- ರಾಘವೇಂದ್ರ ಅಡಿಗ ಎಚ್ಚೆನ್.
ಜನುಮದ ಜೋಡಿಗೆ ಶಿಲ್ಪಾ ಸಡನ್ ಆಗಿ ಫಿಕ್ಸ್ ಆಗಿದ್ರು, ಅವರನ್ನ ನಾಯಕಿ ಮಾಡೋ ಅಲೋಚನೆ ಮೊದಲು ಇರ್ಲಿಲ್ಲ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ. ನಟ ರಾಣಾ ನಾಯಕನಾಗಿರುವ ತರುಣ್ ಸುಧೀರ್ ನಿರ್ಮಾಣದ “ಏಳುಮಲೆ” ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಜನುಮದ ಜೋಡಿಗೆ ಶಿಲ್ಪಾ ಸಡನ್ ಆಗಿ ನಾಯಕಿಯಾದ್ರು. ಶಿಲ್ಪಾ ಅವರ ಮುದ್ದಿನ ಕಣ್ಮಣಿ ಶೂಟಿಂಗ್ ನಡೆಯುತ್ತಿತ್ತು. ಅದರಲ್ಲಿ ಅವರು ಸಾಯಿಕುಮಾರ್ ಗೆ ಜೋಡಿಯಾಗಿದ್ದರು. ಗೀತಾ ಇವರನ್ನು ಒಮ್ಮೆ ನೋಡಿ ಎಂದು ಹೇಳಿ ಒಂದು ದಿನ ಶೂಟಿಂಗ್ ಕ್ಯಾನ್ಸಲ್ ಮಾಡಿ ಬೆಂಗಳೂರಿನಿಂದ ಕರೆಸಿದ್ದಾಗಿತ್ತು ಹಾಗೆ ನೊಡಿದ ತಕ್ಷಣ ಅವರು ನಾಯಕಿ ಎಂದು ಫಿಕ್ಸ್ ಆಗಿದ್ದರು. ಆ ನಂತರ ಜನುಮದ ಜೋಡಿಗಾಗಿ ಶಿಲ್ಪಾಗೆ ರಾಜ್ಯ ಪ್ರಶಸ್ತಿ ಬಂದಿತ್ತು, ನನಗೆ ಬರಲಿಲ್ಲ ಎಂದು ಶಿವಣ್ಣ ಆ ದಿನಗಳನ್ನು ಮೆಲುಕು ಹಾಕಿದರು.
ಬರೆಯುವವರೆಲ್ಲ ಸರಸ್ವತಿ ಪುತ್ರರು ಎಂದು ಅಪ್ಪಾಜಿ (ರಾಜ್ ಕುಮಾರ್) ಹೇಳುತ್ತಿದ್ದರು. ಅವರಿಗೆ ಒಂದು ಕಲ್ಪನೆ ಇರುತ್ತದೆ, ಅವರು ನಮ್ಮನ್ನು ಹಾಕಿಕೊಂಡು ಸಿನಿಮಾ ಮಾಡಲು ಬರ್ತಾರೆ ಎಂಡರೆ ನಾವೇನೋ ಅಂದುಕೊಳ್ಳುತ್ತೇವೆ ಅದಕ್ಕಿಂತ ಅವರ ಯೋಚನೆ ಉತ್ತಮವಾಗಿರುತ್ತದೆ. ಅವರ ಆಲೋಚನೆಯಂತೆ ನಾವು ಹೋದಾಗ ಉತ್ತಮ ಸಿಇನಿಮಾ ತಯಾರಾಗುತ್ತದೆ ಎಂದು ಶಿವರಾಜ್ ಕುಮಾರ್ ಹೇಳುತ್ತಾರೆ.
ಹೊಸಬರನ್ನು, ಪ್ರತಿಭಾವಂತರನ್ನು ಇಟ್ಟುಕೊಂಡು ಅನುಭವಿ ನಿರ್ಮಾಪಕರು ಸಿನಿಮಾ ಮಾಡಬೇಕಾಗಿರುವುದು ಇಂದಿನ ಅಗತ್ಯ ಎನ್ನುವ ಶಿವಣ್ನ ತಾವು ಸಹ ಪಬ್ಬಾರ್ ಸಿನಿಮಾವನ್ನು ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿಇದೇ ಉದ್ದೇಶದೊಂದಿಗೆ ತಯಾರಿಸುತ್ತಿದ್ದುದಾಗಿ ಹೇಳುತ್ತಾರೆ. ಮೊದಲು ಜನ ಮೆಚ್ಚಬೇಕು, ಹಣ ಹೆಚ್ಚು ಹಣ ಗಳಿಸುವುದೆಲ್ಲಾ ಆಮೇಲಿನ ಮಾತು. ಮೆಚ್ಚುಗೆ ಫಸ್ಟ್ ಹೆಚ್ಚುಗೆ ನೆಕ್ಸ್ಟ್ ಎಂದು ಶಿವಣ್ಣ ಮಾರ್ಮಿಕವಾಗಿ ನುಡಿದರು. ರಾಣ ಅವರನ್ನಿಟ್ಟುಕೊಂಡು ಇನ್ನೊಂದು ನೆಲಮೂಲದ ಕಥೆ ಏಳುಮಲೆಯನ್ನು ಹೇಳಲು ಹೊರಟ ತರುಣ್ ಗೆ ಶಿವಣ್ಣ ಶುಭ ಕೋರಿದ್ದಾರೆ.
ಸುದೀರ್ ಅವರನ್ನ ಚಿಕ್ಕ ವಯಸ್ಸಿನಿಂದ ನೋಡಿದ್ದೇವೆ, ಅವರೊಂದಿಗೆ ಒಳ್ಳೆ ಸಂಬಂದ್ಗ ಇದೆ. ಅವರ ಮನೆಯಲ್ಲಿ ಎಷ್ಟೋದಿನ ಊಟ ಮಾಡಿದ್ದೇನೆ, ಕೋಳಿ ಸಾರು ತಿಂದಿದ್ದೇನೆ ಎನ್ನುವ ಶಿವರಾಜ್ ಕುಮಾರ್ ನಾನು ತರುಣ್ ಜೊತೆ ಆಕ್ಟ್ ಮಾಡಿದ್ದೇನೆ. ಜಾಸ್ತಿ ಸಿನಿಮಾ ಮಾಡಿಲ್ಲ ಡೈರೆಕ್ಷನ್ ನಲಿ ಮಾಡೋದು ಪೆಂಡಿಂಗ್ ಇದೆ. ಸ್ಟೋರಿ ರೆಡಿ ಮಾಡು ಯಾವುದೇ ಪಿಕ್ಚರ್ ಇದ್ರೂ ಡೇಟ್ ಕೊಡ್ತೀನಿ ಎಂದು ವೇದಿಕೆಯ ಮೇಲೆ ತರುಣ್ ಗೆ ಪ್ರಾಮಿಸ್ ಮಾಡಿದ್ದಾರೆ.
ರಾಣಾ ಅವರ ಬಗ್ಗೆ ಮಾತನಾಡುತ್ತಾ ವಿಲನ್ ಸಿನಿಮಾದ ಅಸಿಸ್ಟೆಂಟ್ ಆಗಿದ್ದಾಗಲೇ ರಾಣಗೆ ನಾಯಕನಾಗ್ತೀರಿ ಎಂದಿದ್ದ ಎಂದು ಅವರು ಹೇಳುತ್ತಾರೆ. ಏಳುಮಲೆ ಟೈಟಲ್ ಬಗ್ಗೆ ಹೇಳುವ ಶಿವಣ್ನ ಏಳುಮಲೆ ಎಂದಾಗೆಲ್ಲಾ ಒಂದು ಸ್ಟೈಲ್ ಬರುತ್ತೆ. ಆ ಕನೆಕ್ಟ್ ಕೊಟ್ಟಿದ್ದು ಪ್ರೇಮ್ ಅವರ ಜೋಗಿ ಎಂದು ಪ್ರೇಮ್ ಅವರನ್ನು ಅಭಿನಂದಿಸಿದ್ದಾರೆ.
“ಏಳುಮಲೆ” ಸಿನಿಮಾ ಕನ್ನಡ – ತಮಿಳು – ತೆಲುಗು ಮೂರು ಭಾಷೆಗಳಲ್ಲಿ ಘೋಷಣೆಯಾಗಿದೆ. ಇದು ನೈಜ ಘಟನೆಯ ಸಿನಿಮಾ. ಎಲ್ಲರ ಎದೆ ನಡುಗಿಸಿದ ಲವ್ ಸ್ಟೋರಿ ಇಲ್ಲಿದೆ. ಪುನೀತ್ ರಂಗಸ್ವಾಮಿ ಕಥೆ, ಚಿತ್ರಕಥೆ ಬರೆದು ಏಳುಮಲೆ ನಿರ್ದೇಶನ ಮಾಡಿದ್ದಾರೆ. ದೊಡ್ಡ ದೊಡ್ಡ ನಿರ್ದೇಶಕರ ಸ್ಟಾರ್ ನಾಯಕರ ಚಿತ್ರಗಳಿಗೆ ಅನೇಕ ಪ್ರೇಮಗೀತೆ ಗಳನ್ನು ಬರೆದು ಸೈ ಎನಿಸಿಕೊಂಡಿರುವ ಪುನಿಕತ್ ಅನೇಕ ಚಿತ್ರಗಳಲ್ಲಿ ಸಹನಿರ್ದೇಶಕರಾಗಿ ದುಡಿದು ಅನುಭವ ಗಳಿಸಿಕೊಂಡು ದರ್ಶನ್ ನಟನೆಯ ಕಾಟೇರ ಕ್ಕೆ ರೈತಗೀತೆ ರಚಿಸಿ ಅದೇ ಚಿತ್ರಕ್ಕೆ ಸಹನಿರ್ದೇಶಕರಾಗಿಯೂ ಕೆಲಸ ಮಾಡಿ ಚಿತ್ರರಂಗದ ಮತ್ತು ಕನ್ನಡ ನಾಡಿನ ಮನೆಮಾತಾದವರು. ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿದ್ದಾರೆ. ಎಲ್ಲದ್ದಕ್ಕೂ ಹೆಚ್ಚು ತರುಣ್ ಸುಧೀರ್ ಕಥೆಗೆ ಆದ್ಯತೆ ಕೊಟ್ಟು ಅಟ್ಲಾಂಟ ನಾಗೇಂದ್ರ ಜೊತೆ ನಿರ್ಮಾಣ ಮಾಡಿದ್ದಾರೆ. ರಕ್ಷಿತಾಪ್ರೇಮ್ ಸಹೋದರ ಏಕ್ ಲವ್ ಯಾ ಖ್ಯಾತಿಯ ರಾಣ ಮತ್ತು ‘ಮಹಾನಟಿ’ ಖ್ಯಾತಿಯ ಪ್ರಿಯಾಂಕ ಆಚಾರ್ ಎದೆ ಝಲ್ ಅನ್ನೋ ಕಥೆಯಲ್ಲಿ ಜೀವಿಸಿರೋದು ಕಾಣುತ್ತೆ. ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಅವರ ಛಾಯಗ್ರಹಣ ಡಿ.ಇಮ್ಮಾನ್ ಅವರ ಸಂಗೀತ ಸಂಯೋಜನೆ ಕೆ.ಎಂ.ಪ್ರಕಾಶ್ ಅವರ ಸಂಕಲನವಿರಲಿದೆ. ಸದ್ಯ ಟೀಸರ್ ಕುತೂಹಲ ಮೂಡಿಸಿದೆ. ಎಲ್ಲೋ ಮಲಯಾಳಂ, ತಮಿಳು ಸಿನಿಮಾಗಳನ್ನು ನೋಡಿ ಹೊಗಳುವ ಕನ್ನಡ ಸಿನಿಪ್ರೇಮಿಗಳು ಈ ಟೀಸರ್ ನೋಡಿದ ಮೇಲೆ ಏಳುಮಲೆ ಕೊಂಡಾಡುವುದರಲ್ಲಿ ಅಚ್ಚರಿ ಇಲ್ಲ