ಅದು ನಗರದ ಅತ್ಯಂತ ಹೆಸರಾಂತ ಬಡಾವಣೆ. ಅಲ್ಲಿನ ಮನೆಯೊಂದರಲ್ಲಿ ವಾಸಿಸುವ ಮೋಹನ್‌ ಕುಮಾರ್‌ ಮಧ್ಯಾಹ್ನ ಹೊತ್ತು ತಮ್ಮ ಸ್ನೇಹಿತರನ್ನು ಭೇಟಿಯಾಗಲೆಂದು ಆಟೋದಲ್ಲಿ ಹೊರಟುಹೋದರು. ಒಂದೆರಡು ಗಂಟೆಯಲ್ಲಿ ಅವರು ಮನೆಗೆ ವಾಪಸ್‌ ಆಗುವ ಹೊತ್ತಿಗೆ ಅವರ ಮನೆಯಲ್ಲಿ 1 ಲಕ್ಷ ರೂ. ಬೆಲೆಬಾಳುವ ಆಭರಣ ಮತ್ತು ಕ್ಯಾಶ್‌ ನ್ನು ಕಳ್ಳರು ಲೂಟಿ ಮಾಡಿಕೊಂಡು ಹೋಗಿದ್ದರು.

ಕಳ್ಳತನ ಮಾಡಲು ಕಳ್ಳರಿಗೆ ಹೆಚ್ಚಿನ ಕಷ್ಟವನ್ನೇನೂ ಪಡಬೇಕಾಗಿರಲಿಲ್ಲ. ಕೆಲವೇ ನಿಮಿಷಗಳಲ್ಲಿ ಕಳ್ಳರು ಮನೆಯ ಕೊಠಡಿಗಳನ್ನು ಶೋಧಿಸಿದರು ಹಾಗೂ ಕಪಾಟಿನಲ್ಲಿ ಇಟ್ಟಿದ್ದ ಹಣ ಹಾಗೂ ಆಭರಣಗಳನ್ನು ಎತ್ತಿಕೊಂಡು ಪರಾರಿ ಆಗಿದ್ದರು. ಆದರೆ ಅವರು ಹಿಂದೆ ಬಿಟ್ಟುಹೋಗಿದ್ದ ಒಂದು ಪಾಠವೆಂದರೆ, ನೀವು ಮನೆಯಿಂದ ಕೆಲವೇ ಗಂಟೆ ದೂರ ಹೋಗಿ ಅಥವಾ ಅನೇಕ ದಿನಗಳ ಕಾಲ, ಕಳ್ಳರಿಗೆ ಸುಲಭವಾಗಿ ಸಿಗುವಂತೆ ಯಾವುದೇ ಆಭರಣ ಅಥವಾ ಹಣ ಇಡಬೇಡಿ.

ಅದೇ ರೀತಿಯ ಮತ್ತೊಂದು ಘಟನೆ ಒಂದು ಸ್ವತಂತ್ರ ಮನೆಯಲ್ಲಿ ವಾಸಿಸುತ್ತಿದ್ದ, ಖಾಸಗಿ ಕಂಪನಿಯೊಂದರಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್‌ ಆಗಿದ್ದ ಷಣ್ಮುಖರ ಮನೆಯಲ್ಲಿ ನಡೆಯಿತು. ಇತ್ತೀಚೆಗಷ್ಟೆ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮುಂಬೈಗೆ ಹೋಗಿದ್ದರು. ಅವರು ವಾಪಸ್‌ ಬರುವಷ್ಟರಲ್ಲಿ ಮನೆಯ ಸೆಂಟ್ರಲ್ ಲಾಕ್‌ ನ್ನು ಕತ್ತರಿಸಿರುವುದು ಕಂಡು ಬಂತು. ಒಳಗೆ ಹೋಗಿ ನೋಡಿದಾಗ, ಕಳ್ಳರು ಇನ್ನೂ 4 ಬೀಗಗಳನ್ನು ಒಡೆದು ಕಪಾಟಿನಲ್ಲಿ ಇಟ್ಟಿದ್ದ ಆಭರಣಗಳು, ಬೆಲೆಬಾಳುವ ಕೈ ಗಡಿಯಾರಗಳು ಮತ್ತು 2.5 ಲಕ್ಷ ರೂ.ಗಳನ್ನು ಎಗರಿಸಿದ್ದರು. ಈ ಎಲ್ಲವನ್ನೂ ನೋಡಿ ಷಣ್ಮುಖ ಕೈ ಕೈ ಹಿಸುಕಿಕೊಳ್ಳದೆ ಬೇರೆ ದಾರಿಯೇ ಇರಲಿಲ್ಲ.

ಇವೆರಡೂ ಘಟನೆಗಳಲ್ಲಿ ದೇಶಾದ್ಯಂತದ ಸಮಾನ ವಿಚಾರವೆಂದರೆ, ಮನೆಯ ಬೆಲೆಬಾಳುವ ಸಾಮಾನುಗಳನ್ನು ಎಲ್ಲಿ ಇಟ್ಟಿರುತ್ತಾರೆಂದು ಕಳ್ಳರಿಗೆ ಚೆನ್ನಾಗಿ ಗೊತ್ತಿರುತ್ತದೆ. ಹೀಗಾಗಿ ನೀವು ಬೆವರು ಸುರಿಸಿ ಗಳಿಸಿದ ಅಪಾರ ಸಂಪತ್ತನ್ನು ಕಳ್ಳರಿಗೆ ಎಗರಿಸಿಕೊಂಡು ಹೋಗಲು ಯಾವುದೇ ಕಷ್ಟವಾಗುವುದಿಲ್ಲ.

ಜನರು ದೊಡ್ಡ ದೊಡ್ಡ ಬೀಗಗಳನ್ನೇನೋ ಜಡಿದು ನಿಶ್ಚಿಂತರಾಗಿ ಹೊರಟುಹೋಗುತ್ತಾರೆ. ಆದರೆ ವಾಪಸ್‌ ಬಂದಾಗ, ಆಗಿರುವ ಅನಾಹುತ ನೋಡಿ, ದುರುಳರು ದುಬಾರಿ ಕಪಾಟಿಗೆ ಹಾಕಿರುವ ಸೇಫ್‌ ಎಂದು ಹೇಳಲ್ಪಡುವ ಬೀಗವನ್ನು ಒಡೆದು ಹಾಕಿ ಅದರಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಎತ್ತಿಕೊಂಡು ಹೋಗಿರುವ ಬಗ್ಗೆ ತಲೆ ತಲೆ ಚಚ್ಚಿಕೊಳ್ಳುತ್ತಾರೆ.

ಆಧುನಿಕ ಹಾಗೂ ಸುರಕ್ಷಿತ ಎಂದು ಭಾವಿಸಲ್ಪಡುವ ದುಬಾರಿ ಕಪಾಟುಗಳು ಈಗ ಸುರಕ್ಷಿತವಾಗಿ ಉಳಿದಿಲ್ಲ. ಏಕೆಂದರೆ ಹೆಚ್ಚಿನ ಪ್ರಕರಣಗಳಲ್ಲಿ ಕಳ್ಳರು ನೇರವಾಗಿ ಅವುಗಳ ಮೇಲೆಯೇ ದಾಳಿ ಇಡುತ್ತಾರೆ. ಕಳ್ಳರಿಗೆ ಬೆಲೆಬಾಳುವ ವಸ್ತುಗಳನ್ನು ಎಲ್ಲಿ ಇಟ್ಟಿರಬಹುದು ಎಂಬ ನಿಖರ ಅಂದಾಜು ಇರುತ್ತದೆ.

ಟ್ರೆಝರಿಗಳ ಅತ್ಯಂತ ಸುರಕ್ಷಿತಾಗಿರುವ ಬೀಗಗಳನ್ನೇ ಒಡೆದು ಹಾಕುವಾಗ, ಮನೆಯ ಇತರೆ ಜಾಗಗಳು ಅಷ್ಟು ಸುರಕ್ಷಿತವಾಗಿರುವುದಿಲ್ಲ. ಅನೇಕ ಜನರು ಬಾಕ್ಸ್ ಇರುವ ಮಂಚ ಅಥವಾ ದಿವಾನ್‌ ಗಳಲ್ಲೂ ಹಣ ಹಾಗೂ ಆಭರಣಗಳನ್ನು ಬಚ್ಚಿಡುತ್ತಾರೆ. ಅವು ಕೂಡ ಒಮ್ಮೊಮ್ಮೆ ಕಳ್ಳರ ದಾಳಿಗೆ ಸಿಲುಕುತ್ತವೆ. ಟ್ರೆಝರಿಗಳಲ್ಲಿ ನಗದು ಒಡವೆ ಸಿಗದೇ ಇದ್ದಾಗ, ಕಳ್ಳರಿಗೆ ದಿವಾನ್‌ ಅಥವಾ ಬಾಕ್ಸ್ ಇರುವ ಮಂಚದ ಹಾಸಿಗೆಗಳ ನಡುವೆ ಹಣ, ಆಭರಣ ಇಟ್ಟಿರುತ್ತಾರೆ ಎಂಬ ಅಂದಾಜು ಇದ್ದೇ ಇರುತ್ತದೆ. ಹೀಗಾಗಿ ಕಳ್ಳತನ ಮಾಡಲು ಅವರಿಗೆ ವಿಶೇಷ ತೊಂದರೆಯೇನು ಆಗುವುದಿಲ್ಲ.

ಹಾಗಾದರೆ ಎಲ್ಲಿಡಬೇಕು?

ಕಳ್ಳತನದಿಂದ ಬಚಾವಾಗಲು ಜನರು ಚಿನ್ನಾಭರಣಗಳು ಹಾಗೂ ಇತರೆ ಅಮೂಲ್ಯ ವಸ್ತುಗಳನ್ನು ಬ್ಯಾಂಕ್‌ ಲಾಕರ್‌ ನಲ್ಲಿ ಇಡುತ್ತಾರೆ. ಆದರೆ ಇದು ಕೂಡ ಕಡಿಮೆ ಕಷ್ಟದ ಕೆಲಸವೇನಲ್ಲ. ಬ್ಯಾಂಕ್‌ ಲಾಕರ್‌ ಗಳು ಅಗ್ಗವೇನೂ ಆಗಿರುವುದಿಲ್ಲ. 3-4 ವರ್ಷಗಳಲ್ಲಿ ಎಂತಹ ಕೆಲವು ಸಂದರ್ಭಗಳು ಒದಗಿ ಬರುತ್ತವೆ ಎಂದರೆ, ಬ್ಯಾಂಕ್‌ ಲಾಕರ್‌ ನಿಂದ ಚಿನ್ನಾಭರಣಗಳನ್ನು ಬಿಡಿಸಿ ತರಲೇಬೇಕಾಗುತ್ತದೆ.

ಯಾವುದೇ ಫಂಕ್ಷನ್‌ ಇದ್ದಾಗ ಬ್ಯಾಂಕ್‌ ನಿಂದ ಆಭರಣಗಳನ್ನು ತಂದು ಮತ್ತೆ ಪುನಃ ಬ್ಯಾಂಕ್‌ ಲಾಕರ್‌ ನಲ್ಲಿ ಇಟ್ಟು ಬರುವುದು ಕಷ್ಟದ ಕೆಲಸವೇ ಸರಿ. ಹಾಗಾದರೆ ಕಳ್ಳರಿಂದ ಅಮೂಲ್ಯ ವಸ್ತುಗಳನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು? ಎಂಬ ಪ್ರಶ್ನೆಗೆ ಉತ್ತರ ಕೊಡುವುದು ಕೂಡ ಸುಲಭದ ಕೆಲಸವಲ್ಲ. ಆದರೆ ಇದನ್ನು ಸುಲಭಗೊಳಿಸಬಹುದು. ಕಪಾಟುಗಳು ಹಾಗೂ ಟ್ರೆಝರಿಗಳ ಬೀಗ ಮುರಿದಾಗ ಏನೂ ಸಿಗದೇ ಅವರಿಗೆ ಕಸಿವಿಸಿಯ ಹೊರತು ಬೇರೇನೂ ಸಿಗುವಂತಾಗಬಾರದು. ಮನೆಯಲ್ಲಿಯೇ ಈ ಅಮೂಲ್ಯ ವಸ್ತುಗಳನ್ನು ಎಂತಹ ಜಾಗದಲ್ಲಿಡಬೇಕೆಂದರೆ ಅವು ಕಳ್ಳರಿಗೆ ದಕ್ಕಲೇಬಾರದು.

ಟ್ರೆಝರಿಯಲ್ಲಿ ಏನೂ ಸಿಗದೇ ಇದ್ದಾಗ ಕಪಾಟುಗಳು, ದಿವಾನ್‌, ಫರ್ನೀಚರ್‌ ಗಳನ್ನು ತಡಕಾಡುತ್ತಾರೆ. ಅಲ್ಲೂ ಏನೂ ಕೈಗೆ ಸಿಗದಿದ್ದಾಗ ನಿಮ್ಮ ಚಾಣಾಕ್ಷತನವನ್ನು ಶಪಿಸಿ ವಾಪಸ್‌ ಹೋಗುತ್ತಾರೆ.

ಹಳೆಯ ವಿಧಾನ ಅನುಸರಿಸಿ

ಕಳ್ಳತನದಿಂದ ರಕ್ಷಿಸಿಕೊಳ್ಳಲು ಹಳೆಯ ವಿಧಾನಗಳನ್ನು ಅನುಸರಿಸಿ. ಈ ವಿಧಾನಗಳು ಸ್ವಲ್ಪ ಕಷ್ಟಕರವಲ್ಲ. ಅ ಕಪಾಟುಗಳು, ಟ್ರೆಝರಿಗಿಂತ ಹೆಚ್ಚು ಸುರಕ್ಷಿತಾಗಿವೆ.

ಎಲ್ಲಕ್ಕೂ ಪ್ರಚಲಿತ ಹಳೆಯ ವಿಧಾನವೆಂದರೆ, ಆಭರಣಗಳನ್ನು ನೆಲದಲ್ಲಿ ಹೂಳಿಡುವುದಾಗಿದೆ. ಇಂದಿನ ಬಹುತೇಕ ಮನೆಗಳು ಸಿಮೆಂಟ್‌ ನಿಂದ ನಿರ್ಮಾಣವಾಗಿರುತ್ತವೆ. ಹೀಗಾಗಿ ಅಲ್ಲಿ ಗುಂಡಿ ತೋಡುವುದು ಸಾಧ್ಯವಾಗುವುದಿಲ್ಲ. ಹಳೆಯ ತಲೆಮಾರಿನ ಜಾಣತನವನ್ನು ಹೊಸ ರೀತಿಯಲ್ಲಿ ಅನುಸರಿಸಿದರೆ ಏನಾದರೂ ವಿಶೇಷ ಸಾಧನೆ ಮಾಡಿದಂತೆ. ಬೆಡ್‌ ರೂಮಿನಿನ ಮಂಚದ ಕೆಳಗೆ ಎರಡು ಟೈಲ್ಸ್ ತೆಗೆದು ಒಂದು ಸಣ್ಣ ಗುಂಡಿ ತೋಡಬಹುದು. ಗೋಡೆಯಲ್ಲೂ ಕೂಡ ಅದೇ ರೀತಿಯ ಗುಪ್ತ ಸ್ಥಳವೊಂದನ್ನು ರೂಪಿಸಬಹುದು.

ಭೋಪಾಲ್ ‌ನಲ್ಲಿದ್ದ ಆಂಧ್ರಪ್ರದೇಶದ ಲಕ್ಷ್ಮಿ ಎಂಬ ಮಹಿಳೆಯೊಬ್ಬಳು ಪ್ರತಿ ವರ್ಷ ತಮ್ಮೂರಿಗೆ ಹೊರಟುಹೋಗುತ್ತಾರೆ. ಅವರ ಬಳಿ 200 ಗ್ರಾಂಗಿಂತಲೂ ಹೆಚ್ಚು ಚಿನ್ನವಿದೆ. ಅವರು ಊರಿಗೆ ಹೋದಾಗ 2 ಸಲ ಕಳ್ಳತನದ ಘಟನೆ ಸಂಭವಿಸಿದರೂ ಅವರ ಮನೆಯಿಂದ ಚಿನ್ನ ಮಾತ್ರ ಕಳುವಾಗಿರಲಿಲ್ಲ. ಅವರ ಮನೆಯ ಒಂದೊಂದು ಡಬ್ಬವನ್ನೂ ಕೂಡ ಜಾಲಾಡಿ ನೋಡಿದ್ದರು. ಆದರೆ ಲಕ್ಷ್ಮೀಯವರ ಜಾಣತನ ನೋಡಿ, ಅವರು ತಮ್ಮ ಆಭರಣಗಳನ್ನೆಲ್ಲ ಎಣ್ಣೆ ತುಂಬಿದ ಕ್ಯಾನ್‌ ವೊಂದರಲ್ಲಿ ಹಾಕಿಟ್ಟು ಹೋಗಿದ್ದರು. ಕಳ್ಳರಿಗೆ ಎಣ್ಣೆಯ ಕ್ಯಾನ್‌ ಮೇಲೆ ಗಮನವೇ ಹೋಗಿರಲಿಲ್ಲ.

ಲಕ್ಷ್ಮೀಯವರ ಹಾಗೆ ನೀವು ತಿಳಿವಳಿಕೆ ಪ್ರದರ್ಶಿಸಿದರೆ, ಕಳ್ಳರಿಂದ ನಿಮ್ಮ ಮನೆಯನ್ನು ರಕ್ಷಿಸಿಕೊಳ್ಳಬಹುದು.

ಅಮೂಲ್ಯ ವಸ್ತುಗಳನ್ನು ಹೀಗೆ ಬಚ್ಚಿಡಿ

ಮನೆಯಲ್ಲಿ ಎಂತಹ ಕೆಲವು ಜಾಗಗಳಿರುತ್ತವೆ ಎಂದರೆ, ಅಲ್ಲಿ ನೀವು ಅಮೂಲ್ಯ ಸಾಮಾನುಗಳನ್ನಿಟ್ಟು ಎಲ್ಲಿಗಾದರೂ ನಿಶ್ಚಿಂತರಾಗಿ ಹೋಗಬಹುದು.

ಎಣ್ಣೆಯ ಕ್ಯಾನಿನ ಹಾಗೆ ಮತ್ತೊಂದು ಸುರಕ್ಷಿತ ಜಾಗವೆಂದರೆ, ನೀರಿನ ಟ್ಯಾಂಕ್‌, ಅದರ ಮೇಲೆ ಕಳ್ಳರ ಗಮನ ಹೋಗುವುದಿಲ್ಲ. ನೀರಿನ ಟ್ಯಾಂಕ್‌ ಎಂತಹ ಜಾಗದಲ್ಲಿರುತ್ತದೆ ಎಂದರೆ ಅದನ್ನು ತಲುಪುವುದು ಕಳ್ಳರಿಗೆ ಕಷ್ಟದ ಕೆಲಸವೇ ಸರಿ. ಅದರಲ್ಲಿ ಆಭರಣಗಳನ್ನು ಬಚ್ಚಿಡಬಹುದಾಗಿದೆ.

ವಾಸ್ತ ಸಂಗತಿ ಏನೆಂದರೆ, ದೊಡ್ಡ ಮೊತ್ತದ ಹಣವನ್ನು ಮನೆಯಲ್ಲಿ ಇಡುವುದು ಸರಿಯಲ್ಲ. ಹಾಗೊಮ್ಮೆ ಮನೆಯಲ್ಲಿ ದೊಡ್ಡ ಮೊತ್ತದ ಹಣ ತಂದಿಡಲೇಬೇಕಾದ ಪ್ರಸಂಗ ಬಂದಲ್ಲಿ ಮನೆಯಿಂದ ಹೊರಗೆ ಹೋಗಬೇಕಾದಾಗ ಹಣವನ್ನು ಹೇಗೆ ರಕ್ಷಿಸುವುದು? ರದ್ದಿ ಪೇಪರಿನ ನಡುನಡುವೆ ಬೇರೆ ಕಟ್ಟುಗಳಲ್ಲಿ ಸ್ವಲ್ಪ ಸ್ವಲ್ಪ ಹಣವನ್ನು ಇಡಬಹುದು. ಅದು ಕಳ್ಳರ ಗಮನಕ್ಕೆ ಬರುವುದೇ ಇಲ್ಲ.

ಸ್ಟೋರ್‌ ರೂಮ್ ಎಂತಹ ಒಂದು ಜಾಗವೆಂದರೆ, ಅಲ್ಲಿ ಮನೆಯ ಎಲ್ಲ ವ್ಯರ್ಥ ಸಾಮಾನುಗಳು ಸೇರಿಕೊಂಡಿರುತ್ತವೆ. ಹೀಗೆ ಯಾವುದರಲ್ಲಾದರೂ ಆಭರಣ ಮತ್ತು ಹಣವನ್ನು ಬಚ್ಚಿಡಬಹುದಾಗಿದೆ. ಕಳ್ಳರಿಗೆ ಕಳ್ಳತನ ಮಾಡುವಾಗ ಹೆಚ್ಚಿನ ಸಮಯವೇನೂ ಇರುವುದಿಲ್ಲ. ಅವರಿಗೆ ಸ್ಟೋರ್‌ ರೂಮಿನ ಪ್ರತಿಯೊಂದು ವಸ್ತುವನ್ನು ನೋಡುವಷ್ಟು ತಾಳ್ಮೆ ಇರುವುದಿಲ್ಲ.

ಬೆಲೆಬಾಳುವ ವಸ್ತುಗಳನ್ನು ಮನೆಯ ಒಳಗಡೆಯೇ ಇಟ್ಟಿರಲಾಗಿರುತ್ತದೆ ಎಂಬುದು ಕಳ್ಳರ ಅನಿಸಿಕೆ. ಹೀಗಾಗಿ ಕಳ್ಳರು ಮನೆಯ ಪ್ರವೇಶ ದ್ವಾರ ಅಥವಾ ಮೊದಲ ಕೋಣೆಯ ಮೇಲೆ ಟಾರ್ಗೆಟ್‌ ಮಾಡುವುದಿಲ್ಲ. ಅಲ್ಲಿಯೇ ನೀವು ಆಭರಣ, ಹಣ ಬಚ್ಚಿಡಬಹುದಾಗಿದೆ. ಅದು ಶೂ ರಾಕ್‌ ಕೂಡ ಆಗಿರಬಹುದು.

ಹೂವಿನ ಕುಂಡದಲ್ಲಿ ಕೆಳಭಾಗದಲ್ಲಿ ಆಭರಣಗಳನ್ನಿಟ್ಟು ಮೇಲೆ ಹಸಿ ಮಣ್ಣು ಹಾಕಿಡಿ.

ಮಕ್ಕಳ ಸ್ಕೂಲ್ ‌ಬ್ಯಾಗ್‌ ನಲ್ಲೂ ಅಮೂಲ್ಯ ವಸ್ತುಗಳನ್ನು ಬಚ್ಚಿಡಬಹುದಾಗಿದೆ.

ಉಂಗುರಗಳು ಹಾಗೂ ಚಿಕ್ಕ ವಸ್ತುಗಳನ್ನು ಔಷಧಿಗಳ ಬಾಟಲ್ ನಲ್ಲಿ ಹಾಕಿ ಬಚ್ಚಿಡಬಹುದು.

ರೇವತಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ