- ರಾಘವೇಂದ್ರ ಅಡಿಗ ಎಚ್ಚೆನ್.
ಕೋಲಾರ ಮೂಲದ ಹೊಸ ಪ್ರತಿಭೆಗಳೇ ಸೇರಿಕೊಂಡು ಸಿದ್ದಪಡಿಸಿರುವ *ಇನಿಯನ ಆತ್ಮ* ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಉದ್ಯಮಿ ಪುಂಡರೀಕ ಮೂರ್ತಿ ಲೋಕಾರ್ಪಣೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಶ್ರೀ ವಿನಾಯಕ ವೆಂಕಟೇಶ್ವರ ಫಿಲಂಸ್ ಅಡಿಯಲ್ಲಿ *ಬಿ.ಕಲಾವತಿ ನಿರ್ಮಾಣ* ಮಾಡಿದ್ದಾರೆ. *ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಹಾಗೂ ನಿರ್ದೇಶನದ ಜವಬ್ದಾರಿಯನ್ನು ನರೇಶ್ ಸಿದ್ದಘಟ್ಟ* ವಹಿಸಿಕೊಂಡಿದ್ದಾರೆ.

ನಂತರ ಮಾತನಾಡಿದ ನಿರ್ದೇಶಕರು, ಏಳು ಜನ ಯುವ ತಂಡದವರು ಪ್ರವಾಸಕ್ಕೆಂದು ದೂರದ ಸ್ಥಳಕ್ಕೆ ಹೋಗುತ್ತಾರೆ. ಅಲ್ಲಿ ಇವರನ್ನೆ ಗುರಿಯಾಗಿಸಿಕೊಂಡು ಒಂದಷ್ಟು ಘಟನೆಗಳು ನಡೆಯುವುದು ಯಾಕೆ? ಕರ್ಮ ಯಾರನ್ನು ಬಿಡುವುದಿಲ್ಲ. ಪ್ರೇಯಸಿ ಆತ್ಮ ಹೇಗಾಗುತ್ತದೆ.

ಇಂತಹ ಹಲವು ಸ್ವಾರಸ್ಯಕರ ವಿಷಯಗಳು ಹಾರರ್, ಥ್ರಿಲ್ಲರ್ ರೀತಿಯಲ್ಲಿ ನೋಡುಗರಿಗೆ ಕುತೂಹಲ ಮೂಡಿಸುತ್ತದೆ ಹಾಗೂ ಕಾಮಿಡಿಯಾಗಿ ಸನ್ನಿವೇಶಗಳು ಇರಲಿದೆ. ಕೋಲಾರ, ಚಿಕ್ಕಾಬಳ್ಳಾಪುರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಾಧ್ಯಮದವರ ಸಹಕಾರ ಬೇಕೆಂದು ನರೇಶ್ ಸಿದ್ದಘಟ್ಟ ಕೋರಿದರು.

ನಾಯಕ ಸಿದ್ದರ್ಥ್ ಹರಿ, ನಾಯಕಿ ನಿಶಾರೆಡ್ಡಿ. ಉಳಿದಂತೆ ಕೋಲಾರ ಸೂರ್ಯ, ರಾಜ್‌ವೀರ್, ಕಿಟ್ಟಿ ತಾಳಿಕೋಟೆ, ಆದಿಮಧುಗಿರಿ, ಸುಶ್ಮಿತ, ನಯನ ಮುಂತಾದವರು ನಟಿಸಿದ್ದಾರೆ. ಸಂಗೀತ ಎ.ಟಿ.ರವೀಶ್, ಛಾಯಾಗ್ರಹಣ ಚರಣ್‌ತೇಜ್, ಸಂಕಲನ ಪವನ್.ಬಿ.ಕೆ, ಸಾಹಸ ಥ್ರಿಲ್ಲರ್‌ಮಂಜು-ಕೌರವವೆಂಕಟೇಶ್, ನಿರ್ವಹಣೆ ಮೋಹನ್, ನೃತ್ಯ ಕರಿಯನಂದ,ಸನ್ ಸುನಿಲ್ ಅವರದಾಗಿದೆ.

ಹೇಮಂತ್‌ಕುಮಾರ್, ರವಿಶಾಸ್ತ್ರೀ, ಸುರಭಿ ಭರದ್ವಾಜ್, ಸಚಿನ್ ಹಾಡುಗಳಿಗೆ ಕಂಠದಾನ ಮಾಡಿದ್ದಾರೆ. ಜಯದೇವ್ ಫಿಲಂಸ್ ಮುಖಾಂತರ ಚಿತ್ರವು ಇದೇ ತಿಂಗಳು ತೆರೆಗೆ ಬರಲಿದೆ





