ಹೆಂಗಸರು ಮುಖ್ಯವಾಗಿ ಮಳೆಗಾಲದಲ್ಲಿ ತಮ್ಮ ಒಳ ವಸ್ತ್ರಗಳಿಂದಾಗುವ ಸೋಂಕು ತಪ್ಪಿಸಲು ಇಂಟಿಮೇಟ್ಹೈಜೀನ್ಕಡೆ ಹೆಚ್ಚಿನ ಗಮನ ಕೊಡುವ ಅಗತ್ಯ ನಿಜಕ್ಕೂ ಇದೆಯೇ.....?

ಹೆಂಗಸರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಐಡೆಂಟಿಟಿ ಪಡೆಯುತ್ತಿದ್ದಾರೆ. ಆದರೆ ತಮ್ಮ ದೇಹದಲ್ಲಾಗುವ ವ್ಯತ್ಯಾಸ, ಬಾಧೆಗಳ ಕುರಿತು ಇಂದಿಗೂ ಮುಕ್ತವಾಗಿ ಚರ್ಚಿಸಲಾರರು. ಮುಖ್ಯವಾಗಿ ಗುಪ್ತಾಂಗದ ಸಮಸ್ಯೆ, ಒಳವಸ್ತ್ರಗಳ ಕುರಿತು. 35 ವರ್ಷದ ಒಬ್ಬಾಕೆ ಲೇಡಿ ಡಾಕ್ಟರ್‌ ಬಳಿ ಬಂದು, ತನ್ನ ಈ ಸಮಸ್ಯೆ ಬಗ್ಗೆ ಅರ್ಧಂಬರ್ಧ ಹೇಳುತ್ತಿದ್ದಳೇ ವಿನಾ ಪೂರ್ತಿ ವಿವರ ಒದಗಿಸಲಿಲ್ಲ. ಡಾಕ್ಟರ್‌ ಗದರಿಸಿ ಪೂರ್ತಿ ಚೆಕ್‌ ಮಾಡಿದಾಗ, ಆಂತರಿಕವಾಗಿ ಆಕೆಗೆ ಮಹಾ ಸೋಂಕು ತಗುಲಿ, ನಿವಾರಣೆಗಾಗಿ ಬೇಗ ಚಿಕಿತ್ಸೆ ಆರಂಭಿಸಬೇಕಿತ್ತು.

ಈ ಕುರಿತು ಆಧುನಿಕ ಸ್ತ್ರೀರೋಗ ತಜ್ಞರ ಅಭಿಪ್ರಾಯವೆಂದರೆ, ಇಂದಿಗೂ ಹೋಬಳಿ ತಾಲ್ಲೂಕಿನ ಮಟ್ಟದ ಗ್ರಾಮೀಣ ಮಹಿಳೆಯರು, ಪುರುಷ ಗೈನಕಾಲಜಿಸ್ಟರ ಬಳಿ ಹೋಗಲು ಸಂಕೋಚ ಪಡುತ್ತಾರೆ. ಅವರ ಬಳಿ ಡೆಲಿವರಿ ಮಾಡಿಸಿಕೊಳ್ಳುವುದಂತೂ ದೂರದ ಮಾತು.

ಅಸಲಿಗೆ ಆಂತರಿಕ ಸ್ವಚ್ಛತೆ ಮತ್ತು ಮೇಂಟೆನೆನ್ಸ್ ಕುರಿತು ನಿರ್ಲಕ್ಷ್ಯ ತೋರಿದರೆ, ಅಂಥವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಆಗುತ್ತದೆ. ಹೀಗಾಗಿ ಸಕಾಲಕ್ಕೆ ಜಾಗೃತಿ ವಹಿಸಿದರೆ, ಜೈನ್‌ ಇನ್‌ ಫೆಕ್ಷನ್‌ ಹೆಚ್ಚು ಬಾಧಿಸದು. ಇಲ್ಲದಿದ್ದರೆ ಮುಖ್ಯವಾಗಿ ಮಳೆಗಾಲದಲ್ಲಿ ಇಂಟಿಮೇಟ್‌ ಹೈಜೀನ್‌ ಕಡೆ ಹೆಚ್ಚಿನ ಗಮನ ಕೊಡಬೇಕು. ಏಕೆಂದರೆ ಗುಪ್ತಾಂಗಗಳ ಬಳಿ ಬೆವರಿನಿಂದಾಗಿ ಸೋಂಕು ತಪ್ಪದು. ಹೀಗಾಗಿ ಈ ಭಾಗದ ಸ್ವಚ್ಛೆತೆ ಶುಭ್ರತೆಗಳ ಕಡೆ ಅತ್ಯಗತ್ಯವಾಗಿ ಹೆಚ್ಚಿನ ನಿಗಾ ವಹಿಸಲೇಬೇಕು.

ಧಾರ್ಮಿಕ ನೆಪಗಳ ಒಡ್ಡದಿರಿ

ಹೆಂಗಸರು ನಮ್ಮ ಸಮಾಜ ಹೇರಿರುವ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಅಡ್ಡಿ ಅಡಚಣೆಗಳಿಂದ ಸಹಜವಾಗಿ ದೂರ ಬರಬೇಕು. ಏಕೆಂದರೆ ಇವುಗಳ ಒತ್ತಡದಿಂದಾಗಿ ಹೆಂಗಸರು ಮುಕ್ತವಾಗಿ ಇಂಥ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬಹಳ ಸಂಕೋಚ ಪಡುತ್ತಾರೆ. ಹೀಗಾಗಿ ಅಂತರಂಗ ಸಾಧನಗಳ ಬಳಕೆಗೆ ಇಲ್ಲಿ ಅವಕಾಶವೇ ಇರುವುದಿಲ್ಲ. ಏನೋ ತಮಗೆ ತಿಳಿದ ಮನೆಮದ್ದು ಮಾಡಿಕೊಂಡು ಸುಮ್ಮನಾಗುತ್ತಾರೆ. ಇದರಿಂದ ರೋಗ ಹೆಚ್ಚಾಗಿ ಸೋಂಕಿನ ಭೀತಿ ಕಾಡುತ್ತದೆ. ಅದು ಸಾವಿನಲ್ಲಿ ಮುಕ್ತಾಯ ಆಗದಂತೆ ಸಕಾಲಕ್ಕೆ ಎಚ್ಚರ ವಹಿಸುವುದೊಂದೇ ದಾರಿ.

ಇಂಟಿಮೇಟ್‌ ಹೈಜೀನ್‌ ಗರ್ಭಕೋಶದ ಹೊರ ಪದರದಿಂದ ಹಿಡಿದು, ಯೋನಿಯ ತುದಿವರೆಗಿನ ಭಾಗ ಜೈನ್‌ ಮ್ಯೂಕಸ್‌ (ಯೋನಿ ಶ್ಲೇಷ್ಮ) ಎನಿಸಿದೆ. ಇದು ಸಹಜವಾಗಿ ಸ್ರವಿಸಲ್ಪಡುವ ದ್ರಾವಣಗಳ ಕಾರಣ, ತನ್ನಿಂತಾನೇ ಶುಚಿಗೊಳಿಸಿ ಕೊಳ್ಳುತ್ತದೆ. ಹೀಗಿದ್ದಾಗಿಯೂ, ಯೋನಿ ಭಾಗದಲ್ಲಿನ ಗುಡ್‌ ಬ್ಯಾಕ್ಟೀರಿಯಾ, ಸೋಂಕನ್ನು ಕಂಟ್ರೋಲ್ ‌ಮಾಡುತ್ತಾ ಮೈಕ್ರೋಬಿಯಲ್ ಬ್ಯಾಲೆನ್ಸ್ ಗಮನಿಸುತ್ತದೆ. ಎಷ್ಟೋ ಸಲ ಈ ಬ್ಯಾಲೆನ್ಸ್ ಡಿಸ್ಟರ್ಬ್‌ ಆಗುತ್ತದೆ, ಬ್ಯಾಡ್‌ ಬ್ಯಾಕ್ಟೀರಿಯಾ ಯಾವುದೋ ರೂಪದಲ್ಲಿ ಈ ಭಾಗ ಆಕ್ರಮಿಸಿದಾಗ, ಮೂತ್ರದ ಸೋಂಕು ತಗುಲಿ ಯೋನಿ ಭಾಗ ಉರಿ, ನೋವುಗಳ ಹಿಂಸೆ ಎದುರಿಸಬೇಕಾಗುತ್ತದೆ.ಹೀಗಾಗಿ ಯೋನಿ ಭಾಗದ ಶುಚಿತ್ವಕ್ಕಾಗಿ ಅದನ್ನು ದಿನ ತೊಳೆಯುತ್ತಾ, ಶೌಚದ ನಂತರ ಟಿಶ್ಯು ಪೇಪರ್‌ ಯಾ ವೆಟ್‌ ವೈಪ್ಸ್ ಬಳಸಿ, ಸ್ನಾನದ ನಂತರ ನೀಟಾಗಿ ಒಣ ಬಟ್ಟೆಯಿಂದ ಒರೆಸಿ, ಶುಭ್ರ ಅಂಡರ್‌ ಗಾರ್ಮೆಂಟ್ಸ್ ಧರಿಸಬೇಕು. ಮುಟ್ಟಾದಾಗ ಈ ಸ್ವಚ್ಛತೆ ಶುಭ್ರತೆ ಇನ್ನಷ್ಟು ಚುರುಕಾಗಬೇಕು. ಇದಕ್ಕಾಗಿ ಮೆಡಿಕಲ್ ಸ್ಟೋರ್‌ ಗಳಲ್ಲಿ ಲಭ್ಯವಿರುವ `ವಜೈನ್‌ ವಾಶ್‌' ಕೊಂಡು, ನೀರಿನಿಂದ ಆ ಭಾಗ ತೊಳೆದ ನಂತರ, ಅಗತ್ಯ ವಾಶ್‌ಬಳಸಬೇಕು. ನಂತರ ಒಣ ಬಟ್ಟೆಯಿಂದ ಒರೆಸಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ