ಆಗ ತಾನೇ ಸ್ನೇಹಾ ಆಫೀಸಿನಿಂದ ಬಹಳ ಸುಸ್ತಾಗಿ ಮನೆಗೆ ಬಂದಿದ್ದಳು. ಬಟ್ಟೆ ಬದಲಿಸಿ, ಒಂದಿಷ್ಟು ಟೀ ಕುಡಿದು, ರಾತ್ರಿಗೆ ಏನಾದರೂ ಲೈಟ್‌ ಆಗಿ ಒನ್‌ ಪಾಟ್‌ ಡಿಶ್‌ ನ ಪೊಂಗಲ್ ಅಥವಾ ಖಿಚಡಿ ಮಾಡೋಣ ಎಂದು ನಿರ್ಧರಿಸಿದಳು. ಆಗ ನಿತಿನ್ ಒಳಗೆ ಬರುತ್ತಲೇ ಇವತ್ತು ಡಿನ್ನರ್‌ ಹೊರಗೆ ಮುಗಿಸೋಣ ಎಂದ.

ಆಗ ತಾನೇ ಕೆಲಸ ಮುಗಿಸಿ ಬಂದು, 1 ಗಂಟೆ ಕಾಲ ಮೆಟ್ರೋ ನಂತರ ಬಸ್ಸು ಪ್ರಯಾಣ ಪೂರೈಸಿ, ಡ್ರೆಸ್‌ ಬದಲಿಸಿ ಉಸ್ಸಪ್ಪಾ ಎಂದು ಕೂರುವಷ್ಟರಲ್ಲಿ ಮತ್ತೆ ಹೊರಗೆ ಹೋಗಲು ಡ್ರೆಸ್‌ ಚೇಂಜ್‌ ಮಾಡಬೇಕೇ?

ಇರಲಿ, ಮನೆಯಲ್ಲೇ ಸಿಂಪಲ್ ಆಗಿ ಏನೋ ಒಂದು ಮಾಡ್ತೀನಿ ಎಂದು ನಿತಿನ್‌ ಗೆ ಹೇಳಿ ಒಪ್ಪಿಸಲು ಪ್ರಯತ್ನಿಸಿದಳು. ನಿತಿನ್‌ ತುಸು ಬೇಸರದಿಂದ, “ನಿನಗೆ ಅಡುಗೆ ಕಷ್ಟ ಬೇಡ ಅಂತ್ಲೇ ಹೇಳಿದೆ. ಅರ್ಧ ಗಂಟೆ ಅಡುಗೆ ಆಗುವಷ್ಟರಲ್ಲಿ 1 ಗಂಟೆ ಕಾಲ ಅಡುಗೆಮನೆ ಕ್ಲೀನಿಂಗೇ ಆಗಿಬಿಡುತ್ತೆ!”

Namit_Bajoria_1

ಸ್ನೇಹಾಳಿಗೆ ತನ್ನ ಅಡುಗೆಮನೆ ಸದಾ ಶುಭ್ರ, ಶುಚಿಯಾಗಿರಬೇಕೆಂದು ಬಲು ಆಸಕ್ತಿ. ಅಡುಗೆ ಸಲೀಸಾಗಿ ಮುಗಿದರೂ, ಅದರ ಕ್ಲೀನಿಂಗ್‌ ನಲ್ಲಿ ಬಹಳ ಸಮಯ ತಗುಲುತ್ತಿತ್ತು. ಪತಿಗೆ ಪ್ರಿಯವಾದ ಹುರಿದ, ಕರಿದ ಪದಾರ್ಥ ತಯಾರಿಸೋಣವೆಂದರೆ, ಅದರಿಂದ ಎಣ್ಣೆ ಎಲ್ಲಾ ಕಡೆ ಸಿಡಿದು, ಕ್ಲೀನಿಂಗ್‌ ರೇಜಿಗೆ ಎನಿಸುತ್ತಿತ್ತು. ಹೀಗಾಗಿ ಸದಾ ಸಿಂಪಲ್ ಅಡುಗೆಯಲ್ಲೇ ಮುಗಿಸಿಬಿಡುತ್ತಿದ್ದಳು. ಸ್ನೇಹಾಳಂಥ ಗೃಹಿಣಿಯರ ಅಡುಗೆಮನೆ ಚಿಕ್ಕದಾಗಿದ್ದು, ಧಾರಾಳ ಗಾಳಿ ಇಲ್ಲದಿದ್ದಾಗ, ಇಂಥ ಕಡೆ ಕ್ಲೀನಿಂಗ್‌ ಜವಾಬ್ದಾರಿಯನ್ನು `ಕುಚೀನಾ’ ಹೋಂ ಮೇಕರ್ಸ್‌ ಪ್ರೈ.ಲಿ. ತುಸು ಸಂಭಾವನೆ ಪಡೆದು, ತನ್ನ ನುರಿತ ಸಿಬ್ಬಂದಿಯಿಂದ ಸುಲಭವಾಗಿ ಕೆಲಸ ಮಾಡಿಕೊಡುತ್ತದೆ. ಅದರಲ್ಲೂ ಮುಖ್ಯವಾಗಿ ಕೊರೋನಾ ಕಾಲದಿಂದ, ಎಲ್ಲರಿಗೂ WFO ಅವಕಾಶವಿದ್ದು, ಮಕ್ಕಳೂ ಆನ್‌ ಲೈನ್ ಸ್ಟಡಿ ಮಾಡುತ್ತಿರುವಾಗ, ಸಹಜವಾಗಿಯೇ ಅಡುಗೆಮನೆಯಿಂದ ಹೆಚ್ಚಿನ ಸರಬರಾಜಿದ್ದು, ಕ್ಲೀನಿಂಗ್‌ ಮತ್ತಷ್ಟು ಜಟಿಲವಾಗ ತೊಡಗಿತು.

ಕೊಳಕು ಕಿಚನ್

ಬಹುತೇಕ ಮನೆಗಳಲ್ಲಿ ಕೊರೋನಾ ಕಾಲದಿಂದ, ಪತಿಯರು ಅಡುಗೆಮನೆಯಲ್ಲಿ ಸಹಕರಿಸುತ್ತಾ, ತಾವೇ ಎಷ್ಟೋ ಸಲ ಅಡುಗೆ ಮಾಡಿ ನಳಪಾಕದ ರುಚಿ ತೋರಿಸತೊಡಗಿದಾಗ, ಸಹಜವಾಗಿಯೇ ಅಡುಗೆಮನೆ ಹೆಚ್ಚು ರಣರಂಗವಾಗ ತೊಡಗಿತು. ಹೀಗಾಗಿ ಅದನ್ನು ಕ್ಲೀನಿಂಗ್‌ ಮಾಡುವಷ್ಟರಲ್ಲಿ ಗೃಹಿಣಿಯರು ಹೈರಾಣಾಗ ತೊಡಗಿದರು.

ಅಡುಗೆ ತಯಾರಾಗುವಾಗ ಅದರಿಂದ ಹೊರಸೂಸುವ ಬಿಸಿ ಹೊಗೆಯನ್ನು ನೇರವಾಗಿ ಮನೆಯ ಹೊರಗೆ ರವಾನಿಸುವ ವ್ಯವಸ್ಥೆ ಆಗಬೇಕು. ಸಣ್ಣ ಮನೆ, ಅಪಾರ್ಟ್‌ ಮೆಂಟಿನ ಫ್ಲಾಟ್‌ ಗಳಲ್ಲಿ ಇದು ಸಾಧ್ಯವಿಲ್ಲ. ಹೀಗಾಗಿ `ಕುಚೀನಾ’ ಸಂಸ್ಥೆ ಕೆಲವು ಹೊಸ ಪ್ರಾಡಕ್ಟ್ ಸಹ ಲಾಂಚ್‌ ಮಾಡಿತು. ಇದರಿಂದ ಕಿಚನ್‌ ಕ್ಲೀನಿಂಗ್‌ ಎಷ್ಟೋ ಸುಗಮವಾಯಿತು. ಈ ಪ್ರಾಡಕ್ಟ್ ಮಹಿಳೆಯರ ಕೆಲಸಕ್ಕೆ ಬಲು ಪೂರಕವಾಗಿದೆ.

ಕುಚೀನಾ ಸುಲಭಗೊಳಿಸಿದ ಕೆಲಸ

ಎಲ್ಲಾ ಗೃಹಿಣಿಯರಿಗೂ ಮನೆಯ ಸದಸ್ಯರಿಗಾಗಿ ಅತ್ಯಂತ ರುಚಿಕರ ತಿನಿಸು ತಯಾರಿಸುವ ಖಯಾಲಿ. ಸಹಜವಾಗಿ ಇದರಿಂದ ಕ್ಲೀನಿಂಗ್‌ ಕಷ್ಟಕರ. ಹೀಗಾಗಿ ಈ ಜಟಿಲ ಕೆಲಸ ಸುಲಭಗೊಳಿಸಲು, ಇದರ ಪ್ರಬಂಧಕರು ಹೇಳುವುದೆಂದರೆ, ನಮ್ಮ ಮನೆಯಲ್ಲಿ ಅಮ್ಮ ಈ ವಿಷಯವಾಗಿ ಬಹಳ ಕಷ್ಟಪಡುತ್ತಿದ್ದರು. ಅಡುಗೆ ನಂತರದ ಪಾತ್ರೆ, ಸ್ಲಾಬ್‌, ಗೋಡೆಗಳ ಕ್ಲೀನಿಂಗ್‌ ಕಷ್ಟಕರವಾಗಿತ್ತು. ಹೀಗಾಗಿ `ಕುಚೀನಾ’ ಪ್ರಾಡಕ್ಟ್ ಈ ಕೆಲಸಗಳನ್ನು ಈಝಿಗೊಳಿಸಿತು.

ನಮಿತ್‌ ಹೇಳುತ್ತಾರೆ, 1996ರಲ್ಲಿ ಅವರು ಈ ಕೆರಿಯರ್‌ ಶುರು ಮಾಡಿದರು. ಕ್ರಮೇಣ ಅವರ ಕೆಲಸಗಳು ಹೆಚ್ಚಿ 2003ರ ಹೊತ್ತಿಗೆ ಒಂದು ಆಟೋಮೆಟಿಕ್‌ ಚಿಮನಿ ಮೂಲಕ ತಮ್ಮ ಬ್ರಾಂಡ್‌ ಮಾರ್ಕೆಟ್‌ ನಲ್ಲಿ ಪರಿಚಯಿಸಿದರು.

“ಈ ಬ್ರಾಂಡ್‌ ಬಂದಾಗ ಈಗಾಗಲೇ ಪಾಶ್ಚಾತ್ಯ ದೇಶಗಳ ಪ್ರಾಡಕ್ಟ್ಸ್ ಈ ನಿಟ್ಟಿನಲ್ಲಿ ಬಲವಾಗಿ ತಳವೂರಿದ್ದ. ಇವು ನಮ್ಮ ಭಾರತೀಯ ಅಡುಗೆಮನೆಯನ್ನು ಪರ್ಫೆಕ್ಟ್ ಕ್ಲೀನ್‌ ಮಾಡಬಲ್ಲವೇ ಎನಿಸಿತು. ಹೀಗಾಗಿ ಕುಚೀನಾ ಪ್ರಾಡಕ್ಟ್ಸ್ ಈ ನಿಟ್ಟಿನಲ್ಲಿ ಅನೇಕ ಪ್ರಯೋಜನಕಾರಿ ಕೆಲಸ ಮಾಡತೊಡಗಿತು, ಈಗ ಮಾರುಕಟ್ಟೆಯಲ್ಲಿ ಅದು ಸಕ್ಸಸ್‌ ಫುಲ್ ಎನಿಸಿದೆ!”

ಇಲ್ಲಿ ಕುಚೀನಾ ಉಪಕರಣದಿಂದ ಇಡೀ ಅಡುಗೆಮನೆ ಕ್ಲೀನ್‌ ಆಗುವುದರ ಜೊತೆ, ಎಣ್ಣೆ ಜಿನುಗುವ ಕೊಳಕು ಬಿಂದು ಸಹ ದೂರವಾಗುತ್ತದೆ, ಬಿಸಿ ಹೊಗೆಯೂ ದೂರವಾಗುತ್ತದೆ. ಈ ಉಪಕರಣದಲ್ಲಿ ಬಟನ್‌ ಪ್ರೆಸ್‌ ಮಾಡುತ್ತಲೇ ಶುಚಿತ್ವದ ಕೆಲಸ ಶುರುವಾಗುತ್ತದೆ. ಇದು ಐ ಕ್ಲೀನ್‌ ಟೆಕ್ನಿಕ್‌ ನಿಂದ ಸಾಧ್ಯವಾಗಿದೆ. ಇಷ್ಟರಲ್ಲೇ ಭಾರತದಾದ್ಯಂತ ಈ ಉಪಕರಣ ಹರಡಲಿದೆ.

ಈ ಉಪಕರಣದ ಮೂಲಕ ಗ್ರಾಹಕರಿಗೆ ಹೆಚ್ಚು ಹೆಚ್ಚಿನ ಪ್ರಯೋಜನ ಆಗುವಂತೆ ಗಮನಿಸುತ್ತಿದ್ದೇವೆ. ನಾವು ಇಲ್ಲಿ ಆಟೋಕ್ಲೀನ್ ಚಿಮನಿಯಿಂದ ಆರಂಭಿಸಿದಿ. ಇದಕ್ಕಾಗಿ ಸೋಪ್‌ ವಾಟರ್‌ ನ್ನು ಸಿಸ್ಟಮ್ ಗೆ ಜೋಡಿಸಬೇಕಿತ್ತು. ಹೀಗಾಗಿ ಮಾಡ್ಯುಲಾರ್‌ ಕಿಚನ್ ನಲ್ಲಿ ಜರ್ಮನಿ ಟೆಕ್ನಿಕ್ಸ್ ಸಹ ಅಳವಡಿಸಿದ್ದೇವೆ. ಮುಂದೆ ಇಡೀ ಕಿಚನ್‌ ಕ್ಲೀನಿಂಗ್‌ ನ ಸಂಪೂರ್ಣ ಜವಾಬ್ದಾರಿ ಹೊರಲಿದ್ದೇವೆ, ಎನ್ನುತ್ತಾರೆ, ಪ್ರಬಂಧಕರಾದ ನಮಿತ್‌.

ಪ್ರತಿನಿಧಿ 

 

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ