ಸರಸ್ವತಿ*
ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ.. ಯುವ ಪೀಳಿಗೆ ತಮ್ಮ ಆಸಕ್ತಿಯನ್ನು ನಟನೆಯತ್ತ ಬೆಳೆಸಿಕೊಂಡು ಹೋದಂತೆ ಕಾಣುತ್ತಿದೆ.. ಅದರಲ್ಲೂ ಮುಖ್ಯವಾಗಿ ತಾರಾ ಮಕ್ಕಳು .. ಸ್ಟಾರ್ ಕಿಡ್ಸ್ ವಿಭಿನ್ನವಾಗಿ ತಮ್ಮನ್ನು ತಾವು ಸಾಕಷ್ಟು ತಯಾರಿ ಗಳೊಂದಿಗೆ ಬೆಳ್ಳಿ ತೆರೆಗೆ ಎಂಟ್ರಿ ಕೊಡಲು ತಯಾರಿ ನಡೆಸಿದ್ದಾರೆ.. ಖ್ಯಾತ ನಟಿ ಶೃತಿ ಮಗಳು ಗೌರಿ ಶೃತಿ ಸಿನಿಮಾಗೆ ಬರುವುದು ಖಚಿತ ಎಂದು ಈಗಾಗಲೇ ಹೇಳಲಾಗಿದೆ. ಗೌರಿ ಪ್ರತಿಭಾವಂತೆ ಒಳ್ಳೆ ಗಾಯಕಿ ಕೂಡಾ ಆಗಿದ್ದಾಳೆ.

ಯಾವ ಬ್ಯಾನರಿನಡಿ, ಯಾವ ಹೀರೋ ಜೊತೆ ಲಾಂಚ್ ಆಗುತ್ತಾಳೆ ಎಂಬುದು ಇನ್ನೂ ನಿಗೂಢವಾಗಿದೆ. ಇತ್ತೀಚೆಗೆ ಇನ್ ಸ್ಟಾಗ್ರಾಮ್ ಲ್ಲಿ ಫೋಟೋ ಶೇರ್ ಮಾಡಿರುವ ಗೌರಿ ನನ್ನ ಕಣ್ಣು ನಿನ್ನ ಮೇಲಿದೆ ಎಂಬ ಕ್ಯಾಚಿ ಕ್ಯಾಪ್ಶನ್ ಹಾಕಿ ಗಮನ ಸೆಳೆದಿದ್ದಾಳೆ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





