ಪಾಪ್ ಲೋಕದ ದಂತಕತೆ “ಕಿಂಗ್ ಆಫ್ ಪಾಪ್” ಮೈಕಲ್ ಜಾಕ್ಸನ್ ಜೀವನದ ಕಥೆ ತೆರೆಗೆ ಬರಲು ಸಜ್ಜಾಗಿದೆ.
ಮೈಕಲ್ ಸಿನಿಮಾದ ಅಧಿಕೃತ ಟೀಸರ್ ರಿಲೀಸ್ ಆಗಿದ್ದು, ಮೈಕಲ್ ಜಾಕ್ಸನ್ ಬಯೋಪಿಕ್ ಸದ್ಯದಲ್ಲೇ ತೆರೆಗೆ ಬರಲಿದೆ. ಹಾಲಿವುಡ್ನಲ್ಲಿ ಬರುತ್ತಿರುವ ಬಹುನಿರೀಕ್ಷಿತ “ಮೈಕಲ್” ಚಿತ್ರದ ಟೀಸರ್ ಇದೀಗ ದಾಖಲೆ ಬರೆದಿದ್ದು, ರಿಲೀಸ್ ಆದ 24 ಗಂಟೆಯಲ್ಲಿ ಗ್ಲೋಬಲ್ ಮಟ್ಟಕ್ಕೆ ತಲುಪಿದೆ.
ಮೈಕಲ್ ಅವರ ಬಯೋಪಿಕ್ ಇದೀಗ ತಯಾರಾಗುತ್ತಿದ್ದು, ಮೈಕಲ್ ಪಾತ್ರಕ್ಕೆ ಅವರ ಸಹೋದರ ಸಂಬಂಧಿ ಜಾಫರ್ ಜಾಕ್ಸನ್ ಜೀವ ತುಂಬಲಿದ್ದಾರೆ.
ಸಿನಿಮಾವನ್ನು ಆಂಟೊಯಿನ್ ಪುಕ್ವಾ ನಿರ್ದೇಶಿಸಿದ್ದು, “ಕಿಂಗ್ ಆಫ್ ಪಾಪ್” ಜೀವನದ ಕಥೆಯ ಝಲಕ್ನ್ನು ಟೀಸರ್ನಲ್ಲಿ ತೋರಿಸಲಾಗಿದೆ. “ಮೈಕಲ್ ಜಾಕ್ಸನ್ 5” ನಿಂದ ಆರಂಭವಾದ ಅವರ ಜೀವನವನ್ನು ವಿಶ್ವದ ಪಾಪ್ ಲೋಕದಲ್ಲಿ ಬೆಳೆದ ಸಕ್ಸಸ್ ಕಥೆ ಇದಾಗಿದೆ.
ಮಾತ್ರವಲ್ಲ, ಜಗತ್ಪ್ರಸಿದ್ಧ “ಮೂನ್ವಾಕ್” ಹಾಗೂ ಸಾವಿರಾರು ಜನರ ಎದುರು ಆತ್ಮವಿಶ್ವಾಸದಿಂದ ಮೈಕಲ್ ಹೆಜ್ಜೆಯನ್ನಿಡುತ್ತಿರುವ ದೃಶ್ಯಗಳು ಟೀಸರ್ನಲ್ಲಿದೆ. 
“ಮೈಕಲ್” ಟೀಸರ್ ರಿಲೀಸ್ ಆದ 24 ಗಂಟೆಗಳಲ್ಲಿ ವಿಶ್ವದೆಲ್ಲೆಡೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡಿದೆ. 24 ಗಂಟೆಯೊಳಗೆ 116.2 ಮಿಲಿಯನ್ಗೂ ಅಧಿಕ ವೀಕ್ಷಣೆ ಕಂಡಿದ್ದು, ಮ್ಯೂಸಿಕ್ ಬಯೋಪಿಕ್ನ ಟೀಸರ್ ಇಷ್ಟೊಂದು ದೊಡ್ಡ ಮಟ್ಟದಲ್ಲಿ ವೀಕ್ಷಣೆ ಕಂಡಿರುವುದು ಇದೇ ಮೊದಲು ಎನ್ನಬಹುದು.
ಇದಕ್ಕೂ ಮುನ್ನ ಪಾಪ್ ಐಕಾನ್ ಟೇಲರ್ ಸ್ವಿಫ್ಟ್ ಅವರ ದಿ ಎರಾಸ್ ಟೂರ್ ಸಿನಿಮಾದ ಟ್ರೇಲರ್ 24 ಗಂಟೆಯೊಳಗೆ 96.1 ಮಿಲಿಯನ್ಗೂ ಅಧಿಕ ವೀಕ್ಷಣೆ ಕಂಡು, ದಾಖಲೆ ಬರೆದಿತ್ತು.
ಈ ಸಿನಿಮಾದಲ್ಲಿ ಮೈಲ್ಸ್ ಟೆಲ್ಲರ್, ಕೋಲ್ಮನ್ ಡೊಮಿಂಗೊ, ಕ್ಯಾಟ್ ಗ್ರಹಾಂ, ನಿಯಾ ಲಾಂಗ್, ಲಾರಾ ಹ್ಯಾರಿಯರ್, ಕೆಂಡ್ರಿಕ್ ಸ್ಯಾಂಪ್ಸನ್ ಮತ್ತು ಯುವ ಮೈಕೆಲ್ ಪಾತ್ರದಲ್ಲಿ ಜೂಲಿಯಾನೋ ಕ್ರೂ ವಾಲ್ಡಿ ಮತ್ತಿತರರು ಕಾಣಿಸಿಕೊಳ್ಳಲಿದ್ದಾರೆ. 2026ರ ಏಪ್ರಿಲ್ 24ರಂದು ವಿಶ್ವಾದ್ಯಂತ ಈ ಚಿತ್ರ ಬಿಡುಗಡೆಯಾಗಲಿದೆ.





