ರಾಘವೇಂದ್ರ ಅಡಿಗ ಎಚ್ಚೆನ್.

ಬಿಗ್ಬಾಸ್ ಕನ್ನಡ ಸೀಸನ್ 12ರ  ಪ್ರಾರಂಭವಾಗಿ ಇಂದಿಗೆ (ಅಕ್ಟೋಬರ್ 05) ಸರಿಯಾಗಿ ಒಂದು ವಾರವಾಗಿದೆ. ಬಿಗ್ಬಾಸ್ ಕನ್ನಡ ಪ್ರಾರಂಭವಾದ ಮೊದಲ 24 ಗಂಟೆಗಳಲ್ಲಿಯೇ ಒಬ್ಬರನ್ನು ಎಲಿಮಿನೇಟ್ ಮಾಡಿ ಶಾಕ್ ನೀಡಲಾಗಿತ್ತು. ಸ್ಪರ್ಧಿಯಾಗಿ ಒಳಗೆ ಹೋಗಿದ್ದ ರಕ್ಷಿತಾ ಶೆಟ್ಟಿ ಮೊದಲ ದಿನವೇ ಹೊರಗೆ ಹೋಗಿದ್ದರು. ಆದರೆ ಇದೀಗ ಅವರು ಮನೆಗೆ ಬಂದಿದ್ದಾರೆ. ಆದರೆ ಇದೀಗ ಈ ಸೀಸನ್ನ ಮೊದಲ ಎಲಿಮಿನೇಷನ್ ನಡೆದಿದೆ. ಅದರಲ್ಲಿಯೂ ಮೊದಲ ವಾರವೇ ಇಬ್ಬರನ್ನು ಮನೆಯಿಂದ ಹೊರಗೆ ಹಾಕಲಾಗಿದೆ.

bigboss 1

ಸಾಮಾನ್ಯವಾಗಿ ಬಿಗ್ಬಾಸ್ ಸೀಸನ್ ಪ್ರಾರಂಭವಾಗಿ ಹಲವು ವಾರಗಳ ಬಳಿಕ ಫಿನಾಲೆ ವಾರ ಹತ್ತಿರವಿದ್ದಾಗ ಬಿಗ್ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ಮಾಡುವುದು ಬಿಗ್ಬಾಸ್ನಲ್ಲಿ ವಾಡಿಕೆ. ಆದರೆ ಈ ಬಾರಿ ಮೊದಲ ವಾರವೇ ಬಿಗ್ಬಾಸ್ ಮನೆಯಿಂದ ಇಬ್ಬರನ್ನು ಹೊರಗೆ ಹಾಕಲಾಗಿದೆ. ಈ ಸೀಸನ್ ಹಿಂದಿನ ಸೀಸನ್ಗಳ ರೀತಿ ಅಲ್ಲ ಎಂದು ಸುದೀಪ್ ಹೇಳಿದ್ದರು ಅದರಂತೆ ಮೊದಲ ವಾರವೇ ಡಬಲ್ ಎಲಿಮಿನೇಷನ್ ಮಾಡಿ ಪ್ರೇಕ್ಷಕರಿಗೆ ಶಾಕ್ ನೀಡಲಾಗಿದೆ.

bigboss 2

ಮೊದಲ ವಾರವೇ ಸಾಕಷ್ಟು ಮಂದಿ ನಾಮಿನೇಟ್ ಆಗಿದ್ದರು. ನಿನ್ನೆ ಮಲ್ಲಮ್ಮ ಸೇರಿದಂತೆ ಕೆಲವರು ಸೇಫ್ ಆಗಿದ್ದರು. ಇಂದಿನ ಎಪಿಸೋಡ್ನಲ್ಲಿ ಗಿಲ್ಲಿ, ಕಾವ್ಯಾ, ಧನುಶ್ ಇನ್ನೂ ಕೆಲವರು ಆರಂಭದಲ್ಲಿಯೇ ಸೇಫ್ ಆದರು. ಕೊನೆಯದಾಗಿ ಜಂಟಿ ಟೀಮಿನ ಅಮಿತ್ ಮತ್ತು ಕರಿಬಸವ ಹಾಗೂ ಅಭಿಷೇಕ್ ಮತ್ತು ಅಶ್ವಿನಿ ಉಳಿದುಕೊಂಡರು. ಈ ಜಂಟಿ ಜೋಡಿಯಲ್ಲಿ ಮನೆಯಿಂದ ಹೊರಬಂದಿದ್ದು ಅಮಿತ್ ಮತ್ತು ಕರಿಬಸಪ್ಪ ಅವರು.
ಇಬ್ಬರ ಎಲಿಮಿನೇಷನ್ ಘೋಷಣೆ ಮಾಡಿದ ಸುದೀಪ್, ಇಬ್ಬರೂ ಕಳಪೆ ಆಗಿ ಆಡಿದಿರಿ ಎಂದೇನೂ ಇಲ್ಲ. ಒಬ್ಬರ ಆಟ ಇನ್ನೊಬ್ಬರ ಮೇಲೆ ಪ್ರಭಾವ ಬೀರಿದೆ. ಇಬ್ಬರೂ ಜೋಡಿ ಆಗಿದ್ದೇ ಇಬ್ಬರೂ ಒಟ್ಟಿಗೆ ಹೊರಗೆ ಬರಲು ಕಾರಣ ಆಯ್ತೇನೋ ಎಂದರು. ಅಮಿತ್ ಹೊರಗೆ ಬಂದ ಬಳಿಕವೂ ಸಹ ಸುದೀಪ್ ಅವರು, ‘ನಿಮ್ಮಲ್ಲಿ ಸಾಕಷ್ಟು ಪ್ರತಿಭೆ ಇದೆ. ಯೋಚನೆ ಮಾಡುವ ಶಕ್ತಿ ಇದೆ. ಹೊರಗೆ ಸಹ ನಿಮ್ಮ ಕೆಲಸವನ್ನು ನಾವು ಗಮನಿಸಿದ್ದೇನೆ. ನಿಮ್ಮ ಬದುಕಿನ ಪಯಣವನ್ನು ನೀವು ಮುಂದುವರೆಸಿ’ ಎಂದು ಶುಭ ಹಾರೈಸಿದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ