ರಾಘವೇಂದ್ರ ಅಡಿಗ ಎಚ್ಚೆನ್.

ಇಂದು ಬಂಡೆ ಮಹಾಕಾಳಮ್ಮನ ದೇವಾಲಯದಲ್ಲಿ ಶ್ರೀ ಮುರುಳಿ ಅಭಿನಯದ, ಪುನೀತ್ ರುದ್ರನಾಗ್ ಅವರ ನಿರ್ದೇಶನದ “ಉಗ್ರಾಯುಧಮ್” ಚಿತ್ರದ ಮುಹೂರ್ತ ನೆರವೇರಿತು..  ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಪುನೀತ್ ರುದ್ರನಾಗ್ ನಿರ್ದೇಶನದ ಆ್ಯಕ್ಷನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಸಿನಿಮಾವನ್ನು ಜಯರಾಮ್ ದೇವ ಸಮುದ್ರ ಅವರು ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ. ಚಿತ್ರಕ್ಕೆ ಶ್ರೀಮುರಳಿ ಅವರ ತಂದೆ ಹಿರಿಯ ನಿರ್ಮಾಪಕರಾದ ಎಸ್.ಎ. ಚಿನ್ನೇಗೌಡರು ಕ್ಲಾಪ್ ಮಾಡಿದ್ದಾರೆ. ಅಲ್ಲದೆ ಎಸ್. ಎ. ಚಿನ್ನೇಗೌಡರು ಹಾಗೂ  ಹಿರಿಯ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಜೊತೆಯಾಗಿ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದರು.

ugra1

ಆ ನಂತರ ಚಿತ್ರತಂಡ ಮಾದ್ಯಮದವರೊಡನೆ ಮಾತನಾಡಿ ಸಿನಿಮಾ ಕುರಿತು ವಿವರ ಹಂಚಿಕೊಂಡಿತು.  ಈ ವೇಳೆ ನಿರ್ದೇಶಕ ಪುನೀತ್ ರುದ್ರನಾಗ್ ಮಾತನಾಡಿ “‘ಉಗ್ರಾಯುಧಮ್’  ಚಿತ್ರ ಮಾಡೋದಕ್ಕೆ ಡಾ. ರಾಜಕುಮಾರ್ ಸ್ಫೂರ್ತಿ. ಇದು ಸುಮಾರು 700 ವರ್ಷಗಳ ಹಿಂದಿನ ಕಥೆ; ಸಕಲೇಶಪುರದ 148 ಎಕರೆ ಪ್ರದೇಶದಲ್ಲಿ ಚಿತ್ರೀಕರಣ ನಡೆಯಲಿದೆ. ” ಎಂದರು.

ugra2

ಇಷ್ತೇ ಅಲ್ಲದೆ “ಇದೊಂದು ಪೀರಿಯಾಡಿಕ್‍ ಚಿತ್ರ; ನನಗೆ ಮುಂಚಿನಿಂದಲೂ ಇಂಥಾ ಸಿನಿಮಾಗಳಲ್ಲಿ ಇದೆ, ‘ಉಗ್ರಾಯುಧಮ್’ ಎಂದು ಹೆಸರಿಡಲು ಸಹ ಕಾರಣವಿದೆ. ಅದನ್ನು ನೀವು ಚಿತ್ರ ನೋಡಿದಾಗ ತಿಳಿಯುತ್ತೀರಿ. ನವೆಂಬರ್‍ ತಿಂಗಳಲ್ಲಿ ಪ್ರಾರಂಭಿಸಿ, ಮಾರ್ಚ್‍ ತಿಂಗಳ ಹೊತ್ತಿಗೆ ಚಿತ್ರ ಮುಗಿಸಬೇಕೆಂದು ಗುರಿ ಹಾಕಿಕೊಂಡಿದ್ದೇನೆ.” ಎಂದರು.

ugra3

ನಟ ಶ್ರೀಮುರಳಿ ಮಾತನಾಡಿ “ಈಗಾಗಲೇ ಬಘೀರ ನಂತರ ಬಹಳ ತಡವಾಗಿದೆ ಎಂದು  ತುಂಬಾ ಜನ ಬೈಯುತ್ತಿದ್ದಾರೆ. ಈಗ ಎರಡು ಸಿನಿಮಾಗಳು ಪ್ರಾರಂಭವಾಗಿದೆ. ಈ ಪಾತ್ರ ಮಾಡಲೇಬೇಕೆಂಬ ಆಸೆ ಇತ್ತು; ಅದೀಗ ಕಾಲ ಕೂಡಿ ಬಂದಿದೆ  ಇದು 700 ವರ್ಷಗಳ ಹಿಂದೆ ನಡೆಯುವ ಕಥೆ, ಆಗ ಹೇಗೆ ಯುದ್ಧ ಮಾಡ್ತಿದ್ದರು ಎಂದು ಯಾರಿಗೂ ಗೊತ್ತಿಲ್ಲ, ಹೀಗೆ ಮಾಡಬೇಕೆಂಬ ನಿಯಮವೂ ಇಲ್ಲ. ಸಿನಿಮಾ ಕಲಾವಿದರಾಗಿ ನಮಗೆ ಇದು ವರದಾನ. ಬಘೀರ ನಂತರದಲ್ಲಿ ಬಿಡುಗಡೆ ಆಗುತ್ತಿರುವ ನನ್ನ ಚಿತ್ರ’ಉಗ್ರಾಯುಧಮ್’ ಎಂದು ಹೇಳಿದ್ದಾರೆ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ