`ಅನಿಮಲ್’ ಚಿತ್ರದ ನಂತರ ನಾಯಕಿ ತೃಪ್ತೀ ಡಿಮ್ರಿಯ ಜೀವನವೇ ಬದಲಾಗಿ ಹೋಯಿತು. ಅವಳು ಲೈಮ್ ಲೈಟಿನಲ್ಲಿ ಮಿಂಚುತ್ತಾ, ಹೆಚ್ಚು ಕೆಲಸ ಗಿಟ್ಟಿಸುತ್ತಿದ್ದಾಳೆ. ಇರಲಿ, ಸದ್ಯಕ್ಕಂತೂ ಈ ಬೋಲ್ಡ್ ಹುಡುಗಿ ತನ್ನ `ಮೀ ಟೈಂ’ಗಾಗಿ ಇಟಲಿಗೆ ಹೋಗಿದ್ದಾಳೆ. ರಾಹುಲ್ ‌ಗಾಂಧಿ ತರಹ ತೃಪ್ತೀಗೆ ಅದು ಅಜ್ಜಿ ಮನೆಯೇನೂ ಅಲ್ಲ, ಸುಮ್ಮನೆ ಟೂರ್‌ ಗೆಂದು ಹೊರಟಿದ್ದಾಳಂತೆ. ನೀವು ಸಹ ಬಿಡುವಾಗಿದ್ದಾಗ ಇಟಲಿಯ ಪ್ರವಾಸಕ್ಕೆ ಏಕೆ ಹೊರಡಬಾರದು? ಯಾರಿಗೆ ಗೊತ್ತು…. ನಿಮಗೆ ಅಲ್ಲಿ ಆಕಸ್ಮಿಕವಾಗಿ ತೃಪ್ತೀ ಅಥವಾ ರಾಹುಲ್ ‌ಗಾಂಧಿ ಸಿಕ್ಕರೂ ಸಿಗಬಹುದು!

100-Karodi-Club-me-jaengi-sharwari

100 ಕ್ರೋರ್ಕ್ಲಬ್ಗೆ ಸೇರಲಿದ್ದಾಳಾ ಶಾರಿ?

ಹಾರರ್‌ ಕಾಮೆಡಿ `ಮುಂಜ್ಯಾ’ ಚಿತ್ರ ರಿಲೀಸ್‌ ಆದ ಕೆಲವೇ ದಿನಗಳಲ್ಲಿ 50 ಕೋಟಿ ಗಳಿಸುವ ಮೂಲಕ ಹೊಸ ರೆಕಾರ್ಡ್‌ ಮಾಡಿದೆ! ಶಾರ್ರಿ ವಾಘ್‌ ಹಾಗೂ ಅಭಯ್‌ ಮರ್ಮಾರಂಥ ಕನಿಷ್ಠ ಲೈಮ್ ಲೈಟ್‌ ವುಳ್ಳ ಸ್ಟಾರ್‌ ಗಳ ಈ ಚಿತ್ರ, ಉತ್ತರದವರನ್ನು ಬಹುವಾಗಿ ಆಕರ್ಷಿಸಿದೆ. ಈ ಚಿತ್ರದ ಹೆಚ್ಚಿನ ಕ್ರೆಡಿಟ್‌ ಗಿಟ್ಟಿಸಿದವಳು ಮಾತ್ರ ಶಾರಿ ಒಬ್ಬಳೇ! ಮುಂಬೈನಲ್ಲಿ ಹುಟ್ಟಿದ ಈಕೆ 27 ದಾಟಿದ್ದಾಳೆ. ಬಾಲಿವುಡ್‌ ಇವಳಿಗೆ ಧಾರಾಳ ಮಣೆ ಹಾಕಿದೆ. ಈ ಚಿತ್ರದ ನಂತರ ಈಕೆ ಜಾನ್‌ ಅಬ್ರಹಾಂ ಜೊತೆ `ವೇದಾ’ ಚಿತ್ರದಲ್ಲಿ ನಟಿಸಲಿದ್ದಾಳೆ.

Barkarar-hai-gullak-ki-khanak

ಎಲ್ಲೆಲ್ಲೂ ಸದ್ದು ಮಾಡುತ್ತಿದೆ ಗುಲ್ಲಕ್

ಹಳೆ ಹಿಂದಿ ಧಾರಾವಾಹಿ `ಗುಲ್ಲಕ್‌’ ಇದೀಗ ತನ್ನ ಹೊಸ ಸೀಸನ್‌ ಶುರು ಮಾಡಿ, ಎಲ್ಲೆಲ್ಲೂ ಸದ್ದು ಮಾಡುತ್ತಿದೆ! ವೀಕ್ಷಕರು ಇದನ್ನು ಬಹಳ ಮೆಚ್ಚಿದ್ದಾರೆ. ಈ ಸಲದ ಕಂತುಗಳಲ್ಲಿ ಮಧ್ಯಮ ವರ್ಗದ ಮಂದಿ ಲಂಚ ರುಶುವತ್ತು, ಕಳ್ಳತನ, ದಗಾ ಸುಲಿಗೆಗಳಂಥ ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾರೆ ಎಂದು ತೋರಿಸಲಾಗಿದೆ. ಮನೆಯ ಹೆಂಗಸರು ಇಂಥ ಸಮಸ್ಯೆಗಳಿಂದ ಹೆಚ್ಚು ಕಷ್ಟಪಡುತ್ತಾರೆ. ಎಷ್ಟೇ ಆರ್ಥಿಕ ಸಂಕಷ್ಟಗಳಿರಲಿ, ಅವರಂತೂ ಮನೆ ನಡೆಸಬೇಕಲ್ಲ? ನಮ್ಮ ಸರ್ಕಾರ ಈ `ಗುಲ್ಲಕ್‌’ನ ಸದ್ದು ಕೇಳಿಸಿಕೊಂಡರೆ, ಸಾಮಾನ್ಯ ಜನರ ಸುರಕ್ಷತೆಗೆ ಒಂದು ದಾರಿಯಾದೀತು.

Aasan-nahi-guddu-bhaiya-nibhana

ಗುಡ್ಡು ಭೈಯಾ ಆಗಿರುವುದು ಸುಲಭವಲ್ಲ

OTTಯಲ್ಲಿ `ಮಿರ್ಜಾಪುರ್‌’ ಸೀರೀಸ್‌ ನ ಅಭಿಮಾನಿಗಳು ಇದರ ಹೊಸ ಸೀಸನ್‌ ಗಾಗಿ ಬಲು ಕಾತುರದಿಂದ ಕಾಯುತ್ತಿದ್ದಾರೆ. ಈ ಸಲ ಕಾಲೀನ್‌ ಭೈಯಾ ಗುಡ್ಡು ಭೈಯಾ ಮಧ್ಯೆ ನೇರಾನೇರ ಯುದ್ಧ ಆಗಲಿದೆ. ಗುಡ್ಡು ಭೈಯಾ ಅಂದ್ರೆ ಅಲೀ ಫಝಲ್ ಹೇಳುವುದೆಂದರೆ, ಈ ಪಾತ್ರ ನಿಭಾಯಿಸುವುದು ಅವನಿಗೆ ಖಂಡಿತಾ ಸುಲಭ ಆಗಿರಲಿಲ್ಲವಂತೆ. ಕ್ರೈಂ ಲೋಕ ಅರಿತು, ಆ ಪಾತ್ರದಲ್ಲಿ ಲೀನವಾಗುವುದು ಬಹಳ ಕಷ್ಟಕರವಾಗಿತ್ತಂತೆ. ಆದರೆ ಈತನ ಈ ಪಾತ್ರ ಎಲ್ಲರಿಗೂ ಬಹಳ ಇಷ್ಟವಾಗಿರುವುದರಿಂದ, ಮುಂದೆ ಈತನಿಗೆ ಛಾನ್ಸೋ ಛಾನ್ಸು!

Hum-to-pyar-me-hain

ವೀ ಆರ್ಇನ್ಲವ್!

7 ವರ್ಷಗಳ ಕಾಲ ಲಿವ್ ‌ಇನ್‌ ರಿಲೇಶನ್‌ ಶಿಪ್‌ ನಲ್ಲಿದ್ದ ಸೋನಾಕ್ಷಿ ತನ್ನ ಬಾಯ್‌ ಫ್ರೆಂಡ್‌ ಝಹೀರ್‌ ನನ್ನು ಹಲವು ವಿಧದಲ್ಲಿ ಒರೆಗೆ ಹಚ್ಚಿ, ಇದೀಗ ಮದುವೆಯ ಬಂಧನದಲ್ಲಿ ಬಂಧಿಸಲಿದ್ದಾಳೆ! ಸಾಮಾನ್ಯವಾಗಿ ಬಾಲಿವುಡ್‌ ನಲ್ಲಿ ಪರಸ್ಪರ ಬೇರೆ ಧರ್ಮೀಯರು ಲಗ್ನವಾದರೆ ದೊಡ್ಡ ರಂಪಾಟವೇನೂ ಆಗುವುದಿಲ್ಲ, ಆದರೆ ಇಲ್ಲಿ ಇವಳ ತಂದೆ ಶತ್ರುಘ್ನ ಸಿನ್ಹಾರಿಗೆ ಯಾಕೋ ಈ ಸಂಬಂಧ ಇಷ್ಟ ಆಗಲಿಲ್ಲ. ಆದರೆ ಸೋನಾಕ್ಷಿ ತಂದೆ ಮಾತನ್ನು ಮೀರಿ ಮದುವೆಗೆ ಸಿದ್ಧಳಾಗಿದ್ದಾಳೆ. ಮುಂದೆ ಝಹೀರ್‌ ಮನೆಯವರು ಬುರ್ಖಾ ಧರಿಸದ ಇವಳನ್ನು ಹೀಗೆ ಒಪ್ಪುತ್ತಾರೋ ಕಾದು ನೋಡಬೇಕು!

jahanvi-kapoor

ಜಾಹ್ನವಿಯ ಫ್ಯಾಷನ್ಖದರ್ರೇ ಬೇರೆ!

ಇತ್ತೀಚೆಗೆ ನಮ್ಮ ಕ್ಯಾಮೆರಾ ಮ್ಯಾನ್‌ ದಿ ಶ್ರೀದೇವಿಯ ಮಗಳು ಜಾಹ್ನವಿ ಕಪೂರ್‌ ಳ  `ಮಿಸ್ಟರ್‌ಮಿಸೆಸ್‌ ಮಾಹಿ’ ಚಿತ್ರದ ಪ್ರಮೋಶನ್‌ ಗಾಗಿ ಇಂಥ ಹಲವು ಫೋಟೋ ಸೆರೆಹಿಡಿದರು. ಈ ರೀತಿ ಜಾಹ್ನವಿಯ ಸ್ಟೈಲಿಶ್‌ ಸೀರೆಯ ಲುಕ್ಸ್ ಎಲ್ಲೆಡೆ ಮಿಂಚುತ್ತಿದೆ. ಸೀರೆಯ ಪ್ಯಾಟರ್ನ್‌ ಜೊತೆ ಬ್ಲೌಸ್‌ಹ್ಯಾಂಡ್‌ ಬ್ಯಾಗ್‌ ನ ಸ್ಟೈಲ್ ‌ಸಹ ಜನರ ಗಮನ ಸೆಳೆಯಿತು. ಲೆದರ್‌ ಟಚ್‌ ನ ಬ್ಲೌಸ್‌ ಜೊತೆ ಮ್ಯಾಚಿಂಗ್‌ ಬ್ಯಾಗ್‌ ಕ್ಯಾರಿ ಮಾಡುತ್ತಾ, ಜಾಹ್ನವಿ ಹೊಸ ಸ್ಟೈಲ್ ಸ್ಟೇಟ್‌ ಮೆಂಟ್‌ ಕ್ರಿಯೇಟ್‌ ಮಾಡಿದ್ದಾಳೆ. ನೀವು ಏಕೆ ಈ ಸ್ಟೈಲ್ ‌ಟ್ರೈ ಮಾಡಬಾರದು?

Aryan-khan

ಯುವ ನಿರ್ದೇಶಕ ಆರ್ಯನ್

ಶಾರೂಖ್‌ಖಾನ್‌ ನ ಮಗ ಆರ್ಯನ್‌, ಇತ್ತೀಚೆಗೆ ತನ್ನ ಮೊದಲ ನಿರ್ದೇಶನದ `ಸ್ಟಾರ್‌ ಡಂ’ ಸೀರೀಸ್‌ ನ ಕೆಲಸ ಪೂರೈಸಿದ್ದಾನೆ. ಈ ಸೀರೀಸ್‌ ನಲ್ಲಿ ಅವನು ಬಾಬಿ ಡಿಯೋಲ್‌, ಮೋನಾ ಸಿಂಗ್‌ ರಂಥ ಘಟಾನುಘಟಿಗಳನ್ನು ಡೈರೆಕ್ಟ್ ಮಾಡಿದ್ದಾನೆ. ಸುದ್ದಿಗಾರರ ಪ್ರಕಾರ ಇದರಲ್ಲಿ ರಣವೀರ್‌ ಸಿಂಗ್‌ರಣಬೀರ್‌ ಕಪೂರ್‌ ರ ಕ್ಯಾಮಿಯೋ ಸಹ ಇದೆಯಂತೆ. ಅದೆಲ್ಲ ಸರಿ ಕಣಪ್ಪ, ನಿನ್ನ ಮುಸುಡಿ ಅದೇಕೆ ಹಾಗೆ ಗಂಭೀರವಾಗಿರುತ್ತದೆ, ಒಂದಿಷ್ಟು ನಗುಮುಖ ಮಾಡಿಕೊಂಡರೆ ಗಂಟೇನು ಹೋಗುತ್ತದೆ ಎಂಬುದು ಸುದ್ದಿಗಾರರ ಅಂಬೋಣ. ಹೋದರೆ ಹೋಗಲಿ ಎಂಬಂತೆ, ಶಾರೂಖ್‌ ನ ತಂಡ ಈ ಸಲದ ಕಪ್ ಎತ್ತಿದಾಗ ಇನ್ನೊಂದಿಷ್ಟು ಹಲ್ಲು ಕಿಸಿದನಂತೆ, ಅಲ್ಲಿಗೆ ಬಾಲಿವುಡ್‌ ಧನ್ಯೋಸ್ಮಿ!

Divya-khosla

ಹೆತ್ತವರ ಸಂತೋಷಕ್ಕಾಗಿ ಮದುವೆ ಮಾಡಿಕೊಂಡೆ

ದಿವ್ಯಾ ಕೋಸ್ಲಾ ಕುಮಾರ್‌ ಳ `ಸಾವಿ’ ಚಿತ್ರದ ಪ್ರಮೋಶನ್‌ ಬಹಳ ಲೋ ಪ್ರೊಫೈಲ್ ‌ಎನಿಸಿದೆ. ಆದರೆ ಈ ಸಂದರ್ಭದಲ್ಲಿ ಅವಳು ತನ್ನ ಖಾಸಗಿ ಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ಬೇರೆ ಬೇರೆ ಸಂದರ್ಶನಗಳಲ್ಲಿ ಹಂಚಿಕೊಂಡಿದ್ದಾಳೆ. ಹೀಗೆ ಹೇಳುವಾಗ ದಿವ್ಯಾಳಿಗೆ ಬಾಲಿವುಡ್‌ ನಲ್ಲಿ ದೊಡ್ಡ ಹೆಸರು ಮಾಡಬೇಕೆಂಬ ಹಂಬಲ ಬಹಳ ದಿನಗಳಿಂದ ಇತ್ತಂತೆ, ಆದರೆ ಅವಳ ಹೆತ್ತವರಿಗೆ ಈ ಸಿನಿಮಾ ಗ್ಲಾಮರ್‌ ಏನೇನೂ ಹಿಡಿಸುತ್ತಿರಲಿಲ್ಲ. ಮದುವೆಗೆ ಒಪ್ಪಿಕೊಂಡರೆ ಮಾತ್ರ, ಸಿನಿಮಾದಲ್ಲಿ ನಟಿಸಲು ಅನುಮತಿ ಕೊಡ್ತೀವಿ ಅಂದ್ರಂತೆ. ಹೀಗಾಗಿ ತನ್ನ ಮೊದಲ ಚಿತ್ರ ಬಿಡುಗಡೆ ಆದ ತಕ್ಷಣ, ಅವರು ತೋರಿದ ವರನನ್ನು ಇವಳು ವರಿಸಬೇಕಾಯಿತು. ಅವಳು ಇದೇ ಇಂಡಸ್ಟ್ರಿಯ ಭೂಷಣ್‌ ಕುಮಾರ್‌ ನನ್ನು ಮದುವೆಯಾದಳು. ಇವಳ ಹೋಳಿಗೆ ಜಾರಿ ತುಪ್ಪಕ್ಕೆ ಬಿತ್ತು, ಹೀಗಾಗಿ ಮದುವೆ ನಂತರ ಗ್ಲಾಮರ್‌ ಲೋಕದಲ್ಲಿ ಮುಂದುವರಿಯಲು ಪತಿ ಗ್ರೀನ್‌ ಸಿಗ್ನಲ್ ಕೊಟ್ಟಿದ್ದಾಯ್ತು. ಹೀಗಾಗಿ ಈಕೆಯ ಕಮ್ ಬ್ಯಾಕ್‌ ಸಲೀಸಾಗಬಹುದು. ಏನೇ ಇರಲಿ, ಇಂದಿಗೂ ನಮ್ಮ ಹೆಣ್ಣುಮಕ್ಕಳಿಗೆ ತಮ್ಮ ನೆಚ್ಚಿನ ಪ್ರೊಫೆಶನ್‌ಆರಿಸಿಕೊಳ್ಳುವ ಸ್ವಾತಂತ್ರ್ಯವಿಲ್ಲ ಎಂಬುದು ವಿಷಾದಕರ ವಿಷಯ!

sahid-kapoor

ಶಾಹಿದ್ ಭವ್ಯ ಮನೆ ಕೇವಲ 60 ಕೋಟಿ!

ಒಂದು ಸುಮಾರಾದ ಹಿಂದಿ ಚಿತ್ರ ತಯಾರಿಸಲು ಬಾಲಿವುಡ್‌ ಖರ್ಚು ಮಾಡಬಹುದಾದಷ್ಟು ಹಣ ಹೂಡಿ, ಶಾಹಿದ್‌ ಕಪೂರ್ ಮುಂಬೈನಲ್ಲಿ ಸಾಗರದತ್ತ ಮುಖ ಮಾಡಿದ ಭವ್ಯ ಫ್ಲಾಟ್‌ ಖರೀದಿಸಿದ್ದಾನೆ, ಇದರ ಬೆಲೆ ಕೇವಲ 60 ಕೋಟಿ! ಸುದ್ದಿಗಾರರ ಮಾಹಿತಿ ಸೂತ್ರಗಳ ಪ್ರಕಾರ, 36 ಮಹಡಿಗಳ ಅತಿ ಭವ್ಯ ಭವನದಲ್ಲಿ ಇವನ ಹೊಸ ಮನೆ 24ನೇ ಮಹಡಿಯಲ್ಲಿದೆಯಂತೆ! ಇಡೀ ಇಂಡಸ್ಟ್ರಿ ಇದನ್ನು ಕಂಡು ಸೈ ಸೈ ಎಂದು ತಲೆದೂಗಿದೆ. ಇತ್ತೀಚೆಗೆ ಮುಂಬೈ ಮಂದಿ ಮನೆಯ ಬಾಲ್ಕನಿಯಿಂದ ಬೀಚ್‌ ಕಡೆ ಮುಖ ಮಾಡಿ ಕುಳಿತು, ಕಾಫಿ ಸಿಪ್‌ ಮಾಡಲಾಗದು, ಹಾಗಾಗಿದೆ. ಬೀಚ್‌ ನಲ್ಲಿ ಎಲ್ಲೆಲ್ಲೂ ಕಚಡಾ ಕಸ ತುಂಬಿಕೊಂಡು ಆ ಬದಿಯ ಮನೆಗಳವರು ನೆಮ್ಮದಿಯಾಗಿ ಉಸಿರಾಡುವುದೇ ಕಷ್ಟಕರವಾಗಿದೆ. ಅಳಿದುಳಿದ ಜಾಗವನ್ನು ಯುವ ಪ್ರೇಮಿಗಳು ಆಕ್ರಮಿಸಿದರೆ, ಮಿಕ್ಕ ಪಾನಿಪೂರಿ ಅಂಗಡಿಗಳಿಗೇ ಸರಿ ಹೋದೀತು. ಹ್ಞಾಂ, 24ನೇ ಮಹಡಿಯಿಂದ ಶಾಹಿದ್‌ ಪರಿವಾರ ಇಣುಕಿದರೆ, ಸಾಗರದ ವಿಹಂಗಮ ದೃಶ್ಯ ರಮಣೀಯವಾಗಿ ಕಂಡುಬರುವುದರಲ್ಲಿ ಸಂದೇಹವಿಲ್ಲ.

nitanshi

ಅಂತೂ ನಿತಾಂಶಿಯ ಕೆರಿಯರ್ಸ್ಟಾರ್ಟ್

ಓಲ್ಡ್ ಡೆಲ್ಲಿ ಸಮೀಪದ ನೋಯ್ಡಾ ನಗರವಾಸಿ 16ರ ಹರೆಯದ ನಿತಾಂಶಿ `ಥಪಕೀ ಪ್ಯಾರ್‌ ಕೀ, ಪೇಶ್ವೆ ಬಾಜೀರಾವ್‌`ನಂಥ ಟಿವಿ ಧಾರಾವಾಹಿಗಳ ಜೊತೆ ಜೊತೆಗೆ `ಇಂದೂ ಸರ್ಕಾರ್‌, ಮೈದಾನ್‌’ಗಳಂಥ ಸಿನಿಮಾಗಳಲ್ಲೂ ಮುಖ ತೋರಿಸಿದ್ದಾಯಿತು. ಆದರೆ ಆಕೆಗೆ ಒಂದು ಐಡೆಂಟಿಟಿ ಅಂತ ಬಂದದ್ದು `ಲಾಪತಾ ಲೇಡೀಸ್‌’ ಚಿತ್ರದಿಂದ. ಸರಿಯಾದ ಅರ್ಥದಲ್ಲಿ ನಿತಾಂಶಿಯ ಕೆರಿಯರ್ ಇದೀಗ ಶುರು. ಈ ಚಿತ್ರದಲ್ಲಿ ಈಕೆಯ ಕುಮಾರಿಯ ಮುಗ್ಧ ಪಾತ್ರ ಎಲ್ಲರ ಮೆಚ್ಚುಗೆ ಗಳಿಸಿದೆ. ಆಮೀರ್‌ ಖಾನ್‌ ನ ಬಿಗ್‌ ಬ್ಯಾನರ್ ನಡಿ ತಯಾರಾದ `ಲಾಪತಾ ಲೇಡೀಸ್‌’ ಚಿತ್ರ ಬಾಕ್ಸ್ ಆಫೀಸ್‌ ನಲ್ಲೂ ಗೆದ್ದಿದೆ! ನಿತಾಂಶಿ ಡಿಯರ್‌, ಆಲ್ ದಿ ಬೆಸ್ಟ್! ಮುಂದೆ ಇನ್ನಷ್ಟು ಉತ್ತಮ ಆಫರ್ಸ್‌ ಸಿಗಲಿ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ