ಫುಟ್​ಬಾಲ್ ಲೋಕದ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೋ (Cristiano Ronaldo) ಹಾಗೂ ಅವರ ಬಹುಕಾಲದ ಗೆಳತಿ, ಮಾಡೆಲ್ ಜಾರ್ಜಿನಾ ರೊಡ್ರಿಗಸ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಹಲವು ವರ್ಷಗಳ ಕಾಲ ಇವರು ಡೇಟಿಂಗ್ ಮಾಡುತ್ತಿದ್ದರು. ಈ ದಂಪತಿಗೆ ಮಕ್ಕಳು ಕೂಡ ಇದ್ದಾರೆ. ಈಗ ರೊನಾಲ್ಡೋ 26 ಕೋಟಿ ರೂಪಾಯಿ ಮೌಲ್ಯದ ಡೈಮಂಡ್ ರಿಂಗ್​ ಹಾಕಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

2016ರಲ್ಲಿ ಮ್ಯಾಡ್ರಿಡ್​ನ ಗೂಚಿ ಬ್ರ್ಯಾಂಡ್ ಸ್ಟೋರ್​ನಲ್ಲಿ ರೊನಾಲ್ಡೋ ಹಾಗೂ ಜಾರ್ಜಿನಾ ಮೊದಲ ಬಾರಿಗೆ ಇಬ್ಬರೂ ಬೇಟಿಯಾಗಿದ್ದರು. ಆ ಬಳಿಕ ಇಬ್ಬರ ಮಧ್ಯೆ ಗೆಳೆತನ ಬೆಳೆಯಿತು. 2017ರ ವೇಳೆಗೆ ಇವರು ತಮ್ಮ ಸಂಬಂಧವನ್ನು ಅಧಿಕೃತ ಮಾಡಿದರು.ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇದರ ಜೊತೆಗೆ ರೊನಾಲ್ಡೋ ಅವರ ಇತರ ಮೂವರು ಮಕ್ಕಳನ್ನು ಜಾರ್ಜಿನಾ ಅವರೇ ನೋಡಿಕೊಳ್ಳುತ್ತಿದ್ದಾರೆ. ರೊನಾಲ್ಡೋ 2010ರಲ್ಲಿ ಜೂನಿಯರ್​ ಹೆಸರಿನ ಮಗುವಿಗೆ ತಂದೆಯಾದರು. ಮಗುವಿನ ತಾಯಿ ಯಾರು ಎಂಬುದು ಗುಟ್ಟಾಗಿಯೇ ಇಡಲಾಗಿದೆ. ಏಳು ವರ್ಷಗಳ ಬಳಿಕ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ರೊನಾಲ್ಡೋ ಪಡೆದರು.

ನಂತರ ಜಾರ್ಜಿನಾ ಜೊತೆ ಸೇರಿ ನಾಲ್ಕನೇ ಮಗು ಮಾಡಿಕೊಂಡರು. 2022ರಲ್ಲಿ ರೊನಾಲ್ಡೋಗೆ ಅವಳಿ ಮಕ್ಕಳು ಹುಟ್ಟಬೇಕಿತ್ತು. ಒಂದು ಮಗು ಹುಟ್ಟುವಾಗಲೇ ನಿಧನ ಹೊಂದಿತು.  ರೊನಾಲ್ಡೋ ಈ ಮೊದಲು ವಿವಾಹ ಆಗಿಲ್ಲ. ಅವರು ಬಾಡಿಗೆ ತಾಯ್ತನದ ಮೂಲಕ ಮೂರು ಮಕ್ಕಳನ್ನು ಪಡೆದಿದ್ದರು.

ಜಾರ್ಜಿನಾ ಅವರು ಹುಟ್ಟಿದ್ದು ಅರ್ಜೆಂಟೀನಾದಲ್ಲಿ. ಬೆಳೆದಿದ್ದು ಸ್ಪೇನ್​ನ ಜಾಕಾದಲ್ಲಿ. ಆರಂಭದಲ್ಲಿ ಡ್ಯಾನ್ಸರ್ ಆಗಿದ್ದರು. ಬಳಿಕ ಮ್ಯಾಡ್ರಿಡ್​ಗೆ ತೆರಳಿದರು. ಅಲ್ಲಿ ವಿವಿಧ ಕೆಲಸ ಮಾಡಿ, ಮಾಡೆಲಿಂಗ್ ಆರಂಭಿಸಿದರು. ಹಲವು ಉದ್ಯಮ ಹೊಂದಿದ್ದಾರೆ ಜಾರ್ಜಿನಾ. ರೊನಾಲ್ಡೋ ಅವರು ಫುಟ್​ಬಾಲ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.

ರೊನಾಲ್ಡೋ ಹಾಗೂ ಜಾರ್ಜಿನಾ ವಿವಾಹ ಆಗಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ, ಈ ಜೋಡಿ 9 ವರ್ಷಗಳ ಬಳಿಕ ನಿಶ್ಚಿತಾರ್ಥ ಮಾಡಿಕೊಂಡಿದೆ. ರೊನಾಲ್ಡೋ ನೀಡಿದ ಎಂಗೇಜ್​​ಮೆಂಟ್ ರಿಂಗ್ ಬಹಳ ದುಬಾರಿ. ಈ ಉಂಗುರ 50 ಕ್ಯಾರಟ್​ ಹೊಂದಿದ್ದು, ಇದರ ಬೆಲೆ 3 ಮಿಲಿಯನ್ ಡಾಲರ್. ಅಂದರೆ ಈ ಉಂಗುರ ಸುಮಾರು 26 ಕೋಟಿ ರೂಪಾಯಿ ಬೆಲೆ ಬಾಳುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ