– ರಾಘವೇಂದ್ರ ಅಡಿಗ ಎಚ್ಚೆನ್.
ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂತೆರೋ ವಿವಾಹ ಆಗಿ ವರ್ಷದ ಬಳಿಕ ಹೊಸ ಮನೆ ಪ್ರವೇಶಿಸಿದ್ದಾರೆ. ಫ್ಲ್ಯಾಟ್ ಒಂದನ್ನು ಖರೀದಿ ಮಾಡಿದ್ದು, ಅದಕ್ಕೆ ಗೃಹಪ್ರವೇಶ ನಡೆದಿದೆ. ಪೂಜೆ ಮಾಡಿ, ಹಾಲುಕ್ಕಿಸಿ ತರುಣ್ ಹಾಗೂ ಸೋನಲ್ ಹೊಸ ಮನೆ ಪ್ರವೇಶ ಮಾಡಿದ್ದಾರೆ. ಹೊಸ ಮನೆ ಪ್ರವೇಶಿಸುವಾಗ ಹಾಲುಕ್ಕಿಸೋ ಸಂಪ್ರದಾಯ ಇದೆ.

ಸೋನಲ್ ಕೂಡ ಇದನ್ನು ಪಾಲಿಸಿದ್ದಾರೆ. ಅವರು ಮದುವೆ ಬಳಿಕ ಹಿಂದೂ ಧರ್ಮವನ್ನು ಪಾಲಿಸುತ್ತಾ ಇದ್ದಾರೆ. ಹಿಂದೂ ಸಂಪ್ರದಾಯಗಳನ್ನು ಇಷ್ಟಪಟ್ಟು ಅನುಸರಿಸುತ್ತಿದ್ದಾರೆ.
ಆ ಸಂದರ್ಭದ ವಿಡಿಯೋನ ಸೋನಲ್ ಹಂಚಿಕೊಂಡಿದ್ದಾರೆ. ಇಡೀ ಮನೆಯಲ್ಲಿ ಒಬ್ಬರ ಫೋಟೋ ಹೈಲೈಟ್ ಆಗಿದೆ. ಅದುವೇ ತರುಣ್ ತಂದೆ ಸುಧೀರ್. ಅವರ ಫೋಟೋವನ್ನು ಮನೆಯ ಹಾಲ್ನಲ್ಲಿ ದೊಡ್ಡದಾಗಿ ಹಾಕಲಾಗಿದೆ. ಈ ಫೋಟೋಗೆ ದಂಪತಿ ಪೂಜೆ ಮಾಡಿದ್ದಾರೆ.

ತರುಣ್ ಅವರಿಗೆ ತಂದೆಯ ಮೇಲೆ ಅಪಾರ ಪ್ರೀತಿ. ಸುಧೀರ್ ಅವರು ಹಲವು ವರ್ಷಗಳ ಕಾಲ ವಿಲನ್ ಆಗಿ ಮಿಂಚಿದ್ದರು. ಈ ಕಾರಣದಿಂದ ಸುಧೀರ್ ಫೋಟೋವನ್ನು ಮನೆಯಲ್ಲಿ ದೊಡ್ಡದಾಗಿ ಹಾಕಲಾಗಿದೆ. ಪೂಜಾ ವಿಧಿ ವಿಧಾನಗಳನ್ನು ಸೋನಲ್ ಹಾಗೂ ತರುಣ್ ಅವರು ಮಾಡಿದ್ದಾರೆ. ಈ ಸಂದರ್ಭದ ವಿಡಿಯೋನ ಸೋನಲ್ ಹಂಚಿಕೊಂಡಿದ್ದಾರೆ. ಸೆಲೆಬ್ರಿಟಿಗಳು ಕೂಡ ಆಗಮಿಸಿ ದಂಪತಿಗೆ ಶುಭಕೋರಿದ್ದಾರೆ.

ಗೃಹಪ್ರವೇಶಕ್ಕೆ ತರುಣ್ ಗೆಳೆಯ ಶರಣ್, ಶ್ರುತಿ ಮೊದಲಾದವರು ಆಗಮಿಸಿದ್ದರು. ಹೊಸ ಮನೆ ಖರೀದಿಸಿದ ದಂಪತಿಗೆ ಎಲ್ಲರೂ ಶುಭ ಕೋರುತ್ತಾ ಇದ್ದಾರೆ.





