#Kantarachapter1 #Review
ಜಾಗೀರ್ದಾರ್*
ಸಿನಿಮಾ ನೋಡೋದೇ ವಿಮರ್ಶೆ ಮಾಡುವುದಕ್ಕಾ.. ಅಂತಾದರೆ ಕಾಂತಾರ ಚಾಪ್ಟರ್ 1 ಸಾಕಷ್ಟು ತಾಳ್ಮೆ ಪರೀಕ್ಷಿಸುತ್ತದೆ..ದಂತ ಕಥೆಯಿಂದ ಶುರುವಾಗುವ ಚಿತ್ರ ಇಷ್ಟೇನಾ, ಹೀಗೇನಾ ಬೇರೆ ಏನಾದರೂ ಹೇಳುವುದಕ್ಕೆ ಹೊರಟಿದ್ದಾರಾ..ಎಂದು ಇಂಟರ್ ವಲ್ ವರೆಗೂ ಕಾಯಬೇಕು..ಅಲ್ಲಿಂದ ಚಿತ್ರ ನಿಮ್ಮನ್ನು ಬೇರೆಡೆಗೆ ಕರೆದೊಯ್ಯುವ ನಿಟ್ಟಿನಲ್ಲಿ ಕಥಾಹಂದರ ಗಟ್ಟಿಯಾಗುತ್ತಾ ಹೋಗುತ್ತದೆ.. ಮಣ್ಣಿನ ಕಥೆ,ದೈವದ ಬಗ್ಗೆ ಹೇಳುತ್ತಾ ನಿಮಗೆ ಗೊತ್ತಾಗದ ಹಾಗೆ ಹಿಪ್ನೋಟೈಸ್ ಮಾಡಿಬಿಡುತ್ತಾರೆ ರಿಷಭ್ ಶೆಟ್ಟಿ..ಇಲ್ಲಿಯೂ ನಾಯಕಿ ಇದ್ದಾಳೆ .. ಪ್ರಾರಂಭದಲ್ಲಿ ರುಕ್ಮಿಣಿ ವಸಂತ್ ಪಾತ್ರವೇನು..ಬರೇ ಅಲಂಕಾರ ವಸ್ತುವೇ ಅಂತ ಅನಿಸುವುದು ಸಹಜ ಆದರೆ ಈ ಪಾತ್ರ ಕೂಡಾ ರೂಪಾಂತರ ಪಡೆದಾಗ ವಾವ್ ಅನ್ನಬೇಕು ಹಾಗಿದೆ ಆಕೆಯ ಅಭಿನಯ, ಸೌಂದರ್ಯ,ಆ ಗತ್ತು… ಇನ್ನುಳಿದಂತೆ ಸಾಕಷ್ಟು ಪಾತ್ರಗಳಿವೆ…ಸಂಗೀತ ಸಂಯೋಜನೆ ಅಜನೀಶ್ ಲೋಕನಾಥ್ ಸಿನಿಮಾಗೆ ಹೊಂದುವಂತಿದೆ… ಇಂಥದೊಂದು ಸಿನಿಮಾ ಮಾಡುವುದು ಸುಲಭವಲ್ಲ ಸಾಕಷ್ಟು ಕಲಾವಿದರು,ತಂತ್ರಙ್ನರ ಕೊಡುಗೆ ಎದ್ದು ಕಾಣುತ್ತದೆ.