ರಾಘವೇಂದ್ರ ಅಡಿಗ ಎಚ್ಚೆನ್.

‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗಿ ಎರಡು ವಾರಗಳಾಗಿದ್ದು ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಎರಡು ವಾರದ ಬಳಿಕವೂ ಚಿತ್ರಮಂದಿರಗಳ ಮುಂದೆ ಹೌಸ್ಫುಲ್ ಬೋರ್ಡುಗಳು ಬೀಳುತ್ತಿವೆ. ಸಿನಿಮಾದ ಯಶಸ್ಸಿನಿಂದ ಖುಷಿಯಾಗಿರುವ ರಿಷಬ್ ಶೆಟ್ಟಿ ಇಂದು ಮೈಸೂರಿಗೆ ಭೇಟಿ ನೀಡಿದ್ದರು. ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಅವರು ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಎಲ್ಲವೂ ಖುಷಿಯಾಗಿದೆ. ನಾಡಿನ ಜನತೆ ಹಾಗೂ ದೇಶದಾದ್ಯಂತ ತುಂಬಾ ಅದ್ಭುತವಾದ ಯಶಸ್ಸನ್ನು ಕೊಟ್ಟಿದ್ದಾರೆ. ಯಾವತ್ತೋ ಹೇಳಿದ್ದೇ ಈ ಸಿನಿಮಾದ ಯಶಸ್ಸು ಮೊದಲು ಕನ್ನಡಿಗರಿಗೆ ಸಲ್ಲಬೇಕು.
ಅದೇ ರೀತಿ ಈ ಬಾರಿಯೂ ಇನ್ನೊಂದು ಚಾಪ್ಟರ್ ಜನರಿಗೆ ತಲುಪಿರುವ ರೀತಿ ಹಾಗೂ ಅವರು ಒಪ್ಪಿಕೊಂಡಿರುವ ರೀತಿ ತುಂಬಾ ಖುಷಿಯಾಗಿದೆ ಎಂದು ತಿಳಿಸಿದರು.
ಇನ್ನೂಸಿನಿಮಾದಲ್ಲಿ ಚಾವುಂಡಿ ದೈವದ ಆಶೀರ್ವಾದ ಇರೋದಕ್ಕೆ ಸಿನಿಮಾ ಒಳ್ಳೆ ರೀತಿ ಆಗಿದೆ. ದೈವವನ್ನು ನಾನು ನಂಬುತ್ತೇನೆ ಆರಾಧನೆ ಮಾಡುತ್ತೇನೆ. ನಾನು ಅದನ್ನು ತೋರಿಸುವಾಗ ಎಲ್ಲರ ಹಿರಿಯರ ಮಾರ್ಗದರ್ಶನ ತೆಗೆದುಕೊಂಡಿದ್ದೇನೆ. ನನಗೂ ದೈವಕ್ಕೂ ಒಂದು ಸಂಬಂಧ ಇದೆ. ಇಂತಹ ದೊಡ್ಡ ಯಶಸ್ಸು ಸಿಕ್ಕಿರೋದು ಖುಷಿ ಎಂದಿದ್ದಾರೆ.
ಚಾಮುಂಡಿ ಬೆಟ್ಟದಿಂದ ನಂಜನಗೂಡಿಗೆ ಭೇಟಿ ನೀಡಿ ಶ್ರೀಕಂಠೇಶ್ವರ ಸ್ವಾಮಿ ದರ್ಶನ ಪಡೆದು ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಸಂಜೆ 4ಗಂಟೆಗೆ ಮೈಸೂರಿನ ಗಾಯತ್ರಿ ಚಿತ್ರಮಂದಿರಕ್ಕೆ ಭೇಟಿ ನೀಡಲಿದ್ದಾರೆ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ