ಆಹಾ... ಆಧುನಿಕ ಫ್ಯಾಷನ್! : ವಿಯೆಟ್ನಾಂ ಡಿಸೈನರ್ಸ್ ಇದೀಗ ವೆಸ್ಟರ್ನ್ ಫ್ಯಾಷನ್ ನಲ್ಲಿ ಅಗ್ರಗಣ್ಯ ಎನಿಸುವಂಥ ವಸ್ತ್ರ ವಿನ್ಯಾಸಕ್ಕೆ ಖ್ಯಾತರಾಗುತ್ತಿದ್ದಾರೆ. ಹೀಗಾಗಿಯೇ ಚೀನಾ ಒಂದನ್ನು ಬಿಟ್ಟು, ಬರಲಿರುವ ಬಹುತೇಕ ಕಂಪನಿಗಳು ವಿಯೆಟ್ನಾಂ ಡಿಸೈನ್ಸ್ ಗೆ ಮಣೆ ಹಾಕುತ್ತಿವೆ. ಟ್ರಾನ್ ಹಂಗ್ ಳ ಈ ಫ್ಯಾಷನ್ ಭಾರತೀಯ ಲೆಹಂಗಾಗಳಿಗಿಂತ ಎಷ್ಟೋ ಇನೋವೇಟೀವ್ ಆಗಿದೆ. ಆಧುನಿಕ ಫ್ಯಾಷನ್ ಗೆ ಬೆಡಗಿನ ಗ್ಲಾಮರಸ್ ಟಚ್ ನೀಡಲು ಇನ್ನಿದಕ್ಕಿಂತ ಬೇಕೇ...?
ನಶೆಯಲ್ಲಿ ಮುಳುಗಿದ ಪ್ರಪಂಚ : ಬೆಲ್ಜಿಯಂನ ರಾಜಧಾನಿ ಬ್ರುಸೆಲೆಸ್ ಇತರ ಯೂರೋಪಿಯನ್ ಹಾಗೂ ಅಮೆರಿಕಾದ ನಗರಗಳಿಗಿಂತ ಹೆಚ್ಚಾಗಿ ಡ್ರಗ್ಸ್ ನ ಮಾದಕ ನಶೆಯ ಮೋಡಿಗೆ ಸೆರೆಯಾಗಿದೆ. ಪೊಲೀಸರಿಗಿಂತ ಈ ಡ್ರಗ್ ಮಾಫಿಯಾ ಸದಾ 4 ಹೆಜ್ಜೆ ಮುಂದಿರುತ್ತದೆ. ಅವರೆಷ್ಟು ಲಕ್ಷ ಸಲ ರೈಡ್ ಮಾಡಿದರೂ ನಾಯಿಕೊಡೆಗಳಂತೆ ಇದರ ಸಪ್ಲೈ ಕೇಂದ್ರಗಳು ಹೊಸ ಹೊಸತಾಗಿ ಹುಟ್ಟುತ್ತಲೇ ಇರುತ್ತವೆ. `ಸೇ ನೋ ಟು ಡ್ರಗ್ಸ್' ಎಂದು ಘೋಷಿಸುವ ಅನೇಕ ಸಂಘ ಸಂಸ್ಥೆಗಳು ಯುವಜನತೆಗೆ ಈ ಕುರಿತು ಎಷ್ಟೇ ಎಚ್ಚರಿಕೆ ನೀಡಿದರೂ, ಹೊಳೆಯಲ್ಲಿ ಹುಣಿಸೇ ಕಿವುಚಿದಂತೆಯೇ ಆಗುತ್ತಿದೆ. ಏನೇ ಆಗಲಿ, ಕೆಲವರಾದರೂ ಸುಧಾರಿಸಿದರೆ ಅದೇ ಪುಣ್ಯ. ನಮ್ಮಲ್ಲೂ ಈ ದೈತ್ಯ ಸಮಸ್ಯೆ ಹೆಚ್ಚುತ್ತಿದೆಯಾದರೂ, ಕೋಮುವಾದಿ ಗಲಭೆಗಳು ಇದಕ್ಕಿಂತ ಘೋರವಾಗುತ್ತಿವೆ!
ಜೀವಂತ ಅಭಿನಯ : ಪೀರಿಯಡ್ ಡ್ರಾಮಾದ ಅತಿ ಹೆಚ್ಚಿನ ಮಜಾ ಇರುವುದೇ ಅದರ ಗಾಢ ಬಣ್ಣ ಬಣ್ಣದ ಕಾಸ್ಟ್ಯೂಮ್ ನಲ್ಲಿ! ಹೀಗಾಗಿಯೇ ಫ್ರಾನ್ಸಿನ ನ್ಯೂಬರ್ನ್ ಸಿಟಿಯಲ್ಲಿ ಇತ್ತೀಚೆಗೆ ಪ್ರದರ್ಶಿಸಲಾದ 1793ರ ನಾಟಕ `ಮ್ಯೂಸಿಕಲ್ ರೆಲ್ಯೂಷನಿಸ್ಟ್ 'ನ ಟಿಕೆಟ್ ಬಿಸಿ ಮಸಾಲೆ ದೋಸೆಯಂತೆ ಖರ್ಚಾಗಿ ಹೋದ. ನಾಲ್ವರು ಹೆಂಗಸರೇ ಪ್ರಧಾನವಾಗಿರುವ ಈ ನಾಟಕದಲ್ಲಿ, ಪ್ರತಿ ಪಾತ್ರಧಾರಿಯೂ ಆ ಕಾಲದ ಸಮಾಜವನ್ನು ತಮ್ಮ ಅಭಿನಯದಿಂದ ಜೀವಂತಗೊಳಿಸಿದ್ದರು.
ಇದೆಂಥ ಮೋಡಿ! : ಈಗ ಯಾವುದೇ ಅಂತಾರಾಷ್ಟ್ರೀಯ ನಟನಟಿಯರನ್ನು ತೆಗೆದುಕೊಳ್ಳಿ, ಅವರು ಮಿಕ್ಸ್ಡ್ ರೇಸ್ ನವರು ಎಂದು ತಿಳಿಯುತ್ತದೆ. ಸಿಂಗಾಪುರದ ಈ ನಟಿ ಾರೀ, ಚೀನಾ ಫ್ರಾನ್ಸ್ ನ ಮಿಕ್ಸ್ ಚೈಲ್ಡ್ ಆದರೂ, ಅದ್ಭುತ ಆಂಗ್ಲ ಗಾಯಕಿ! ಸಿಂಗಾಪುರದಲ್ಲಿ ಇತ್ತೀಚೆಗೆ ತನ್ನ ಒಂದು ಶೋನಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧೂಳೆಬ್ಬಿಸಿದ್ದಾಳೆ! ಶುದ್ಧ ರಕ್ತದ ಕುರಿತಾಗಿ ಮಾತನಾಡುವ ನಮ್ಮ ಜನ, ತಮ್ಮ ಪುರಾಣಗಳ ಮೂಲ ಕೆದಕಿ ತಿಳಿಯಬೇಕು, ಅಲ್ಲಿನ ಖ್ಯಾತನಾಮರೂ ಸಹ ಮಿಕ್ಸ್ಡ್ ಬ್ಲಡ್ ಅಂತ ತಿಳಿಯುತ್ತದೆ.
ಪ್ರಾಜೆಕ್ಟ್ ನ ಉದ್ದೇಶ : ಸರಾಹ ಬುಶ್ ಡ್ಯಾನ್ಸ್ ಪ್ರಾಜೆಕ್ಟ್ ಮೂಲಕ ನ್ಯೂಯಾರ್ಕಿನಲ್ಲಿ ಒಂದು ಪ್ರದರ್ಶನ ನೀಡಲಿದ್ದಾಳೆ. ಇದರಲ್ಲಿ ಡ್ಯಾನ್ಸ್ ಮೂಲಕ ಹ್ಯೂಮನ್ ಇಂಪ್ಯಾಕ್ಟ್ ಆನ್ ಎನ್ ವಾರ್ಯನ್ ಮೆಂಟ್ ಕುರಿತಾಗಿ ಚರ್ಚಿಸಲಿದ್ದಾಳೆ. ದಿನೇದಿನೇ ಹೆಚ್ಚುತ್ತಿರುವ ಗ್ಲೋಬಲ್ ವಾರ್ಮಿಂಗ್ ನಿಂದಾಗಿ ಪ್ರತಿ ದೇಶ ಚಿಂತೆಗೂಳಗಾಗಿದೆ. ಕಳೆದ 5-6 ಶತಮಾನಗಳಿಂದ ಈ ಅಷ್ಟಕಷ್ಟಗಳನ್ನು ಸಹಿಸುತ್ತಿರುವ ಭೂಮಿ, ಮುಂದೆಯೂ ಇದನ್ನು ಸಹಿಸಬಹುದೇ, ಎಂಬುದೇ ಆತಂಕದ ವಿಷಯ. ಇದರ ಕುರಿತಾಗಿ ಆಮೂಲಾಗ್ರ ಸಂಶೋಧನೆ ಅತ್ಯಗತ್ಯ. ಈ ವಿಷಯ ತಾಲಿಬಾನಿ, ರಷ್ಯನ್ನರ ಯುದ್ಧಕ್ಕಿಂತ ಘೋರವಾದುದು. ಇದರಿಂದ ಯಾರೂ ಪಾರಾಗಲು ಸಾಧ್ಯವಿಲ್ಲ. ಈ ಡ್ಯಾನ್ಸ್ ಮೂಲಕ ಇಂಥ ಗಂಭೀರ ವಿಷಯ ಚರ್ಚೆಗೊಳ್ಳಲಿದೆ.