ಆಶ್ಮೀನ್ಮುಂಜಾಲ್

ತಮ್ಮ ಅಪಾರ್ಟ್‌ ಮೆಂಟ್‌ ನ ಮೊದಲ ಮಹಡಿಯ 1 ಕೋಣೆಯಲ್ಲಿ 25 ವರ್ಷಗಳಿಗೆ ಮುನ್ನ,  ಆಶ್ಮೀನ್‌ ಮುಂಜಾಲ್‌`ಆಶ್ಮೀನ್‌ಗ್ರೇಸ್‌' ಎಂಬ ಹೆಸರಲ್ಲಿ ಒಂದು ಬ್ಯೂಟಿ ಪಾರ್ಲರ್‌ ಆರಂಭಿಸಿದ್ದರು. ಕಾಲ ಸರಿದಂತೆ ಅದು ಜನಪ್ರಿಯವಾಗುತ್ತಾ ಅತಿ ದೊಡ್ಡದಾಗಿ ಬೆಳೆಯಿತು. ಇದಕ್ಕಾಗಿ ಮತ್ತೆರಡು ಕೋಣೆಗಳನ್ನು ಸಿದ್ಧಪಡಿಸಿದ್ದಾಯ್ತು. 8 ವರ್ಷಗಳ ನಂತರ ಸೌಥ್‌ ಎಕ್ಸ್ ಟೆನ್ಶನ್‌ ನಲ್ಲಿ ಮೊದಲ ಸಲ ಕಮರ್ಶಿಯಲ್ ಮಾರ್ಕೆಟ್‌ ನಲ್ಲಿ ಮತ್ತೊಂದು ಪಾರ್ಲರ್‌ ತೆರೆದು ಅದನ್ನು `ಆಶ್ಮೀನ್‌ ಮುಂಜಾಲ್ಸ್ ಎಂಪೈರ್‌ ಆಫ್‌ ಮೇಕ್ ಓವರ್‌' ಎಂದು ಹೆಸರಿಟ್ಟರು. ಬೇಡಿಕೆ ಹೆಚ್ಚಿ ಯೂನಿಸೆಕ್ಸ್ ಸೆಲೂನ್‌ತೆರೆಯಲೇಬೇಕಾಯಿತು. ಆಗ ಈಕೆ `ಸ್ಟಾರ್‌ ಸೆಲೂನ್‌ ಪ್ರೈ.ಲಿ.' ಹೆಸರಿನಲ್ಲಿ ತಮ್ಮ ಕಂಪನಿಯನ್ನು ರಿಜಿಸ್ಟರ್‌ ಮಾಡಿಸಿದರು. ಇದರಲ್ಲಿ ಆಕೆ ಡೈರೆಕ್ಟರ್‌, ಉಳಿದವರು ಪಾರ್ಟ್‌ ನರ್ಸ್‌. ನಂತರ 2010ರಲ್ಲಿ ಇದರಡಿ `ಸ್ಟಾರ್‌ ಅಕಾಡೆಮಿ' ಶುರುವಾಯ್ತು. ಇಲ್ಲಿ ಬ್ಯೂಟಿ ಪಾರ್ಲರ್‌ ನಡೆಸಲು ತರಬೇತಿ ನೀಡತೊಡಗಿದರು. ಈ ರೀತಿ 1 ಕೋಣೆಯಲ್ಲಿ ಶುರುವಾದ ಪಾರ್ಲರ್‌ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ!

ಈಕೆ ಕಳೆದ 25 ವರ್ಷಗಳಿಂದ ಬ್ಯೂಟಿ ಇಂಡಸ್ಟ್ರಿಯಲ್ಲಿ ಕಾಸ್ಮೆಟಾಲಜಿಸ್ಟ್ ಆಗಿ ದುಡಿಯುತ್ತಿದ್ದಾರೆ. ಇಲ್ಲಿ ಹೆಣ್ಣು ಗಂಡು ಇಬ್ಬರಿಗೂ ಸೌಂದರ್ಯ ಸಂವರ್ಧನೆ ಒದಗಿಸಿ ಅವರನ್ನು ಕೆರಿಯರ್‌ ನ ಉತ್ತುಂಗಕ್ಕೇರಿಸುವ ಕೆಲಸ ನಡೆಯುತ್ತದೆ. ಒಬ್ಬ ಸಾಧಾರಣ  ಗೃಹಿಣಿಯಾಗಿ ತಮ್ಮ ಮನೆಯ ಒಂದು ಕೋಣೆಯನ್ನೇ ಇದಕ್ಕಾಗಿ ಮೀಸಲಿಟ್ಟರು. ಮನೆ ಮಟ್ಟಿಗೆ ಬಿಸ್‌ ನೆಸ್‌ ನಡೆಸುವಂತೆ ಪತಿ ಸಲಹೆ ನೀಡಿದರು. 107ರವರೆಗೆ ಇದನ್ನು ನಡೆಸುತ್ತಾ, ಮನೆವಾರ್ತೆ ಗಮನಿಸಿಕೊಂಡರು. ಕೇವಲ ಡಿಗ್ರಿ ಹೊಂದಿದ್ದ ಈಕೆಗೆ ಉನ್ನತ ಶಿಕ್ಷಣ ಏನೂ ಇರಲಿಲ್ಲ. ಮನೆಮಟ್ಟಿಗೆ ಎಂದಾಗ ಬೇರೇನಾದರೂ ಸಣ್ಣಪುಟ್ಟದ್ದು ಮಾಡಬಹುದಿತ್ತು. ಜನರ ಸೌಂದರ್ಯ ಹೆಚ್ಚಿಸುವ ಕೆಲಸ ಪ್ರಿಯಾಗಿ ಅದನ್ನೇ ಮುಂದುವರಿಸಿದರು.

ಇದಕ್ಕಾಗಿ ದೆಹಲಿಯಲ್ಲಿ ಲಭ್ಯವಿದ್ದ ಬೆಸ್ಟ್ ಕಾಸ್ಮೆಟಿಕ್‌ ಟೆಕ್ನಾಲಜಿಯ ಕೋರ್ಸ್‌ ಮುಗಿಸಿ ಮುಂದೆ ಪಾರ್ಲರ್‌ ವಿಸ್ತರಿಸಲು ಬಯಸಿದರು. ಇವರ ಕೈಚಳಕನ್ನು ಜನ ಗುರುತಿಸಿ ಬಹಳ ಮೆಚ್ಚಿಕೊಂಡರು. ಹೇರ್‌ ಕಟ್‌ಕಲರಿಂಗ್‌ ಇವರ ಪ್ಲಸ್‌ ಪಾಯಿಂಟ್‌. ವರ್ಕೋಹಾಲಿಕ್‌ ಆದ ಈಕೆ ಅದರಲ್ಲಿ ಸಂಪೂರ್ಣ ಮುಳುಗಿಹೋದರು. 10-10ರವರೆಗೆ ದುಡಿಯುವುದು ಅಭ್ಯಾಸವಾಯ್ತು. ಜೊತೆ ಜೊತೆಗೆ ಮನೆ, ಮಕ್ಕಳು, ಅವರ ಓದಿನ ಕಡೆಯೂ ಸಮಾನ ಗಮನ ಹರಿಸಬೇಕಿತ್ತು.

ಇಲ್ಲಿಯವರೆಗೆ ಈಕೆಗೆ ಬಹಳಷ್ಟು ಪ್ರಶಸ್ತಿಗಳು ಅರಸಿ ಬಂದಿವಂ. ಸ್ಕಿಲ್ ‌ಡೆಲಪ್‌ ಮೆಂಟ್‌ ಗಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ಕೇಜ್ರಿವಾಲ್ ‌ಪ್ರಶಸ್ತಿ, ಉಪರಾಷ್ಟ್ರಪತಿ ಎಂ. ವೆಂಕಯ್ಯನವರಿಂದ ಪ್ರಶಸ್ತಿ ಪುರಸ್ಕಾರ, ವುಮನ್‌ ಎಂಪವರ್ಮೆಂಟ್‌ ಗಾಗಿ ಸುಷ್ಮಾ ಸ್ವರಾಜ್‌ ಪ್ರಶಸ್ತಿಗಳು, ಮೇಕಪ್‌ಬ್ಯೂಟಿಗಾಗಿ ಆಲ್ ಇಂಡಿಯಾ ಎಕ್ಸಿಲೆನ್ಸ್ ಅವಾರ್ಡ್‌, ಸೆಲೆಬ್ರಿಟಿ ಮೇಕಪ್‌ ಆರ್ಟಿಸ್ಟ್ ಅವಾರ್ಡ್ಸ್..... ಹೀಗೆ ಲೆಕ್ಕವಿಲ್ಲದಷ್ಟು ಸಂದಿವೆ.

ಪ್ರಾಪರ್‌ ಟೈಂ ಮ್ಯಾನೇಜ್‌ ಮೆಂಟ್‌ ಎಲ್ಲಕ್ಕಿಂತ ಬಲು ಮುಖ್ಯ ಎನ್ನುತ್ತಾರೆ. ಹಣ, ಹೆಸರು, ಕೀರ್ತಿ, ಕೆರಿಯರ್‌..... ಇವೆಲ್ಲ ಇದ್ದದ್ದೇ, ಆದರೆ ನಿಮ್ಮ ಮಕ್ಕಳ ಬಾಲ್ಯ ಮತ್ತೆ ವಾಪಸ್‌ ಬರಲಾರದು. ಹೀಗಾಗಿ ಅವರ ಬಾಲ್ಯದ ದಿನಗಳನ್ನು ಆನಂದಿಸಿ. ಮಕ್ಕಳನ್ನು ಸರಿಯಾಗಿ ಗಮನಿಸಿಕೊಳ್ಳಲಿಲ್ಲ ಎಂಬ ಗಿಲ್ಟ್ ಮುಂದೆ ನಿಮ್ಮ ಯಶಸ್ಸನ್ನು ಎಂಜಾಯ್‌ ಮಾಡಲಿಕ್ಕೂ ಬಿಡದು. ತಮ್ಮ ಪ್ರೊಫೆಶನಲ್ ಸಕ್ಸಸ್‌ ನ್ನು ಎಂಜಾಯ್‌ ಮಾಡುವ ಈಕೆ ಇಂದು ತನ್ನ ಸಂಸಾರ, ಗಂಡ, ಮನೆ ಮಕ್ಕಳು, ನೆಂಟರಿಷ್ಟರು, ಹಬ್ಬ ಹರಿದಿನಗಳ ಸುಖ ಸಂತೋಷ ಎಂದೂ ಬಿಟ್ಟು ಕೊಡಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ