ಈ ವರ್ಷ ದೊಡ್ಡ ಮಟ್ಟದ ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಚಿತ್ರಗಳಲ್ಲಿ ಕೆಡಿ ಮೊದಲ ಸಾಲಲ್ಲಿದೆ.  ಜೋಗಿ ಪ್ರೇಮ್ ನಿರ್ದೇಶನ ಹಾಗೂ ಆಕ್ಷನ್ ಪ್ರಿನ್ಸ್  ದ್ರುವ ಸರ್ಜಾ ಅಭಿನಯದ ಪ್ಯಾನ್ ಇಂಡಿಯಾ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಲುಲು ಮಾಲ್ ನಲ್ಲಿ ನೆರವೇರಿತು.

ಈಗಾಗಲೇ ಮುಂಬೈ, ಹೈದರಾಬಾದ್, ಚೆನ್ನೈ ಹಾಗೂ ಕೊಚ್ಚಿಯಲ್ಲಿ 4 ಭಾಷೆಗಳಲ್ಲಿ ಟೀಸರ್ ರಿಲೀಸ್ ಮಾಡಿದ್ದ ಚಿತ್ರತಂಡ ಇದೀಗ ಬೆಂಗಳೂರಲ್ಲಿ ಕನ್ನಡ ಟೀಸರ್ ಗೆ ಚಾಲನೆ ನೀಡಿದೆ‌.  ಈ ಚಿತ್ರದಲ್ಲಿ ನಟಿಸಿರುವ ಬಾಲಿವುಡ್ ನಟ ಸಂಜಯ ದತ್, ಶಿಲ್ಪಾ ಶೆಟ್ಟಿ ಕೂಡ ವೇದಿಕೆಯಲ್ಲಿ ಹಾಜರಿದ್ದರು. ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ನಾಯಕಿ ರೀಶ್ಮಾ ನಾಣಯ್ಯ, ನಿರ್ಮಾಪಕ ಕೆ. ವೆಂಕಟ್ ನಾರಾಯಣ್, ನಿರ್ದೇಶಕ ಪ್ರೇಮ್, ಆನಂದ್ ಆಡಿಯೋದ ಆನಂದ್ ಕೂಡ ವೇದಿಕೆಯಲ್ಲಿ ಹಾಜರಿದ್ದರು.

1000599841

ದಕ್ಷಿಣ ಭಾರತದ ಹೆಸರಾಂತ ನಿರ್ಮಾಣ ಸಂಸ್ಥೆ ಕೆ.ವಿ.ಎನ್. ಪ್ರೊಡಕ್ಷನ್ಸ್ ಈ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿಕೆ ಮಾಡಿದೆ.

18 ವರ್ಷಗಳ ನಂತರ ರವಿಚಂದ್ರನ್ ಮತ್ತು ಶಿಲ್ಪಾ ಶೆಟ್ಟಿ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದೂ ಪ್ರೀತ್ಸೋದು ತಪ್ಪಾ ಚಿತ್ರದ ಅನುಭವ ಗಳನ್ನು ಹಂಚಿ ಕೊಂಡಿದ್ದು, ಬಂಗಾರದಿಂದ ಬಣ್ಣಾನ ತಂದ ಹಾಡಿಗೆ ಸ್ಟೆಪ್ಸ್ ಹಾಕಿ ಹಳೆಯ ನೆನಪುಗಳನ್ನು ಮತ್ತೆ ತೆರೆಯ ಮೇಲೆ ರೀ ಕ್ರಿಯೇಟ್ ಮಾಡಿದರು.

1000599843

ಬಾಲಿವುಡ್ ನಟ ಸಂಜಯ ದತ್ ಮಾತನಾಡಿ ಕೆಡಿ  ಚಿತ್ರದಲ್ಲಿ  ನನ್ನದು ಧಕ್ ದೇವಾ ಎಂಬ ಕಂಪ್ಲೀಟ್ಲಿ ಡೆಂಜರಸ್ ಕ್ಯಾರೆಕ್ಟರ್. ಭಯಾನಕ‌ ವಿಲನ್. ಅಲ್ಲದೆ  ಧ್ರುವ ಸರ್ಜಾ ಬರೀ ಕನ್ನಡದ  ನಟ ಅಲ್ಲ.ಆತ ಇಂಡಿಯನ್ ಆ್ಯಕ್ಟರ್ ಎಂದು ಧ್ರುವ ಸರ್ಜಾ ಅಭಿನಯವನ್ನು ಮನಸಾರೆ ಹೊಗಳಿದರು.

1000599837

ಶಿಲ್ಪಾ ಶೆಟ್ಟಿ ಮಾತನಾಡಿ ಇದೇ ಮೊದಲ ಬಾರಿಗೆ ನಾನೀ ಚಿತ್ರದಲ್ಲಿ 70 ದಶಕದ ಮಹಿಳೆ ಸತ್ಯವತಿಯಾಗಿ ಕಾಣಿಸಿಕೊಂಡಿದ್ದೇನೆ. ಈ ಪಾತ್ರಕ್ಕಾಗಿ ಮೂರು ಸಲ ಬೆಂಗಳೂರಿಗೆ ಬಂದು ಹೋಗಿದ್ದೇನೆ ಎಂದು ಹೇಳಿದರು.

ನಟ ಧ್ರುವ ಸರ್ಜಾ ಮಾತನಾಡುತ್ತ ಇಷ್ಟೂ ಜನ ಆಕ್ಟರ್ ಜತೆ ಕೆಲಸ ಮಾಡುವ ಅವಜಾಶ ಕೊಟ್ಟ ಕೆವಿಎನ್ ಸಂಸ್ಥೆಗೆ ಧನ್ಯವಾದ. ಸಂಜು ಬಾಬಾ, ಶಿಲ್ಪಾ  ಶೆಟ್ಟಿ ಅವರ ಜತೆ ತುಂಬಾ ಕಲಿತೆ. ನಮ್ಮ ಸಿನಿಮಾದ ನಿಜವಾದ ಹೀರೋ  ಅಂದ್ರೆ ನಿರ್ದೇಶಕ ಪ್ರೇಮ್, ಅವರದು ಒಂಥರಾ ಅತೃಪ್ತ ಆತ್ಮ, ಎಷ್ಟು ಕೆಕಸ ಮಾಡಿದರೂ ಅವರಿಗೆ ತೃಪ್ತಿ ಆಗಲ್ಲ‌‌ ಎಂದರು.

ಪ್ರೇಮ್ ನಿರ್ದೇಶನದ ಚಿತ್ರಗಳಲ್ಲಿ ಹಾಡುಗಳಿಗೆ ದೊಡ್ಡಮಟ್ಟದ ಬಜೆಟ್ ಇರುತ್ತದೆ‌. ಅದೇರೀತಿ ಈ ಚಿತ್ರದಲ್ಲೂ ಅವರು ಸಂಗೀತಕ್ಕೆ ಕಥೆ, ಮೇಕಿಂಗ್ ನಷ್ಟೇ ಪ್ರಾಮುಖ್ಯತೆ ನೀಡಿದ್ದಾರೆ. ಶಿವ ಶಿವ ಹಾಡಲ್ಲಿ ಕಣ್ ಕೋರೈಸುವ ವಿಶ್ಯುಯೆಲ್ಸ್, ಅದ್ದೂರಿ ಮೇಕಿಂಗ್ ಯಾವುದೇ ಬಾಲಿವುಡ್ ಹಾಡಿಗೂ ಕಮ್ಮಿಯಿಲ್ಲ. ಈಗ ಅದಕ್ಕಿಂತ ಒಂದು ಪಾಲು ಹೆಚ್ಚೇ ಎನ್ನುವಂತೆ ಟೀಸರ್ ಮೂಡಿಬಂದಿದೆ.

1000599839

ನಿರ್ದೇಶಕ‌ ಪ್ರೇಮ್ ಮಾತನಾಡಿ, ಕೆವಿಎನ್ ಸಂಸ್ಥೆ ಚಿತ್ರದ ಅದ್ದೂರಿತನದ ವಿಷಯದಲ್ಲಿ ಯಾವುದಕ್ಕೂ ಕೊರತೆ ಮಾಡಿಲ್ಲ, ನಿರ್ಮಾಪಕರೇ ನಮ್ಮ ಚಿತ್ರದ ನಿಜವಾದ ಹೀರೋ. ಅವರಿಗೆ ನಮ್ಮ ಸಿನಿಮಾನ ಹೇಗೆ ತೆಗೆದುಕೊಂಡು ಹೋಗಬೇಕು ಎನ್ನುವ ಕನಸಿರಬೇಕು. ಅವರ ಸಿನಿಮಾ ಪ್ರೀತಿಗೆ ಧನ್ಯವಾದ.

1970-75ರ ಸಮಯದಲ್ಲಿ ನಡೆದ ನೈಜಘಟನೆ ಆಧಾರಿತ ಗ್ಯಾಂಗ್‌ಸ್ಟರ್ ಕಥೆ ಈ ಚಿತ್ರಲ್ಲಿದೆ,

ಕೆಡಿ ಅಂದ್ರೆ ಕಾಳಿದಾಸ, ಈತ  ಎಷ್ಟು ಇನ್ನೋಸೆಂಟೋ, ಅಷ್ಟೇ ರಾ ಆಗಿರುತ್ತಾನೆ, ಇನ್ನು  1970ರ ದಶಕದಲ್ಲಿದ್ದ ಬೆಂಗಳೂರಿನ ಸೆಟ್ಟನ್ನು  ಮೋಹನ್ ಬಿ.ಕೆರೆ ಅವರು ರಿಯಲಿಸ್ಟಿಕ್  ಆಗಿ ಹಾಕಿದ್ದಾರೆ. ಅರ್ಜುನ್ ಜನ್ಯ ಅದ್ಭುತವಾದ  ಮ್ಯೂಸಿಕ್ ಮಾಡಿದ್ದಾರೆ. ಕನ್ನಡ ಚಿತ್ರರಂಗ ಈಗ ಟಾಪ್ ನಲ್ಲಿದೆ. ನಮ್ಮ‌ನಮ್ಮಲ್ಲೇ ಕಾಲೆಳೆಯುವುದನ್ನು  ಬಿಡಬೇಕು. ಚಿತ್ರಕ್ಕೆ ಒಟ್ಟು 160 ರಿಂದ 180 ದಿನಗಳವರೆಗೆ  ಶೂಟಿಂಗ್ ಮಾಡಿದ್ದೇವೆ ಎಂದು  ಹೇಳಿದರು.

ನಾಯಕಿ ರೀಶ್ಮಾ ನಾಣಯ್ಯ ಮಾತನಾಡುತ್ತ ಈ ಚಿತ್ರದಲ್ಲಿ ನನಗೆ ಸಾಕಷ್ಟು ಕಲಿಯುವುದಿತ್ತು. ಪ್ರೇಮ್ ಸರ್, ನನಗೆ ಎರಡನೇಬಾರಿಗೆ ಅವಕಾಶ ಕೊಟ್ಟಿದ್ದಾರೆ.  ಫ್ಯಾಮಿಲಿ ಆಡಿಯನ್ಸ್ ಗೆ ತುಂಬಾ ಇಷ್ಟವಾಗುವಂಥ ಸಿನಿಮಾ  ಎಂದು ಹೇಳಿದರು.

ನಿರ್ಮಾಪಕ ವೆಂಕಟ್ ನಾರಾಯಣ್ ಮಾತನಾಡುತ್ತ ಕ್ಯಾರೆಕ್ಟರ್ ಇಂಟ್ರಡಕ್ಷನ್ ಟೀಸರ್‌ ಮೂಲಕ ಎಲ್ಲ ಪಾತ್ರಗಳನ್ನು ತೋರಿಸಿದ್ದೇವೆ. ಚಿತ್ರದಲ್ಲಿ ಆಕ್ಷನ್ ಜತೆಗೆ ಫ್ಯಾಮಿಲಿ ಎಮೋಷನ್ಸ್ಲವ್ ಎಲ್ಲವೂ ಇದೆ. ಧ್ರುವ, ರವಿಚಂದ್ರನ್, ಶಿಲ್ಪಾ ಶೆಟ್ಟಿ, ರೀಶ್ಮಾ ಎಲ್ಲರೂ ಈ ಥರದ ಪಾತ್ರಗಳನ್ನು ಹಿಂದೆ ಮಾಡಿಲ್ಲ. ಈ ಪಾತ್ರಗಳನ್ನು ಡಿಸೈನ್ ಮಾಡಲು ಪ್ರೇಮ್ 3 ವರ್ಷಗಳಿಂದ ತುಂಬಾ ಕಷ್ಟಪಟ್ಟಿದ್ದಾರೆ.  ಈಗಾಗಲೇ 2 ಸಾಂಗ್ ರಿಲೀಸಾಗಿದ್ದು.ಇನ್ನೂ 4 ಹಾಡು ಚಿತ್ರದಲ್ಲಿದೆ. ಈ ವರ್ಷದ ಅಕ್ಟೋಬರ್ ನಲ್ಲಿ ಕೆಡಿ ಪ್ರೇಕ್ಷಕರ ಮುಂದೆ ಬರಲಿದೆ ಎಂದರು.

ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ  ಅಲ್ಲದೆ ನೋರಾ ಫತೇಹಿ ಸೇರಿದಂತೆ ಬಾಲಿವುಡ್‌ನ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ