ಜಾಗೀರ್ದಾರ್*
ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟನೆಯ ಬಹು ನಿರೀಕ್ಷಿತ ವೃಷಭ ಸಿನಿಮಾದ ಟೀಸರ್ ರಿಲೀಸ್ ಆಗಿದೆ. 1 ನಿಮಿಷ 43 ಸೆಕೆಂಡ್ ಇರುವ ಟೀಸರ್ , ಮೋಹಲ್ ಲಾಲ್ ಎಂಟ್ರಿ ಭರ್ಜರಿಯಾಗಿದ್ದು, ಅವರು ರಾಜನಾಗಿ ನಟಿಸಿದ್ದಾರೆ. ಆಂಥೋನಿ ಸ್ಯಾಮ್ಸನ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಸ್ಯಾಮ್ ಸಿಎಸ್ ಸಂಗೀತ ಟೀಸರ್‌ನಲ್ಲಿ ಹೈಲೆಟ್.
ನಂದ ಕಿಶೋರ್ ಕಥೆ ಬರೆದು ‘ವೃಷಭ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಕನ್ನಡ ಕಲಾವಿದರು ಮಿಂಚಿದ್ದಾರೆ. ನಿರ್ದೇಶಕ ಇಂದ್ರಜೀತ್ ಲಂಕೇಶ್ ಪುತ್ರ ಸಮರ್ಜೀತ್, ಮೋಹನ್ ಲಾಲ್ ಮಗನಾಗಿ ಅಭಿನಯಿಸಿದ್ದಾರೆ. ನಟಿ ರಾಗಿಣಿ ದ್ವಿವೇದಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ನಿರ್ಮಾಪಕಿ ಏಕ್ತಾ ಆರ್ ಕಪೂರ್ ಮಾತನಾಡಿ, ವೃಷಭ ಅದ್ಭುತವಾದ ಪ್ರಾಜೆಕ್ಟ್. ಇದು ಕೇವಲ ಸಿನಿಮಾವಲ್ಲ. ಸಂಬಂಧ, ಸೇಡು ಮತ್ತು ಪುನರ್ಜನ್ಮದ ಮಹಾಕಾವ್ಯವಾಗಿದೆ. ಈ ಸಿನಿಮೀಯ ಅನುಭವವನ್ನು ಪ್ರಸ್ತುತಪಡಿಸಲು ಅದ್ಭುತ ಪ್ರತಿಭೆಗಳೊಂದಿಗೆ ಸಹಕರಿಸಲು ನಾವು ರೋಮಾಂಚನಗೊಂಡಿದ್ದೇವೆ” ಎಂದು ಹೇಳಿದರು.
ನಿರ್ದೇಶಕ ನಂದ ಕಿಶೋರ್ ಮಾತನಾಡಿ, “ವೃಷಭವು ಕೇವಲ ಸಿನಿಮಾವಲ್ಲ, ಅದೊಂದು ಎಮೋಷನ್. ಲೆಜೆಂಡ್ ಎನಿಸಿಕೊಂಡಿರುವ ಮೋಹನ್ ಲಾಲ್ ಅವರೊಂದಿಗೆ ಕೆಲಸ ಮಾಡಿರುವುದು ಖುಷಿ ಇದೆ. .
ಮಗನ ಪಾತ್ರದಲ್ಲಿ ಸಮರ್ಜಿತ್ ನಟಿಸಿದ್ದಾರೆ. ಅದ್ಭುತ ಸಾಮರ್ಥ್ಯ ಹೊಂದಿರುವ ಯುವ ಪ್ರತಿಭೆ. ವೃಷಭವು ತಂದೆ ಮತ್ತು ಮಗನ ಬಾಂಧವ್ಯದ ಕಥೆಯಾಗಿದೆ. ಪ್ರೇಕ್ಷಕರು ಇದನ್ನು ಬೆಳ್ಳಿಪರದೆಯ ಮೇಲೆ ಯಾವ ರೀತಿ ತೆಗೆದುಕೊಳ್ಳುತ್ತಾರೆ ಎಂಬುದನ್ನು ನಾನು ನೋಡಲು ಕಾತುರನಾಗಿದ್ದೇನೆ” ಎಂದರು.
ಕನೆಕ್ಟ್ ಮೀಡಿಯಾ ಮತ್ತು ಬಾಲಾಜಿ ಟೆಲಿಫಿಲ್ಮ್ಸ್ ಅಭಿಷೇಕ್ ಎಸ್ ವ್ಯಾಸ್
ಸ್ಟುಡಿಯೋಸ್ ಜೊತೆಗೂಡಿ ಪ್ರಸ್ತುತಪಡಿಸುತ್ತಿರುವ ವೃಷಭ ಚಿತ್ರವನ್ನು ಶೋಭಾ ಕಪೂರ್, ಏಕ್ತಾ ಆರ್ ಕಪೂರ್, ಸಿ.ಕೆ. ಪದ್ಮ ಕುಮಾರ್,
ವರುಣ್ ಮಾಥುರ್, ಸೌರಭ್ ಮಿಶ್ರಾ, ಅಭಿಷೇಕ್ ಎಸ್ ವ್ಯಾಸ್, ಪ್ರವೀರ್ ಸಿಂಗ್, ವಿಶಾಲ್ ಗುರ್ನಾನಿ ಮತ್ತು ಜೂಹಿ
ಪರೇಖ್ ಮೆಹ್ತಾ ನಿರ್ಮಿಸಿದ್ದಾರೆ.
ಮಲಯಾಳಂ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾದ ಈ ಚಿತ್ರ ಹಿಂದಿ ಮತ್ತು ಕನ್ನಡದಲ್ಲಿಯೂ ಬಿಡುಗಡೆಯಾಗಲಿದೆ. ಈ ದೀಪಾವಳಿ 2025 ರ ದೀಪಾವಳಿಯಲ್ಲಿ ವಿಶ್ವದಾದ್ಯಂತ ತೆರೆಗೆ ಬರಲಿದೆ.