ಅದು ನಗರದ ಅತ್ಯಂತ ಹೆಸರಾಂತ ಬಡಾವಣೆ. ಅಲ್ಲಿನ ಮನೆಯೊಂದರಲ್ಲಿ ವಾಸಿಸುವ ಮೋಹನ್ ಕುಮಾರ್ ಮಧ್ಯಾಹ್ನ ಹೊತ್ತು ತಮ್ಮ ಸ್ನೇಹಿತರನ್ನು ಭೇಟಿಯಾಗಲೆಂದು ಆಟೋದಲ್ಲಿ ಹೊರಟುಹೋದರು. ಒಂದೆರಡು ಗಂಟೆಯಲ್ಲಿ ಅವರು ಮನೆಗೆ ವಾಪಸ್ ಆಗುವ ಹೊತ್ತಿಗೆ ಅವರ ಮನೆಯಲ್ಲಿ 1 ಲಕ್ಷ ರೂ. ಬೆಲೆಬಾಳುವ ಆಭರಣ ಮತ್ತು ಕ್ಯಾಶ್ ನ್ನು ಕಳ್ಳರು ಲೂಟಿ ಮಾಡಿಕೊಂಡು ಹೋಗಿದ್ದರು.
ಕಳ್ಳತನ ಮಾಡಲು ಕಳ್ಳರಿಗೆ ಹೆಚ್ಚಿನ ಕಷ್ಟವನ್ನೇನೂ ಪಡಬೇಕಾಗಿರಲಿಲ್ಲ. ಕೆಲವೇ ನಿಮಿಷಗಳಲ್ಲಿ ಕಳ್ಳರು ಮನೆಯ ಕೊಠಡಿಗಳನ್ನು ಶೋಧಿಸಿದರು ಹಾಗೂ ಕಪಾಟಿನಲ್ಲಿ ಇಟ್ಟಿದ್ದ ಹಣ ಹಾಗೂ ಆಭರಣಗಳನ್ನು ಎತ್ತಿಕೊಂಡು ಪರಾರಿ ಆಗಿದ್ದರು. ಆದರೆ ಅವರು ಹಿಂದೆ ಬಿಟ್ಟುಹೋಗಿದ್ದ ಒಂದು ಪಾಠವೆಂದರೆ, ನೀವು ಮನೆಯಿಂದ ಕೆಲವೇ ಗಂಟೆ ದೂರ ಹೋಗಿ ಅಥವಾ ಅನೇಕ ದಿನಗಳ ಕಾಲ, ಕಳ್ಳರಿಗೆ ಸುಲಭವಾಗಿ ಸಿಗುವಂತೆ ಯಾವುದೇ ಆಭರಣ ಅಥವಾ ಹಣ ಇಡಬೇಡಿ.
ಅದೇ ರೀತಿಯ ಮತ್ತೊಂದು ಘಟನೆ ಒಂದು ಸ್ವತಂತ್ರ ಮನೆಯಲ್ಲಿ ವಾಸಿಸುತ್ತಿದ್ದ, ಖಾಸಗಿ ಕಂಪನಿಯೊಂದರಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿದ್ದ ಷಣ್ಮುಖರ ಮನೆಯಲ್ಲಿ ನಡೆಯಿತು. ಇತ್ತೀಚೆಗಷ್ಟೆ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮುಂಬೈಗೆ ಹೋಗಿದ್ದರು. ಅವರು ವಾಪಸ್ ಬರುವಷ್ಟರಲ್ಲಿ ಮನೆಯ ಸೆಂಟ್ರಲ್ ಲಾಕ್ ನ್ನು ಕತ್ತರಿಸಿರುವುದು ಕಂಡು ಬಂತು. ಒಳಗೆ ಹೋಗಿ ನೋಡಿದಾಗ, ಕಳ್ಳರು ಇನ್ನೂ 4 ಬೀಗಗಳನ್ನು ಒಡೆದು ಕಪಾಟಿನಲ್ಲಿ ಇಟ್ಟಿದ್ದ ಆಭರಣಗಳು, ಬೆಲೆಬಾಳುವ ಕೈ ಗಡಿಯಾರಗಳು ಮತ್ತು 2.5 ಲಕ್ಷ ರೂ.ಗಳನ್ನು ಎಗರಿಸಿದ್ದರು. ಈ ಎಲ್ಲವನ್ನೂ ನೋಡಿ ಷಣ್ಮುಖ ಕೈ ಕೈ ಹಿಸುಕಿಕೊಳ್ಳದೆ ಬೇರೆ ದಾರಿಯೇ ಇರಲಿಲ್ಲ.
ಇವೆರಡೂ ಘಟನೆಗಳಲ್ಲಿ ದೇಶಾದ್ಯಂತದ ಸಮಾನ ವಿಚಾರವೆಂದರೆ, ಮನೆಯ ಬೆಲೆಬಾಳುವ ಸಾಮಾನುಗಳನ್ನು ಎಲ್ಲಿ ಇಟ್ಟಿರುತ್ತಾರೆಂದು ಕಳ್ಳರಿಗೆ ಚೆನ್ನಾಗಿ ಗೊತ್ತಿರುತ್ತದೆ. ಹೀಗಾಗಿ ನೀವು ಬೆವರು ಸುರಿಸಿ ಗಳಿಸಿದ ಅಪಾರ ಸಂಪತ್ತನ್ನು ಕಳ್ಳರಿಗೆ ಎಗರಿಸಿಕೊಂಡು ಹೋಗಲು ಯಾವುದೇ ಕಷ್ಟವಾಗುವುದಿಲ್ಲ.
ಜನರು ದೊಡ್ಡ ದೊಡ್ಡ ಬೀಗಗಳನ್ನೇನೋ ಜಡಿದು ನಿಶ್ಚಿಂತರಾಗಿ ಹೊರಟುಹೋಗುತ್ತಾರೆ. ಆದರೆ ವಾಪಸ್ ಬಂದಾಗ, ಆಗಿರುವ ಅನಾಹುತ ನೋಡಿ, ದುರುಳರು ದುಬಾರಿ ಕಪಾಟಿಗೆ ಹಾಕಿರುವ ಸೇಫ್ ಎಂದು ಹೇಳಲ್ಪಡುವ ಬೀಗವನ್ನು ಒಡೆದು ಹಾಕಿ ಅದರಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಎತ್ತಿಕೊಂಡು ಹೋಗಿರುವ ಬಗ್ಗೆ ತಲೆ ತಲೆ ಚಚ್ಚಿಕೊಳ್ಳುತ್ತಾರೆ.
ಆಧುನಿಕ ಹಾಗೂ ಸುರಕ್ಷಿತ ಎಂದು ಭಾವಿಸಲ್ಪಡುವ ದುಬಾರಿ ಕಪಾಟುಗಳು ಈಗ ಸುರಕ್ಷಿತವಾಗಿ ಉಳಿದಿಲ್ಲ. ಏಕೆಂದರೆ ಹೆಚ್ಚಿನ ಪ್ರಕರಣಗಳಲ್ಲಿ ಕಳ್ಳರು ನೇರವಾಗಿ ಅವುಗಳ ಮೇಲೆಯೇ ದಾಳಿ ಇಡುತ್ತಾರೆ. ಕಳ್ಳರಿಗೆ ಬೆಲೆಬಾಳುವ ವಸ್ತುಗಳನ್ನು ಎಲ್ಲಿ ಇಟ್ಟಿರಬಹುದು ಎಂಬ ನಿಖರ ಅಂದಾಜು ಇರುತ್ತದೆ.
ಟ್ರೆಝರಿಗಳ ಅತ್ಯಂತ ಸುರಕ್ಷಿತಾಗಿರುವ ಬೀಗಗಳನ್ನೇ ಒಡೆದು ಹಾಕುವಾಗ, ಮನೆಯ ಇತರೆ ಜಾಗಗಳು ಅಷ್ಟು ಸುರಕ್ಷಿತವಾಗಿರುವುದಿಲ್ಲ. ಅನೇಕ ಜನರು ಬಾಕ್ಸ್ ಇರುವ ಮಂಚ ಅಥವಾ ದಿವಾನ್ ಗಳಲ್ಲೂ ಹಣ ಹಾಗೂ ಆಭರಣಗಳನ್ನು ಬಚ್ಚಿಡುತ್ತಾರೆ. ಅವು ಕೂಡ ಒಮ್ಮೊಮ್ಮೆ ಕಳ್ಳರ ದಾಳಿಗೆ ಸಿಲುಕುತ್ತವೆ. ಟ್ರೆಝರಿಗಳಲ್ಲಿ ನಗದು ಒಡವೆ ಸಿಗದೇ ಇದ್ದಾಗ, ಕಳ್ಳರಿಗೆ ದಿವಾನ್ ಅಥವಾ ಬಾಕ್ಸ್ ಇರುವ ಮಂಚದ ಹಾಸಿಗೆಗಳ ನಡುವೆ ಹಣ, ಆಭರಣ ಇಟ್ಟಿರುತ್ತಾರೆ ಎಂಬ ಅಂದಾಜು ಇದ್ದೇ ಇರುತ್ತದೆ. ಹೀಗಾಗಿ ಕಳ್ಳತನ ಮಾಡಲು ಅವರಿಗೆ ವಿಶೇಷ ತೊಂದರೆಯೇನು ಆಗುವುದಿಲ್ಲ.