ಹೊಸ ವರ್ಷ ಬಂದಿದೆ, ಮತ್ತೊಂದು ಮಧುಚಂದ್ರಕ್ಕೆ ಏಕೆ ಪ್ಲಾನ್ಮಾಡಬಾರದು? ಅದಕ್ಕಾಗಿ ಬುಕ್ಮಾಡ್ತಿದ್ದೀರಾ? ಇಲ್ಲಿವೆ ನಿಮಗೆ ಅಗತ್ಯವಾದ ಕೆಲವು ಸಲಹೆಗಳು.....!

ಈ ಹೊಸ ವರ್ಷದಲ್ಲಿ ನೀವು ದಂಪತಿ ಮತ್ತೊಂದು ಮಧುಚಂದ್ರಕ್ಕೆ ಏಕೆ ಪ್ಲಾನ್‌ ಮಾಡಬಾರದು? ಇದಕ್ಕಾಗಿ ಯಾವ ಟೂರ್ ಪ್ಯಾಕೇಜ್‌ ಕೊಳ್ಳುವುದೆಂದು ಕನ್‌ ಫ್ಯೂಸ್‌ ಆಗಿದ್ದೀರಾ? ಇದಕ್ಕಾಗಿ ನೀವು ಹೊಸ ವರ್ಷದ ಈ ಚುಮು ಚುಮು ಚಳಿಯ ಆಹ್ಲಾದಕರ ವಾತಾವರಣದಲ್ಲಿ ದಂಪತಿಗಳಿಬ್ಬರೇ ಬೇರೆಲ್ಲ ಜಂಜಾಟ ಮರೆತು ಹೊರಡುವುದೇ ಸರಿ. ಸಂಸಾರದ ಜವಾಬ್ದಾರಿ ಜೀವಮಾನವಿಡೀ ಇದ್ದೇ ಇದೆ. ಈ ಹೊಸ ವರ್ಷದ ರೊಮ್ಯಾಂಟಿಕ್‌ ವಾತಾವರಣದಲ್ಲಿ ಅದನ್ನು ಬದಿಗಿಟ್ಟು ಹೊರಡಿರಿ. ಇದಕ್ಕಾಗಿ ನೀವು ಈ ಕೆಳಗಿನ ಸಲಹೆ ಅನುಸರಿಸುವುದು ಉತ್ತಮ.

ಮಧುಚಂದ್ರದ ಪ್ರವಾಸ

ಮದುವೆ ನಂತರ ಮಧುಚಂದ್ರಕ್ಕೆ ಪ್ಲಾನ್‌ ಮಾಡಿ ಹೊರಡುವುದು ಪ್ರತಿಯೊಬ್ಬ ದಂಪತಿಗೂ ಅಪರಿಮಿತ ಆನಂದ ತರುತ್ತದೆ. ಇದರಿಂದ ಸಂಗಾತಿಗಳಿಬ್ಬರೂ ಪರಸ್ಪರರಿಗೆ ವಿಶೇಷ ಖಾಸಗಿ ಸಮಯ ನೀಡಲು ಸಾಧ್ಯ. ಇದು ಕೇವಲ ನವದಂಪತಿಗೆ ಮಾತ್ರ ಮೀಸಾಲಾಗದೆ, ಯಾವ ವಯಸ್ಸಿನ ದಂಪತಿಗಳೇ ಆಗಲಿ, ಹೊಸ ವರ್ಷ ಬಂದಾಗೆಲ್ಲ ಹೀಗೆ ಮತ್ತೊಂದು ಮಧುಚಂದ್ರಕ್ಕೆ ಹೊರಡುವುದು, ತಗ್ಗುತ್ತಿರುವ ಅವರಿಬ್ಬರ ನಡುವಿನ ರೊಮಾನ್ಸ್ ನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಈ ಯಾಂತ್ರಿಕ ಬದುಕಿನ, ಸಾಂಸಾರಿಕ ಚಿಂತೆಗಳಿಂದ ಕೆಲವು ದಿನಗಳಾದರೂ ಮೈಮನಗಳಿಗೆ ಮುಕ್ತಿ ನೀಡುತ್ತದೆ. ಇದಕ್ಕಾಗಿ ನಿಮಗೆ ಇಷ್ಟವಾಗುವಂಥ ಜಾಗಗಳ ಹನೀಮೂನ್‌ ಪ್ಯಾಕೇಜ್‌ ಆರಿಸಿ.

ಇದರಲ್ಲಿ ನಿಮಗೆ ಪಿಕಪ್‌ ನಿಂದ ಹಿಡಿದು ಡ್ರಾಪಿಂಗ್‌ ವರೆಗೂ ಡೆಸ್ಟಿನೇಶನ್‌ ತಲುಪಿಸುವುದು, ಅಲ್ಲೆಲ್ಲ ಸುತ್ತಾಡಿಸುವುದು, ನಿಮಗೆ ಬೇಕಾದ ಜಾಗ ಎಕ್ಸ್ ಪ್ಲೋರ್‌ ಮಾಡಿಸುವುದು, ತಂಗಲು ಸ್ಥಳ, ಊಟತಿಂಡಿ, ಕಾಫಿಟೀ, ಎಲ್ಲವೂ ಒಳಗೊಂಡಿರುತ್ತವೆ. ಇದರಿಂದಾಗಿ ನಿಮಗೆ ಯಾವುದೇ ವಿಷಯದ ಕುರಿತು ಟೆನ್ಶನ್‌ ತೆಗೆದುಕೊಳ್ಳಬೇಕಿಲ್ಲ. ಸಂಗಾತಿಯ ಜೊತೆ ಮಜವಾಗಿ ನೀವು ರೊಮ್ಯಾಂಟಿಕ್‌ ಹನೀಮೂನ್‌ ಎಂಜಾಯ್‌ ಮಾಡಬಹುದು.

ಇದರ ಬದಲು ನೀವೇ ಗಾಡಿಯಲ್ಲಿ ಟೂರ್‌ ಹೊರಟರೆ, ಎಲ್ಲದರ ಜವಾಬ್ದಾರಿ ನಿಮ್ಮ ತಲೆಗೇ ಬರುತ್ತದೆ. ಇದಕ್ಕಾಗಿ ನೀವು ಬಹಳ ಕಷ್ಟಪಡಬೇಕು, ಜಾಗಗಳ ವಿವರ ಹುಡುಕುತ್ತಾ, ಊಟತಿಂಡಿಗೆ ಪರದಾಡುತ್ತಾ ಅಂಡಲೆಯಬೇಕು. ಸಂಗಾತಿಗೆ ಬೇಸರವಾಗದೆ ಇರಲಿ ಎಂದು ದುಬಾರಿ ಹೋಟೆಲ್ ‌ರೂಂ, ಎಲ್ಲವನ್ನೂ ದುಬಾರಿ ಆಗಿಯೇ ಪಡೆಯಬೇಕಾದೀತು. ಇದರಿಂದ ಕಾಸೂ ಹಾಳು, ತಲೆಯೂ ಬೋಳು ಎಂದಾದೀತು.

ಹೀಗಾಗಿ ಇಂಥ ಸಂದರ್ಭಕ್ಕಾಗಿ ಬೆಸ್ಟ್ ಅಂದ್ರೆ ಟೂರ್‌ ಪ್ಯಾಕೇಜ್‌ ಬುಕ್‌ ಮಾಡುವುದು. ಮುಖ್ಯವಾಗಿ ಗಮನಿಸತಕ್ಕ ಅಂಶವೆಂದರೆ, ಈ ಪ್ಯಾಕೇಜ್‌ ನ್ನು ನೀವು ನಂಬಲರ್ಹ ಸೈಟ್‌ ನಿಂದಲೇ ಪಡೆದಿದ್ದೀರಿ ಎಂಬುದು. ಇದಕ್ಕಾಗಿ ಪ್ರೀ ಪೇಮೆಂಟ್‌ ಮಾಡಬೇಕಾದ ರಿಸ್ಕ್ ಇದ್ದೇ ಇರುತ್ತದೆ.

IB138435-138435151324020-SM326247

ನೋಡಿದ ಸ್ಥಳಕ್ಕೇ ಮರುಪ್ರವಾಸ

ನೀವು ಸಿಮ್ಲಾ, ಕುಲೂಮನಾಲಿ, ಡಾರ್ಜಿಲಿಂಗ್‌ ಇತ್ಯಾದಿ ಮದುವೆಗೆ ಮೊದಲೇ ನೋಡಿರಬಹುದು, ಇದೀಗ ಸಂಗಾತಿ ಜೊತೆಗೆ ಅಲ್ಲಿಗೆ ಹೋಗುವುದು ವೆರಿ ಸ್ಪೆಷಲ್ ಎನಿಸುತ್ತದೆ! ಇದಕ್ಕಾಗಿ ಆ ವಿವರಗಳನ್ನು ನೀವು ಮೊದಲೇ ಅರಿತಿರುವುದರಿಂದ, ಟೂರ್ ಪ್ಯಾಕೇಜ್‌ ಬದಲು `ಡು ಇಟ್‌ ಯುವರ್‌ ಸೆಲ್ಫ್' ಎಂಬಂತೆ ನೀವೇ ಪ್ಲಾನ್‌ ಮಾಡಿ ಹೊರಟರೂ ಅಂಥ ಆತಂಕ ಇರುವುದಿಲ್ಲ, ಜಂಜಾಟ ಬೇಡ ಎಂದು ಟೂರ್‌ ಪ್ಯಾಕೇಜ್‌ ಆರಿಸಿಕೊಂಡರೆ ದೊಡ್ಡ ಟೆನ್ಶನ್‌ ಏನೂ ಇಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ