- ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ನಾನು ಮತ್ತು ಗುಂಡ 2
ನಿರ್ದೇಶನ, ನಿರ್ಮಾಣ: ರಘು ಹಾಸನ್
ತಾರಾಂಗಣ: ರಾಕೇಶ್ ಅಡಿಗ, ರಚನಾ ಇಂದರ್, ಗೋವಿಂದೇಗೌಡ, ನಯನ, ಸಾಧುಕೋಕಿಲಾ ಮತ್ತಿತರರು
ರೇಟಿಂಗ್: 3/5

ಈ ಹಿಂದೆ ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಸೆಳೆದಿದ್ದ "ನಾನು ಮತ್ತು ಗುಂಡ " ಚಿತ್ರದ ಮುಂದುವರೆದ ಭಾಗವಾಗಿ "ನಾನು ಮತ್ತು ಗುಂಡ-2: ಚಿತ್ರ ಇಂದು ( ಸೆ.5) ರಾಜ್ಯಾದ್ಯಂತ ತೆರೆಕಂಡಿದೆ. ಈ ಹಿಂದಿನ ಚಿತ್ರದ ನಿರ್ದೇಶಕರಾಗಿದ್ದ ರಘುಹಾಸನ್ ಅವರೇ ಈ ಚಿತ್ರದ  ಚಿತ್ರದ ಕಥೆ, ಚಿತ್ರಕಥೆ ಬರೆದು  ನಿರ್ದೇಶಿಸಿದ್ದು , ನಿರ್ಮಾಣದ ಜವಾಬ್ದಾರಿಯನ್ನು ಸಹ ಹೊತ್ತಿದ್ದಾರೆ. ರಾಕೇಶ್ ಆಡಿಗ, ರಚನಾ ಇಂದರ್ ಪ್ರಧಾನ ಪಾತ್ರದಲ್ಲಿದ್ದಾರೆ. ಆರ್‌ಪಿ. ಪಟ್ನಾಯಕ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು  ರುತ್ವಿಕ್ ಮುರಳೀಧರ್ ಅವರ ಹಿನ್ನೆಲೆ ಸಂಗೀತ, ತನ್ವಿಕ್ ಅವರ ಛಾಯಾಗ್ರಹಣವಿದೆ. ಚಿತ್ರದ ಸಂಭಾಷಣೆ ಹಾಗೂ ಸಾಹಿತ್ಯವನ್ನು ರೋಹಿತ್ ರಮನ್ ರಚಿಸಿದ್ದಾರೆ. ಹಾಗಾದರೆ ಈ ಚಿತ್ರ ಹೇಗಿದೆ ಎನ್ನುವುದನ್ನು ತಿಳಿಯಲು ಇಲ್ಲಿ ಓದಿ..
ಶಂಕರನ (ಶಿವರಾಜ್ ಕೆ.ಆರ್. ಪೇಟೆ) ಪುನರ್ಜನ್ಮದೊಡನೆ ಚಿತ್ರ ಪ್ರಾರಂಭವಾಗುತ್ತದೆ. ಆ ಶಂಕರನ ನಾಯಿ ಗುಂಡ ತಾನು ಶಂಕರನ ಪುನರ್ಜನ್ಮ ಆಗುವವರೆಗೆ ಅವನ ಸಮಾಧಿಯ ಪಕ್ಕವೇ ಕುಳಿತಿರುತ್ತದೆ. ಕಡೆಗೂ ಶಂಕರ ಮತ್ತೆ ಹುಟ್ಟಿದ್ದಾನೆ ಆದರೆ ಹುಟ್ಟಿನೊಡನೇ ಅವನು ತಾಯಿಯನ್ನು ಕಳೆದುಕೊಳ್ಳುತ್ತಾನೆ. ಶಂಕರನ ಸ್ನೇಹಿತಭೂರಿ (ಗೋವಿಂದೇಗೌಡ) ಮತ್ತು ಅಡವಿ (ನಯನ) ಶಂಕರನನ್ನು ಸಾಕುತ್ತಾರೆ. ಮೊದಲಿಗೆ ಬಾಲಕ ಶಂಕರ ತನ್ನೊಡನಿದ್ದ ನಾಯಿಯನ್ನು ಒಂದು ಬೇಡದ

ವಸ್ತುವಂತೆ ನೊಡಿ ಅಸಮಾಧಾನ ಹೊರಹಾಕುತ್ತಾನೆ. ಆದರೆ ಕ್ರಮೇಣ ಅವನಿಗೆ ತಾನು ಹುಟ್ಟಿದ್ದೇ ಗುಂಡನಿಗಾಗಿ ಗುಂಡ ಇರುವುದೇ ನನಗಾಗಿ ಎನ್ನುವುದು ಅರಿವಾಗುತ್ತದೆ. ಆ ನಂತರ ಗುಂಡನಿಗೆ ಹೃದಯಾಘಾತವಾಗುತ್ತದೆ. ಆ ನಾಯಿ ಸತ್ತು ಮತ್ತೆ ಹಲವು ವರ್ಷಗಳಾದರೂ ಶಂಕರನಿಗೆ ಗುಡನ ನೆನಪು ಮಾಸುವುದಿಲ್ಲ ಆಗ ಮತ್ತೆ ಗುಂಡ ಊಟಿಯಲ್ಲಿ ಮರುಜನ್ಮ ತಳೆದ ವಿಷಯ ಅರಿವಾಗುತ್ತದೆ. ಅದನ್ನು ಹುಡುಕಿ ಹೊರಡುವ ಶಂಕರನ ಕಥೆಗೆ ಇಂದು ( ರಚನಾ ಇಂದರ್) ಪ್ರವೇಶವಾಗುತ್ತದೆ.ಮುಂದೆ ಗುಂಡ ಹಾಗೂ ಶಂಕರ ಒಟ್ಟಾಗುತ್ತಾರಾ? ಇಂದುವಿಗೂ ಗುಂಡನಿಗೂ ಏನು ಸಂಬಂಧ ತಿಳಿಯಲು ನೀವೊಮ್ಮೆ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಬೇಕು.
"ನಾನು ಮತ್ತು ಗುಂಡ" ಈ ಹಿಂದಿನ ಚಿತ್ರದಲ್ಲಿ ನಾಯಿ ಹಾಗೂ ಮಾನವ ಸಂಬಂಧದ ಕೊಂಡಿಯನ್ನು ಭಾವನಾತ್ಮಕವಾಗಿ ತೋರಿಸಿದ್ದರೆ ಈ ಚಿತ್ರದಲ್ಲಿ ಪುನರ್ಜನ್ಮದ ಹಿನ್ನೆಲೆಯನ್ನಿಟ್ಟು ಕೆಲವೊಂದು ಅಂಶವನ್ನು ಹೆಣೆಯಲಾಗಿದೆ. ಕೆಲವೊಂದು ಕಡೆಯಲ್ಲಿ ನಿಧಾನಗತಿಯ ನಿರೂಪಣೆ ಕಥೆಯನ್ನು ಚಿಂತನಶೀಲಗೊಳಿಸುವುದಕ್ಕಿಂತ ಹೆಚ್ಚಾಗಿ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುಅಂತೆ ಮಾಡಿದೆ. ಊಟಿ ದೃಶ್ಯಗಳು ಕಣ್ಣಿಗೆ ಆನಂದ ಉಂಟು ಮಾಡುತ್ತದೆ. ಆದರೆ ಕಥೆಯಲ್ಲಿ ಬರುವ ಅನೇಕ ಹಾಸ್ಯ ಸನ್ನಿವೇಶಗಳು ಬೇಕೆಂದು ತುರುಕಿದಂತೆ ಭಾಸವಾಗುತ್ತದೆ. ಮತ್ತು ಇದರಿಂದ ಕಥೆಯ ಭಾವನಾತ್ಮಕ ಲಯಕ್ಕೆ ಅಡ್ಡಿಯಾಗುತ್ತದೆ.  ಮುಖ್ಯವಾಗಿ ಸಿನಿಮಾ ಅವಧಿ ತುಸು ಅಧಿಕ ಎನಿಸುತ್ತದೆ. ಹೆಚ್ಚಿನ ಸಂಖ್ಯೆಯ ಪಾತ್ರಗಳಿಲ್ಲದೆ ಕಥೆಯೂ ಸಹ ಹೆಚ್ಚಾಗಿ ಬೆಳೆಸಲು ಅವಕಾಶ ಇಲ್ಲದಿದ್ದರೂ ಎರಡೂ ವರೆ ಗಂಟೆ ಕಾಲ ಸಿನಿಮಾ ತೋರಿಸುವುದು ಪ್ರೇಕ್ಷಕರಿಗೆ ತುಸು ತಾಳ್ಮೆ ಪರೀಕ್ಷೆಯಾಗಿ ಕಾಣಬಹುದು.
ಪಾತ್ರದ ವಿಷಯಕ್ಕೆ ಬಂದರೆ ಗುಂಡನಾಗಿ ಅಭಿನಯಿಸಿದ್ದ ಎರಡೂ ನಾಯಿಗಳ ಅಭಿನಯಕ್ಕೆ ಫುಲ್ ಮಾರ್ಕ್ಸ್ ಕೊಡಲೇಬೇಕು. ಬಾಲಕ ಶಂಕರನಾಗಿ ಅಭಿನಯಿಸಿದ್ದ ಮಾಸ್ಟರ್ ಯುವನ್ ಸಾಯಿ ಅಭಿನಯ ಮನಸ್ಸು ಮುಟ್ಟುತ್ತದೆ. ರಾಕೇಶ್ ಅಡಿಗ ಚಿತ್ರದಿಂದ ಚಿತ್ರಕ್ಕೆ ಅಭಿನಯದಲ್ಲಿ ಪ್ರಬುದ್ದತೆ ತೋರಿಸುತ್ತಾ ಸಾಗುವುದನ್ನು ನಾವಿಲ್ಲಿ ನೋಡಬಹುದು ದುಃಖ ಮತ್ತು ಆಶಾವಾದದ ನಡುವಿನ ತೊಳಲಾಟದ ದೃಶ್ಯಗಳಲ್ಲಿ ಅವರ ನಟನೆ ಮೆಚ್ಚುವಂತಿದೆ. ಗೋವಿಂದೇಗೌಡ, ನಯನಾ, ಸಾಧುಕೋಲಿಲಾ ಅವರುಗಳು ಹಾಸ್ಯ ಸನ್ನಿವೇಶಗಳಲ್ಲಿ ಮಿಂಚಿದ್ದಾರೆ. ರಚನಾ ಇಂದರ್ ನಾಯಕಿಯಾಗಿದ್ದರೂ ಅವರ ಪಾತ್ರ ಗಂಭೀರತೆಗಿಂತ ಹಾಸ್ಯಕ್ಕೇ ಹೆಚ್ಚು ಒತ್ತು ಕೊಟ್ಟ ಹಾಗಿದೆ. ಅವಿನಾಶ್, ವಿಜಯ್ ಚೆಂಡೂರ್, ಗಿರೀಶ್ ಶಿವಣ್ಣ ಮತ್ತು ಮಂಜು ಪಾವಗಡ ಅವರು ಸಹ ಉತ್ತಮ ಅಭಿನಯ ಕೊಟ್ಟರೂ ಅವರ ಪಾತ್ರಗಳ ಪ್ರಭಾವ ಕಡಿಮೆ.
ತಾಂತ್ರಿಕವಾಗಿ, ಚಿತ್ರವು ಉತ್ತಮವಾಗಿದೆ. ಛಾಯಾಗ್ರಹಣದಲ್ಲಿ ಹಳ್ಳಿಯ ನೋಟ ಊಟಿಯ ಸೌಂದರ್ಯವನ್ನು ಉತ್ತಮವಾಗಿ ತೋರಿಸಲಾಗಿದೆ. . ಹಿನ್ನೆಲೆ ಸಂಗೀತವು ಭಾವನಾತ್ಮಕವಾಗಿ ಕಥೆಗೆ ಪೂರಕವಾಗಿದೆ. ಆದರೆ ಹಾಡುಗಳು ನೆನಪಿನಲ್ಲಿ ಉಳಿಯಲಾರದು,
ಒಟ್ಟಾರೆಯಾಗಿ ನಾಯಿ ಸೇರಿದಂತೆ ಮನೆಯಲ್ಲಿ ಮುದ್ದು ಪ್ರಾಣಿಗಳನ್ನು ಸಾಕುವವರಿಗೆ ಪ್ರಾಣಿಪ್ರಿಯರಿಗೆ "ನಾನು ಮತ್ತು ಗುಂಡ 2" ಚಿತ್ರ ಇಷ್ಟವಾಗಬಹುದು. ಉಳಿದವರ ಪಾಲಿಗೆ  ಒಮ್ಮೆ ವೀಕ್ಷಿಸಬಹುದಾದ ಚಿತ್ರೆವೆನ್ನಲು ತಕರಾರಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ