ಸಾವಿರಾರು ಅಡಿಗಳ ಎತ್ತರದಲ್ಲಿ ಎಲ್ಲಾ ಕಡೆ ಐಸ್‌ ದಟ್ಟ ಹರಡಿರುವಾಗ, ಕೊರೆಯುವ ತಾಪಮಾನದಲ್ಲಿ ಒಬ್ಬಂಟಿ ಸೈನಿಕ ನಮ್ಮ ದೇಶದ ಗಡಿಕಾಯಬಲ್ಲ, ತನ್ನ ಸಹಸೈನಿಕನ ಜೊತೆ ಮಾರನೇ ದಿನದ ಸೂರ್ಯೋದಯ ಕಾಣಬಲ್ಲೆನೋ ಇಲ್ಲವೋ ತಿಳಿಯದೆ ದುಡಿಯುತ್ತಿರುತ್ತಾನೆ. ಇಂಥ ಕಠಿಣ ಪರಿಸ್ಥಿತಿಯಲ್ಲಿ ನಮ್ಮ ದೇಶದ ಗಡಿ ಬಳಿ ವಾಸಿಸುವ ಸೈನಿಕರು, ದೇಶ ರಕ್ಷಣೆಗಾಗಿ ತಮ್ಮ ಜೀವವನ್ನೇ ಪಣಕ್ಕಿಡುತ್ತಾರೆ. ನಗರವಾಸಿಗಳಿಗೆ ಇದು ಕನಸು ಮನಸ್ಸಿನಲ್ಲೂ ತಿಳಿಯುವದಿಲ್ಲ. ಇಂಥ ಅನೇಕ ಬಿಕ್ಕಟ್ಟುಗಳನ್ನು ಪ್ರತ್ಯಕ್ಷ ಎದುರಿಸಿ, ಗಡಿ ಪ್ರದೇಶಗಳಾದ ನೌಸೀರಾ, ಪುಂಜ್‌, ರಾಜೋರಿ, ಸೂರನ್‌ ಕೋಟ್‌, ಪಠಾಣ್‌ ಕೋಟ್‌ ಗಳಲ್ಲಿ ದುಡಿದಿರುವ ಮೇಜರ್‌ ಡಾ. ಆಶ್ಲೇಷಾ ತಾಡೆ ಕೇಲ್ಕರ್‌ ಗಡಿ ಬಳಿ ದುಡಿದು ರಿಟೈರ್‌ ಆಗಿದ್ದಾರೆ. ರಾಯಘಡದ, ಪಾಲಘರ್‌ ನ ಆದಿವಾಸಿ ಕ್ಷೇತ್ರಗಳಲ್ಲಿ ಈಗಲೂ ತಮ್ಮ ಸಂಸ್ಥೆ `ಆನಂದಿ ಫೌಂಡೇಶನ್‌’ ಮೂಲಕ ಸಕ್ರಿಯ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ಅಪೌಷ್ಟಿಕತೆಯ ನಿವಾರಣೆ ಈಕೆಯ ಮುಖ್ಯ ಗುರಿ, ಅನೇಕ ಪ್ರಶಸ್ತಿ ಪುರಸ್ಕಾರ ಸಂದಿವೆ.

ಇವರ ಈ ಸೇವಾಕಾರ್ಯಕ್ಕೆ ಪತಿ ಆದಿತ್ಯ ಕೇಲ್ಕರ್‌, ಮಗಳು ಆನಂದಿತಾ ಬಹಳ ನೆರವಾಗುತ್ತದೆ. ಸಾಮಾಜಿಕ ಬದಲಾವಣೆಗಳ ಕುರಿತಾಗಿ ಈಕೆ ಬಹು ಒತ್ತಾಯಿಸುತ್ತಾರೆ. ನಿಯಮಿತ ರೂಪದಲ್ಲಿ ಮಹಿಳಾಮಕ್ಕಳ ಕಲ್ಯಾಣಕ್ಕಾಗಿ ದುಡಿಯುತ್ತಿದ್ದಾರೆ.

ಪ್ರೇರಣೆಯ ಮೂಲ

ಈಕೆ ತಮ್ಮ ಕುಟುಂಬದ ಏಕೈಕ ಡಾಕ್ಟರ್‌, ಸೇನೆಗೆ ಸೇರಿದ ವೊದಲ ಮಹಿಳೆ. ಸದ್ಯ ಕೋಕಣ್‌ ಜಿಲ್ಲಾ ನಿವಾಸಿ ಡಾ. ಆಶ್ಲೇಷಾ ನಿವೃತ್ತಿ ನಂತರ, ಮಹಾತ್ಮಗಾಂಧಿ ಮಿಶನ್‌ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಜನಔಷಧ ವೈದ್ಯಕ ಶಾಸ್ತ್ರದ ಕಮ್ಯುನಿಟಿಯ ಅಸೋಸಿಯೇಟ್‌ ಅಧ್ಯಾಪಕಿಯೂ ಹೌದು.

ಆಕೆ ಹೇಳುತ್ತಾರೆ, ನಾನು ಮರಾಠಿ ಮೀಡಿಯಂನಲ್ಲಿ ಕಲಿತು ಬಂದಳು. ಅಲ್ಲಿದ್ದ ನನ್ನ ಸೀನಿಯರ್‌ ವಿನಾಯಕ್‌ ಗೋರೆ ಸೇನೆ ಸೇರಿದ ಮೇಲೆ, ಅವರಿಂದ ಬಹಳ ಪ್ರೇರಣೆ ಪಡೆದೆ. ಕಾರ್ಗಿಲ್ ‌ನಲ್ಲಿ ಅವರು ಹುತಾತ್ಮರಾದಾಗ, ಅವರ ತಾಯಿ ನಮ್ಮ ಶಾಲೆಯಲ್ಲಿ ಇನ್ನೂ ಕಲಿಸುತ್ತಿದ್ದರು. 16ರ ಹರೆಯದಲ್ಲಿ ಇದನ್ನು ಗಮನಿಸಿ ಬಹಳ ಭಾವುಕಳಾಗಿದ್ದೆ. ಬಾಲ್ಯದಿಂದಲೇ ಕಲಿಕೆಯಲ್ಲಿ ಮುಂದಿದ್ದ ನಾನು, ಮುಂದೆ ಮೆಡಿಕಲ್ ಸೇರಿದೆ. ಹೆತ್ತವರು ಬಹಳ ಪ್ರೋತ್ಸಾಹ ನೀಡುತ್ತಿದ್ದರು. ಒಬ್ಬಳೇ ಮಗಳಾದರೂ ಸೇನೆಗೆ ಸೇರಲು ಉತ್ತೇಜಿಸಿದರು. 2009ರಲ್ಲಿ ಕಮೀಶನಿಂಗ್‌ ಮುಗಿಸಿ, ಅಧಿಕಾರಿಯಾಗಿ, ಹೆಗಲಿಗೆ ಸ್ಟಾರ್‌ ಸಿಗಿಸಿಕೊಂಡು ಬಂದಾಗ,  ಪರಿಚಿತರೆಲ್ಲ ಬಹಳ ಸಂಭ್ರಮಿಸಿದರು.

ವಿಭಿನ್ನ ಅನುಭವಗಳು

26ರ ಹರೆಯದಲ್ಲೇ ನಾನು ಮುಂಬೈನಿಂದ ಕಾಶ್ಮೀರಕ್ಕೆ ಪೋಸ್ಟಿಂಗ್‌ ಆದೆ. ಎಲ್ಲೆಲ್ಲೂ ಹಿಮದ ರಾಶಿ ಕಂಡು ಒಮ್ಮೊಮ್ಮೆ ಬೆಚ್ಚಿ ಬೀಳುತ್ತಿದ್ದೆ. ಗಡಿ ಬಳಿಯ ಆ ಜಾಗ ಕೌಂಟರ್‌ ಟೆರರಿಸಂಗೆ ಖ್ಯಾತಿ, ಇದಂತೂ ನಿರ್ಮಾನುಷ ಪ್ರದೇಶ, ಗಡಿಯ ಅಂತಿಮ ರೇಖೆ. ದೂರ ದೂರದವರೆಗೆ ಏನೂ ಇಲ್ಲದೆ ಬರೀ ಮುಳ್ಳುಪೊದೆಗಳ ರಾಶಿ ಮಾತ್ರ ಇತ್ತು. ಅಲ್ಲಿ ನಿಂತ ಯೋಧರು ದಿನವಿಡೀ ದೇಶದ ರಕ್ಷಣೆಗೆ ಕಟಿಬದ್ಧರು.

ಇಂಥ ಸುಮಾರು 67 ಸಾವಿರ ಸೈನಿಕರ ಮಧ್ಯೆ ಡಾ. ಆಶ್ಲೇಷಾ ಎಂದೂ ಯಾವುದಕ್ಕೂ ಅಂಜದೆ, ತಾವೇ ಮುಂದಾಳಾಗಿ ನೇತೃತ್ವ ವಹಿಸಿದರು. ಅವರೆಲ್ಲರೂ ನನ್ನ ಒಡಹುಟ್ಟಿದವರಂತೆ ಸದಾ ನನ್ನ ಮಾನಪ್ರಾಣಗಳ ರಕ್ಷಣೆಗೆ ಗುಂಡೇಟಿಗೆ ಎದೆಯೊಡ್ಡಿದ್ದಾರೆ! ಅಲ್ಲಿ ಫಿಸಿಕಲ್ ಟ್ರೇನಿಂಗ್‌ ಜೊತೆ ನಾನೂ ಶಸ್ತ್ರಾಸ್ತ್ರ ಪ್ರಯೋಗದ ತರಬೇತಿ ಪಡೆದಿದ್ದೆ, ಎಮರ್ಜೆನ್ಸಿ ಎದುರಿಸಲು ಸದಾ ಸಿದ್ಧಳಾಗಿದ್ದೆ. ವೈದ್ಯಳಾದರೂ ನಾನೂ ಸೇನೆಯ ಭಾಗವಾದ್ದರಿಂದ, ಭಯೋತ್ಪಾದಕರನ್ನು ಎದುರಿಸಲು ಸನ್ನದ್ಧಳಾಗಿರುತ್ತಿದ್ದೆ, ಅಂಥವರಿಗೂ ಚಿಕಿತ್ಸೆ ನೀಡಿದ್ದೇನೆ!

ಸದಾ ಸನ್ನದ್ಧಳಾಗಿರಬೇಕು

ಅಲ್ಲಿ ಭಯೋತ್ಪಾದಕರ ದುರಾಕ್ರಮಣ ಯಾವಾಗ ಬೇಕಾದರೂ ಆಗುತ್ತಿತ್ತು. ಹೀಗಾಗಿ ನಮ್ಮ ಸೈನಿಕರ ಗುಂಡೇಟಿನ ಗಾಯಗಳಿಗೆ ಚಿಕಿತ್ಸೆ ನೀಡಲು ಹಗಲು ರಾತ್ರಿಯ ಪರಿವೆ ಇಲ್ಲದೆ ದುಡಿಯುತ್ತಿದ್ದೆ. ಟಿವಿ ನ್ಯೂಸ್‌ ನಲ್ಲಿ ಸೈನಿಕರು ಗುಂಡೇಟಿಗೆ ಬಲಿ ಎಂದು ಕೇವಲ 110% ತೋರಿಸುತ್ತಿದ್ದರು. ಕಮಾಂಡಿಂಗ್‌ ಆಫೀಸರ್‌ ಆಗಿ ನಾನು ಬೆಳಗ್ಗೆ ಎಲ್ಲರ ಜೊತೆ ಉಪಾಹಾರ ಸೇವಿಸಿದರೂ, ಅಂದು ರಾತ್ರಿಯೇ ಅವರ ಎಷ್ಟೋ ಹೆಣ ನೋಡುತ್ತಿದ್ದೆ….. ಮರುದಿನ ಮತ್ತೆ ಎಲ್ಲರೂ ಒಟ್ಟಾಗಿ ಊಟ ಮಾಡುತ್ತೇವೆ ಎಂಬ ಗ್ಯಾರಂಟಿಯೇ ಇರುತ್ತಿರಲಿಲ್ಲ. ಕಣ್ಣಾರೆ ಇದನ್ನೆಲ್ಲ ಕಂಡು, ದೇಶಸೇವೆಗೆ ಅವಕಾಶ ಸಿಕ್ಕಿದ್ದಕ್ಕೆ ಬಹಳ ಹೆಮ್ಮೆ ಪಡುತ್ತೇನೆ.

ಸಂತೃಪ್ತಿಯೇ ಸುಖ

ತಮ್ಮ ಖುಷಿಯ ಕ್ಷಣ ನೆನಪಿಸಿಕೊಳ್ಳುತ್ತಾ  ಈಕೆ ಹೇಳುತ್ತಾರೆ, ಒಮ್ಮೆ ಒಬ್ಬ ಸೈನಿಕ ಸಿವಿಲ್ ‌ಗಾಡಿಗೆ ಅಪಘಾತ ಮಾಡಿಕೊಂಡಾಗ, ನಮ್ಮವರೆಲ್ಲ ಬಹಳ ದುರ್ದೆಶಿಗೆ ತಿರುಗಿದ್ದರು. ಅವರಲ್ಲಿ ಒಬ್ಬ ಗರ್ಭಿಣಿ ಮೇಲಿನಿಂದ ಕೆಳಗೆ ಪ್ರಯಾಣಿಸುತ್ತಿದ್ದಳು. ಈ ಜಂಜಾಟದ ಮಧ್ಯೆ ಅಲ್ಲೇ ಅವಳಿಗೆ ಲೇಬರ್‌ ಪೆಯ್ನ್ ಶುರುವಾಯ್ತು. ಸೈನಿಕರ ಶುಶ್ರೂಷೆ ಮಾಡುತ್ತಲೇ ಅಲ್ಲೇ ಟ್ರಕ್‌ ನಲ್ಲಿ ಅವಳಿಗೆ ಪ್ರಸವ ಮಾಡಿಸಿದೆ, ಹೆಣ್ಣು ಮಗು ಹುಟ್ಟಿತು. ಅಂಥ ಅಪಾಯದ ಮಧ್ಯೆಯೂ ಒಂದು ಹೊಸ ಜೀವ ದೇಶಕ್ಕೆ ಬಂದಿತ್ತು. ನನಗೆ ಧನ್ಯತೆಯ ಭಾವ ಮೂಡಿತು. ಅಲ್ಲಿನ ಬೆಟ್ಟ ಗುಡ್ಡಗಳಲ್ಲಿ 12 ಸಾವಿರ ಗ್ರಾಮೀಣರು ವಾಸಿಸುತ್ತಾರೆ. ಆ ಹೆಂಗಸರು ಚಿಕಿತ್ಸೆಗಾಗಿ ಎಂದೂ ಗಂಡಸರ ಬಳಿ ಹೋಗುವುದೇ ಇಲ್ಲ. ಹೀಗಾಗಿ ಗುಡ್ಡಗಾಡು ಪ್ರದೇಶದಲ್ಲಿ ನೂಲು ಮಂಚದ ಮೇಲೆ ಹೊತ್ತು ಪ್ರಸವಕ್ಕಾಗಿ ಗರ್ಭಿಣಿಯರನ್ನು ನನ್ನ ಬಳಿ ಕರೆ ತರುತ್ತಿದ್ದರು. ಜನ ತಮ್ಮ ದೃಷ್ಟಿಕೋನ ಬದಲಾಯಿಸಿಕೊಳ್ಳಬಾರದೇ ಎಂದು ಎಷ್ಟೋ ಸಲ ದುಃಖಿಸಿದ್ದೇನೆ, ಎನ್ನುತ್ತಾರೆ.

ಪ್ರತಿನಿಧಿ 

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ