ಹಾಂಗ್ ಕಾಂಗ್‌ನಲ್ಲಿ ಎತ್ತರದ 8 ಅಪಾರ್ಟ್​ಮೆಂಟ್​ ಕಟ್ಟಡಗಳಿರುವ ಕಾಂಪ್ಲೆಕ್ಸ್​ಗೆ ಬುಧವಾರ ಮಧ್ಯಾಹ್ನ ಬೆಂಕಿ ಬಿದ್ದಿದೆ. ಈ ಅಪಾರ್ಟ್​ಮೆಂಟ್​​ಗಳಲ್ಲಿ ಸುಮಾರು 2 ಸಾವಿರ ಮನೆಗಳಿದ್ದು, 4,600ಕ್ಕೂ ಹೆಚ್ಚು ಜನರು ವಾಸವಾಗಿದ್ದರು. ಈ ಬೆಂಕಿ ಅವಘಡದಲ್ಲಿ ಒಂದೆರಡು ಕಟ್ಟಡಗಳು ಪೂರ್ತಿ ಸುಟ್ಟು ಕರಕಲಾಗಿವೆ. ಇವುಗಳೆಲ್ಲವೂ 20 ಮಹಡಿಗಿಂತಲೂ ಎತ್ತರದ ಅಪಾರ್ಟ್​​ಮೆಂಟ್​ಗಳಾಗಿವೆ. ಈ ಬೆಂಕಿ ಅವಘಡದಲ್ಲಿ ಇದುವರೆಗೆ 55 ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ.

ಕಳೆದ 6 ದಶಕಗಳಲ್ಲಿ ಹಾಂಗ್​ಕಾಂಗ್​ನಲ್ಲಿ ಸಂಭವಿಸಿದ ಅತ್ಯಂತ ಭೀಕರ ಬೆಂಕಿ ದುರಂತ ಇದಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಸುಮಾರು 300 ಜನರು ಇನ್ನೂ ಪತ್ತೆಯಾಗಲಿಲ್ಲ.ಬೆಂಕಿ ಉಲ್ಬಣಗೊಂಡಿದ್ದರಿಂದ ಮೇಲಿನ ಮಹಡಿಗಳಲ್ಲಿ ಸಿಲುಕಿರುವ ನಿವಾಸಿಗಳನ್ನು ತಲುಪಲು ಅಗ್ನಿಶಾಮಕ ದಳದವರು ಹೆಣಗಾಡುವಂತಾಯಿತು.

ಘಟನೆಗೆ ಸಂಬಂಧಿಸಿದಂತೆ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ಬಹಿರಂಗಪಡಿಸಿದ್ದಾರೆ, ಇಬ್ಬರು ನಿರ್ದೇಶಕರು ಮತ್ತು ನಿರ್ಮಾಣ ಕಂಪನಿಯ ಸಲಹೆಗಾರರು ಎನ್ನಲಾಗಿದೆ.ಸಿಎನ್ಎನ್ ಪ್ರಕಾರ, ಕೆಲವು ಅಪಾರ್ಟ್​ಮೆಂಟ್​ಗಳಲ್ಲಿ ಕಿಟಕಿಗಳನ್ನು ನಿರ್ಬಂಧಿಸುವುದು ಕಂಡುಬಂದಿದ್ದು, ಹೆಚ್ಚು ಸುಡುವ ಪಾಲಿಸ್ಟೈರೀನ್ ಬೋರ್ಡ್ ಗಳಲ್ಲಿ ತನಿಖಾಧಿಕಾರಿಗಳು ಕಂಪನಿಯ ಹೆಸರನ್ನು ಕಂಡುಹಿಡಿದ ನಂತರ ಪೊಲೀಸರು “ಸಂಪೂರ್ಣ ನಿರ್ಲಕ್ಷ್ಯ” ಎಂದು ಆರೋಪಿಸಿದ್ದಾರೆ.

ರಕ್ಷಣಾತ್ಮಕ ಬಲೆಗಳು, ಕ್ಯಾನ್ವಾಸ್ ಹಾಳೆಗಳು ಮತ್ತು ಪ್ಲಾಸ್ಟಿಕ್ ಹೊದಿಕೆಗಳಂತಹ ಸ್ಥಳದಲ್ಲಿನ ಇತರ ನಿರ್ಮಾಣ ಸಾಮಗ್ರಿಗಳು ಅಗತ್ಯವಾದ ಸುರಕ್ಷತಾ ಮಾನದಂಡಗಳನ್ನು ಪೂರೈಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.ಈ ಬೆಂಕಿ ಸುಮಾರು 30 ವರ್ಷಗಳಲ್ಲಿ ಹಾಂಗ್ ಕಾಂಗ್ ನ ಅತ್ಯಂತ ಮಾರಕ ಎನ್ನಲಾಗಿದೆ. ಇದು 1996 ರಲ್ಲಿ 41 ಜನರನ್ನು ಕೊಂದ ಕುಖ್ಯಾತ ಗಾರ್ಲಿ ಕಟ್ಟಡದ ಬೆಂಕಿಯನ್ನು ಸಹ ಮೀರಿಸಿದೆ ಎನ್ನಲಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ