ಕನ್ನಡಿಗರ ನೆಚ್ಚಿನ ವಾಹಿನಿ ಜೀ಼ ಕನ್ನಡ ಪ್ರೇಕ್ಷಕರನ್ನು ಧಾರಾವಾಹಿಗಳು, ರಿಯಾಲಿಟಿ ಶೋ ಗಳು ಮತ್ತು ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮೂಲಕ ಮನರಂಜಿಸುತ್ತ ಬಂದಿದೆ. ಈಗ ‘ನಾವು ನಮ್ಮವರು’ ರಿಯಾಲಿಟಿ ಶೋ ಮೂಲಕ ಜನರ ಮನರಂಜನೆ ಮತ್ತಷ್ಟು ಹೆಚ್ಚಲಿದೆ. ಅಷ್ಟೇ ಅಲ್ಲದೇ ಸಂಬಂಧಗಳಿಗೆ ಹೆಚ್ಚಿನ ಮಹತ್ವ ನೀಡುವ ಜೀ಼ ಕನ್ನಡ ಸಂಬಂಧಗಳನ್ನು ಸಂಭ್ರಮಿಸಲು ಮತ್ತೊಂದು ಸರ್ಪ್ರೈಸ್ ತಂದಿದೆ. ಅದುವೇ ‘ನೆನಪಿನ ಅಂಗಳದಲ್ಲಿ’ ಆನ್-ಗ್ರೌಂಡ್ ಈವೆಂಟ್’!

‘ನೆನಪಿನ ಅಂಗಳದಲ್ಲಿ’ ನಿಮ್ಮ ಕುಟುಂಬದ ಜೊತೆಗಿನ ಸುಂದರವಾದ ಹಳೆಯ ನೆನಪುಗಳನ್ನು ಮತ್ತೆ ಮೆಲುಕುಹಾಕುವ ಕಾರ್ಯಕ್ರಮವಾಗಿದ್ದು ಇಲ್ಲಿ ಲಗೋರಿ, ಹಾವು ಏಣಿ ಆಟ, ಕುಂಟೆಬಿಲ್ಲೆ, ಗೋಲಿ, ಟೆಂಟ್ ಸಿನೆಮಾ, ಸೈಕಲ್ ಟೈಯರ್ ರೇಸ್ ಮುಂತಾದ ಹಳೆಯ ಆಟಗಳು ಇರಲಿವೆ. ನೆನಪಿನಂಗಳದಲ್ಲಿ ಮರೆಯಲಾಗದ ಕ್ಷಣಗಳನ್ನು ಸಂಭ್ರಮಿಸಲು ತಪ್ಪದೇ ಫ್ಯಾಮಿಲಿ ಜೊತೆ ಬನ್ನಿ, ಹಬ್ಬ ಮಾಡಿ!

ನಡೆಯೋದು ಎಲ್ಲಿ: S.H.K ಕನ್ವೆನ್ಷನ್ ಹಾಲ್, #10, ಸಂಗೊಳ್ಳಿ ರಾಯಣ್ಣ ರಸ್ತೆ, ಗೋವಿಂದರಾಜ ನಗರ ವಾರ್ಡ್, ವಿಜಯ ನಗರ, ಬೆಂಗಳೂರು.

ಯಾವಾಗ: ಜುಲೈ 27, ಭಾನುವಾರ

ಸ್ಪರ್ಧೆಗಳು, ಮನರಂಜನೆ ಮತ್ತು ಮರೆಯಲಾಗದ ಕ್ಷಣಗಳು ನಿಮಗಾಗಿ ಕಾಯುತ್ತಿವೆ. ಕುಟುಂಬದ ಜೊತೆ ಬನ್ನಿ, ಸುಂದರ ಸಮಯವನ್ನು ಕಳೆಯಿರಿ ಮತ್ತು ನೆನಪುಗಳನ್ನು ಹೊತ್ತು ತನ್ನಿ. ಅಷ್ಟೇ ಅಲ್ಲದೇ ಪರಸ್ಪರ ಕುಟುಂಬಗಳ ಜೊತೆ ನೆನಪಿನಂಗಳದಲ್ಲಿ ಸಂಭ್ರಮಿಸಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ