ಜಾಗೀರ್ದಾರ್*

2021 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಹಿರಿಯ ನಿರ್ಮಾಣ ನಿರ್ವಾಹಕ ಶಿವಕುಮಾರ್ ಎಸ್(ಶಿವಾರ್ಜುನ್) "ಪೊಗರು" ಚಿತ್ರಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.

pogaru

40 ವರ್ಷಗಳ ಹಿಂದೆ "ಸಂಸಾರದ ಗುಟ್ಟು", "ಪ್ರೇಮ ಪರ್ವ" ಮುಂತಾದ ಚಿತ್ರಗಳಲ್ಲಿ ನಾಟನಾಗಿ ಕಾಣಿಸಿಕೊಂಡಿದ್ದ ಶಿವಾರ್ಜುನ್ ಅವರು ನಂತರ ಗೌರಿಶಂಕರ್, ಎಸ್ ರಾಮಚಂದ್ರ, ಮಧುಸೂದನ್, ಸುಂದರನಾಥ ಸುವರ್ಣ ಅವರಂತಹ ಹಿರಿಯ ಛಾಯಾಗ್ರಾಹಕರ ಬಳಿ ಸಹಾಯಕ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಆನಂತರ ನಿರ್ಮಾಣ ನಿರ್ವಾಹಕರಾಗಿ ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಗಳಾದ ವಜ್ರೇಶ್ವರಿ, ಈಶ್ವರಿ, ರಾಮು ಫಿಲಂಸ್, ಕೆ.ಸಿ.ಎನ್ ಮೂವೀಸ್ ಹಾಗೂ ಅರ್ಜುನ್ ಸರ್ಜಾ ಅವರ ಶ್ರೀರಾಮ ಫಿಲಂಸ್ ನಿರ್ಮಾಣದ ಚಿತ್ರಗಳಿಗೆ ಶಿವಾರ್ಜುನ್ ನಿರ್ಮಾಣ ನಿರ್ವಾಹಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೆ ಹೆಸರಾಂತ ನಿರ್ದೇಶಕ ರಾಜಮೌಳಿ ಅವರ ಸಿಂಹಾದ್ರಿ,‌ ವಿಕ್ರಮಾರ್ಕುಡು, ಸ್ಟೂಡೆಂಟ್ ನಂ ೧, ಛತ್ರಪತಿ ಚಿತ್ರಗಳಿಗೆ ಹಾಗೂ ತೆಲುಗು, ತಮಿಳಿನ ಸೂಪರ್ ಹಿಟ್ ಚಿತ್ರಗಳಿಗೂ ನಿರ್ಮಾಣ ನಿರ್ವಾಹಕರಾಗಿ(ಕರ್ನಾಟಕದಲ್ಲಿ) ಕೆಲಸ ಮಾಡಿದ್ದಾರೆ. ಕನ್ನಡದ ಸುಮಾರು 600 ಚಿತ್ರಗಳಿಗೆ ಹಾಗೂ ಪರಭಾಷೆಯ ಸುಮಾರು 150ಕ್ಕೂ ಹೆಚ್ಚು ಚಿತ್ರಗಳಿಗೆ ನಿರ್ಮಾಣ ನಿರ್ವಾಹಕರಾಗಿ ಕೆಲಸ ಮಾಡಿರುವ ಶಿವಾರ್ಜುನ್, ಚಿರಂಜೀವಿ ಸರ್ಜಾ ಅಭಿನಯದ 'ಶಿವಾರ್ಜುನ' ಚಿತ್ರವನ್ನು ನಿರ್ಮಾಣ ಕೂಡ ಮಾಡಿದ್ದಾರೆ. "ಲಾಕಪ್ ಡೆತ್", " ಸಿಂಹದ ಮರಿ", "ಎ ಕೆ 47", "ಮೋಜುಗಾರ ಸೊಗಸುಗಾರ" ಹೀಗೆ ಕನ್ನಡದ ಅನೇಕ ಸೂಪರ್ ಹಿಟ್ ಚಿತ್ರಗಳಿಗೆ ನಿರ್ಮಾಣ ನಿರ್ವಹಣೆ ಮಾಡಿರುವ ಶಿವಾರ್ಜುನ್ ಅವರಿಗೆ ಪ್ರಸ್ತುತ 2021 ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಧ್ರುವ ಸರ್ಜಾ ಅಭಿನಯದ "ಪೊಗರು" ಚಿತ್ರದ ನಿರ್ಮಾಣ ನಿರ್ವಹಣೆಗಾಗಿ ರಾಜ್ಯ ಪ್ರಶಸ್ತಿ ಬಂದಿದೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ