ಜಾಗೀರ್ದಾರ್*

ಸಿನಿಮಾರಂಗ ಇರೋವರೆಗೂ ಲವ್ ಸ್ಟೋರಿಗೆ ಸಾವಿಲ್ಲ.. ನಾವು ನೀವುಗಳೇ ಅದೆಷ್ಟು ಲವ್ ಸ್ಟೋರಿ ಇರೋ ಸಿನಿಮಾ ನೋಡಿಲ್ಲ , ಪ್ರೀತಿ ಪ್ರೇಮ ಪುಸ್ತಕದ ಬದ್ನೇಕಾಯಿ ಅಂದಾಗಲೂ ಜನ ಉಪ್ಪಿ ಸಿನಿಮಾ ನೋಡಿದ್ರು,ವಾಯಿಲೆಂಟ್ ಲವ್ ‘ಓಂ’ , ‘ಚೆಲುವಿನ ಚಿತ್ತಾರ’ ಎಲ್ಲವೂ ವಿಭಿನ್ನವಾಗಿ ಪ್ರೀತಿಯನ್ನು ವ್ಯಕ್ತಪಡಿಸಿ ಗೆದ್ದವು..ಈಗಲೂ ಸಹಾ ಪ್ರೇಕ್ಷಕರು ಲವ್ ಸ್ಟೋರಿ ಸಿನಿಮಾ ನೋಡಿ ಭಾವುಕರಾಗಿ ಗೋಳೋ ಎಂದಳುತ್ತಾರೆ..ಮೈಕ್ ಕಂಡಕೂಡಲೇ ತಪ್ಪಿಸಿಕೊಂಡು ಹೋಗುತ್ತಿದ್ದ ಪ್ರೇಕ್ಷಕರು ಮುಗಿಬಿದ್ದು ತಮ್ಮ ಧಾಟಿಯಲ್ಲಿ ರಿಯಾಕ್ಟ್ ಮಾಡ್ತಾರೆ.. ರಿಲೀಸ್ ಆಗೋ ಎಲ್ಲಾ ಚಿತ್ರಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತರ ತರವಾದ ರೀತಿಯಲ್ಲಿ ವ್ಯಕ್ತವಾಗುತ್ತದೆ.. ಇತ್ತೀಚೆಗೆ ಬಿಡುಗಡೆಯಾದ ರಾಣಾ ಅಭಿನಯದ ‘ಏಳುಮಲೆ’ ಚಿತ್ರ ಲವ್ ಸ್ಟೋರಿಗೊಂದು ಹೊಸ ರೂಪ ಕೊಟ್ಟಿತು. ಸಿನಿಮಾ ಕಥೆ ಬಗ್ಗೆ ಹೇಳಿದರೆ ಕ್ಯೂರಿಯಾಸಿಟಿ ಹೊರಟು ಹೋಗುತ್ತದೆ..ಒಂದೇ ಸಾಲಿನಲ್ಲಿ ಹೇಳಬೇಕೆಂದರೆ ಮುಂದೇನಾಗುತ್ತದೆ ಎಂಬ ನಿರೀಕ್ಷೆಯಲ್ಲಿ ನಿಮ್ಮನ್ನು ಹಿಡಿದು ಕೂಡಿಸುವಲ್ಲಿ..ನಿರ್ದೇಶಕ ಪುನೀತ್ ರಂಗಸ್ವಾಮಿ ಗೆಲ್ಲುತ್ತಾರೆ. ಪ್ರೀತಿಗಾಗಿ ಏನೆಲ್ಲಾ ಕಷ್ಟಗಳನ್ನು ಎದುರಿಸುವ ಪ್ರೇಮಿಗಳು..ಇವರ ಲವ್ ಸ್ಟೋರಿ ಉಳಿದೆಲ್ಲಕ್ಕಿಂತ ವಿಭಿನ್ನ ಅದೇ ಈ ಚಿತ್ರದ ಬ್ಯೂಟಿ.

ರಾಣಾನ ಎರಡನೇಯ ಚಿತ್ರವಿದು, ಹರೀಶನಾಗಿ ಪಳಗಿದ್ದಾರೆ ಪಾತ್ರಕ್ಕೆ ತಕ್ಕಂತೆ ಗೆಟಪ್, ಹೇರ್ ಸ್ಟೈಲ್. ತನ್ನ ಹುಡುಗಿಗೆ ಈ ಹೀರೋ ತೋರುವ ಅಪಾರವಾದ ಪ್ರೀತಿ, ರೋಷ ಎಲ್ಲವೂ ಹೊಸತು. ಅದಕ್ಕೆ ತಕ್ಕಂತೆ ಚಿನ್ನಿ ಪಾತ್ರ.. ಪ್ರೀತಿ ,ಪ್ರಿಯಕರ ಇದೇ ಅವಳ ಬದುಕು ಎನ್ನುವಷ್ಟು ಮುಗ್ಧೆ. ಇವರಿಬ್ಬರು ಚಿತ್ರದ ಜೀವಾಳ, ಮತ್ತೊಂದು ಟ್ರಾಕಲ್ಲಿ ಸಾಗುವ ಕ್ರೈಂ, ಕಾಡುಗಳ್ಳರು ,ಹಂತಕರು, ನಿಮ್ಮನ್ನು ಕಟ್ಟಿಹಾಕುತ್ತದೆ.ತರುಣ್ ಸುಧೀರ್ ನಿರ್ಮಾಣದ ಈ ಚಿತ್ರಕ್ಕೆ ಕ್ಯಾಮೆರಾ ಹಿಂದೆ ಕೆಲಸ ಮಾಡಿರುವ ಎಲ್ಲರ ಎಫರ್ಟ್ ಎದ್ದು ಕಾಣುತ್ತದೆ. ರೈಟಿಂಗ್, ಬಿ.ಜಿ.ಎಮ್. ಕ್ಯಾಮೆರಾ ವರ್ಕ್, ಎಡಿಟಿಂಗ್. ಕಥಾ ವಸ್ತು ಗಟ್ಟಿಯಾಗಿದ್ದರೆ, ಒಂದೊಳ್ಳೆ ಸಿನಿಮಾ ಆಗುತ್ತದೆ ಎಂಬುದಕ್ಕೆ ಏಳುಮಲೆ ಉತ್ತಮ ನಿದರ್ಶನ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ