– ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ರಾಧೇಯ
ನಿರ್ಮಾಣ, ನಿರ್ದೇಶಕ: ವೇದ ಗುರು
ತಾರಾಗಣ: ಅಜಯ್ ರಾವ್, ಸೋನಲ್ ಮೊಂಥೆರೋ, ಧನ್ಯಾ ಬಾಲಕೃಷ್ಣ, ಅರವಿಂದ್ ರಾವ್, ಗಿರಿ ಶಿವಣ್ಣ,
ರೇಟಿಂಗ್: 3/5
ಹಲವಾರು ನಿರ್ದೇಶಕರ ಜತೆ ಕೆಲಸ ಮಾಡಿ ಅನುಭವ ಪಡೆದ ವೇದಗುರು ಇದೇ ಮೊದಲ ಬಾರಿಗೆ ನಿರ್ದೇಶಿಸಿರುವ, ಅಜೇಯ್ ರಾವ್ ನಾಯಕನಾಗಿ ಅಭಿನಯಿಸಿರುವ ‘ರಾಧೇಯ’ ಇಂದು (ನವೆಂಬರ್ 21) ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಕೀರ್ತಿ ಚಾಹ್ನಾ ಸಿನಿಮಾ ಕಾರ್ಖಾನೆ ಮೂಲಕ ವೇದ್ ಗುರು ಅವರೇ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಜೇಯ್ ರಾವ್ ಹಾಗೂ ಸೋನಾಲ್ ಮಾಂತೆರೋ ಚಿತ್ರದ ನಾಯಕ -ನಾಯಕಿಯಾಗಿ ಅಭಿನಯಿಸಿದ್ದಾರೆ.
ಜೈಲಿನಲ್ಲಿರುವ ವ್ಯಕ್ತಿಯೊಬ್ಬನ ಈ ಚಿತ್ರದ ಕಥೆ ಸಾಗಲಿದ್ದು, ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಸೋನಾಲ್ ಮಾಂತೆರೋ ಅವರು ಕ್ರೈಮ್ ರಿಪೋರ್ಟರ್ ಆಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ವಿಯಾನ್ (ಸ್ಯಾಂಡಿ) ಅವರ ಸಂಗೀತ ಸಂಯೋಜನೆ, ರಮ್ಮಿ ಅವರ ಛಾಯಾಗ್ರಹಣ, ಸುರೇಶ್ ಆರ್ಮುಗಂ ಅವರ ಸಂಕಲನವಿದೆ. ಸಿನಿಮಾ ಹೇಗಿದೆ ತಿಳಿಯಲು ಇಲ್ಲಿ ಓದಿ..
‘ರಾಧೇಯ ಎಂಬ ಹೆಸರು ಮಹಾಭಾರತದ ಕರ್ಣನಿಂದ ಬಂದಿದೆ. ಅವನ ತಾಯಿಯ ಹೆಸರು ರಾಧಾ. ಈ ಚಿತ್ರವು ಕರ್ಣನ ಕಥೆಗೆ ನೇರವಾಗಿ ಸಂಬಂಧಿಸಿಲ್ಲವಾದರೂ, ಅವನ ತ್ಯಾಗದ ಸಾರದಿಂದ ಸ್ಫೂರ್ತಿ ಪಡೆಯುತ್ತದೆ. . ಸಮಾಜವನ್ನು ಶುದ್ದೀಕರಿಸುವುದಕ್ಕಾಗಿ ನಾಯಕ ತಾನು ಕೊಲೆಗಾರನಾಗುವ ಕಥೆ ಒಳಗೊಂಡ ಅನೇಕ ಚಿತ್ರಗಳು ಕನ್ನಡದಲ್ಲಿ ಇದುವರೆಗೆ ಬಂದಿದೆ. ಅದಕ್ಕೆ ಈ ಚಿತ್ರ ಹೊಸ ಸೇರ್ಪಡೆಯಾಗಿದೆ. ರಾಧೇಯ ಒಬ್ಬ ಫಾರೆನ್ಸಿಕ್ ಅಧಿಕಾರಿಯಾಗಿದ್ದವನು. ಆದರೆ ಇಂತಹ ಚಾಣಾಕ್ಷ ಅಧಿಕಾರಿ ದಿಢೀರನೇ ಹತ್ತಾರು ಕೊಲೆ ಆರೋಪದಲ್ಲಿ ಪೊಲೀಸರಿಗೆ ಬೇಕಾಗುತ್ತಾನೆ ಕಡೆಗೊಮ್ಮೆ ಅವನೇ ಪೋಲೀಸರಿಗೆ ಶರಣಾಗುತ್ತಾನೆ. ಇದೇ ವೇಳೆ ಈತನ ಮೇಲೆ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ ಆರೋಪವೂ ಇದೆ. ಅವನಿಗೆ ಮರಣದಂಡನೆ ಶಿಕ್ಷೆ ಸಿಕ್ಕಿರುತ್ತದೆ. ಆಗ ಅವನು ಓರ್ವ ಕಥೆಗಾರ್ತಿಯ ಎದುರು ತನ್ನ ಜೀವನದ ಕಥೆಯನ್ನು ಹೇಳಿಕೊಳ್ಳುತ್ತಾನೆ.. ಇಷ್ಟೆಲ್ಲಾ ಕೇಸ್ಗಳು ರಾಧೇಯನ ಮೇಲೆ ಬರಲು ಕಾರಣವೇನು? ರಾಧೇಯ ನಿಜಕ್ಕೂ ಕೊಲೆಗಾರನೇ? ಇದಕ್ಕಾಗಿ ನೀವು ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಬೇಕು.
ಇದು ಪ್ರೇಮಕಥೆಯಾಗಿದ್ದರೂ, ಅದನ್ನು ನಿರ್ದೇಶಕರು ವಿಭಿನ್ನವಾಗಿ ಹೇಳಲು ಹೊರಟಿದ್ದಾರೆ. ಮೊದಲಾರ್ಧದಲ್ಲಿ ಕಥೆ ನಿಧಾನವಾಗಿ ಸಾಗುತ್ತದೆ ಕ್ಲೈಮ್ಯಾಕ್ಸ್ ಸಮೀಪಿಸಿದ ಹಾಗೆ ಕಥೆ ಟ್ವಿಸ್ಟ್ ಪಡೆದುಕೊಂಡು ಕುತೂಹಲ ಹುಟ್ಟಿಸುತ್ತದೆ ಆದರೆ ಕೆಲವೊಂದಷ್ಟು ಅನಗತ್ಯ ಎನಿಸುವ ದೃಶ್ಯಗಳಿದೆ, ಹಿಂಸೆಯ ಅತಿಯಾದ ವೈಭವೀಕರಣ ಇದು ಈ ಚಿತ್ರವನ್ನು ಮಕ್ಕಳು ಹಾಗೂ ಕುಂಟುಂಬ ಸಮೇತ ನೋಡಬಹುದೆ ಎನ್ನುವ ಪ್ರಶ್ನೆ ಎತ್ತುವಂತೆ ಮಾಡಿದೆ.
ವಿಯಾನ್ (ಸ್ಯಾಂಡಿ) ಅವರ ಹಿನ್ನೆಲೆ ಸಂಗೀತ ಮತ್ತು ರಮ್ಮಿ ಅವರ ಛಾಯಾಗ್ರಹಣ ಸಿನಿಮಾ ಹೈಲೈಟ್.
ನಟ ಅಜಯ್ ರಾವ್ ಅವರ ಪಾತ್ರ ಇಂದಿನವರೆಗೂ ಅವರು ಅಭಿನಯಿಸಿದ ಎಲ್ಲಾ ಪಾತ್ರಕ್ಕಿಂತ ಬಹುಳ ಭಿನ್ನ. ಪತ್ರಕರ್ತೆಯಾಗಿ ಸೋನಲ್ ಮೋಂಥೆರೋ, ಕಥೆಗಾರ್ತಿ ಆಗಿ ಧನ್ಯಾ ಬಾಲಕೃಷ್ಣ ಇಷ್ಟವಾಗುತ್ತಾರೆ.ಉಳಿದಂತೆ ಅರವಿಂದ್ ರಾವ್, ಗಿರಿ ಶಿವಣ್ಣ, ಅಶೋಕ್ ರಾವ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.





