64ನೇ ಸುಬ್ರೋತೋ ಕಪ್ ಅಂತಾರಾಷ್ಟ್ರೀಯ ಫುಟ್ಬಾಲ್ ಟೂರ್ನಮೆಂಟ್‌ನ ಸಬ್ ಜೂನಿಯರ್ ಬಾಲಕರ (U-15) ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯಗಳು ರೋಚಕ ಕ್ಷಣಕ್ಕೆ ಸಾಕ್ಷಿಯಾಗಿವೆ.

ಕ್ವಾರ್ಟರ್ ಫೈನಲ್ 1: ಮಿನರ್ವಾ ಪಬ್ಲಿಕ್ ಸ್ಕೂಲ್ (CISCE) SFS ಹೈಯರ್ ಸೆಕೆಂಡರಿ ಸ್ಕೂಲ್ (ನಾಗಾಲ್ಯಾಂಡ್) ವಿರುದ್ಧ 10-0 ಅಂತರದ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.  ಲುಂಗ್ಡೆಮ್ (4’, 30’), ರಿಮೋಸಾನ್ (25’), ಅಕಾಷ್ (25’, 27’), ಲೈಶ್ರಾಂ (19’), ಹಿಡಮ್ (14’, 33’, 35’), ಮತ್ತು ಗುರುತೇಜ್‌ವೀರ್ (38’) ಗೋಲು ಗಳಿಸಿದರು.

ಕ್ವಾರ್ಟರ್ ಫೈನಲ್ 2: ಅತ್ಯಂತ ರೋಚಕ ಪಂದ್ಯಗಳಲ್ಲಿ ಒಂದಾದ ಈ ಪಂದ್ಯದಲ್ಲಿ, ಸೆಂಟ್ ಜಾನ್ ಹೈ ಸ್ಕೂಲ್ (ಜಾರ್ಖಂಡ್) ಪಶ್ಚಿಮ ಬಂಗಾಳದ ಮಣಿಕ್ಪಾರಾ ವಿವೇಕಾನಂದ ವಿದ್ಯಾಪೀಠವನ್ನು 3-2ರಿಂದ ಗೆದ್ದು ಸೆಮಿಫೈನಲ್ಸ್‌ಗೆ ಪ್ರವೇಶಿಸಿತು. ಪಶ್ಚಿಮ ಬಂಗಾಳ ಪರ ಚರಣ್ (2’) ಮತ್ತು ಅಭಿಜಿತ್ (36’) ಗೋಲು ಗಳಿಸಿದರು, ಆದರೆ ಜಾರ್ಖಂಡ್ ಸೂರಜ್ (7’), ಆಶಿಶ್ (30’) ಮತ್ತು ಇಶಾಂತ್ (47’)  ಬಲವಾದ ಗೋಲುಗಳ ಮೂಲಕ  ಛಾಪು ಮೂಡಿಸಿದರು.

ಕ್ವಾರ್ಟರ್ ಫೈನಲ್ 3: ವಿದ್ಯಾಚಲ್ ಇಂಟರ್ನ್ಯಾಷನಲ್ ಸ್ಕೂಲ್ (ಬಿಹಾರ) ಮದರ್ಸ್ ಪ್ರೈಡ್ ಪಬ್ಲಿಕ್ ಸ್ಕೂಲ್ (ಹಿಮಾಚಲ ಪ್ರದೇಶ) ವಿರುದ್ಧ 2-1 ಅಂತರದ ಜಯ ಸಾಧಿಸಿತು. ಸುಖ್‌ಪ್ರೀತ್ (23’) ಹಿಮಾಚಲಕ್ಕೆ ಮುನ್ನಡೆ ತಂದುಕೊಟ್ಟರೆ, ಬಿಹಾರದ ಶುಭಮ್ ಅದ್ಭುತ ಬ್ರೇಸ್ (25+2’, 63’) ಗೋಲುಗಳ ಮೂಲಕ ಪಂದ್ಯವನ್ನು ಮುನ್ನಡೆಸಿದರು.

ಕ್ವಾರ್ಟರ್ ಫೈನಲ್ 4: ಕೊನೆಯ ಕ್ವಾರ್ಟರ್ ಫೈನಲ್‌ನಲ್ಲಿ, ರಿವರ್ ಸೈಡ್ ನ್ಯಾಚುರಲ್ ಶಾಲೆ (ಮಧ್ಯಪ್ರದೇಶ) ಆನಂದ್ ನಿಕೇತನ್ ಶಾಲೆ (ಗುಜರಾತ್) ವಿರುದ್ಧ 2-0 ಅಂತರದ ಗೆಲುವು ಸಾಧಿಸಿತು.  ಲೋಕೇಶ್ 7ನೇ ನಿಮಿಷ ಮತ್ತು ಸ್ಟಾಪೇಜ್ ಟೈಮ್‌ನಲ್ಲಿ (50+4’) ಎರಡು ಗೋಲುಗಳನ್ನು ಹಂಚಿ ಮಧ್ಯಪ್ರದೇಶದ ಸೆಮಿಫೈನಲ್ಸ್ ಪ್ರವೇಶವನ್ನು ಖಚಿತಪಡಿಸಿದರು.

ಸುಬ್ರೋತೋ ಕಪ್ ನ ಕ್ವಾರ್ಟರ್ ಫೈನಲ್‌ಗಳು ಯುವ ಫುಟ್‌ಬಾಲ್‌ ಆಟಗಾರರ ಅತ್ಯುತ್ತಮ ಪ್ರದರ್ಶನವನ್ನು ಹೊರತಂದಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ