇದರಿಂದ ಯಾವ ಸೋಂಕಿನ ಭೀತಿಯೂ ತಗುಲದು. ಒಬ್ಬರಿಗಿಂತ ಹೆಚ್ಚಿನ ಸಂಗಾತಿ ಹೊಂದಿರುವ ಹೆಂಗಸರಿಗೆ ಈ ಟೆನ್ಶನ್ ತಪ್ಪಿದ್ದಲ್ಲ. ನಿಮ್ಮ ಸಂಗಾತಿಗೂ ಗುಪ್ತಾಂಗಗಳ ಸ್ವಚ್ಛತೆ ಕಡೆ ಹೆಚ್ಚಿನ ನಿಗಾ ವಹಿಸುವಂತೆ ಆಗಾಗ ತಿಳಿಸುತ್ತಿರಿ.
ಇವುಗಳ ಕಡೆ ಎಚ್ಚರ ವಹಿಸಿ
ಮುಟ್ಟಿನ ದಿನಗಳಲ್ಲಿ ಡಲ್ ಕಲರ್ ಸ್ರಾವ ಸಾಮಾನ್ಯ ವಿಷಯ. ಯೋನಿ ಗರ್ಭಾಶಯಗಳ ಜೀವಕೋಶದ ಹಾರ್ಮೋನುಗಳಲ್ಲಿನ ಬದಲಾವಣೆ ಕಾರಣ ಹೀಗಾಗುತ್ತದೆ. ಆದರೆ ಇದು ಬಹಳ ದಿನಗಳ ಕಾಲ ಹೀಗೆ ಮುಂದುವರಿದು, ಬಿಳಿ ಸೆರಗಿಗೆ ತಿರುಗಿದರೆ ಅದು ಗಂಭೀರ ವಿಷಯ.
ಹಾಗೆಯೇ ಪ್ರೀಓಲ್ಯುವೇಟರಿ ಡಿಸ್ ಚಾರ್ಜ್ (ಅಂಡ ಉಂಟಾಗುವ ಮೊದಲಿನ ಸ್ರಾವ) ಸಹಜವಾಗಿಯೇ ಗಾಢ ಬಣ್ಣ, ಕಡಿಮೆ ಪ್ರಮಾಣ, ಗೋಲಾಕಾರದಲ್ಲಿರುತ್ತದೆ. ಆದರೆ ಪೋಸ್ಟ್ ಓಲ್ಯುಚರಿ ಡಿಸ್ ಚಾರ್ಜ್ (ಮುಟ್ಟಿಗೆ 1 ವಾರ ಮೊದಲೇ) ಹೆಚ್ಚಿನ ಪ್ರಮಾಣದಲ್ಲಿ ಬಲು ತೆಳು, ಅಂಟಂಟಾಗಿರುತ್ತದೆ. ಇವೆಲ್ಲ ಸಾಮಾನ್ಯ ಪ್ರಕ್ರಿಯೆಗಳಾಗಿದ್ದು ವ್ಯಕ್ತಿ ಆರೋಗ್ಯಕರವಾಗಿದ್ದಾರೆ ಎಂದು ಸೂಚಿಸುತ್ತದೆ.
ಅದೇ ಈ ಸ್ರಾವ ಬಲು ಗಾಢವಾಗಿದ್ದರೆ, ಇದು ಹೆಚ್ಚು ಕೆಂಪಾಗಿದ್ದು, ಯೋನಿ ಭಾಗದಲ್ಲಿ ಅಧಿಕ ನವೆ, ತುರಿಕೆ, ಉರಿ ಕಾಣಬಹುದು. ಮುಟ್ಟಿನ ನಂತರ ಈ ಕಾಟವಿದ್ದರೆ ತಕ್ಷಣ ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ.
ಗುಪ್ತಾಂಗದ ಕೂದಲು
ಈ ಭಾಗದ ಕೂದಲು ಅದನ್ನು ರಕ್ಷಿಸಲು ನೆರವಾಗುತ್ತದೆ. ಕೀಟಾಣುಗಳ ಪ್ರವೇಶಕ್ಕೆ ತಡೆಯೊಡ್ಡಲು ಇದು ಮೂಲ. ಇದನ್ನು ತೆಗೆಸಬೇಕು ಎಂದು ವ್ಯಾಕ್ಸಿಂಗ್ ಮಾಡಿಸಿದರೆ, ಯೋನಿಯ ಸೂಕ್ಷ್ಮ ಭಾಗಕ್ಕೆ ಅನಗತ್ಯ ಕೆಮಿಕಲ್ಸ್ ತಗುಲಿ ಸೋಂಕಿನ ಸಂಭವ ಹೆಚ್ಚುತ್ತದೆ. ಇದರಿಂದ ಆ ಭಾಗ ಊತಕ್ಕೂ ಒಳಗಾಗಬಹುದು. ಹೀಗಾಗಿ ವ್ಯಾಕ್ಸಿಂಗ್ ಬದಲು ಟ್ರಿಮಿಂಗ್ ಮಾಡಿಸಿ, ಆ ಇಡೀ ಭಾಗದ ಶುಭ್ರತೆ ಕಾಯ್ದುಕೊಳ್ಳಿ.
ಚಿಕಿತ್ಸೆಗೆ ಬದಲು ತಡೆ ಮುಖ್ಯ
ಈ ಎಲ್ಲಾ ವಿವರ ಗಮನಿಸಿದರೆ, ಹೆಂಗಸರು ಈ ಸಮಸ್ಯೆಗೆ ಸಿಲುಕಿದ ನಂತರ ಚಿಕಿತ್ಸೆಗಾಗಿ ವೈದ್ಯರ ಬಳಿ ಓಡುವ ಬದಲು, ಅದು ಬಾರದಂತೆ ಮೊದಲೇ ಮುನ್ನೆಚ್ಚರಿಕೆಯ ತಡೆಯೊಡ್ಡುವುದು ಲೇಸು. ವರ್ಷಕ್ಕೆ ಒಮ್ಮೆ ಅಗತ್ಯ ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ, ಸರ್ವೈಕಲ್ ಕ್ಯಾನ್ಸರ್ ನಿಂದ ಬಚಾವಾಗಲು ಸಕಾಲಕ್ಕೆ ಪಿಪಿ ಸ್ಮಿಯರ್ ಟೆಸ್ಟ್ ಮಾಡಿಸಿ. ಅವರು ಹೇಳಿದ ಔಷಧಿಗಳನ್ನು ಕ್ರಮ ತಪ್ಪದಂತೆ ಸೇವಿಸಿ, ಆಂತರಿಕ ಭಾಗದ ಸ್ವಚ್ಛತೆ ಶುಭ್ರತೆಗಳ ಕಡೆ ಹೆಚ್ಚಿನ ಗಮನವಿರಲಿ.
– ಡಾ. ಸುಮತಿ