ಟಾಲಿವುಡ್​ ಸ್ಟಾರ್ ವಿಜಯ್ ದೇವರಕೊಂಡ ಅವರ ಕಾರು ಸೋಮವಾರ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಅವರು ಪಾರಾಗಿದ್ದಾರೆ.

ಗದ್ವಾಲ್ ಜಿಲ್ಲೆಯ ಉಂಡವೆಲ್ಲಿ ಬಳಿಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಟ ವಿಜಯ್ ದೇವರಕೊಂಡ ಅವರ ಕಾರು ಸಣ್ಣ ಅಪಘಾತಕ್ಕೀಡಾಗಿದ್ದು, ಅವರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ಹೈದರಾಬಾದ್‌ಗೆ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಮತ್ತೊಂದು ಕಾರು ವಿಜಯ್ ದೇವರಕೊಂಡ ಅವರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿಗೆ ಹಾನಿಯಾಗಿದೆ.

ಅಪಘಾತದ ನಂತರ, ನಟ ತನ್ನ ವಾಹನದಿಂದ ಇಳಿದು ಸ್ನೇಹಿತನ ಕಾರಿನಲ್ಲಿ ತೆರಳಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಮ್ಯಾನೇಜರ್ ರವಿಕಾಂತ್ ಯಾದವ್ ಹಾಗೂ ಡ್ರೈವರ್ ಶ್ರೀಕಾಂತ್ ಜೊತೆ ದೇವರಕೊಂಡ ಪಯಣ ಮಾಡುತ್ತಿದ್ದರು. ಸಂಜೆ 6:30ರ ಸುಮಾರಿಗೆ ಉಂಡಪಲ್ಲಿ ಪಂಚಾಯಿತಿ ವ್ಯಾಪ್ತಿಯ ಹತ್ತಿ ಮಿಲ್ ಬಳಿ ಅಪಘಾತ ಸಂಭವಿಸಿದೆ.ಬಸ್ಸು ತಕ್ಷಣ ಬ್ರೇಕ್ ಹಾಕಿದ್ದರಿಂದ ಮುಂದೆ ಇದ್ದ ಬೊಲೆರೋಗೆ ವಿಜಯ್​ ದೇವರಕೊಂಡ ಅವರು ಕಾರು ಡಿಕ್ಕಿ ಹೊಡೆದಿದೆ. ಇದರಿಂದಾಗಿ ವಿಜಯ್ ದೇವರಕೊಂಡ ಕಾರು ಡ್ಯಾಮೇಜ್ ಆಗಿದ್ದು ಅವರು ಮತ್ತೊಂದು ಕಾರಿನ ಮೂಲಕ ಹೈದ್ರಾಬಾದ್ ಗೆ ತೆರಳಿದ್ದಾರೆ.

ರಶ್ಮಿಕಾ ಜೊತೆ ನಿಶ್ಚಿತಾರ್ಥದ ಬೆನ್ನಲ್ಲೇ ನಟ ವಿಜಯ್ ಗೆ ರಸ್ತೆ ಅಪಘಾತದಿಂದ ಅಭಿಮಾನಿಗಳು ಆತಂಕಿತರಾಗಿದ್ದರು.

ಈ ಅಪಘಾತದ ಬಗ್ಗೆ ನಟ ವಿಜಯ್ ದೇವರಕೊಂಡ ಸ್ಪಷ್ಟನೆ ನೀಡಿದ್ದು,  ನಾನು‌ ಆರಾಮಾಗಿದ್ದೇನೆ.  ಆಘಾತ ಬೇಡ. ಕಾರ್ ಗೆ ಪೆಟ್ಟಾಗಿದೆ.. ನಾವು ಅಪಾಯದಿಂದ‌ ಪಾರಾಗಿದ್ದೇವೆ. ವರ್ಕೌಟ್ ಕೂಡ ಮಾಡಿ ಮನೆಗೆ ವಾಪಸ್ ಆಗಿದ್ದೇನೆ. ನಿಮ್ಮ ಪ್ರೀತಿಗೆ ನಾನು ಚಿರರುಣಿ.. ಆಲ್ ಈಸ್ ವೆಲ್ ಎಂದು ಪೋಸ್ಟ್ ಮಾಡಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ