- ರಾಘವೇಂದ್ರ ಅಡಿಗ ಎಚ್ಚೆನ್.

ಮೊಟ್ಟ ಮೊದಲ ಬಾರಿ BIGG BOSS SHOW ರಂಗದಮೇಲೆ ನಡೆದ ಹೆಗ್ಗಳಿಕೆ ಅಮೇರಿಕಾದ California ದ San Ramon ನಗರದಲ್ಲಿ ಇರುವ Trivalley Kannada Sangha ಕ್ಕೆ ಸೇರುತ್ತದೆ.

ಇತ್ತೀಚಿಗೆ ಸುರೇಶ್ ಬಾಬು ಪ್ರೊಡಕ್ಷನ್ ಮೂಲಕ BIG BOSS ಕಾರ್ಯಕ್ರಮ ಅಮೇರಿಕಾ ಕನ್ನಡಿಗರ ಮನ ಸೂರೆಗೊಂಡಿದೆ. ಪ್ರತೀ ಬಾರಿಯೂ ಸಂಗೀತ, ನೃತ್ಯ ನಾಟಕ ಇಂತಹ

ಕಾರ್ಯಕ್ರಮದಿಂದಲೇ ಆಯೋಜನೆಗೊಳ್ಳುತ್ತಿತ್ತು.

FB_IMG_1763699164900

ಆದರೆ ಈ ಬಾರಿ BIG BOSS ವಿಶೇಷವಾಗಿ ಮೂಡಿಬಂದಿದ್ದು ಅನಿವಾಸಿ ಕನ್ನಡಿಗರಲ್ಲಿ ಹೊಸ ರುಚಿ ಸಿಕ್ಕಂತಾಯಿತು.

ಕನ್ನಡದ ಪ್ರತಿಭಾವಂತ ತಾರಾ ಜೋಡಿ ವಿಕ್ರಮ್ ಸೂರಿ ಹಾಗೂ ನಮಿತ ರಾವ್ ಇದರಲ್ಲಿ ಭಾಗವಹಿಸಿ ಈ ಕಾರ್ಯಕ್ರಮ ರೂಪಿಸುವಲ್ಲಿ ಯಶಸ್ವಿಯಾದರು.

FB_IMG_1763699155349

ಇದಕ್ಕಾಗಿ ಸತತ ಎರೆಡು ತಿಂಗಳ ಮುಂಚಿತವಾಗಿ ಅಲ್ಲಿಯ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸರಿಹೊಂದುವ ಹಾಗೆ ಸ್ಕ್ರಿಪ್ಟ್ ಬರೆಸಲಾಯಿತು.

FB_IMG_1763699168170

ಹಲವಾರು Reality Show ಗಳಿಗೆ Content Writer ಆಗಿ ಕೆಲಸ ನಿರ್ವಹಿಸುತ್ತಿರುವ ವಿಕ್ಕಿ ಕುದುರೆ ಮುಖ ಇದನ್ನು ಹಾಸ್ಯಭರಿತವಾಗಿ ರಚಿಸಿ ಭಾರತ ಮತ್ತು ಅಮೇರಿಕಾದಲ್ಲಿ ಇರುವ  ಸಂಸ್ಕೃತಿ, ಪ್ರಸ್ತುತ ವಿದ್ಯಮಾ ನಗಳು, ಕುಟುಂಬದಲ್ಲಿನ ಸಂಭಂದಗಳು, ಹೀಗೆ ಹಲವು ವಿಷಯಗಳನ್ನು ವಿಡಂಬನಾತ್ಮಕವಾಗಿ ಎಲ್ಲಿಯೂ, ಯಾರಿಗೂ ಅವಹೇಳನವಾ ಗದಂತೆ ಸೂಕ್ಷ್ಮ ರೀತಿಯಾಗಿ ಹೆಣೆಯುವಲ್ಲಿ ಎಲ್ಲರ ಮನಗೆದ್ದರು.

FB_IMG_1763699172044

BIG BOSS ಮನೆಯಲ್ಲಿ ಇರುವ Lifestyle, Contestants, Anchor, Sets, ವಿಶೇಷ ಪಾತ್ರಗಳು,  ಹೀಗೆ ಎಲ್ಲವನ್ನು ಒಂದು ವಾರದಲ್ಲಿ ಸಿದ್ಧತೆ ನಡೆಸಿ ಉತ್ತಮ ನಿರ್ದೇಶನ ನೀಡಿದ್ದು ವಿಕ್ರಮ್ ಸೂರಿ.

FB_IMG_1763699173969

ನಮಿತ ರಾವ್ ಹಾಗೂ ವಿಕ್ರಮ್ ಸೂರಿ Celebrity Couple ಆಗಿ, ಡಾ. ನಂದೀಶ್ ವೀರಪ್ಪ, ಶಾಂತರಮ್ ಗುಮ್ಮಾರಾಜು, ಗಿರೀಶ್ ಕೋಟ, ಮಲ್ಲೇಶ್ ಪ್ರಭು, ವಿದ್ಯಾ ರೈ, ಭವ್ಯ ಮಲ್ಲೇಶ್, ಸುಹಾಸಿನಿ ತಲಕಾಡು, ಶ್ರೀದೇವಿ ಶಿವಯೋಗಿಮಟ್ Contestants ಗಳಾಗಿ ಬಂದರೆ, ವಿಶೇಷ ಪಾತ್ರದಲ್ಲಿ  ಕುಡಕನಾಗಿ ರವಿ ಪಂಗಲ್, ಸ್ವಾಮಿಗಳಾಗಿ ಕೃಷ್ಣ ಎರೂರ್ ಸಭಿಕರನ್ನು ರಂಜಿಸಿದರು.

FB_IMG_1763699147623

No Elimination only Elevation ಎನ್ನುವ Tag Line ಮೂಲಕ ಈ ಪ್ರಸ್ತುತಿ ಮನೋರಂಜಿಸಿತು.

FB_IMG_1763699160490

ಹಲವಾರು ವರ್ಷಗಳಿಂದ ಅಮೇರಿಕಾದಲ್ಲಿ ನೆಲೆಸಿ ಕನ್ನಡದ ಕೆಲಸ ಮಾಡುತ್ತಿರುವ ಸುರೇಶ್ ಬಾಬು ಅವರ ನಿರ್ಮಾಣ ಹಾಗೂ ಸಹ ನಿರ್ದೇಶನ, ರವಿ ಪಂಗಲ್ ಹಾಗೂ ಸಂಜೀವ್ ಮೂರ್ತಿ ಅವರ ನಿರ್ವಹಣೆ, ಅನಿಲ್ ಹಾಲಪ್ಪ ಅವರ ಸಹಕಾರದೊಂದಿಗೆ ರಂಗದಮೇಲೆ ಈ BIG BOSS ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬರಲು ಕಾರಣವಾದವು.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ