ಅಮೃತಾ ಗುಪ್ತಾ ಸದಾ ಆಧುನಿಕ, ಸಸ್ಟೇನೆಬಲ್ ರಿಯಲ್ ಎಸ್ಟೇಟ್ ರೂಪಿಸುವ ಕನಸು ಕಾಣುತ್ತಿದ್ದರು. ಅಟ್ಲಾಂಟಾದಿಂದ ಸಸ್ಟೇನೆಬಲ್ ಡಿಸೈನ್ ಪ್ರಾಜೆಕ್ಟ್ಸ್ ನಲ್ಲಿ ಮಾಸ್ಟರ್ಸ್ ಡಿಗ್ರಿ ಪಡೆದ ನಂತರ ಆಕೆ ರಿಯಲ್ ಎಸ್ಚೇಟ್ ಇಂಟೀರಿಯರ್ಸ್ ನಲ್ಲಿ ವ್ಯಾಪಕ ಅನುಭವ ಪಡೆದರು. ನಂತರವೇ ಅವರು ತಮ್ಮ ಮಹತ್ವಾಕಾಂಕ್ಷೆಯ `ಡಿಸೈನ್ಸ್' ಸಂಸ್ಥೆ ಸ್ಥಾಪಿಸಿ ಮಂಗಳಂ ಗ್ರೂಪ್ ಮೂಲಕ ಅವರು ಹಲವು ರೆಸಿಡೆನ್ಸಿಯಲ್ ಪ್ರಾಜೆಕ್ಟ್ ನ್ನು ಲೀಡ್ ಮಾಡಿದ್ದಾರೆ. ಒಂದು ಇನ್ ಹೌಸ್ ಡಿಸೈನ್ ಟೀಮನ್ನೂ ಸ್ಥಾಪಿಸಿದ್ದಾರೆ, 150 ಯೂನಿಟ್ಸ್ ಡೆಲಿವರಿ ಮಾಡಿದ್ದಾರೆ. ಇದಲ್ಲದೆ ಅವರು ಗ್ರೂಪಿಗಾಗಿ ವಿಭಿನ್ನ ಯೋಜನೆಗಳ ನೇತೃತ್ವ ವಹಿಸಲು, ಮಂಗಳಂ ಗ್ರೂಪಿನ ಹಾಸ್ಪಿಟಾಲಿಟಿ ವಿಂಗ್ ನ್ನು ಸ್ಥಾಪಿಸಿದರು. ಇವರು ಗಂಡುಹೆಣ್ಣು ಎಂಬ ಭೇದಭಾವ ನೋಡುವವರಲ್ಲ. ಸ್ತ್ರೀವಾದಿಗಳು, ಪ್ರಬಲ ಸ್ತ್ರೀ ಸಮರ್ಥಕರು. ಇವರ ಪ್ರಯಾಸಗಳನ್ನು ಗುರುತಿಸಿ ಕ್ರೆಡಾಯಿ, ಇವರಿಗೆ ಇಂಡಸ್ಟ್ರಿಯಲ್ಲಿ ಹೆಂಗಸರ ಉಪಸ್ಥಿತಿ ಹೆಚ್ಚಿಸಲು 2019ರಲ್ಲಿ ರಾಜಾಸ್ಥಾನದಲ್ಲಿ ಮಹಿಳಾ ವಿಂಗ್ ನ ಸಂಸ್ಥಾಪಕ ಅಧ್ಯಕ್ಷೆಯಾಗಲು ಆಹ್ವಾನ ನೀಡಿತು.
ನಂದ ಕಿಶೋರ್ ಗುಪ್ತಾರಿಂದ 1996ರಲ್ಲಿ ಸ್ಥಾಪಿಸಿಲ್ಪಟ್ಟ ಮಂಗಳಂ ಗ್ರೂಪ್, ಒಂದು ಪ್ರವರ್ಧಮಾನ ಭಾರತೀಯ ಗ್ರೂಪ್ ಎನಿಸಿದೆ. ಇಂದು ರಿಯಲ್ ಎಸ್ಟೇಟ್ ಬ್ರಾಂಚ್, ಮಂಗಳಂ ಬಿಲ್ಡ್ ಡೆವಲಪರ್ಸ್ ತನ್ನ ಉತ್ಕೃಷ್ಟತೆಗಾಗಿ ಹೆಸರಾಗಿದೆ. ಈ ಕುರಿತು ಈಕೆ ಹೇಳುತ್ತಾರೆ, ನಾವು `ನಿಮ್ಮ ಕನಸು ನಮ್ಮ ಪ್ರಯಾಸ' ಘೋಷಣೆಯ ಮೂಲಕ, ಎಲ್ಲರ ವಾಸಸ್ಥಳ ಗ್ಯಾರಂಟಿ ಮಾಡಿಸಿಕೊಡುತ್ತೇವೆ. ಹೆಲ್ತ್ ಕೇರ್, ಹಾಸ್ಪಿಟಾಲಿಟಿ ಹಾಗೂ ಮನರಂಜನೆ ಇತ್ಯಾದಿಗಳಿಗೆಂದೇ ನಮ್ಮ ಬಳಿ ಒಂದು ಪೋರ್ಟ್ ಪೋಲಿಯೋ ಇದೆ. ಮಂಗಳಂ ಪ್ಲಸ್ ಮೆಡಿಸಿಟಿ ಹಾಸ್ಪಿಟಲ್ಸ್ ಹಾಗೂ ಫನ್ ಕಿಂಗ್ಡಂ ಮನರಂಜನೆ ಪಾರ್ಕ್, ವ್ಯಾಪಕ ಆರೋಗ್ಯದ ಆರೈಕೆ ಹಾಗೂ ಮನರಂಜನೆಯ ಕುರಿತಾಗಿ ನಮ್ಮ ಸಮರ್ಪಣಾ ಮನೋಭಾವ ದರ್ಶಿಸುತ್ತದೆ. ಮೇಪಲಡ್‌ಪಿಂಕ್ ವಾಕ್ ಮಾಲ್ ಮುಂತಾದ ಪ್ರಾಜೆಕ್ಟ್ಸ್ ನ್ನು ಸ್ಥಾಪಿಸುವುದರ ಜೊತೆಗೆ ನಾವು 100 ಪ್ರಾಜೆಕ್ಟ್ಸ್ ದಾಟಿದ್ದೇವೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುವುದೆ! ಇದೀಗ ಪ್ರಸ್ತುತ ನಮ್ಮ ಬಳಿ 30+ ಪ್ರಾಜೆಕ್ಟ್ಸ್ ನಡೆಯುತ್ತಿದೆ, 220 ಸಿಬ್ಬಂದಿ ಇದ್ದು, ಅದರಲ್ಲಿ 80+ ಹೆಂಗಸರೇ ಇದ್ದಾರೆ.''
ತನ್ನ ಮೂಲ ಪ್ರೇರಣೆಯ ಕುರಿತಾಗಿ ಈಕೆ, ``ನನಗೆ ಈ ಪ್ರಕೃತಿ ಮಾತೆಯೇ ಮೂಲ ಪ್ರೇರಣೆ. ಪ್ರಾಕೃತಿಕ ಸೌಂದರ್ಯದಿಂದ ನಮ್ಮ ಪ್ರಾಜೆಕ್ಟ್ಸ್ ರೂಪುಗೊಳ್ಳುತ್ತವೆ. ಅಟ್ಲಾಂಟಾದಿಂದ ಸಸ್ಟೇನೆಬಲ್ ಡಿಸೈನ್ ಪ್ರಾಜೆಕ್ಟ್ಸ್ ನಲ್ಲಿ ಮಾಸ್ಟರ್ಸ್ ಡಿಗ್ರಿ ಪಡೆದ ನಂತರ ಈ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆ ಹೆಚ್ಚಿತು. ಹೀಗಾಗಿ ರಿಯಲ್ ಎಸ್ಟೇಟ್ ಸದಾ ಪ್ರಕೃತಿಯೊಂದಿಗೆ ಜೋಡಿ ಆಗಿರಬೇಕು, ಎಂಬ ಕನಸು ಕಂಡಳು ನಾನು. `ಹೀಲ್ ಮೈ ಅರ್ಥ್' ಕಾನ್ಸೆಪ್ಟ್ ಹುಟ್ಟಿದ್ದು ಸಹ ಇದೇ ದೃಷ್ಟಿಕೋನದಿಂದ. ಹಾಗಾಗಿ ಇದರ ಗುರಿ ಪಾರಂಪರಿಕ ತಾಣಗಳನ್ನು ಗ್ರೀನ್ ಸೆಂಚುರೀಸ್ ನಲ್ಲಿ ಬದಲಿಸುವುದಾಗಿದೆ!''
ಈಕೆ ಹೇಳುತ್ತಾರೆ, ರಿಯಲ್ ಎಸ್ಟೇಟ್ ಬಿಸ್ ನೆಸ್ ನ್ನು ಜನ ಸಾಮಾನ್ಯವಾಗಿ ಪುರುಷ ಪ್ರಧಾನ ಉದ್ಯಮ ಎಂದೇ ಅಂದುಕೊಂಡಿದ್ದಾರೆ. ಆದರೆ ಅಸಲಿಗೆ ಹೆಂಗಸರು ಇದರ ಡಿಸೈನ್ ಹಾಗೂ ಉದ್ಯಮದ ಹಲವು ವಿಭಿನ್ನ ಆಯಾಮಗಳಿಗೆ ಹೊಂದುವಂತೆ ಹೊಸ ಬೆಳಕು ಚೆಲ್ಲಿದ್ದಾರೆ ಎಂದೇ ಹೇಳಬಹುದು. ಹೆಂಗಸರು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ, ಸಾಂಪ್ರದಾಯಿಕ ಮಾನ್ಯತೆಗಳಿಗೆ ಸವಾಲೊಡ್ಡಿ, ಸಮಾನ ಅವಕಾಶಗಳಿಗೆ ವಕಾಲತ್ತು ವಹಿಸುತ್ತಾ ಮುಂದುವರಿಯುತ್ತಿದ್ದಾರೆ!





