ಸರಸ್ವತಿ*
ದಾವಣಗೆರೆಯ ಮುದೇಗೌಡ್ರು ನವೀನ್ ಕುಮಾರ್ ಆರ್. ಓ ಹಾಗೂ ತೆಲಿಗಿ ಮಲ್ಲಿಕಾರ್ಜುನಪ್ಪ ಅವರ ನಿರ್ಮಾಣದಲ್ಲಿ ಕಾರ್ಕಳದ ನಾಗರಾಜ್ ಶಂಕರ್ ಅವರ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದಲ್ಲಿ ಮೂಡಿಬಂದಿರುವ `ಮರಳಿ ಮನಸಾಗಿದೆ’ ಕನ್ನಡ ಚಲನಚಿತ್ರದ ಟೀಸರ್ ಬಿಡುಗಡೆಗೆ ಇಂದು ದಾವಣಗೆರೆ ಜನತೆ ಸಾಕ್ಷಿಯಾದರು. ಕರುನಾಡ ಸಮರ ಸೇನೆ ಇದಕ್ಕೆ ಸಾಥ್ ನೀಡಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಆವರಗೊಳ್ಳದ ಶ್ರೀ ವೀರಭದ್ರ ಸ್ವಾಮಿ ಸನ್ನಿಧಾನದಲ್ಲಿ `ಮರಳಿ ಮನಸಾಗಿದೆ’ ಚಿತ್ರದ ಮಹೂರ್ತ ದಿಂದ ಶುಭಾರಂಭಗೊಂಡು ಜಿಲ್ಲೆ ಮತ್ತು ನಾಡಿನ ಪ್ರಮುಖ ತಾಣಗಳಲ್ಲಿ ಚಿತ್ರೀಕರಣಗೊಂಡು ತೆರೆಗೆ ಸಿದ್ದವಾಗಿ, ಟೀಸರ್ ದಾವಣಗೆರೆಯಲ್ಲಿಯೇ ಬಿಡುಗಡೆಯಾಗಿರುವುದು ಕನ್ನಡಿಗರು ಹೆಮ್ಮೆಪಡುವ ವಿಚಾರವಾಗಿದೆ ಎಂದರು. ಯುವ ಪೀಳಿಗೆಗೆ ಭಾವನೆಗಳನ್ನು ಬೆಸೆಯುವಂತಹದ್ದು, ಮನಸ್ಸನ್ನು, ಬುದ್ದಿಯನ್ನು ಸ್ವಾಸ್ಥಗೊಳಿಸುವಂತಹದ್ದು, ಜೊತೆಗೆ ಸ್ವಾಸ್ಥ್ಯ ಬದುಕಿ ನಡೆಗೆ ಸಾಗುವಂತಹ ಸಂದೇಶವನ್ನು ಸಾರುವ ಚಿತ್ರ ನಿರ್ಮಾಣಗೊಂಡಿರುವುದು ಸಂತಸ ಉಂಟುಮಾಡಿದೆ. ಕನ್ನಡ ಚಿತ್ರಗಳನ್ನು ಪ್ರೇಕ್ಷಕರು ನೇರವಾಗಿ ಚಿತ್ರಮಂದಿರಗಳಿಗೇ ಹೋಗಿ ನೋಡುವಂತೆ ಕರೆ ನೀಡಿದರು.

ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, `ಮರಳಿ ಮನಸಾಗಿದೆ’ ಚಿತ್ರ ಶತದಿನೋತ್ಸವ ಆಚರಿಸುವ ಜೊತೆಗೆ ಪ್ಯಾನ್ ಇಂಡಿಯಾ ಖ್ಯಾತಿ ಗಳಿಸುವ ಚಿತ್ರಗಳನ್ನು ನಿರ್ಮಾಣ ಮಾಡಲಿ, ಚಿತ್ರದ ನಟ-ನಟಿಯರು ಪ್ಯಾನ್ ಇಂಡಿಯಾ ಸ್ಟಾರ್ಗಳಾಗಿ ಮಿಂಚಲಿ ಎಂದು ಶುಭ ಹಾರೈಸಿದರು. ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ಅವರು, ಚಿತ್ರದ ಟೀಸರ್ ಗಮನಿಸಿದರೆ ಯುವ ಜನರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿದೆ. ಯುವಕರಲ್ಲಿ ಉತ್ಸಾಹ ಮೂಡಿಸುವ ಚಿತ್ರ ಇದಾಗಿದೆ.
ರಂಗಕರ್ಮಿ, ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ ಮಾತನಾಡಿ, `ಮರಳಿ ಮನಸಾಗಿದೆ’ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಶಾಸಕ ಕೆ.ಎಸ್.ಬಸವಂತಪ್ಪ, ಹಿರಿಯ ಪತ್ರಕರ್ತ ಹೆಚ್.ಬಿ. ಮಂಜುನಾಥ್, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ಪಾಲಿಕೆ ಮಾಜಿ ಸದಸ್ಯ ಗಡಿಗುಡಾಳ್ ಮಂಜುನಾಥ್, ಕರ್ನಾಟಕ ಮುಕ್ತ ವಿವಿ ಕುಲಸಚಿವ ಡಾ.ಹೆಚ್.ವಿಶ್ವನಾಥ್ ಮತ್ತಿತರರು `ಮರಳಿ ಮನಸಾಗಿದೆ’ ಚಿತ್ರ ಯಶಸ್ವಿಗೊಳ್ಳಲಿ ಎಂದು ಶುಭ ಹಾರೈಸಿದರು.

ಚಿತ್ರದ ನಿರ್ಮಾಪಕ ಮುದೇಗೌಡ್ರ ನವೀನ್, ತೆಲಗಿ ಮಲ್ಲಿಕಾರ್ಜುನಪ್ಪ, ನಾಯಕ ನಟ ಅರ್ಜುನ್ ವೇದಾಂತ್, ನಾಯಕಿ ನಟಿ ಸ್ಮೃತಿ ವೆಂಕಟೇಶ್, ನಿರ್ದೇಶಕ ನಾಗರಾಜ್ ಶಂಕರ್, ವಿಜಯ್ ಕುಮಾರ್ ಎಸ್, ಹರೀಶ್ ಎಸ್. ಎಂ ಹಾಗೂ ಸಂಜಯ್ ಉಮ್ರಾನಿ ಅವರು, ಚಿತ್ರದ ಟೀಸರ್ ಬಿಡುಗಡೆಗೆ
ಸಹಕರಿಸಿದ ಕನ್ನಡ ಸಮರ ಸೇನೆಯ ಸಹಕಾರವನ್ನು ಕೃತಜ್ಞತಾ ಭಾವದಿಂದ ಸ್ಮರಿಸಿದರು. ನೇರವಾಗಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ಸಮಾರಂಭದಲ್ಲಿ ಅ.ಭಾ. ವೀರಶೈವ ಮಹಾಸಭಾ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶ್ರೀಮತಿ ಸಹನಾ ರವಿ, ಕನ್ನಡ ಸಮರ ಸೇನೆಯ ಕಿರಣ್ ಬಾಳೆಹೊಲದ, ಸಂಸ್ಥಾಪಕ ಅಧ್ಯಕ್ಷ ಐಗೂರು ಸುರೇಶ್, ಜಿಲ್ಲಾಧ್ಯಕ್ಷ ರಮೇಶ್ ಬೇಳೂರು ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು. ಇಡೀಯ ಕಾರ್ಯಕ್ರಮವನ್ನು ಬಹಳ ಅರ್ಥಗರ್ಭಿತ ಹಾಗೂ ಅಚ್ಚುಕಟ್ಟಾಗಿ ತಮ್ಮ ನಿರೂಪಣೆಯ ಮೂಲಕ ಎಂ. ಬಿ. ನಾಗರಾಜ್ ಕಾಕನೂರು ಅವರು ನೆರವೇರಿಸಿಕೊಟ್ಟರು.





