ಶರತ್ ಚಂದ್ರ
ಕನ್ನಡದ ಪೋಷಕ ನಟ ಹಾಗೂ ಕಲಾನಿರ್ದೇಶಕ ದಿನೇಶ್ ಮಂಗಳೂರು ಇನ್ನಿಲ್ಲ ಕೆಲ ಸಮಯಗಳಿಂದ ಅನಾರೋಗ್ಯ ದಿಂದ ಬಲಳುತ್ತಿದ್ದ ದಿನೇ
ಶ್ ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದ್ದಾರೆ.
ದಿನೇಶ್ ರಂಗಭೂಮಿ ಹಿನ್ನಲೆ ಯಿಂದ ಬಂದವರು. ನಿರ್ದೇಶಕ ಟಿ.ಎಸ್ ನಾಗಭರಣ ಅವರ ಜೊತೆ ಆರಂಭದಿಂದಲೂ ಕೆಲಸ ಮಾಡುತ್ತಿದ್ದ ದಿನೇಶ್, ನಾಗಾಭರಣ ನಿರ್ದೇಶನದ ಆಸ್ಪೋಟ ಚಿತ್ರದಿಂದ ಕನ್ನಡ ಚಿತ್ರರಂಗ ಪ್ರವೇಶಿಸಿ ಅನೇಕ ಚಿತ್ರಗಳಿಗೆ ಕಲಾ ನಿರ್ದೇಶನ ಮಾಡುವುದರ ಜೊತೆಗೆ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸಿಕೊಂಡು ಬಂದಿದ್ದರು.
ನಾಗಾಭರಣ ಅವರ ಹೆಚ್ಚಿನ ಎಲ್ಲಾ ಚಿತ್ರಗಳಿಗೆ ಕಲಾ ನಿರ್ದೇಶನ ಮಾಡಿದ್ದ ದಿನೇಶ್ ಮಂಗಳೂರು,
ನಾಗಮಂಡಲ ಚಿತ್ರದಲ್ಲಿ ಒಂದು ಸಣ್ಣ ಪಾತ್ರವನ್ನು ನಿಭಾಯಿಸಿದ್ದರು
.ಆ ನಂತರ ‘ಆ ದಿನಗಳು’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಆ ನಂತರ , ರಿಕ್ಕಿ, ಉಳಿದವರು ಕಂಡಂತೆ,ರಣ ವಿಕ್ರಮ, ಕಿರಿಕ್ ಪಾರ್ಟಿ, ಹರಿ ಕಥೆಯಲ್ಲ ಗಿರಿಕಥೆ,ಹೀಗೆ ದಿನೇಶ್ ನಟನಾಗಿ ಬ್ಯುಸಿ ಆಗಿದ್ದರು.
ದಿನೇಶ್ ಮಂಗಳೂರು ನಟಿಸಿದ ಕೆಜಿಎಫ್ ಚಿತ್ರದ ಶೆಟ್ಟಿ ಪಾತ್ರ ಅವರಿಗೆ ಜನಪ್ರಿಯತೆ ಯನ್ನು ತಂದು ಕೊಟ್ಟ ಪಾತ್ರ.. ರಾಕಿ ಬಾಯ್ ಯಶ್ ಜೊತೆ ಮುಖಮುಖಿಯಾಗಿ ರಾಕೀ ಬಾಯ್ ಹಿಂದೆ ಸಂಚು ಮಾಡುವ ಶೆಟ್ಟಿ ಪಾತ್ರಕ್ಕೆ ರಾಷ್ಟ್ರಮಟ್ಟದಲ್ಲಿ ಪ್ರಶಂಶೆ ವ್ಯಕ್ತವಾಗಿತ್ತು. ನೋಡಲು ಕಟ್ಟು ಮಸ್ತಾಗಿದ್ದ ದಿನೇಶ್ ಅವರಿಗೆ ಇತ್ತೀಚೆಗೆ ವಿಲನ್ ಪಾತ್ರಗಳು ಅರಸಿಕೊಂಡು ಬರುತಿತ್ತು.
ದಿನೇಶ್ ಮಂಗಳೂರು ಪತ್ನಿ ಮತ್ತು ಇಬ್ಬರು ಪುತ್ರರಿಂದ ದೂರವಾಗಿದ್ದಾರೆ.
ದಿನೇಶ್ ಮಂಗಳೂರು ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಆ ದೇವರು ನೀಡಲಿ.