ಸೆಲೆಬ್ರಿಟಿಗಳಿಗೆ, ವಿಶೇಷವಾಗಿ ಸಿನಿಮಾ ನಟ-ನಟಿಯರಿಗೆ ಸಾರ್ವಜನಿಕವಾಗಿ ಎಲ್ಲರಂತೆ ಓಡಾಡುವ ಆಸೆ ಇರುತ್ತೆ. ಆದರೆ, ಅದು ಎಲ್ಲರಿಗೂ ಸಾಧ್ಯವಿಲ್ಲ. ಅದರಲ್ಲೂ ನಾಯಕ-ನಾಯಕಿ ರೋಲ್ ಮಾಡುವವರು ರಸ್ತೆಗಳಲ್ಲಿ ಕಾಮನ್ ಆಗಿ ಓಡಾಡೋದು ತುಂಬ ಕಷ್ಟ. ಅವರು ಎಲ್ಲರಂತೆ ಬೀದಿ ಬದಿ ಶಾಪಿಂಗ್ ಮಾಡಲಾಗದು. ಜನಸಂದಣಿ ಇರುವ ಜಾಗಕ್ಕೆ ಹೋಗಲೂ ಸಾಧ್ಯವಿಲ್ಲ. ಜನರು ತಮ್ಮನ್ನ ಗುರುತಿಸುವುದರಿಂದ ಪಾರಾಗಲು ಅವರು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳುತ್ತಾರೆ.

ಇದೀಗ ರಚಿತಾ ರಾಮ್ ಅವರೂ ಸಹ ಇದೇ ಉಪಾಯ ಮಾಡಿ, ಬಸವನಗುಡಿಯಲ್ಲಿ ಓಡಾಡಿದ್ದಾರೆ. ಮುಖಕ್ಕೆ ಪ್ರಾಣಿಯೊಂದರ ಮುಖವಾಡ ಹಾಕಿಕೊಂಡು ಬಸವನಗುಡಿಯ ಕಡಲೆಕಾಯಿ ಪರಿಷೆಯಲ್ಲಿ ಓಡಾಡಿದ್ದಾರೆ. ರಚಿತಾ ಜೊತೆ ಅವರ ಆಪ್ತ ಅನೇಕರು ಇದ್ದರು. ಅವರೆಲ್ಲರೂ ಮುಖಕ್ಕೆ ಮಾಸ್ಕ್ ಧರಿಸಿದ್ದರು. ಇನ್ನು ರಚಿತಾ ರಾಮ್ ಅವರಂತೂ ತಮ್ಮ ದುಪಟ್ಟಾಟ ಸಂಪೂರ್ಣವಾಗಿ ಹೊದ್ದುಕೊಂಡಿದ್ದರು. ತಮ್ಮ ಫೋಟೋ ಮತ್ತು ವಿಡಿಯೊಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.ರಚಿತಾ ಹೇಳಿದ್ದೇನು?
‘ನಮ್ಮ ಗೆಟಪ್‌ ಹೇಗಿದೆ?..ಎಲ್ಲರಿಗೂ ನಮಸ್ಕಾರ. ನಾವು ಕಡಲೆಕಾಯಿ ಪರಿಷೆಯಲ್ಲಿ ಇದ್ದೇವೆ. ನಾವು ಒಂದಷ್ಟು ಜನರ ಹತ್ರ ಸೆಲ್ಫಿ ಕೂಡ ತೆಗೆದುಕೊಂಡಿದ್ದೇವೆ. ಆದರೆ ಅವರು ಯಾರಿಗೂ ನಾನು ಯಾರೆಂದು ಗೊತ್ತಾಗ್ಲಿಲ್ಲ. ಎಲ್ಲರೂ ಅವರು ಸೆಲ್ಫಿ ತೆಗೆದುಕೊಳ್ಳುವಾಗ ನಾನು ಹೋಗಿ ನಿಲ್ಲುತ್ತಿದ್ದೆ. ಯಾರೆಲ್ಲ ನನ್ನ ಜೊತೆ ಸೆಲ್ಫಿ ತೆಗೆದುಕೊಂಡಿದ್ದೀರೋ ಅವರು ನನ್ನ ಟ್ಯಾಗ್‌ ಮಾಡಿ’ ಎಂದು ರಚಿತಾ ರಾಮ್‌ ಹೇಳಿದ್ದಾರೆ. ಅಷ್ಟೇ ಅಲ್ಲ, ಎಷ್ಟೋ ವರ್ಷಗಳ ನಂತರ ಕಡಲೆಕಾಯಿ ಪರಿಷೆಗೆ ಬಂದು ಹೀಗೆ ಓಡಾಡಲು ತುಂಬ ಖುಷಿಯಾಗ್ತಿದೆ ಎಂದೂ ಅವರು ತಿಳಿಸಿದ್ದಾರೆ.

ನಟಿ ರಚಿತಾ ರಾಮ್ ಅವರು ಸಾಲುಸಾಲು ಕನ್ನಡ ಸಿನಿಮಾಗಳನ್ನ ಮಾಡುತ್ತಿದ್ದಾರೆ. ಇತ್ತೀಚೆಗೆ ರಜನಿಕಾಂತ್ ಅವರ ಕೂಲಿ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇದೀಗ ಧ್ರುವ ಸರ್ಜಾ ಜೊತೆ ಕ್ರಿಮಿನಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕ್ರಿಮಿನಲ್ ಸಿನಿಮಾದ ಮುಹೂರ್ತ ಕಾರ್ಯಕ್ರಮ ನವೆಂಬರ್ 18ರಂದು ನಡೆದಿದೆ. ಈ ಕಾರ್ಯಕ್ರಮ ಮುಗಿಸಿಕೊಂಡ ಬಳಿಕ ರಚಿತಾ ರಾಮ್ ತಮ್ಮ ಆಪ್ತರೊಟ್ಟಿಗೆ ಕಡಲೆಕಾಯಿ ಪರಿಷೆಗೆ ಆಗಮಿಸಿದ್ದರು. ತಾವು ಬರೋಬ್ಬರಿ 18 ವರ್ಷಗಳ ಬಳಿಕ ಪರಿಷೆಗೆ ಬರುತ್ತಿರುವುದಾಗಿಯೂ ರಚಿತಾ ರಾಮ್ ತಿಳಿಸಿದ್ದಾರೆ. ಯಾರೆಲ್ಲ ರಚಿತಾ ರಾಮ್ ಜೊತೆ ಸೆಲ್ಫೆ ತೆಗೆಸಿಕೊಂಡಿದ್ದಾರೋ ಅವರಿಗೆ ಖಂಡಿತ ಅಚ್ಚರಿಯಾಗಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ