ಹೆಚ್ಚುತ್ತಿರುವ ವಯಸ್ಸಿನ ಪ್ರಭಾವವನ್ನು ತಗ್ಗಿಸಿ, 40+ ಆಗಿದ್ದರೂ ನೀವು ಸದಾ ಚಿರಯೌವನ ಉಳಿಸಿಕೊಳ್ಳ ಬಯಸಿದರೆ ಮಾಹಿತಿ ನಿಮಗೆ ಪೂರಕ………!

ಹೆಚ್ಚುತ್ತಿರುವ ವಯಸ್ಸು ಹಾಗೂ ಟೆನ್ಶನ್‌ ತುಂಬಿದ ಆಧುನಿಕ ಜೀವನ ಶೈಲಿಯಿಂದಾಗಿ, ಮುಖದ ಚರ್ಮದಲ್ಲಿನ ಟಿಶ್ಯೂ ಸಡಿಲ ಆಗತೊಡಗುತ್ತವೆ. ಕ್ರಮೇಣ ನಿಧಾನವಾಗಿ ಮೂಗು, ಬಾಯಿಯ ಬಳಿಯಲ್ಲೂ ಸುಕ್ಕು, ನಿರಿಗೆ, ಫೈನಲ್ ಲೈನ್ಸ್ ಕಾಣಿಸತೊಡಗುತ್ತವೆ, ಇದರಿಂದ ನಮ್ಮ ಆತ್ಮವಿಶ್ವಾಸ ಸಹಜವಾಗಿ ಕುಗ್ಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಕಾಸ್ಮೆಟಿಕ್‌ ಆ್ಯಂಟಿ ಏಜಿಂಗ್‌ ಪ್ರಕ್ರಿಯೆಗಳು ಬಹಳ ಜನಪ್ರಿಯ ಆಗತೊಡಗಿವೆ. ಕೆಲವು ಮಹಿಳೆಯರು ತಮ್ಮ ಮುಖದ ಚರ್ಮ ಬೆಟರ್‌ ಆಗಿಸಲು ಕೆಲವು ಇನ್ವೇಸಿವ್ ‌ಟೆಕ್ನಿಕ್ಸ್ ಆರಿಸುತ್ತಾರೆ, ಉದಾ : ಇಂಜೆಕ್ಷನ್‌ ಮತ್ತು ಡರ್ಮ್‌ ಫಿಲ್ಲರ್‌. ಈ ಪ್ರಕ್ರಿಯೆಗಳು ಆರಂಭದ ಅಸ್ಥೆಯಲ್ಲಿ ಬಹು ಉಪಯುಕ್ತ ಅನಿಸಬಹುದು. ಆದರೆ ಕೆಲವು ಹೆಂಗಸರು ಫೇಶಿಯಲ್ ರಿಜವಿನೇಶನ್ ಸರ್ಜರಿ ಅಂದ್ರೆ ಫೇಸ್‌ ಲಿಫ್ಟ್ ಸರ್ಜರಿಯನ್ನು ಆಯ್ಕೆ ಮಾಡುತ್ತಾರೆ.

ಇದನ್ನು ಯಾರು ಮಾಡಿಸಬೇಕು?

ಯಾವ ಹೆಂಗಸರ ಮುಖದ ಚರ್ಮ ಹೆಚ್ಚುತ್ತಿರುವ ವಯಸ್ಸನ್ನು ಸೂಚಿಸುವುದರ ಜೊತೆ, ಈ ಕೆಳಗಿನ ಲಕ್ಷಣಗಳನ್ನೂ ತೋರಿಸುತ್ತದೋ ಅಂಥವರು ಫೇಸ್‌ ಲಿಫ್ಟ್ ಗೆ ಮೊರೆ ಹೋಗಬಹುದು.

ಬಿ.ಪಿ, ಶುಗರ್‌ ಇಲ್ಲದೆ ಆರೋಗ್ಯವಾಗಿ ಇರುವವರು

ಧೂಮಪಾನ, ಮಧುಪಾನಕ್ಕೆ ಶರಣಾಗದವರು

ಫೇಸ್ಲಿಫ್ಟ್ ಲಾಭಗಳು

ಇದು ಮುಖದಲ್ಲಿನ ಮಾಂಸಖಂಡಗಳನ್ನು ಟೈಟ್‌ ಗೊಳಿಸಿ, ಚರ್ಮದಲ್ಲಿ ಬಿಸುಪು ಮೂಡಿಸುತ್ತದೆ.

ಗಲ್ಲ, ಕುತ್ತಿಗೆಯ ಶೇಪ್‌ ಸುಧಾರಿಸಲು ಪ್ರಧಾನ ಪಾತ್ರ ವಹಿಸುತ್ತದೆ.

ಇದು ಗಂಡಸರಿಗೂ ಲಾಭಕಾರಿ.

ಸರ್ಜರಿಯಿಂದ ಆಗುವ ಗುರುತನ್ನು ಇದು ಅಡಗಿಸುತ್ತದೆ.

ನೈಸರ್ಗಿಕ ಎನಿಸುವ ಇದರ ಪರಿಣಾಮ, ಚರ್ಮ ದೀರ್ಘಕಾಲದವರೆಗೆ ಚಿರಯೌವನ ಉಳಿಸಿಕೊಳ್ಳಲು ಮೂಲ.

ಫೇಸ್ಲಿಫ್ಟ್ ಸೈಡ್ಎಫೆಕ್ಟ್ಸ್

ಪ್ರತಿ ಸರ್ಜರಿಗೂ ತನ್ನದೇ ಆದ ಸೈಡ್‌ ಎಫೆಕ್ಟ್ಸ್ ಇದ್ದೇ ಇರುತ್ತದೆ. ಇದರಲ್ಲೂ ಸಹ ಈ ಕೆಳಗಿನ ಆತಂಕ ಕಾಡಬಹುದು.

ಅನಸ್ಥೇಶಿಯಾದ ತಪ್ಪಾದ ಬಳಕೆಯ ಪರಿಣಾಮ.

ರಕ್ತ ತೊಟ್ಟಿಕ್ಕುವುದು

ಸೋಂಕು

ಬ್ಲಡ್‌ ಕ್ಲಾಟ್‌

ನೋವು ಉರಿ

ದೀರ್ಘಾವಧಿ ಕಾಡುವ ಊತ

ಗಾಯ ವಾಸಿ ಆಗಲು ತಡ

ಆದರೆ ಸೂಕ್ತ ಆರೈಕೆ, ಔಷಧಿ ಸರ್ಜಿಕಲ್ ಸುಧಾರಣೆಗಳಿಂದ ಈ ಸಮಸ್ಯೆಗಳನ್ನು ನಿವಾರಿಸಬಹುದು. ಆದರೆ ಕೆಲವು ಜಟಿಲತೆಗಳಿಂದಾಗಿ ನಿಮ್ಮ ಒಟ್ಟಾರೆ ಲುಕ್ಸ್ ನಲ್ಲಿ ಬದಲಾವಣೆ ಕಾಣಿಸಬಹುದು. ಉದಾ : ಹಿಮೆಟೋಮಾ ಗಾಯಗಳ ಗುರುತು

ಕಲೆ ಆಂತರಿಕ ಅಂಗಗಳಿಗೆ ತುಸು ಹಾನಿ

ಕತ್ತರಿ ಬಿದ್ದ ಜಾಗದಲ್ಲಿ ಕೂದಲು ಬೆಳೆಯದೇ ಇರುವುದು

ಚರ್ಮಕ್ಕೆ ತುಸು ಹಾನಿ.

ಕೆಲವು ರೋಗಗಳು ಮತ್ತು ನಮ್ಮ ಜೀವನಶೈಲಿ ಸಹ ಈ ಜಟಿಲತೆ ಹೆಚ್ಚಲು ಕಾರಣ ಆಗಬಹುದು. ಈ ಕೆಳಗಿನ ಕಾರಣಗಳಿಂದ ಕೆಲವು ತದ್ವಿರುದ್ಧ ಪರಿಣಾಮ ಆಗಬಹುದು :

ರೋಗಿ ಬ್ಲಡ್‌ ಥಿನ್ನರ್‌ ಔಷಧಿ ಯಾ ಸಪ್ಲಿಮೆಂಟ್‌ ಸೇವಿಸುತ್ತಿದ್ದರೆ, ಇವು ರಕ್ತವನ್ನು ಇನ್ನಷ್ಟು ತೆಳು ಮಾಡುತ್ತವೆ. ಇದರ ನೇರ ಪರಿಣಾಮ ಬ್ಲಡ್‌ ಕ್ಲಾಟಿಂಗ್‌ ನ ಸಾಮರ್ಥ್ಯದ ಮೇಲೆ ಆಗುತ್ತದೆ. ಸರ್ಜರಿ ನಂತರ ಹಿಮೆಟೊಮಾ ಆಗುವ ಸಾಧ್ಯತೆಗಳು ಹೆಚ್ಚಬಹುದು.

ಇತರ ರೋಗಗಳು : ರೋಗಿಗೆ ಅಕಸ್ಮಾತ್‌ ಡಯಾಬಿಟೀಸ್‌, ಬಿ.ಪಿ ಇತ್ಯಾದಿಗಳಿದ್ದರೆ ಗಾಯ ವಾಸಿಯಾಗಲು ತಡವಾಗುತ್ತದೆ. ಹಿಮೆಟೋಮಾ ಅಥವಾ ಹೃದ್ರೋಗ ಹೆಚ್ಚುವ ಸಂಭವವಿದೆ.

ಧೂಮಪಾನ ಒಂದು ಗಂಭೀರ ಚಟ. ನೀವು ಸಿಗರೇಟ್‌ ಸೇದುವುರಾದರೆ, ಸರ್ಜರಿಗೆ 2 ವಾರ ಮೊದಲೇ ಇದನ್ನು ಸಂಪೂರ್ಣ ನಿಲ್ಲಿಸಿಬಿಡಿ. ಸರ್ಜರಿ ನಂತರ 2-3 ವಾರ ಇದನ್ನು ಮುಂದುವರಿಸಬಾರದು.

ತೂಕದಲ್ಲಿ ಏರಿಳಿತ : ನಿಮ್ಮ ದೇಹ ತೂಕದಲ್ಲಿ ಏರಿಳಿತ ಆಗುತ್ತಿದ್ದರೆ, ಸರ್ಜರಿ ನಂತರ ಮುಖದ ಶೇಪ್‌ ನಲ್ಲಿ ವ್ಯತ್ಯಾಸ ಆಗಬಹುದು. ಒಮ್ಮೊಮ್ಮೆ ಈ ಸರ್ಜರಿಯಿಂದ ನೀವು ಬಯಸಿದ ಪರಿಣಾಮ ಸಿಗದೆ ಇರಬಹುದು.

ಪ್ರಕ್ರಿಯೆಗೆ ಮೊದಲು

ಕಾಸ್ಮೆಟಿಕ್‌ ಸರ್ಜನ್‌ ನೀಡುವ ಸಲಹೆ ಎಂದರೆ ಇಡೀ ಪ್ರಕ್ರಿಯೆಯನ್ನು ಉತ್ತಮ ಆಸ್ಪತ್ರೆಗಳಲ್ಲೇ ಮಾಡಿಸಬೇಕು. ಸರ್ಜರಿಗೆ ಮೊದಲು ರೋಗಿಗೆ ಜನರಲ್ ಅನಸ್ಥೇಶಿಯಾ ನೀಡಲಾಗುತ್ತದೆ.

ಚರ್ಮವನ್ನು ಟೈಟ್‌ ಗೊಳಿಸುವ ಪ್ರಕ್ರಿಯೆಯಲ್ಲಿ ಟಿಶ್ಯು, ಮಸಲ್ಸ್ ನಲ್ಲಿ ಇರುವ ಫ್ಯಾಟ್‌ ನ್ನು ಸುಧಾರಿಸಿ ಸರಿಯಾದ ಕ್ರಮದಲ್ಲಿ ಹರಡಲಾಗುತ್ತದೆ. ಮುಖದಲ್ಲಿ ಹೊಸದಾಗಿ ಮಾಡಲಾದ ಕಂಟೂರ್‌ ಮೇಲೆ ಚರ್ಮವನ್ನು ರೀಡ್ರೇಪ್‌ ಮಾಡಿಸಲಾಗುತ್ತದೆ. ಇದಾದ ಮೇಲೆ ಹೆಚ್ಚುವರಿ ಚರ್ಮವನ್ನು ತೆಗೆದು ಗಾಯದ ಮೇಲೆ ಟೇಪ್‌ ಹಾಕಿ ಸೀಲ್ ‌ಮಾಡುತ್ತಾರೆ. ಸಾಮಾನ್ಯವಾಗಿ ಇಂಥ ಸರ್ಜರಿಗಾಗಿ ರೋಗಿ ಕನಿಷ್ಠ ಒಂದು ರಾತ್ರಿಯಾದರೂ ಆಸ್ಪತ್ರೆಯಲ್ಲೇ ಉಳಿಯಬೇಕಾಗುತ್ತದೆ. ಇಡೀ ಫೇಸ್‌ ಲಿಫ್ಟ್ ಸರ್ಜರಿಗೆ 2-3 ಗಂಟೆ ಕಾಲ ಬೇಕು. ಇದರ ಮೇಲೆ ಓವರ್‌ ಸ್ಕಿನ್‌ ಕಾಸ್ಮೆಟಿಕ್‌ ಪ್ರಕ್ರಿಯೆ ಸಹ ಮಾಡಿಸಬೇಕೆಂದರೆ, ಇನ್ನೂ ಹೆಚ್ಚಿನ ಟೈಂ ತಗಲುತ್ತದೆ.

ಪ್ರಕ್ರಿಯೆಯ ನಂತರ

ಫೇಸ್‌ ಲಿಫ್ಟ್ ನಂತರ ನಿಮಗೆ ಕೆಳಗಿನ ಲಕ್ಷಣಗಳು ಕಾಣಿಸಿಕೊಳ್ಳಬಹುದು :

ತುಸು ನೋವು, ಇದಕ್ಕಾಗಿ ಬೇರೆ ಔಷಧಿ ಸೇವಿಸಬೇಕು.

ಗಾಯ ಆರಲು ನಿಧಾನ

ಊತು

ಸರ್ಜರಿಯ ಭಾಗ ಮರಗಟ್ಟಿದಂತೆ ಆಗುವಿಕೆ

ಈ ಲಕ್ಷಣಗಳು ನಿಮಗೇನಾದರೂ ಕಾಣಿಸಿದಲ್ಲಿ, ವೈದ್ಯರನ್ನು ಮತ್ತೆ ಸಂಪರ್ಕಿಸಿ :

ಮುಖ ಅಥವಾ ಕುತ್ತಿಗೆ ಬಳಿ ಬಹಳ ನೋವು, 24 ಗಂಟೆ ಕಾಲ ಕಾಡಬಹುದು

ಉಸಿರು ಕಟ್ಟುವಿಕೆ

ಎದೆನೋವು

ಹೃದಯದ ಬಡಿತ ತಾಳ ತಪ್ಪುವುದು

ಹಾಗಾಗಿ ವೈದ್ಯರು ನೀಡುವ ಈ ಸಲಹೆಗಳನ್ನು ಅಗತ್ಯ ಫಾಲೋ ಮಾಡಿ :

ತಲೆಯನ್ನು ತುಸು ಎತ್ತರದ ದಿಂಬಿನ ಮೇಲಿರಿಸಿ ಆರಾಮ ಪಡೆಯಿರಿ

ಇದಕ್ಕಾಗಿ ನೀಡುವ ಮಾತ್ರೆಗಳನ್ನು ಸಮಯಕ್ಕೆ ಸರಿಯಾಗಿ ಸೇವಿಸಿ

ಮುಖಕ್ಕೆ ಕೂಲ್ ‌ಪ್ಯಾಕ್‌ ಬಳಸಿರಿ, ಇದರಿಂದ ನೋವು, ಊತ ಎಷ್ಟೋ ಕಡಿಮೆ ಆಗುತ್ತದೆ

ಸರ್ಜರಿ ನಂತರ 2 ತಿಂಗಳು ಸತತ ಆಸ್ಪತ್ರೆಯ ಫಾಲೋ ಅಪ್‌ಮಾಡಬೇಕು. ಇದಕ್ಕಾಗಿ ಬ್ಯಾಂಡೇಜ್‌ ಬದಲಾಯಿಸುವಿಕೆ, ಹೊಲಿಗೆ ತೆಗೆಸುವುದು, ಗಾಯವನ್ನು ಸೂಕ್ಷ್ಮವಾಗಿ ಗಮನಿಸಿಕೊಳ್ಳುವುದು ಇತ್ಯಾದಿ ಮಾಡಬೇಕು.

ಸರ್ಜರಿ ನಂತರ ಆರೈಕೆ

ಸರ್ಜರಿ ನಂತರ ವೈದ್ಯರು ನೀಡುವ ಈ ಸಲಹೆಗಳನ್ನು ಅಗತ್ಯ ಅನುಸರಿಸಿ :

ಸರ್ಜರಿಗೆ ತಕ್ಕಂತೆ ಗಾಯಗಳ ಆರೈಕೆ

ಗಾಯದ ಮೇಲೆ ಕಾಣುವ ಪದರವನ್ನು ಕೆರೆಯಬೇಡಿ

ಮುಂಭಾಗದಿಂದ ಕುಷನ್‌ ಇರುವ ಡ್ರೆಸ್ಸ್ ನ್ನೇ ಧರಿಸಿ

ಮುಖ, ತಲೆ ಕವರ್‌ ಆಗುವಂಥ ಡ್ರೆಸ್‌ ಬೇಡ

ಗಾಯದ ಆಚೀಚೆ ಒತ್ತಡ ಬೀಳದಂತೆ ಎಚ್ಚರಿಕೆ ವಹಿಸಿ.

ಹೆಚ್ಚಿನ ಅಲುಗಾಡುವಿಕೆ ಬೇಡ.

ತಕ್ಷಣ ಮೇಕಪ್‌ ತಂಟೆಗೆ ಹೋಗದಿರಿ

ಮೆಡಿಕೇಟೆಡ್‌  ಸೋಪ್‌, ಶ್ಯಾಂಪೂ ಎಂಥದ್ದನ್ನು ಬಳಸಬೇಕೆಂದು ಮೊದಲೇ ವೈದ್ಯರನ್ನು ಕೇಳಿ ತಿಳಿದುಕೊಳ್ಳಿ.

ಭಾರಿ ವ್ಯಾಯಾಮ ಬೇಡ

6-8 ತಿಂಗಳವರೆಗೂ ನೇರ ಬಿಸಿಲಿಗೆ ಬರಲೇ ಬೇಡಿ. ಸದಾ SPF 50 ಅಥವಾ ಅದಕ್ಕಿಂತ ಹೆಚ್ಚಿನದನ್ನೇ ಬಳಸಿರಿ.

ಕನಿಷ್ಠ 6-8 ತಿಂಗಳವರೆಗೂ ಕಲರಿಂಗ್‌, ಬ್ಲೀಚಿಂಗ್‌, ಹೇರ್‌ ಪರ್ಮಿಂಗ್‌ ಮಾಡಿಸಬೇಡಿ.

ಡಾ. ಶಕುಂತಲಾ

ಎಚ್ಚರಿಕೆ ವಹಿಸಿ

ಕೆಲವು ದಿನಗಳ ಹಿಂದೆ ತಮಿಳು ಚಿತ್ರನಟಿ ರಾಯ್ಜಾ ವಿಲ್ಸನ್‌ FB‌ಗೆ ಒಂದು ವಿಡಿಯೋ ಅಪ್‌ ಲೋಡ್‌ ಮಾಡಿದ್ದರು. ಇದರಲ್ಲಿ ಆಕೆ ವಿಕಾರ ಆಗಿರುವ ತನ್ನ ಮುಖ ತೋರಿಸಿದ್ದಾರೆ. ಈಕೆಯ ಮುಖ ವಿಕಾರವಾಗಲು ಫೇಸ್‌ ಲಿಫ್ಟ್ ಸರ್ಜರಿಯೇ ಕಾರಣ. ಇದಕ್ಕೆ ಕಾರಣರಾದ ಕಾಸ್ಮೆಟಿಕ್‌ ಸರ್ಜನ್‌ ವಿರುದ್ಧ ಈಕೆ ದಾವೆ ಹೂಡಿದ್ದರು. ಬಾಲಿವುಡ್‌ ನ ನಟಿಯರಂತೂ ನೋಸ್‌ ವರ್ಕ್‌, ಚಿನ್‌ ಲಿಫ್ಟ್,  ಸ್ಮೈಲ್ ‌ಸರ್ಜರಿ ಇತ್ಯಾದಿ ಮಾಡಿಸುತ್ತಲೇ ಇರುತ್ತಾರೆ.

ಹೀಗಾಗಿ ನೀವು ಈ ಸರ್ಜರಿ ಮಾಡಿಸಬೇಕೆಂದಿದ್ದರೆ, ಮೊದಲು ನುರಿತ ಕಾಸ್ಮೆಟಿಕ್‌ ಸರ್ಜನ್‌ ರನ್ನು ಹುಡುಕಿ. ಜೊತೆಗೆ ನಿಮಗೆ ಗಂಭೀರ ಕಾಯಿಲೆ, ಅಲರ್ಜಿ ಇಲ್ಲ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಈ ವಿಷಯಗಳನ್ನು ನಿರ್ಲಕ್ಷಿಸಿದರೆ ನೀವು ಈ ನಟಿಯ ಹಾಗೆ ಬಾಧೆ ಪಡಬೇಕಾಗುತ್ತದೆ.

ಫೇಸ್ಲಿಫ್ಟ್ ಅಂದ್ರೇನು?

ಫೇಸ್‌ ಲಿಫ್ಟ್ ಅಂದ್ರೆ ಒಂದು ಬಗೆಯ ಕಾಸ್ಮೆಟಿಕ್‌ ಸರ್ಜರಿ. ಇದು ಚರ್ಮವನ್ನು ಹೆಚ್ಚು ಆರೋಗ್ಯಕರ, ಯೌವನದಿಂದ ಕೂಡಿರುವಂತೆ ಮಾಡುತ್ತದೆ. ಮೊದಲು ಈ ಸರ್ಜರಿಯಲ್ಲಿ ಮುಖ, ಕುತ್ತಿಗೆ ಭಾಗದ ಚರ್ಮವನ್ನು ಟೈಟ್‌ ಮಾಡುತ್ತಾರೆ. ಇದೀಗ ಆಧುನಿಕ ಚಿಕಿತ್ಸೆ ಮುಂದುವರಿದು ಮುಖಕುತ್ತಿಗೆಗಳ ಸಡಿಲಗೊಂಡ ಮಾಂಸಖಂಡವನ್ನೂ ಟೈಟ್‌ ಮಾಡಬಹುದಾಗಿದೆ. ಜೊತೆಗೆ ಮುಖದ ಹೆಚ್ಚುವರಿ ಫೇಶಿಯಲ್ ಫ್ಯಾಟ್‌ ನ್ನೂ ತೆಗೆಯಬಹುದು. ವಯೋಸಹಜವಾಗಿ ಜೋತುಬೀಳುವ ಕೆನ್ನೆ, ಗಲ್ಲ, ಕುತ್ತಿಗೆಯ ಭಾಗಗಳನ್ನು ಫೇಸ್‌ ಲಿಫ್ಟ್ ನಿಂದ ಯೌವನ ತುಂಬಿಕೊಂಡಿರುವವರಂತೆ ಮಾಡಬಹುದಾಗಿದೆ.

ಜೋತಾಡುವ ಗಲ್ಲ, ಕುತ್ತಿಗೆ ಸುರೂಪಗೊಳ್ಳುತ್ತವೆ

ಮೂಗಿನಿಂದ ಬಾಯಿವರೆಗಿನ ಫೈನ್‌ ಲೈನ್ಸ್ ನ್ನು ಸರಿಪಡಿಸಬಹುದು

ಕೆನ್ನೆ ತುಂಬಿಕೊಂಡಂತೆ ಕಾಣಿಸಬಹುದು

ಚರ್ಮ ಹೆಚ್ಚು ಬಿಸುಪು ಪಡೆಯುತ್ತದೆ, ಕುತ್ತಿಗೆಯಿಂದ ಹೆಚ್ಚುವರಿ ಫ್ಯಾಟ್‌ ಹೋಗುತ್ತದೆ.

ಅಧುನಿಕ ಸಂಶೋದನೆಗಳ ಪ್ರಕಾರ ಬೊಟ್ಯಾಕ್ಸಿನಂಥ ಫೇಶಿಯಲ್ ಇಂಜೆಕ್ಷನ್‌ ಗಳ ಪ್ರಭಾವ ಕೇವಲ 8 ತಿಂಗಳಿನಿಂದ 2 ವರ್ಷ ಇರಬಹುದು ಅಷ್ಟೇ, ಆದರೆ ಫೇಸ್‌ ಲಿಫ್ಟ್ ನ ಪರಿಣಾಮ ಹಲವು ವರ್ಷ ಉಳಿಯುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ