CATEGORY : SOCIETY

 

URL : HENNU

 

 

ಶಾಸ್ತ್ರ ಸಂಪ್ರದಾಯಗಳ ಹೆಸರಲ್ಲಿ ಧರ್ಮಾಂಧ ಕಂದಾಚಾರಿಗಳು, ಯಾವ ರೀತಿ ಹೆಣ್ಣನ್ನು ಗಂಡಿನ ಅಡಿಯಾಳಾಗಿಸಿದ್ದಾರೆ ಎಂದು ನಿಮಗೆ ಗೊತ್ತೇ......?

ನಮ್ಮ ದೇಶದಲ್ಲಿ ವರ್ಷವಿಡೀ ಯಾವುದಾದರೊಂದು ಹಬ್ಬ ನಡೆಯುತ್ತಲೇ ಇರುತ್ತದೆ. 4-5 ಅತಿ ಪ್ರಚಲಿತ ಹಬ್ಬಗಳನ್ನು ಬಿಟ್ಟರೆ, ವಿಭಿನ್ನ ರಾಜ್ಯಗಳಲ್ಲಿ ಕಂಡುಬರುವ ಸಣ್ಣಪುಟ್ಟ ಹಬ್ಬಗಳಿಗೇನೂ ಕೊರತೆ ಇಲ್ಲ. ಹಬ್ಬಗಳು ಮಾತ್ರವಲ್ಲ, ಅನೇಕ ವ್ರತ ಉಪವಾಸಗಳಿಗೂ ಕೊರತೆ ಇಲ್ಲ. ಇದನ್ನು ಎಲ್ಲಾ ವಿವಾಹಿತ/ಅವಿವಾಹಿತ ಹೆಣ್ಣುಮಕ್ಕಳೂ ಕಟ್ಟುನಿಟ್ಟಾಗಿ ಪಾಲಿಸಲೇ ಬೇಕಾಗುತ್ತದೆ. ಇದನ್ನು ಎಲ್ಲವೂ ಸುಶಿಕ್ಷಿತ, ಅಲ್ಪಶಿಕ್ಷಿತ, ಅಶಿಕ್ಷಿತ ಹೆಂಗಸರೂ ನಿಷ್ಠೆಯಿಂದ ಪಾಲಿಸುತ್ತಾರೆ. ಒಂದು ವಿಧದಲ್ಲಿ ಈ ಹಬ್ಬ, ವ್ರತ, ಪೂಜಾ ಸಮಾರಂಭಗಳು ಹತ್ತಾರು ಮಂದಿ ಒಂದೆಡೆ ಸೇರಿ ಕಲೆತು ಆಚರಿಸುವ ಮಾಧ್ಯಮವಾಗಿದೆ. ಆದರೆ ಈ ವ್ರತಾಚರಣೆಗಳ ಹಿಂದೆ ಅನೇಕ ಸಮಸ್ಯೆಗಳೂ ಇವೆ. ಈ ವಿಷಯದ ಕುರಿತಾಗಿ ಹಲವು ಹೆಂಗಸರ ಜೊತೆ ನಡೆಸಿದ ಮಾತುಕಥೆಯ ಸಂಕ್ಷಿಪ್ತ ಸಾರಾಂಶ :

50-50 ಓಕೆ

ಈ ಕುರಿತಾಗಿ ಬೆಂಗಳೂರಿನ 45 ವರ್ಷದ ಅರ್ಚನಾ ಹೇಳುತ್ತಾರೆ, ``ಹಬ್ಬ ಅಂದ ಮೇಲೆ ಇದೆಲ್ಲ ಇದ್ದದ್ದೇ.... ನಮ್ಮಲ್ಲಿ ಹಲವಾರು ಬಗೆಯ ಸಣ್ಣಪುಟ್ಟ ಹಬ್ಬ, ಹರಿದಿನ, ವ್ರತ, ಉಪವಾಸ, ಪೂಜಾ ಸಮಾರಂಭಗಳು ಇದ್ದೇ ಇರುತ್ತವೆ. ಇದಕ್ಕೆ ಬರುವ ಅತಿಥಿಗಳನ್ನು ಆದರಿಸಿ, ಅವರ ಉಪಚಾರದ ಕಡೆ ಹೆಚ್ಚಿನ ಗಮನ ಕೊಡುವುದೇ ಹೆಂಗಸರ ಕರ್ತವ್ಯ ಆಗುತ್ತದೆ. ಹ್ಞಾಂ.... ಸಿಂಗಾರ, ಮೇಕಪ್‌, ಹೊಸ ಸೀರೆ ಇವೆಲ್ಲ ಜೊತೆಗೂಡುತ್ತವೆ. ಬಂದವರಿಗೆ ಬೇಕಾದಂತೆ ಔತಣ ಮಾಡಿ ಸತ್ಕರಿಸದಿದ್ದರೆ ಹೇಗೆ? ಗೃಹಿಣಿಯರು ಈ ಸಂದರ್ಭದಲ್ಲಿ ಅತಿಥಿಗಳ ಜೊತೆ ಬೆರೆತು ತಮ್ಮ ವೈಭವ ಪ್ರದರ್ಶಿಸುವುದೂ ಮಾಮೂಲೇ..... ಇಲ್ಲದಿದ್ದರೆ ನೈಟಿಯಲ್ಲೇ ಇಡೀ ದಿನ ಮನೆಗೆಲಸ ಮಾಡುತ್ತಾ, ಮನೆಯವರನ್ನು ಸುಧಾರಿಸುವುದೇ ಆಗಿಹೋಗುತ್ತದೆ. ಇವೆಲ್ಲ ಹಬ್ಬಗಳೂ ಮನೆಮಂದಿಯ ಸುಖಶಾಂತಿ ಹೆಚ್ಚಲು, ಸದಾ ಮುತ್ತೈದೆಯಾಗಿ ಉಳಿದು ಗಂಡನ ಆಯುಷ್ಯ ಹೆಚ್ಚಿಸಲು ಕೋರುವುದಾಗಿದೆ.

``18ರ ಹರೆಯದಲ್ಲೇ ನನ್ನ ಮದುವೆ ಆಗಿತ್ತು. ಇಷ್ಟು ವರ್ಷಗಳಿಂದ ಇನ್ನೆಲ್ಲ ಕಟ್ಟುನಿಟ್ಟಾಗಿ ಫಾಲೋ ಮಾಡ್ತಿದ್ದೀನಿ. ಆದರೆ ನನ್ನ ಪತಿ ತುಸು ಅಧಿಕ ರಸಿಕ ಮಹಾಶಯ, ಮದುವೆಗೆ ಮೊದಲೇ ಹಲವು ಗರ್ಲ್ ಫ್ರೆಂಡ್ಸ್ ಇದ್ದರಂತೆ! ಹೀಗಾಗಿ ಅವರ ಹಿರಿಯರು 23ರಲ್ಲೇ ಇವರಿಗೆ ಮದುವೆ ಮಾಡಿಸಿ ಮೂಗುದಾರ ಹಾಕಿಸಿದ್ದಾರೆ. ಆದರೆ ಮದುವೆ ನಂತರ ಇವರು ದೊಡ್ಡದಾಗಿ ಏನೂ ಸುಧಾರಿಸಿಲ್ಲ. ನಮ್ಮದು ಮೊದಲಿನಿಂದಲೂ ಬಿಸ್‌ ನೆಸ್‌ ನಡೆಸುವ ಸಾಂಪ್ರದಾಯಿಕ ಕುಟುಂಬ. ಹಿರಿಯರು ಮಾಡಿಟ್ಟ ಆಸ್ತಿಯಲ್ಲಿ ಬಿಸ್‌ ನೆಸ್‌ ಮುಂದುವರಿಸಿದ್ದಾರೆ, ನಮ್ಮ ಮಾವ ಹೋದ ನಂತರ, ಇವರದೇ ಎಲ್ಲಾ ಕಾರುಬಾರು! ವ್ಯಾಪಾರದಲ್ಲಿ ಹೇಳಿಕೊಳ್ಳುವಂಥ ಲಾಭ ಏನಿಲ್ಲ.

``ನನ್ನ ಮನಸ್ಸಿಗೆ ಅಹಿತ ಎನಿಸುವ ಹಲವು ಪ್ರಸಂಗಗಳಿಗೆ ಇವರು ಕಾರಣರವಾಗಿದ್ದಾರೆ. ಭೀಮನ ಅಮಾವಾಸ್ಯೆಯಂಥ ಪತಿ ಪಾದ ಪೂಜೆಯನ್ನು ಬಿಟ್ಟುಬಿಡಬೇಕು ಎಂದೇ ಅನಿಸುತ್ತದೆ. ಜವಾಬ್ದಾರಿಯೇ ವಹಿಸದ ಇಂಥ ಗಂಡನಿಗಾಗಿ ಇದೆಂಥ ಪೂಜೆ, ಪುನಸ್ಕಾರ ಎನಿಸುತ್ತದೆ. ಆದರೆ ಸಮಾಜ ಏನನ್ನುತ್ತದೋ.....? ಹೀಗಾಗಿ ಏನೋ ಒಂದು ನಿಭಾಯಿಸುತ್ತಿದ್ದೇನೆ. ನಾನು ಇದನ್ನೆಲ್ಲ ಕಟ್ಟುನಿಟ್ಟಾಗಿ ಪಾಲಿಸದಿದ್ದರೆ, ನಮ್ಮತ್ತೆ ಮನಸ್ಸಿಗೆ ಬಹಳ ನೋವಾಗುತ್ತದೆ. ಅವರಿಗಾಗಿ ಇದೆಲ್ಲ ಮಾಡುತ್ತೇನೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ