- ರಾಘವೇಂದ್ರ ಅಡಿಗ ಎಚ್ಚೆನ್.
‘ಸು ಫ್ರಮ್ ಸೋ’ ಕರುಣಾಕರ ಗುರೂಜಿ ರಾಜ್ ಬಿ. ಶೆಟ್ಟಿ ಕರಾವಳಿ ಸಿನಿಮಾದ ಮಹಾವೀರ ಪಾತ್ರಕ್ಕೆ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ ‘ಕರಾವಳಿ ಸಿನಿಮಾದಲ್ಲಿ ಮಾವೀರ ಎಂಬ ಪವರ್‌ಫುಲ್ ಪಾತ್ರದಲ್ಲಿ ನಟಿಸುತ್ತಿರುವ ನಟ ಈಗ ತಮ್ಮ ಪಾತ್ರದ ಡಬ್ಬಿಂಗ್ ಪೂರೈಸಿದ್ದಾರೆ.
ಗುರುದತ್ ಗಾಣಿಗ ನಿರ್ದೇಶನದಲ್ಲಿ ಪ್ರಜ್ವಲ್ ದೇವರಾಜ್ ನಾಯಕರಾಗಿರುವ ‘ಕರಾವಳಿ’ ಸಿನಿಮಾದ ಪ್ರಮುಖ ಪಾತ್ರಕ್ಕಾಗಿ ರಾಜ್ ಬಿ. ಶೆಟ್ಟಿ ನಟಿಸೀತ್ತಿದ್ದು ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.
ಈಗಾಗಲೇ ‘ಕರಾವಳಿ’ ಸಿನಿಮಾದ ಪೋಸ್ಟರ್ ಮತ್ತು ಟೀಸರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ರಾಜ್ ಬಿ. ಶೆಟ್ಟಿ ಪಾತ್ರ ಪರಿಚಯದ ಟೀಸರ್‌ನಲ್ಲಿ ಅವರ ಜತೆಗೆ ಮಿತ್ರಾ ಹಾಗೂ ರಮೇಶ್ ಇಂದಿರಾ ಪಾತ್ರಗಳ ಪರಿಚಯವೂ ಆಗಿದೆ. ಈ ಸಿನಿಮಾದ ಬಹುತೇಕ ಚಿತ್ರೀಕರಣ ಕರಾವಳಿಯ ಸುತ್ತಮುತ್ತವೇ ನಡೆದಿದೆ. ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆಯ ಈ ಸಿನಿಮಾ ಪಕ್ಕಾ ಹಳ್ಳಿ ಬ್ಯಾಕ್‌ಡ್ರಾಪ್‌ನಲ್ಲಿದೆ. ಇದಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ, ಅಭಿಮನ್ಯು ಸದಾನಂದನ್ ಕ್ಯಾಮೆರ ವರ್ಕ್ ಇದೆ.





