– ರಾಘವೇಂದ್ರ ಅಡಿಗ ಎಚ್ಚೆನ್.

ರಿಯಲ್​ ಸ್ಟಾರ್​ ಉಪೇಂದ್ರ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 57ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟನಿಗೆ ಕುಟುಂಬಸ್ಥರು, ಆಪ್ತರು, ಸಿನಿ ಸ್ನೇಹಿತರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ನಟನ ಮುಂದಿನ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ‘ಭಾರ್ಗವ’ನ ಕಡೆಯಿಂದಲೂ ನಟನಿಗೆ ವಿಶೇಷ ಉಡುಗೊರೆ ಸಿಕ್ಕಿದೆ.
ಈ ಹಿಂದೆ ತಿಳಿಸಿದಂತೆ, ಭಾರ್ಗವ ಚಿತ್ರದಿಂದ ರಿಯಲ್​​ ಸ್ಟಾರ್​ ಬರ್ತ್​ಡೇ ಟೀಸರ್​ ಅನಾವರಣಗೊಂಡಿದೆ. ನಿರೀಕ್ಷೆಯಂತೆ, ಟೀಸರ್​ನಲ್ಲಿ ವಿಷ್ಣುದಾದನ ಸಿನಿಮಾ ವಿಡಿಯೋಗಳನ್ನು ಬಳಸಿಕೊಳ್ಳಲಾಗಿದೆ. ಟೀಸರ್ ಅನೌನ್ಸ್​ಮೆಂಟ್​​ ಪೋಸ್ಟರ್​ನಲ್ಲಿ ವಿಷ್ಣುವರ್ಧನ್​​ ಫೋಟೋವಿತ್ತು. ಹಾಗಾಗಿ, ಈ ಟೀಸರ್​ ಮೇಲೆ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಳ್ಳಲಾಗಿತ್ತು

download (5)

ರಿಯಲ್​​ ಸ್ಟಾರ್​ ಬರ್ತ್​ಡೇ ಟೀಸರ್​’ ಶೀರ್ಷಿಕೆಯ ವಿಡಿಯೋದಲ್ಲಿ ಸಾಹಸಸಿಂಹನ ಸೂಪರ್ ಹಿಟ್​ ಸಿನಿಮಾಗಳ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ. ಹಿನ್ನೆಲೆಯಲ್ಲಿ, ‘7 ಬಣ್ಣಗಳು ಸೇರಿದ್ರೆ ಕಾಮನಬಿಲ್ಲು, 7 ಕೋಟಿ ಕನ್ನಡಿಗರು ಸೇರಿದ್ರೆ ಕರುನಾಡು, ಈ ನಮ್ಮ ಕರುನಾಡಿನ ಸಂಪತ್ತು ವಿಷ್ಣುದಾದ’ ಎಂಬ ದನಿ ಕೇಳಿಬಂದಿದೆ. ನಂತರ, ಭಯ. ಭಯ ಜೀವನದಲ್ಲಿರಬೇಕು, ಆದ್ರೆ ಜೀವನಾನೆ ಭಯ ಆಗ್ಬಾರ್ದು ಎಂಬ ವಿಷ್ಣು ಡೈಲಾಗ್​​ ಇದೆ. ಬಳಿಕ, ಎದುರುಗೊಳ್ಳುವ ಉಪೇಂದ್ರ, ‘ನಿಜ, ಆದ್ರೆ ಜೀವನದಲ್ಲಿ ಭಯ ಅಂದ್ರೆ ಏನು ಅಂತಾನೆ ಗೊತ್ತಿಲ್ದೇ ಈ ಪ್ರಪಂಚದಲ್ಲಿ ಒಬ್ಬ ಬದುಕಿದ್ದಾನೆ. ಆ ಭಯ ಇಲ್ದಿರೋ ಬಯೋಗ್ರಾಫಿನೇ ಈ ಭಾರ್ಗವ’ ಎಂದು ಹೇಳುತ್ತಾ ಎಂಟ್ರಿ ಕೊಟ್ಟಿದ್ದಾರೆ. ಒಟ್ಟಾರೆ, ಸಂಪೂರ್ಣ ಟೀಸರ್​ ಸಖತ್​ ಇಂಟ್ರೆಸ್ಟಿಂಗ್ ಆಗಿ ಮೂಡಿಬಂದಿದೆ.

download (6)

ಭಾರ್ಗವ, ರಿಯಲ್​ ಸ್ಟಾರ್​ ಉಪೇಂದ್ರ ಹಾಗೂ ನಿರ್ದೇಶಕ ನಾಗಣ್ಣ ಅವರ ಕಾಂಬಿನೇಷನ್​​ನಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಚಿತ್ರ. ‘ಎ ವೈಲೆಂಟ್​ ಫ್ಯಾಮಿಲಿ ಮ್ಯಾನ್’​ ಅನ್ನೋದು ಚಿತ್ರದ ಟ್ಯಾಗ್​ಲೈನ್. ಹುಟ್ಟುಹಬ್ಬದ ವಿಶೇಷವಾಗಿ ಬಿಡುಗಡೆ ಮಾಡಿರುವ ಟೀಸರ್​ನಲ್ಲಿ ನಾಯಕ ನಟನನ್ನು ಯಾವುದೇ ಭಯ ಇಲ್ಲದ ವ್ಯಕ್ತಿ ಎಂದು ಪರಿಚಯಿಸಲಾಗಿದೆ. ಇತ್ತೀಚೆಗೆ, ಉಪೇಂದ್ರ ಜೊತೆಗಿನ ವಿಷ್ಣುವರ್ಧನ್​​​ ಫೋಟೋ ಇರುವ ಪೋಸ್ಟರ್ ಹಂಚಿಕೊಂಡಿದ್ದ ಚಿತ್ರತಂಡ, ಇಬ್ಬರು ಲೆಜೆಂಡರಿ ಸ್ಟಾರ್ಸ್​​ನ ಹುಟ್ಟುಹಬ್ಬಾಚರಣೆಗೆ ಸಿದ್ಧರಾಗಿ. ಭಾರ್ಗವ ಬರ್ತ್​ಡೇ ಟೀಸರ್ ಸೆಪ್ಟೆಂಬರ್ 18ರಂದು ಬಿಡುಗಡೆ ಆಗಲಿದೆ ಎಂದು ತಿಳಿಸಿತ್ತು. ಪೋಸ್ಟರ್ ಸಖತ್​​​ ಸದ್ದು ಮಾಡಿತ್ತು. ಇದೀಗ, ಟೀಸರ್​​​ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸುತ್ತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ