ತುಂತುರು ಮಳೆ ಹನಿಗಳ ಕಾಲದಲ್ಲಿ, ಆಯ್ಲಿ ಸ್ಕಿನ್ಗೆ ಆರೈಕೆ ನೀಡಿ ಗ್ಲೋ ತರಿಸುವುದು ಹೇಗೆ……?

ನಮ್ಮ ಚರ್ಮದಲ್ಲಿ ಸೆಬೇಶಿಯನ್‌ ಗ್ರಂಥಿಗಳು (ಚರ್ಮದಲ್ಲಿ ನೈಸರ್ಗಿಕವಾಗಿ ತೈಲ ಉತ್ಪಾದಿಸುವ ಗ್ರಂಥಿ) ಅಗತ್ಯಕ್ಕಿಂತಲೂ ಅತ್ಯಧಿಕ ಸಕ್ರಿಯವಾದರೆ, ನಮ್ಮ ಚರ್ಮ ಬಲು ಜಿಡ್ಡು ಜಿಡ್ಡಾಗುವಂತೆ ಮಾಡಿ, ಕಲೆಗುರುತು ಮೂಡಿಸುತ್ತವೆ.

ಬದಲಾಗುವ ಋತು (ಸೀಸನ್ಸ್) ಆಯ್ಲಿ ಸ್ಕಿನ್‌ ಗೆ ಮೂಲ. ಹೆಚ್ಚು ಹ್ಯುಮಿಡಿಟಿ ಕಾರಣ, ಚರ್ಮದಿಂದ ಹೆಚ್ಚು ಬೆವರು ಸ್ರವಿಸಲ್ಪಡುತ್ತದೆ. ಇದು ಚರ್ಮ ಹೆಚ್ಚು ಆಯ್ಲಿ ಆಗುವಂತೆ ಮಾಡಿಬಿಡುತ್ತದೆ. ಈ ಸಮಸ್ಯೆಯಿಂದ ಪಾರಾಗಲು ಚರ್ಮದ ಸ್ವಚ್ಛತೆ, ಶುಭ್ರತೆ ಕಡೆ ವಿಶೇಷ ಗಮನ ಹರಿಸಬೇಕು.

ಆಯ್ಲಿ ಸ್ಕಿನ್‌ : ಸಂಭವನೀಯ ಕಾರಣಗಳು

ಆನುವಂಶೀಯತೆ : ಆಯ್ಲಿ ಸ್ಕಿನ್‌ ಆಗಲು ಆನುವಂಶೀಯತೆಯೂ ಒಂದು ಪ್ರಮುಖ ಕಾರಣ. ತಾಯಿ ತಂದೆ ಅಥವಾ ಒಡಹುಟ್ಟಿದವರಿಗೆ ಆಯ್ಲಿ ಸ್ಕಿನ್‌ ಇದ್ದರೆ, ಅದು ನಿಮಗೂ ಬರುವುದರಲ್ಲಿ ಆಶ್ಚರ್ಯವಿಲ್ಲ. ಈ ಸಮಸ್ಯೆ ಅತಿ ಹೆಚ್ಚಾಗುವ ಮೊದಲೇ ಚರ್ಮ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ.

ಅಧಿಕ ಮೇಕಪ್ಮಾಡಿಕೊಳ್ಳುವುದು : ಕೆಲವು ಹೆಂಗಸರು ಓಪನ್‌ ಪೋರ್ಸ್‌ ಹಾಗೂ ಸುಕ್ಕು ನಿರಿಗೆ ಅಡಗಿಸಲು ಅತಿ ಹೆಚ್ಚು ಮೇಕಪ್‌ ಮಾಡಿಕೊಳ್ಳುತ್ತಾರೆ. ಆದರೆ ಹೆಚ್ಚು ಕೆಮಿಕಲ್ಸ್ ಬೆರೆತಿರುವ ಇಂಥ ಕಾಸ್ಮೆಟಿಕ್ಸ್ ನ್ನು ಮತ್ತೆ ಮತ್ತೆ ಬಳಸುವುದರಿಂದ, ಚರ್ಮಕ್ಕೆ ಹಾನಿ ತಪ್ಪಿದ್ದಲ್ಲ. ಬ್ಯೂಟಿಫುಲ್ ಗೆಟ್‌ ಅಪ್‌ ಬೇಕೆಂದು ಸಿಕ್ಕಾಪಟ್ಟೆ ಮೇಕಪ್‌ ಮಾಡಿಕೊಂಡು ಇಂಥ ಸಮಸ್ಯೆ ತಂದುಕೊಳ್ಳಬೇಡಿ.

ಹಾರ್ಮೋನ್ಬದಲಾವಣೆ : ದೇಹದಲ್ಲಿ ಉಂಟಾಗುವ ಹಾರ್ಮೋನುಗಳ ಬದಲಾವಣೆಗಳಿಂದಾಗಿಯೂ ಆಯ್ಲಿ ಸ್ಕಿನ್‌ ಗೆ ಕಾರಣವಾಗಬಹುದು. ಹೆಂಗಸರಲ್ಲಿ ಆ್ಯಂಡ್ರೋಜನ್‌ ಹಾರ್ಮೋನ್‌ ಹೆಚ್ಚು ಕಡಿಮೆ ಆಗುತ್ತಾ ಇರುತ್ತದೆ. ಹೀಗಾಗಿ ಇದು ಸೆಬೇಶಿಯಸ್‌ ಗ್ಲಾಂಡ್ಸ್ ಮೇಲೆ ದಟ್ಟ ಪ್ರಭಾವ ಬೀರಿ, ಅದು ಸಕ್ರಿಯಗೊಳ್ಳುವಂತೆ ಮಾಡುತ್ತದೆ. ಇದೇ ಹಾರ್ಮೋನ್‌ ಇಂಬ್ಯಾಲೆನ್ಸ್ ನಿಂದಾಗಿ ಗಂಡಸರಿಗೆ ಟೆಸ್ಟೆಸ್ಟರಾನ್‌ ಹಾರ್ಮೋನ್‌ ಅಧಿಕ ಸಕ್ರಿಯಗೊಂಡು, ಗಂಡಸರಿಗೂ ಆಯ್ಲಿ ಸ್ಕಿನ್‌ ಸಮಸ್ಯೆ ಕಾಡಲು ಆರಂಭಿಸುತ್ತದೆ.

ಆಯ್ಲಿ ಚರ್ಮದಿಂದ ಪಾರಾಗುವಿಕೆ

ನಿಮ್ಮ ಮುಖ ಸದಾ ಸ್ವಚ್ಛ ಶುಭ್ರವಾಗಿರಲಿ : ಪ್ರತಿದಿನ ಕನಿಷ್ಠ 2-3 ಸಲವಾದರೂ ತಣ್ಣೀರಿನಿಂದ ಮುಖ ತೊಳೆದು, ಉತ್ತಮ ಗುಣಮಟ್ಟದ ಫೇಸ್‌ ವಾಶ್‌ ಬಳಸಿರಿ. ಮಲಗುವ ಮುನ್ನ ಅಗತ್ಯ ಮತ್ತೊಮ್ಮೆ ತೊಳೆಯಿರಿ. 3-4 ಸಲಕ್ಕಿಂತ ಹೆಚ್ಚಿಗೆ ಬೇಡ, ಇಲ್ಲದಿದ್ದರೆ ಚರ್ಮ ಡ್ರೈ ಆದೀತು. ಹಾಗೆಯೇ ಬಿಸಿ ನೀರು ಸಹ ಬಳಸಬೇಡಿ. ಮುಖದ ಚರ್ಮವನ್ನು ಶುಚಿಯಾಗಿಡಲು ಸದಾ ಸಲ್ಛರ್‌, ಸ್ಯಾಲಿಸಿಲಿಕ್‌ ಆ್ಯಸಿಡ್‌, ಟೀಟ್ರೀ ಆಯಿಲ್ ‌ಯುಕ್ತ ಕ್ಲೆನ್ಸರ್‌/ಫೇಸ್‌ ವಾಶ್‌ ಬಳಸಿಕೊಳ್ಳಿ.

ಸರಿಯಾದ ರೀತಿಯಲ್ಲಿ ಮೇಕಪ್ಮಾಡಿ : ನೀವು ಬೆಳಗಿನ ಹೊತ್ತು ಮೇಕಪ್‌ ಮಾಡುವಾಗ ಮೊಟ್ಟ ಮೊದಲು ನಿಮ್ಮ ಜಿಡ್ಡುಗಟ್ಟಿದ ಚರ್ಮವನ್ನು ಸರಿಪಡಿಸಲು, ಪ್ರೈಮರ್‌ ಯಾ ಬೇಸ್‌ ಹಚ್ಚಬೇಕು. ಇದು ಇಡೀ ದಿನ ಚರ್ಮದ ಹೆಚ್ಚುವರಿ ತೈಲವನ್ನು ಹೀರಿಕೊಳ್ಳುತ್ತಾ ಇರುತ್ತದೆ. ಇದರಿಂದ ಚರ್ಮ ಫ್ರೆಶ್‌ಆಯಿಲ್ ‌ರಹಿತವಾಗಿ ಕಾಣುತ್ತದೆ. ನಿಮ್ಮ ಮುಖದ ಝೋನ್‌ ನ ಅತಿ ಎತ್ತರದ ಭಾಗ ಅಂದ್ರೆ ಹಣೆ, ಮೂಗಿನ ಬಳಿಯ ಹೆಚ್ಚುವರಿ ಸೀಬಂ ಹೋಗಲಾಡಿಸಲು, ಟಾಲ್ಕಂ ಪೌಡರ್‌ ಸಹ ಬಳಸಿಕೊಳ್ಳಿ. ನಿಮ್ಮ ಎಲ್ಲಾ ಬ್ಯೂಟಿ ಪ್ರಾಡಕ್ಟ್ಸ್ ಆಯಿಲ್ ‌ಫ್ರೀ ಆಗಿರಬೇಕು, ಮೊಡವೆ ಉಂಟು ಮಾಡುವಂಥದ್ದು ಆಗಿರಬಾರದು ಎಂಬುದನ್ನು ಗಮನಿಸಿಕೊಳ್ಳಿ. ಕ್ರೀಂ ಬದಲಾಗಿ ಪೌಡರ್‌ ಬ್ಲಶ್‌ ಹಾಗೂ ಐಶ್ಯಾಡೋ ಬಳಸಿಕೊಳ್ಳಿ.

ಸೂಕ್ತ ಮಾಯಿಶ್ಚರೈಸರ್ ಬಳಕೆ : ಆಯ್ಲಿ ಚರ್ಮವನ್ನು ಸಹ ಆಗಾಗ ಮಾಯಿಶ್ಚರೈಸ್‌ ಮಾಡಬೇಕಾಗುತ್ತದೆ, ಆಗ ಮಾತ್ರ ತೈಲಗ್ರಂಥಿಗಳು ಹೆಚ್ಚುವರಿ ತೈಲ ಸ್ರವಿಸುವುದಿಲ್ಲ. ಸದಾ ಆಯಿಲ್ ‌ಫ್ರೀ ಮಾಯಿಶ್ಚರೈಸರ್‌ಸನ್‌ ಸ್ಕ್ರೀನ್‌ ಲೋಶನ್‌ ಬಳಸಲು ಯತ್ನಿಸಿರಿ. ಆದರೆ ಅದಕ್ಕಾಗಿ ಮೇಕಪ್‌ ರಿಮೂವ್ ‌ಮಾಡಲು ಕೋಲ್ಡ್ ಕ್ರೀಂ ಯಾ ಲೋಶನ್‌ ಬಳಸಬಾರದು, ಏಕೆಂದರೆ ಇದರಿಂದ ಚರ್ಮದ ಮೇಲೆ ಜಿಡ್ಡಿನ ಪದರ ಮಡುಗಟ್ಟುತ್ತದೆ.

ಸನ್ಸ್ಕ್ರೀನ್ಬಳಸಲು ಮರೆಯದಿರಿ : ಪ್ರತಿ ದಿನ ಮುಂಜಾನೆ ಮುಖ ಶುಚಿಗೊಳಿಸಿದ ನಂತರ, ಸನ್‌ ಸ್ಕ್ರೀನ್‌ ಹಚ್ಚಿಕೊಳ್ಳಲು ಮರೆಯದಿರಿ. ತಜ್ಞರ ಪ್ರಕಾರ, ಸೂರ್ಯನ ಹಾನಿಕಾರಕ UV ಕಿರಣಗಳು ಚರ್ಮವನ್ನು ಹಾನಿ ಮಾಡಬಹುದು. ಹ್ಞಾಂ, ನಿಮ್ಮ ಆಯ್ಲಿ ಚರ್ಮಕ್ಕೆ ಸದಾ ಆಯಿಲ್ ‌ಫ್ರೀ ಸನ್‌ ಸ್ಕ್ರೀನ್‌ ನ್ನು ಮಾತ್ರ ಬಳಸಬೇಕು ಎಂಬುದನ್ನು ಮರೆಯದಿರಿ.

ಆ್ಯಸ್ಪ್ರಿಂಜೆಂಟ್ಲೋಶನ್ಬಳಸಿರಿ : ನಿಮ್ಮ ಚರ್ಮ ಅಧಿಕ ಆಯ್ಲಿ ಆಗಿದ್ದರೆ, ನೀವು ಓಪನ್‌ ಪೋರ್ಸ್‌ ನ್ನು ಕಡಿಮೆ ಮಾಡಲು ಅದರ ಮೇಲೆ ಆ್ಯಸ್ಟ್ರಿಂಜೆಂಟ್‌ ನಿಂದ ಮಸಾಜ್‌ ಮಾಡಿ. ಇದರಿಂದ ಹೆಚ್ಚುವರಿ ಜಿಡ್ಡಿನಂಶ ತೊಲಗುತ್ತದೆ. ಆದರೆ ಇದರಲ್ಲಿ ಆಲ್ಕೋಹಾಲ್ ಮಟ್ಟ ಹೆಚ್ಚಿರುವುದರಿಂದ, ಕೆಲವರಿಗೆ ಇದರ ಬಳಕೆ ಚರ್ಮವನ್ನು ಡ್ರೈ ಮಾಡಿಸಲೂಬಹುದು. ಹೀಗಾಗಿ ಇದನ್ನು ಪ್ರತಿದಿನ ಬಳಸದೆ ವಾರಕ್ಕೆ 3-4 ಸಲ ಮಾತ್ರ ಬಳಸಿರಿ. ನೀವು ಮುಖವನ್ನು ಎಕ್ಸ್ ಫಾಲಿಯೇಟ್‌ ಮಾಡಿಸಿದ್ದರೆ, ಆ ದಿನ ಎಂದೂ ಆ್ಯಸ್ಟ್ರಿಂಜೆಂಟ್ ಬಳಸಲೇಬಾರದು.

ಚರ್ಮವನ್ನು ಎಕ್ಸ್ ಫಾಲಿಯೇಟ್ಮಾಡಿಸಿ : ಓಪನ್‌ ಪೋರ್ಸ್‌ ಹೆಚ್ಚದಂತೆ ತಡೆಯಲು ಎಕ್ಸ್ ಫಾಲಿಯೇಶನ್‌ ಒಂದು ಉತ್ತಮ ವಿಧಾನವಾಗಿದೆ. ಬಹಳ ಹೆಂಗಸರು ಆಯ್ಲಿ ಸ್ಕಿನ್‌ ಗಾಗಿ ಆಯಿಲ್ ‌ಫ್ರೀ ಸ್ಕ್ರಬ್‌ ನ್ನು ಬಳಸುತ್ತಾರೆ. ಆದರೆ ಮುಖದ ಮೇಲೆ ಇದನ್ನು ಬಲು ನಾಜೂಕಾಗಿ ಸವರಬೇಕು, ಇಲ್ಲದಿದ್ದರೆ ಮುಖದಲ್ಲಿ ಡ್ರೈನೆಸ್‌ ಹೆಚ್ಚಬಹುದು.

ವಾರಕ್ಕೊಮ್ಮೆ ಫೇಸ್ಮಾಸ್ಕ್ ಬಳಸಿರಿ : ಚರ್ಮವನ್ನು ಆಳವಾಗಿ ಶುಚಿಗೊಳಿಸುವ ಫೇಸ್‌ ಮಾಸ್ಕ್ ನಲ್ಲಿ ಅಂಟಂಟಾದ ಜೇಡಿಮಣ್ಣು ಇರುತ್ತದೆ. ಇದು ಸುಲಭವಾಗಿ ಮುಖದಲ್ಲಿನ ಹೆಚ್ಚುವರಿ ಜಿಡ್ಡನ್ನು ತೆಗೆದುಬಿಡುತ್ತದೆ. ಇದರಿಂದ ಬಹಳ ದಿನ ಮುಖದಲ್ಲಿ ಜಿಡ್ಡಿನಂಶ ಕಾಣುವುದೇ ಇಲ್ಲ. ಹೀಗಾಗಿ ಜೇಡಿಮಣ್ಣಿನ ಬದಲು, ಜೇನು ಅಥವಾ ಶಿಯಾ ಬಟರ್‌ ಮಿಕ್ಸ್ ಇರವಂಥದ್ದನ್ನೇ ಆರಿಸಿ, ಇದರಿಂದ ಮುಖ ಬಹಳ ಮೃದುವಾಗುತ್ತದೆ.

ನಿಮ್ಮದು ಆಯ್ಲಿ ಸ್ಕಿನ್‌ ಆಗಿದ್ದರೆ, ಕೆಲವೊಂದು ತಪ್ಪುಗಳನ್ನು ಮಾಡದಂತೆ ಎಚ್ಚರ ವಹಿಸಬೇಕು. ಅದರಲ್ಲೂ ಬೇಸಿಗೆಯಲ್ಲಿ ಈ ತಪ್ಪು ಮಾಡಿದರೆ, ನಿಮ್ಮ ಮುಖದ ಸೌಂದರ್ಯ ತಂತಾನೇ ಕುಂದುತ್ತದೆ.

ಕೊಳಕು ಕೈನಿಂದ ಮುಖವನ್ನು ಮತ್ತೆ ಮತ್ತೆ ಮುಟ್ಟಿಕೊಳ್ಳಬೇಡಿ : ಎಷ್ಟೋ ಹೆಂಗಸರು ತಮ್ಮ ಕೊಳಕಾದ ಕೈಯಿಂದಲೇ ಮುಖವನ್ನು ಮತ್ತೆ ಮತ್ತೆ ಮುಟ್ಟಿಕೊಳ್ಳುವ ಅಭ್ಯಾಸ ಇರುತ್ತದೆ. ಇದರಿಂದ ಆ್ಯಕ್ನೆ ಮೊಡವೆ ಹಚ್ಚು ತೊಂದರೆ ತಪ್ಪಿದ್ದಲ್ಲ. ಅಷ್ಟು ಮಾತ್ರವಲ್ಲ, ಬೆವರಿನಿಂದ ಒದ್ದೆ ಆದ ಕೈಯಲ್ಲಿ ಅಂಟಿರುವ ವೈರಸ್‌ ಬ್ಯಾಕ್ಟೀರಿಯಾ ಮುಖವನ್ನು ಅಂದಗೆಡಿಸಬಹುದು.

ಧಾರಾಳವಾಗಿ ಬ್ಯೂಟಿ ಪ್ರಾಡಕ್ಟ್ಸ್ ಬಳಸಬೇಡಿ : ಎಷ್ಟು ಸಾಧ್ಯವೋ ಅಷ್ಟು ಆಯ್ಲಿ ಚರ್ಮವನ್ನು ಕಾಸ್ಮೆಟಿಕ್ಸ್ ಬಳಸದೆಯೇ ಫ್ರೆಶ್‌ ಆಗಿ ಇಟ್ಟುಕೊಳ್ಳಬೇಕು. ಅಗತ್ಯಕ್ಕಿಂತ ಹೆಚ್ಚು ಪ್ರಾಡಕ್ಟ್ಸ್ ಬಳಸುವುದರಿಂದ ಮುಖದಲ್ಲಿ ಆ್ಯಕ್ನೆ, ಮೊಡವೆ ತಪ್ಪಿದ್ದಲ್ಲ. ನಿಮ್ಮ ಚರ್ಮ ಯಾವ ಬಗೆಯದು ಎಂಬುದನ್ನು ಗಮನಿಸಿಕೊಂಡೇ ಅದಕ್ಕೆ ಸೂಕ್ತ ಕಾಸ್ಮೆಟಿಕ್ಸ್ ಖರೀದಿಸಬೇಕು. ಬೇಸಿಗೆಯಲ್ಲಿ ಚರ್ಮಕ್ಕೆ ಹೊಸ ಹೊಸ ಪ್ರಾಡಕ್ಟ್ಸ್ ನ ಪ್ರಯೋಗ ಮಾಡಲು ಹೋಗಬೇಡಿ.

ಓವರ್ಈಟಿಂಗ್ಬೇಡ : ಕೇವಲ ಹೊರಭಾಗದಿಂದ ಚರ್ಮದ ಆರೈಕೆ ಮಾಡಿದರೆ ಸಾಲದು, ಬದಲಿಗೆ ಅದನ್ನು ಆಂತರಿಕವಾಗಿಯೂ ಹೆಲ್ದಿ ಆಗಿಸುವ ಅಗತ್ಯವಿದೆ. ಆಯ್ಲಿ ಫುಡ್‌, ಜಂಕ್‌ ಫುಡ್‌, ಫಾಸ್ಟ್ ಫುಡ್‌, ಕೋಲ್ಡ್ ಡ್ರಿಂಕ್ಸ್, ಐಸ್‌ ಕ್ರೀಂ ಮುಂತಾದುವನ್ನು ಹೆಚ್ಚು ಸೇವಿಸಿದಷ್ಟೂ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುತ್ತದೆ. ಹೀಗಾಗಿ ಸೀಮಿತ ಪ್ರಮಾಣದಲ್ಲಿ ಪೌಷ್ಟಿಕ ಆಹಾರ ಮಾತ್ರ ಸೇವಿಸಿ. ಧಾರಾಳವಾಗಿ ಆಗಾಗ ನೀರು ಕುಡಿಯಲು ಮರೆಯಬೇಡಿ. ನೀರಿನ ಅಧಿಕ ಸೇವನೆ ಚರ್ಮದ ಸಮಸ್ಯೆಗಳನ್ನೂ ದೂರ ಇರಿಸುತ್ತದೆ.

ನೀರಜಾ

ಆಯ್ಲಿ ಸ್ಕಿನ್ಗಾಗಿ ಬೆಸ್ಟ್ ಸ್ಕಿನ್ಕೇರ್ರೊಟೀನ್

ನಿಮ್ಮ ದಿನದ ಆರಂಭ ಬೆಸ್ಟ್ ಕ್ಲೆನ್ಸರ್ಜೊತೆ : ನಿಮ್ಮ ಕ್ಲೆನ್ಸರ್‌ ಹೇಗಿರಬೇಕೆಂದರೆ, ಅದು ನಿಮ್ಮ ಚರ್ಮದ ಆಯಿಲ್ ‌ಪ್ರೊಡಕ್ಷನ್ ಕಂಟ್ರೋಲ್ ಮಾಡಬೇಕು ಹಾಗೂ ಹೆಚ್ಚು ಕಠೋರ (ಹಾರ್ಶ್‌) ಆಗಿರಬಾರದು. ಇದರಿಂದ ಸಹಜವಾಗಿ ನಿಮ್ಮ ಆ್ಯಕ್ನೆ, ಮೊಡವೆಗಳು ದೂರವಾಗುತ್ತವೆ, ಜೊತೆಗೆ ನಿಮ್ಮ ಚರ್ಮದ ಓಪನ್‌ ಪೋರ್ಸ್‌ ನ ಕೊಳೆಯೂ ನಿವಾರಣೆ ಆಗುತ್ತದೆ. ಸ್ಯಾಲಿಸಿಲಿಕ್‌ಆ್ಯಸಿಡ್‌ ಯುಕ್ತ ಕ್ಲೆನ್ಸರ್‌ ನ್ನೂ ಬಳಸುವುದೇ ಬೆಟರ್‌. ಇದರಲ್ಲಿ ಟೀಟ್ರೀ ಆಯಿಲ್ ಬೆರೆತಿದ್ದರೆ ಇನ್ನೂ ಉತ್ತಮ. ಉತ್ತಮ ಗುಣಮಟ್ಟದ ಕ್ಲೆನ್ಸರ್‌ ಗಾಗಿ ನೀವು ಅವೆನ್ಯೂ ಕ್ಲೀನಿಂಗ್‌ ಜೆಲ್‌, ಸೆಬಾಮೇಡ್‌ ಕ್ಲಿಯರ್‌ ಫೇಸ್‌ ಕ್ಲೆನ್ಸಿಂಗ್‌ ಪೇಮ್ ಇತ್ಯಾದಿಗಳನ್ನು ಬಳಸಿಕೊಳ್ಳಿ.

ಎಕ್ಸ್ ಫಾಲಿಯೇಟರ್‌ : ಆಯ್ಲಿ ಸ್ಕಿನ್‌ ವುಳ್ಳ ಹೆಂಗಸರು, ವಾರದಲ್ಲಿ 2 ಸಲ ತಮ್ಮ ಚರ್ಮವನ್ನು ಎಕ್ಸ್ ಫಾಲಿಯೇಟ್‌ ಮಾಡಿಸಬೇಕು. ನೀವು ಇದಕ್ಕಾಗಿ ಅಗತ್ಯವಾಗಿ ಕ್ಲೀನ್‌ಕ್ಲಿಯರ್‌ ಸ್ಕ್ರಬ್‌, ಲೋಟಸ್‌ ಹರ್ಬ್‌ ಬೆರಿ ಸ್ಕ್ರಬ್‌, ಸ್ಟ್ರಾಬೆರಿ  ಆ್ಯಲೋವೆರಾ ಎಕ್ಸ್ ಫಾಲಿಯೇಟಿಂಗ್‌ ಫೇಸ್‌ ವಾಶ್‌ ಬಳಸಿಕೊಳ್ಳಿ.

ಟೋನರ್‌: ಇದಾದ ನಂತರ, ನಿಮ್ಮ ಚರ್ಮಕ್ಕೆ ತಗುಲಬಹುದಾದ ಅನಗತ್ಯ ಅಂಶಗಳನ್ನು ಹೀರಿಕೊಳ್ಳಲು ಟೋನರ್‌ ನಿಮಗೆ ಬಹಳ ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಆಯ್ಲಿ ಸ್ಕಿನ್ನಿನ ಪೋರ್ಸ್‌ ಎಷ್ಟೋ ಚಿಕ್ಕದಾಗುತ್ತದೆ. ಇದರಿಂದ ನಿಮ್ಮ ಸ್ಕಿನ್ನಿನ ಟೆಕ್ಸ್ ಚರ್‌ ನಲ್ಲೂ ಎಷ್ಟೋ ಸುಧಾರಣೆಯಾಗುತ್ತದೆ. ಈ ರೀತಿ ನಿಮ್ಮ ಚರ್ಮದಿಂದ ತೈಲಾಂಶ ಸ್ರವಿಸುವಿಕೆ ಎಷ್ಟೋ ಕಡಿಮೆ ಆಗುತ್ತದೆ. ಇದಕ್ಕಾಗಿ ನೀವು ಪ್ಲಮ್ ಗ್ರೀನ್‌ ಟೀ ಫೇಸ್‌ ಟೋನರ್‌, ಕಾಯಾ ಪ್ಯೂರಿಫೈಯಿಂಗ್‌ ಟೋನರ್‌, ಇತ್ಯಾದಿ ಬಳಸಿಕೊಳ್ಳಿ.

ಸನ್ಸ್ಕ್ರೀನ್ಲೋಶನ್ಸಹ ಅತ್ಯಗತ್ಯ : ನೀವು ಮಿನರಲ್ ಬೇಸ್ಡ್ ಸನ್‌ ಸ್ಕ್ರೀನ್‌ ಸಹ ಬಳಸಿಕೊಳ್ಳಿ. ಸತು (ಝಿಂಕ್‌)ವುಳ್ಳ ಸನ್ ಸ್ಕ್ರೀನ್‌ಎಷ್ಟೋ ಪರಿಣಾಮಕಾರಿ. ಇನ್ಸ್ ಫ್ರೀ ಡೇಲಿ UV ಪ್ರೊಟೆಕ್ಷನ್‌ ಕ್ರೀಂ, ನೋ ಸೀಬಮ್ SPF ಪಿ++, ಅಲ್ಟ್ರಾ ವೈಲೆಟ್‌UV ಡಿಫೆನ್ಸ್ ಮಿನರಲ್ ಸನ್‌ ಸ್ಕ್ರೀನ್‌ SPF 50 ಪಿ++ ಇತ್ಯಾದಿ ಕೊಂಡುಕೊಳ್ಳಿ.

ಫೇಸ್ಮಾಸ್ಕ್ : ನಿಮ್ಮ ಚರ್ಮವನ್ನು ಸದಾ ಕ್ಲೀನ್‌ಕ್ಲಿಯರ್‌ ಆಗಿಟ್ಟುಕೊಳ್ಳಲು, ನೀವು ಚಾರ್‌ ಕೋಲ್ ‌ಯಾ ಮೋರ್ಕನ್‌ ಕ್ಲೇಯುಕ್ತ ಫೇಸ್‌ ಮಾಸ್ಕ್ ಬಳಸಬೇಕು. ನಿಮಗೆ ಎಕ್ಸ್ ಫಾಲಿಯೇಟಿಂಗ್‌ ಮಾಸ್ಕ್ ಬೇಕಿದ್ದರೆ, ನೀವು ಗ್ಲೈಕೋಲಿಕ್‌ ಆ್ಯಸಿಡ್‌ ಯುಕ್ತ ಅಂಶಗಳಿರುವ ಮಾಸ್ಕ್ ಬಳಸಿಕೊಳ್ಳಿ. ದಿ ಬಾಡಿ ಶೇಪ್‌, ಹಿಮಾಲಯ ಚಾರ್ಕೋಲ್ ಪ್ಯೂರಿಫೈಯಿಂಗ್‌ ಗ್ಲೋ ಮಾಸ್ಕ್, ಇನ್ಸ್ ಫ್ರೀ ಸೂಪರ್‌ ವಾಲ್ ‌ಕ್ಯಾನಿಕ್‌ ಕ್ಲೇ ಮಾಸ್ಕ್ ಇತ್ಯಾದಿ ನಿಮಗೆ ಬೆಸ್ಟ್ ಆಗಿರುತ್ತದೆ.

ಮಾಯಿಶ್ಚರೈಸರ್‌ : ನೀವು ಲೈಟ್‌ ವೆಯ್ಟ್ ನ ಮಾಯಿಶ್ಚರೈಸರ್‌ ಬಳಸುವುದೇ ಸೂಕ್ತ, ಇದರಿಂದ ಮುಖ ತನ್ನ ಮಾಯಿಶ್ಚರ್ ಕಳೆದುಕೊಳ್ಳುವುದಿಲ್ಲ. ನೀವು ಗ್ಲಿಸರಿನ್‌ ಯುಕ್ತ ಯಾ ಹ್ಯಾಲುರೋನಿಕ್‌ ಆ್ಯಸಿಡ್‌ ಯುಕ್ತ ಅಂಶಗಳುಳ್ಳ ಮಾಯಿಶ್ಚರೈಸರ್‌ ನ್ನೇ ಬಳಸಿರಿ. ಇದನ್ನು ಸಾಧ್ಯವಾದಷ್ಟೂ ಪ್ರತಿದಿನ ಬಳಸಿಕೊಳ್ಳಿ. ಇದಕ್ಕಾಗಿ ನೀವು ನ್ಯೂಟ್ರೆಗೆನಾದ ವಾಟರ್‌ ಜೆಲ್‌, ಲೋರಿಯಲ್ ಪ್ಯಾರಿಸ್‌ ನ ಹೈಡ್ರಾ ಫೇಸ್‌ ಜೆಲ್ ‌ಇತ್ಯಾದಿ ಬಳಸಿಕೊಳ್ಳಿ.

ಆಯ್ಲಿ ಸ್ಕಿನ್ಗಾಗಿ ಬೆಸ್ಟ್ ಸೀರಮ್ : ಹೈಪರ್‌ ಪಿಗ್ಮೆಂಟೇಶನ್‌ ನಂಥ ಗಂಭೀರ ಚರ್ಮ ಸಮಸ್ಯೆ ಎದುರಿಸುತ್ತಿರುವ, ಆಯ್ಲಿ ತ್ವಚೆಯುಳ್ಳ ಹೆಂಗಸರು ಮಾತ್ರವೇ ಇಂಥ ಸೀರಮ್ ಬಳಸಬೇಕು. ನಿಮ್ಮ ಸ್ಕಿನ್‌ ಡೀ ಹೈಡ್ರೇಟೆಡ್‌ ಆಗಿದೆ ಎನಿಸಿದರೆ, ಆಗ ಕೆಲವು ಹನಿ ಹೈಡ್ರೇಟಿಂಗ್‌ ಫೇಸ್‌ ಸೀರಮ್ ಬಳಸಿಕೊಳ್ಳಬೇಕು. ವಯಸ್ಸು 40+ ದಾಟುತ್ತಿದ್ದಂತೆ, ಆ್ಯಂಟಿ ಏಜಿಂಗ್‌ ಫೇಸ್‌ ಸೀರಮ್ ಸಹ ಬಳಸಬಹುದು. ಇದಕ್ಕಾಗಿ ನೀವು ಕಾಯಾ ಪಿಗ್ಮೆಂಟೇಶನ್‌ ಫ್ರೀ ಫಾರ್ಮುಲಾ, ಇಟ್ಸ್ ಸ್ಕಿನ್‌ ಪವರ್‌ 10 ಫಾರ್ಮುಲಾ  ಇತ್ಯಾದಿ ಸೀರಮ್ ಸಹ ಬಳಸಿಕೊಳ್ಳಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ