– ರಾಘವೇಂದ್ರ ಅಡಿಗ ಎಚ್ಚೆನ್.

ಶಿವಣ್ಣನ ಮೊದಲ ಆನಂದ್ ಸಿನಿಮಾದ ಹಾಡಿನಲ್ಲಿರುವ ಸಾಲಾಗಿದೆ. ಈ ಹಾಡಿನ ಸಾಲನ್ನೇ ಟೈಟಲ್ ಆಗಿ ಹೊಂದಿರುವ ಜೊತೆಯಾಗಿ ಹಿತವಾಗಿ ಸಿನಿಮಾ ಈ ವಾರ(ಸೆಪ್ಟೆಂಬರ್ 19) ತೆರೆಗೆ ಬಂದಿದೆ. ಸಿನಿಮಾದಲ್ಲಿ ಅಗಸ್ತ್ಯ ನಾಯಕ ನಟನಾಗಿ ಕಾಣಿಸಿಕೊಂಡಿದ್ದು. ಮೂಲತಃ ಬೆಳಗಾವಿಯವರು. ಸುವಾರ್ತಾ ಚಿತ್ರದ ನಾಯಕಿ.ರತ್ನ ಫಿಲಂ ಕಂಪನಿ ನಿರ್ಮಿಸಿರುವ ಈ ಚೊಚ್ಚಲ ಚಿತ್ರವನ್ನು ಎ ಆರ್ ಕೃಷ್ಣ ನಿರ್ದೇಶಿಸಿದ್ದಾರೆ. ಅಪ್ಪನ ಪಾತ್ರಕ್ಕೆ ಆನಂದ್ ನೀನಾಸಂ ಜೀವ ತುಂಬಿದ್ದು, ಇನ್ನುಳಿದಂತೆ ತಾರಾಗಣದಲ್ಲಿ ಚೇತನ್ ದುರ್ಗಾ, ಬಳ್ಳಾರಿ ಅರ್ಜುನ್, ಸಲೋಮಿ ಡಿಸೋಜ, ಭೂಮಿಕಾ ದೇಶಪಾಂಡೆ, ವಿನಾಯಕ್ ಮುಂತಾದವರು ಇದ್ದಾರೆ.
ತಾಯಿ ಇಲ್ಲದ ಮಗನನ್ನು ಯಾವುದೇ ಕೊರತೆ ಇರದಂತೆ ಬೆಳೆಸುವ ತಂದೆ, ತಂದೆ ಯಾವತ್ತೂ ಸೋಲಬಾರದೆನ್ನುವ ನಿರ್ಧಾರ ಮಾಡಿ ಅವರಿಗಾಗಿ ಬದುಕುವ ಮಗ ಕರುಣ್(ಅಗಸ್ತ್ಯ)- ಇದು ಅಪ್ಪ ಮಗನ ಸೆಂಟಿಮೆಂಟ್ ಹಾಗಾಗಲು ಕರುಣ್ ಆಫೀಸಿನಲ್ಲಿ ಹೊಸತಾಗಿ ಕೆಲಸಕ್ಕೆ ಸೇರಿದ ಕಾವ್ಯ (ಸುವಾರ್ತ) ಜೊತೆ ಪ್ರೀತಿ ಆಗುತ್ತದೆ ಆದರೆ ತಂದೆಯೇ ಸರ್ವಸ್ವ ಎನ್ನುವ ಕರುಣ್ ಈ ಪ್ರೀತಿ ವಿಷಯವನ್ನು ತಂದೆಗೆ ಹೇಗೆ ಒಪ್ಪಿಸುತ್ತಾನೆ? ಪ್ರೇಮಿಗಳು ಎದುರಿಸುವ ಅಡ್ಡಿ ಏನು? ಅಂತಿಮವಾಗಿ ಪ್ರೇಮ ಯಶಸ್ವಿಯಾಗುತ್ತದಾ? ತಿಳಿಯಲು ನೀವೊಮ್ಮೆ ಚಿತ್ರಮಂದಿರಗಳಲ್ಲಿ ಜೊತೆಯಾಗಿ ಹಿತವಾಗಿ  ಚಿತ್ರವನ್ನು ನೋಡಬೇಕು. ಮನೆಯಲ್ಲಿ ತುಂಬಾ ಫ್ರೀಡಂ ಕೊಟ್ಟರೆ ಏನಾಗುತ್ತೆ, ತೀರಾ ರಿಸ್ಟ್ರಿಕ್ಷನ್ ಇದ್ದಾಗ ಏನಾಗಬಹುದು ಎಂಬುದನ್ನ ತೀರಾ ಅದ್ಭುತವಾಗಿ ಹೆಣೆಯಲಾಗಿದೆ.
ನಿಜ ಹೇಳಬೇಕೆಂದರೆ ಈ ಸಿನಿಮಾ ನೋಡಿದಾಗ ನಿಮಗೆ ಒಂದು  ಪ್ಯೂರ್ ಲವ್ ಸ್ಟೋರಿಯನ್ನ ನೋಡಿದ ಅನುಭವ ಕೊಡಲಿದೆ. ನಿರ್ದೇಶಕರು ಈ ಸಿನಿಮಾ ಹಿಂದೆ ಉತ್ತಮ ಪ್ರಯತ್ನ ಹಾಕಿದ್ದಾರೆ. ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಇಲ್ಲಿನ ಹೆಚ್ಚಿನ ನಟ ನಟಿಯರಿಗೆ ಸಹ ಇದು ಮೊದಲ ಚಿತ್ರ ಆಗಿದೆ. ಹಾಗಾಗಿ ಹಲವಾರು ನಟನೆಯಲ್ಲಿ ಇನ್ನೂ ಸಾಕಷ್ಟು ಪಳಗಬೇಕು ಎಂಬುದು ಸತ್ಯ
ಚಿತ್ರದ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ. ಛಾಯಾಗ್ರಹಣದಲ್ಲಿ ಬೆಳಗಾವಿ, ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ನಗರಗಳನ್ನು ಸುಂದರವಾಗಿ ತೋರಿಸಲಾಗಿದೆ.
ಒಟ್ಟಿನಲ್ಲಿ ಇದು ಹೊಸಬರಮೊದಲ ಪ್ರಯತ್ನ ಎಂದು ಕೆಲವೊಂದು ಕೊರತೆ ಗಣನೆಗೆ ತೆಗೆದುಕೊಳ್ಳದೆ ಚಿತ್ರ ವೀಕ್ಷಿಸಿದರೆ ನಿಮಗೆ ಇದು ಇಷ್ಟವಾಗಿದೆಯೇ ಇರುವುದಿಲ್ಲ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ