ಗಂಡಸರಿಗೆ ಸರಿಸಮನಾಗಿ ಸ್ವಾತಂತ್ರ್ಯ ಬೇಕೇ?
4ನೇ ಜೂನ್, 2024ರಂದು ಬಂದ ಚುನಾವಣೆಯ ಬೆಚ್ಚಿಬೀಳಿಸುವ ಪರಿಣಾಮಗಳಿಂದ ಭಕ್ತ ಸವರ್ಣೀಯರು, ಮೇಲು ಜಾತಿಯ ಮಹಿಳೆಯರು ಖುಷಿಯಿಂದ ಸಂಭ್ರಮ ಆಚರಿಸಬೇಕಾದ್ದೇ! ಇವರುಗಳು ಗಂಟೆಗಟ್ಟಲೇ ಪೂಜೆ ವ್ರತಗಳಲ್ಲಿ ಕಳೆಯುತ್ತಾ, ಉಪವಾಸ ಮಾಡುತ್ತಾ, ಭಜನೆ ಕೀರ್ತನೆಗಳಲ್ಲಿ ಸಮಯ ಕಳೆಯುತ್ತಾ, ಸಮಯ ಸಂದರ್ಭವಿಲ್ಲದೆ ಬೀದಿ ಬೀದಿಗಳಲ್ಲಿ ತಲೆ ಮೇಲೆ ಕಲಶ ಹೊತ್ತು ಬಿಸಿಲು, ಮಳೆ ಎನ್ನದೆ ದೇವರ ಸೇವೆಗೆ ತೊಡಗುತ್ತಾರೆ, ಪತಿಯೇ ಪರಮೇಶ್ವರ ಎಂದು ತಲೆ ಮೇಲೆ ಸೆರಗು ಹೊದೆಯುತ್ತಾರೆ. ಖುಷಿಗೆ ಮತ್ತೊಂದು ಕಾರಣ, ಇವರ ಮನಸ್ಸಿಗೆ ಹತ್ತಿರವಾಗಿದ್ದ, ಸದಾ ಸಾಂಪ್ರದಾಯಿಕ ಸರಪಣಿಗಳಿಂದ ಬಂಧಿತರಾಗಿದ್ದ ಜನಕನ ಕಾಲ ಬುಡದ ನೆಲ ಸರಿದು ಹೋಗಿತ್ತು.
ಈ ಹೆಂಗಸರು ತಮ್ಮ ಹೆಚ್ಚಿನ ಸಮಯ ಪೂಜೆ ಪುನಸ್ಕಾರಗಳಲ್ಲಿ ಕಳೆಯಲು ಅವಕಾಶವಾಯ್ತು, ಭಗವಂತನ ದರ್ಶನಕ್ಕೆ ದಾರಿ ಆಯ್ತು, ದೇವಿ ಭಜನೆಗೆ ದಾರಿ ಆಯ್ತು, ಪ್ರವಚನಗಳಲ್ಲಿ ಗಂಟೆಗಟ್ಟಲೆ ಕುಳಿತು ಸ್ವಾಮೀಜಿಯ ಪಾದಕ್ಕೆ ಮಣಿಯಲು ಸುವರ್ಣಾವಕಾಶ ಎಂದೆಲ್ಲ ಸಂಭ್ರಮಿಸುವಂತಾಗಿದೆ. ಅಸಲಿಗೆ ಮಾನಸಿಕ ಗುಲಾಮಗಿರಿಯ ಕಾರಣ ಹೆಂಗಸರು ಹೀಗಾಡುತ್ತಾರೆ. ಇದು ಎಲ್ಲಾ ಎಸ್ಟಾಬ್ಲಿಷ್ಡ್ ಧರ್ಮಗಳಲ್ಲೂ ನಡೆಯುತ್ತದೆ.
ಯಾವ ಪ್ರಚಾರತಂತ್ರದಿಂದ ಬಿಜೆಪಿ ದೇಶವಿಡೀ ತನ್ನ ಹಿಡಿತ ಸಾಧಿಸಿತ್ತೋ, ಅದಕ್ಕಿಂತ ಹೆಚ್ಚಿನ ಕಪಿಮುಷ್ಟಿ ಪಕ್ಷ ನಡೆಸುವ ಪೀಳಿಗೆಗಳು ಅನಾದಿ ಕಾಲದಿಂದ ಸವರ್ಣೀಯ ಹೆಂಗಸರನ್ನು ಹಿಡಿದಿಟ್ಟಿವೆ. ರಾಮ ಮಂದಿರದ ಹೆಸರಿನಲ್ಲಿ ಬಿಜೆಪಿ ವಿಧಾಯಕರು, ಸಾಂಸದರನ್ನು ರೂಪಿಸುವ ರಣನೀತಿ ಅನುಸರಿಸುತ್ತಿದ್ದಂತೆ, ಮೇಲು ಜಾತಿಯ ಸುಶಿಕ್ಷಿತ, ಹಣವಂತ, ತಾಯಿ ತಂದೆಯರ ಕಣ್ಮಣಿಗಳಾದ ಈ ಹೆಂಗಸರು ಮಾತ್ರ ಧರ್ಮದ ಸರಪಣಿಗಳ ಎಡರುತೊಡರುಗಳನ್ನು ಬಿಡಿಸಿಕೊಳ್ಳುತ್ತ ಗಮನ ಹರಿಸುವುದೇ ಇಲ್ಲ.
ವಾಟ್ಸ್ ಆ್ಯಪ್, FB, ಇಂಟರ್ ನೆಟ್, ಇನ್ ಸ್ಟಾಗ್ರಾಂ, ಟ್ವಿಟರ್ ಗಳನ್ನು ಧಾರಾಳವಾಗಿ ಬಳಸಿಕೊಳ್ಳುತ್ತಾ, ಅಧಿಕಾರ ಪಡೆದ ತಕ್ಷಣ ಈ ಹೆಂಗಸರನ್ನು ವಾಪಸ್ಸು ಪೌರಾಣಿಕ ಕಾಲಕ್ಕೆ ಅವರು ಕೊಂಡೊಯ್ಯುತ್ತಾರೆ. ಆಧುನಿಕ ಶಿಕ್ಷಣ, ನಗರ ಜೀವನದ ಕಾರಣದಿಂದ ಹೆಂಗಸರು ತಾವೇನೋ ಇಂಡಿಪೆಂಡೆಂಟ್ ಎಂಬಂತೆ ತೋರಿಸಿಕೊಳ್ಳುತ್ತಾರೆ..... ಆದರೆ ಅವರು ಓದಿ, ಬರೆದು, ಕಲಿತದ್ದು, ನೋಡಿದ್ದು, ಗ್ರಹಿಸಿದ್ದು ಎಲ್ಲ ಪೌರಾಣಿಕ ಜ್ಞಾನ ಮಾತ್ರವೇ ಆಗಿದ್ದು ಸತಿ ಸಾವಿತ್ರಿ, ಸೀತಾ, ದ್ರೌಪದಿ, ದಮಯಂತಿ, ತಾರಾ, ಮಂಡೋದರಿಯರಿಗಷ್ಟೇ ಸೀಮಿತವಾಗಿದೆ.
ಈ ಹೆಂಗಸರಲ್ಲಿ ಎಷ್ಟೋ ಮಂದಿಗೆ ಇಂಗ್ಲಿಷ್ ನಲ್ಲಿ ಪೌರಾಣಿಕ ಜ್ಞಾನ ಉಣಬಡಿಸಲಾಯಿತು. ಹಾಲ್ ಗಳಲ್ಲಿ ಪ್ರವಚನ, ಭಜನೆಯ ಕಾರ್ಯಕ್ರಮಗಳು ಜೋರಾಗಿ ನಡೆಯುತ್ತಿದ್ದು, ಹೈಟೆಕ್ ದೇವಿದೇವರುಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಏಕೆಂದರೆ ಇದೆಲ್ಲದರ ಹಿಂದೆ ಸರ್ಕಾರದ ಸಪೋರ್ಟ್‌ಫೈನಾನ್ಸ್ ಇದೆ! ಈ ಕಾರಣದಿಂದಲೇ ಇಂದಿನ ಸುಶಿಕ್ಷಿತ ಹೆಣ್ಣುಮಕ್ಕಳು ಸಹ ಉಸಿರುಗಟ್ಟಿಸುವ ವಾತಾವರಣದಲ್ಲಿ ಗಂಡ, ಮನೆ, ಮಕ್ಕಳು ಎಂದು ಹೋರಾಡುತ್ತಿರುತ್ತಾರೆ.
ಈ ಭಗವಾ ಸರ್ಕಾರ ಮಂದಿರಗಳ ಪುನರುಜ್ಜೀನಗೊಳಿಸಿ ಈ ಹೆಂಗಸರನ್ನು ಗಿಲೀಟು ಮಾಡಿದ್ದೂ ಮಾಡಿದ್ದೇ! ಆಗ ಈ ಹೆಂಗಸರು ಮಂದಿರದ ಹೆಸರಲ್ಲಿ ಹೊರಗೆ ಬಂದು ಅಲ್ಲಿನ ಹತ್ತಿರದ ಹೋಟೆಲ್ ಗಳಲ್ಲಿ ಊಟ ತಿಂಡಿ ಎಂಜಾಯ್ ಮಾಡುತ್ತಾ, ಮಾಡರ್ನ್ ಹಾಲ್ ಗಳಲ್ಲಿ ಕೀರ್ತನೆ ಭಜನೆ ಹಾಡುತ್ತಾ, ರತ್ನಗಂಬಳಿ ಹಾಸಿದ ಮಾರ್ಬಲ್ ನೆಲದಲ್ಲಿ ಕುಳಿತು ಧ್ಯಾನಾಸಕ್ತರಾಗಬಹುದಾಗಿದೆ.





