ತೀರ್ಥಯಾತ್ರೆ ಬದಲು ವಿಶ್ವ ಪ್ರವಾಸಕ್ಕೆ ಹೊರಡಿ : ಇತ್ತೀಚೆಗೆ ಟೂರಿಸ್ಟ್ ಬಹಳ ದಟ್ಟ ಜನಸಂದಣಿ ಇರುವ, ಕಾಲಿಡಲೂ ಆಗದಂಥ ತೀರ್ಥಯಾತ್ರಾ ಸ್ಥಳಗಳ ಬದಲು ಏಕಾಂತದ ವಾತಾವರಣ ಇರುವ, ತುಸು ಆ್ಯಕ್ಷನ್‌ ಅಡಗಿರುವ ಪ್ರವಾಸಿತಾಣ ಹುಡುಕುತ್ತಿದ್ದಾರೆ. ಕೇವಲ ದೇವರ ಹೆಸರಲ್ಲಿ ತೀರ್ಥಯಾತ್ರೆ ಬದಲು, ಟೂರಿಸ್ಟ್ ಎಜೆನ್ಸಿಗಳು ಈಗ ಟ್ರೆಕಿಂಗ್‌, ಸ್ಕೀಯಿಂಗ್‌, ಪ್ಯಾರಾ ಗ್ಲೈಡಿಂಗ್‌, ಡೀಪ್‌ ಸೀ ಡೈವಿಂಗ್‌, ಮೌಂಟನೇರಿಂಗ್‌, ಸೈಕ್ಲಿಂಗ್‌, ಮ್ಯಾರಾಥಾನ್‌ ರನ್ನಿಂಗ್‌, ಔಟ್‌ ಡೋರ್‌ ಸ್ಪೋರ್ಟ್ಸ್ ಇತ್ಯಾದಿಗಳನ್ನು ಹುಡುಕುತ್ತಿವೆ. ಇದಕ್ಕಾಗಿಯೇ ಈಗ ವೈಲ್ಡ್ ಲೈಫ್‌ಎಥಿನಿಕ್‌ ಫೋಟೋಗ್ರಫಿ ಜನಪ್ರಿಯವಾಗಿರುವ, ಎಲ್ಲಕ್ಕಿಂತ ಟಾಪ್‌ ಪ್ಲೇಸ್‌ ಅಂದ್ರೆ ಕೀನ್ಯಾ. ಇಲ್ಲಿ ವೈಲ್ಡ್ ಲೈಫ್‌ ಇದೆ, ಕಾಡು ಇದೆ, ಟ್ರೈಬಲ್ಸ್ ಸಹ! ನೀವು ತೀರ್ಥಯಾತ್ರೆಗಳಿಂದ ಬೇಸತ್ತಾಗ, ಇಂಥವನ್ನು ಸಂದರ್ಶಿಸಲು ಪ್ರಯತ್ನಿಸಿ. ಕೀನ್ಯಾ ಪ್ರವಾಸ ಖಂಡಿತಾ ದುಬಾರಿಯಲ್ಲ.

lea-cappelli

ಜೀವನಕ್ಕೆ ರಂಗು ತುಂಬುತ್ತದೆ ಸಂಗೀತ : ಮ್ಯೂಸಿಕ್‌ ಇದೀಗ ಕೇವಲ ಪ್ಯಾಶನ್‌ ಆಗಿ ಉಳಿದಿಲ್ಲ. ಇದು ಸಂಪಾದನೆಗೆ ದಾರಿಯೂ ಹೌದು. ಹೀಗಾಗಿಯೇ ಅಮೆರಿಕಾ, ವಾಯ್ಸ್ ಮುಂತಾದ ಪ್ಲಾಟ್‌ ಫಾರ್ಮ್ಸ್ ಬಲು ಚಮಕಾಯಿಸುತ್ತಿವೆ. ಇಲ್ಲಿಂದ ಎಂಟ್ರಿ ಪಡೆದ ಗಾಯಕರು ಪ್ರೊಫೆಶನಲ್ಸ್ ಆಗುತ್ತಾರೆ. ಇದನ್ನು ನೋಡಿ ನೋಡಿಯೇ ಸಣ್ಣಪುಟ್ಟ ಪ್ಲಾಟ್‌ ಫಾರ್ಮ್ಸ್ ಸಹ ರೆಡಿ ಆಗುತ್ತಿವೆ, ಅಲ್ಲಿ ಸಲ್ಲದವರು ಇಲ್ಲಿ ಸಲ್ಲುತ್ತಿದ್ದಾರೆ! ಜೋಡಾ ರೆಕಾರ್ಡ್ಸ್ ಇಂಥದ್ದೇ ಒಂದು ಕಂಪನಿ ಆಗಿದ್ದು, ಇಲ್ಲಿ ತೆರೆಮರೆಯ ಗಾಯಕರು ಪ್ರಸಿದ್ಧಿ ಪಡೆಯುವಂತೆ ಆಗಿದೆ. ಇವರಲ್ಲಿ ಒಬ್ಬಳು ಈ ಚಿತ್ರದಲ್ಲಿರುವ ಲಿಯಾ ಕೆಪೆಲ್ಲಿ, ದಶಕಗಳಿಂದ ಹಾಡುಗಳನ್ನು ಕೇಳುತ್ತಾ ಬೆಳೆದ ಈಕೆ (ತರಬೇತಿ ಪಡೆಯದೆ), ಬರೀ ಅದರಿಂದಲೇ ಈಗ ಉದಯೋನ್ಮುಖ ಗಾಯಕಿ ಎನಿಸಿದ್ದಾಳೆ, ಸಂಗೀತ ಜೀವನಕ್ಕೆ ರಂಗು ತುಂಬುವುದೆಂದರೆ ಇದೇ!

wedding-couple

ಇಂಥ ಪ್ರದರ್ಶನ ಬೇಕೇ? : ವೆಡ್ಡಿಂಗ್‌ ಬಿಸ್‌ ನೆಸ್‌ ಭಾರತದಂತೆಯೇ ಅಮೆರಿಕಾದಲ್ಲೂ ಉಚ್ಚ್ರಾಯ ಘಟ್ಟದಲ್ಲಿದೆ. ಅಲ್ಲಿನ ರೆಸಾರ್ಟ್ಸ್ ಹೋಟೆಲ್ಸ್ ಹೊಸ ಹೊಸ ವಿಧಾನಗಳಿಂದ, ಮದುವೆ ಆಗಲಿರುವ ನವ ಜೋಡಿಗಳನ್ನು ತನ್ನತ್ತ ಆಕರ್ಷಿಸುತ್ತಿದೆ! ಶೆರಟನ್‌ ಚೇನ್‌ ನ ಒಂದು ಹೋಟೆಲ್ ‌ನಲ್ಲಿ ಬುಕ್ಕಿಂಗ್‌ ಮಾಡಿದ ನಂತರ, ಅಂಥ ಜೋಡಿಗೆ ಒಂದು ವೆಡ್ಡಿಂಗ್‌ ಗೌನ್‌ ನ್ನು ಉಚಿತವಾಗಿ ನೀಡುತ್ತಿದೆ! ವೆಡ್ಡಿಂಗ್‌ ಅಂತೂ ದುಬಾರಿ ಖರ್ಚಿನಲ್ಲಿ ಧೂಮ್ ಧಾಮ್ ಆಗಿ ನಡೆಯುತ್ತದೆ, ಮದುವೆ ಮಂಟಪ ದುಬಾರಿ ಆದ ಮಾತ್ರಕ್ಕೆ ಆ ಮದುವೆ ಬಹುಕಾಲ ಉಳಿಯುತ್ತದೆ ಅಂಥ ಅರ್ಥವೇ? ಹೀಗಾಗಿ ಇಂಥ ದುಬಾರಿ ಖರ್ಚು ಅನಗತ್ಯವೇ ಸರಿ. ಜೇಬಿನ ಶಕ್ತಿ ಸಾಮರ್ಥ್ಯ ಹೇಗೇ ಇರಲಿ, ಮದುವೆ ಅಂತೂ ರಿಚ್‌ ಗ್ರಾಂಡ್‌ ಆಗಿರಲೇಬೇಕು, ಇಂಥ ರಿಚ್‌ ಫ್ಯಾಟ್‌ ವೆಡ್ಡಿಂಗ್‌ ಗಳ ವ್ಯಾಮೋಹವನ್ನು ಜನ ಇನ್ನಾದರೂ ತೊರೆಯಬಾರದೇ?

live-events-on-dano-network

ಇಂಥ ನಶೆ ಅಪಾಯಕಾರಿಯೇ ಸರಿ : ಇದೀಗ ಎಲ್ಲೆಲ್ಲೂ ಆನ್‌ ಲೈನ್‌ ನಶೆ ಎಷ್ಟು ಏರುತ್ತಿದೆ ಎಂದರೆ, ಲೈವ್ ‌ಇವೆಂಟ್‌ ಗಳನ್ನೂ ಜನ ಮನೆಯಲ್ಲೇ ಕುಳಿತು ಗಮನಿಸ ತೊಡಗಿದ್ದಾರೆ. ಹಣ ತೆತ್ತು ಟಿಕೆಟ್‌ ಖರೀದಿಸಿ, ಹೊಸ ಪೀಳಿಗೆಯನ್ನು ಯಾವ ಮಟ್ಟಕ್ಕೆ ಸೋಮಾರಿಗಳನ್ನಾಗಿ ಮಾಡುತ್ತಿದ್ದಾರೆ ಎಂದರೆ, ಜನ ಇಂಥ ಕಾರ್ಯಕ್ರಮ ನೋಡಲು ಹಾಲ್ ವರೆಗೂ ಬರುವುದಿಲ್ಲ! ಮನೆಯಲ್ಲಿ ಕುಳಿತೇ ಎಲ್ಲದರ ಮಜಾ ಪಡೆಯುತ್ತಿದ್ದಾರೆ. ಮುಂದೆ ಒಂದು ದಿನ ಆನ್‌ ಲೈನ್‌ ಡೆಲಿವರಿ ಆಫ್‌ ಬೇಬೀಸ್‌ ಆದರೂ ಆಶ್ಚರ್ಯವೇನಿಲ್ಲ! ಡಾನೋ ನೆಟ್‌ ವರ್ಕ್‌ ಮ್ಯೂಸಿಕ್‌ ಕನ್ಸರ್ಟ್‌ ಆನ್‌ ಲೈನ್‌ ನೀಡುತ್ತಿದ್ದಾಳೆ. ಇತರ ವೀಕ್ಷಕರತ್ತ ಗಮನಹರಿಸದೆ ಜನ ತಂತಮ್ಮ ಮನೆಯ ಸೋಫಾಗಳಿಗೆ ಒರಗಿ ಬೇಕಾದ್ದನ್ನು ಸವಿಯುತ್ತಾ, ಇಂಥವನ್ನು ನೋಡಿ ಆನಂದಿಸುತ್ತಿದ್ದಾರೆ. ಇದು ಪ್ರೋಗ್ರೆಸ್ಸೊ ರಿಗ್ರೆಸ್ಸೋ ಈಗಲೇ ಹೇಳಲಾಗದು, ಆದರೆ ಅಪಾಯಕಾರಿ ಎಂಬುದಂತೂ ನಿಜ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ