`ಅನಿಮಲ್' ಚಿತ್ರದ ನಂತರ ನಾಯಕಿ ತೃಪ್ತೀ ಡಿಮ್ರಿಯ ಜೀವನವೇ ಬದಲಾಗಿ ಹೋಯಿತು. ಅವಳು ಲೈಮ್ ಲೈಟಿನಲ್ಲಿ ಮಿಂಚುತ್ತಾ, ಹೆಚ್ಚು ಕೆಲಸ ಗಿಟ್ಟಿಸುತ್ತಿದ್ದಾಳೆ. ಇರಲಿ, ಸದ್ಯಕ್ಕಂತೂ ಈ ಬೋಲ್ಡ್ ಹುಡುಗಿ ತನ್ನ `ಮೀ ಟೈಂ'ಗಾಗಿ ಇಟಲಿಗೆ ಹೋಗಿದ್ದಾಳೆ. ರಾಹುಲ್ ‌ಗಾಂಧಿ ತರಹ ತೃಪ್ತೀಗೆ ಅದು ಅಜ್ಜಿ ಮನೆಯೇನೂ ಅಲ್ಲ, ಸುಮ್ಮನೆ ಟೂರ್‌ ಗೆಂದು ಹೊರಟಿದ್ದಾಳಂತೆ. ನೀವು ಸಹ ಬಿಡುವಾಗಿದ್ದಾಗ ಇಟಲಿಯ ಪ್ರವಾಸಕ್ಕೆ ಏಕೆ ಹೊರಡಬಾರದು? ಯಾರಿಗೆ ಗೊತ್ತು.... ನಿಮಗೆ ಅಲ್ಲಿ ಆಕಸ್ಮಿಕವಾಗಿ ತೃಪ್ತೀ ಅಥವಾ ರಾಹುಲ್ ‌ಗಾಂಧಿ ಸಿಕ್ಕರೂ ಸಿಗಬಹುದು!

100-Karodi-Club-me-jaengi-sharwari

100 ಕ್ರೋರ್ಕ್ಲಬ್ಗೆ ಸೇರಲಿದ್ದಾಳಾ ಶಾರಿ?

ಹಾರರ್‌ ಕಾಮೆಡಿ `ಮುಂಜ್ಯಾ' ಚಿತ್ರ ರಿಲೀಸ್‌ ಆದ ಕೆಲವೇ ದಿನಗಳಲ್ಲಿ 50 ಕೋಟಿ ಗಳಿಸುವ ಮೂಲಕ ಹೊಸ ರೆಕಾರ್ಡ್‌ ಮಾಡಿದೆ! ಶಾರ್ರಿ ವಾಘ್‌ ಹಾಗೂ ಅಭಯ್‌ ಮರ್ಮಾರಂಥ ಕನಿಷ್ಠ ಲೈಮ್ ಲೈಟ್‌ ವುಳ್ಳ ಸ್ಟಾರ್‌ ಗಳ ಈ ಚಿತ್ರ, ಉತ್ತರದವರನ್ನು ಬಹುವಾಗಿ ಆಕರ್ಷಿಸಿದೆ. ಈ ಚಿತ್ರದ ಹೆಚ್ಚಿನ ಕ್ರೆಡಿಟ್‌ ಗಿಟ್ಟಿಸಿದವಳು ಮಾತ್ರ ಶಾರಿ ಒಬ್ಬಳೇ! ಮುಂಬೈನಲ್ಲಿ ಹುಟ್ಟಿದ ಈಕೆ 27 ದಾಟಿದ್ದಾಳೆ. ಬಾಲಿವುಡ್‌ ಇವಳಿಗೆ ಧಾರಾಳ ಮಣೆ ಹಾಕಿದೆ. ಈ ಚಿತ್ರದ ನಂತರ ಈಕೆ ಜಾನ್‌ ಅಬ್ರಹಾಂ ಜೊತೆ `ವೇದಾ' ಚಿತ್ರದಲ್ಲಿ ನಟಿಸಲಿದ್ದಾಳೆ.

Barkarar-hai-gullak-ki-khanak

ಎಲ್ಲೆಲ್ಲೂ ಸದ್ದು ಮಾಡುತ್ತಿದೆ ಗುಲ್ಲಕ್

ಹಳೆ ಹಿಂದಿ ಧಾರಾವಾಹಿ `ಗುಲ್ಲಕ್‌' ಇದೀಗ ತನ್ನ ಹೊಸ ಸೀಸನ್‌ ಶುರು ಮಾಡಿ, ಎಲ್ಲೆಲ್ಲೂ ಸದ್ದು ಮಾಡುತ್ತಿದೆ! ವೀಕ್ಷಕರು ಇದನ್ನು ಬಹಳ ಮೆಚ್ಚಿದ್ದಾರೆ. ಈ ಸಲದ ಕಂತುಗಳಲ್ಲಿ ಮಧ್ಯಮ ವರ್ಗದ ಮಂದಿ ಲಂಚ ರುಶುವತ್ತು, ಕಳ್ಳತನ, ದಗಾ ಸುಲಿಗೆಗಳಂಥ ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾರೆ ಎಂದು ತೋರಿಸಲಾಗಿದೆ. ಮನೆಯ ಹೆಂಗಸರು ಇಂಥ ಸಮಸ್ಯೆಗಳಿಂದ ಹೆಚ್ಚು ಕಷ್ಟಪಡುತ್ತಾರೆ. ಎಷ್ಟೇ ಆರ್ಥಿಕ ಸಂಕಷ್ಟಗಳಿರಲಿ, ಅವರಂತೂ ಮನೆ ನಡೆಸಬೇಕಲ್ಲ? ನಮ್ಮ ಸರ್ಕಾರ ಈ `ಗುಲ್ಲಕ್‌'ನ ಸದ್ದು ಕೇಳಿಸಿಕೊಂಡರೆ, ಸಾಮಾನ್ಯ ಜನರ ಸುರಕ್ಷತೆಗೆ ಒಂದು ದಾರಿಯಾದೀತು.

Aasan-nahi-guddu-bhaiya-nibhana

ಗುಡ್ಡು ಭೈಯಾ ಆಗಿರುವುದು ಸುಲಭವಲ್ಲ

OTTಯಲ್ಲಿ `ಮಿರ್ಜಾಪುರ್‌' ಸೀರೀಸ್‌ ನ ಅಭಿಮಾನಿಗಳು ಇದರ ಹೊಸ ಸೀಸನ್‌ ಗಾಗಿ ಬಲು ಕಾತುರದಿಂದ ಕಾಯುತ್ತಿದ್ದಾರೆ. ಈ ಸಲ ಕಾಲೀನ್‌ ಭೈಯಾ ಗುಡ್ಡು ಭೈಯಾ ಮಧ್ಯೆ ನೇರಾನೇರ ಯುದ್ಧ ಆಗಲಿದೆ. ಗುಡ್ಡು ಭೈಯಾ ಅಂದ್ರೆ ಅಲೀ ಫಝಲ್ ಹೇಳುವುದೆಂದರೆ, ಈ ಪಾತ್ರ ನಿಭಾಯಿಸುವುದು ಅವನಿಗೆ ಖಂಡಿತಾ ಸುಲಭ ಆಗಿರಲಿಲ್ಲವಂತೆ. ಕ್ರೈಂ ಲೋಕ ಅರಿತು, ಆ ಪಾತ್ರದಲ್ಲಿ ಲೀನವಾಗುವುದು ಬಹಳ ಕಷ್ಟಕರವಾಗಿತ್ತಂತೆ. ಆದರೆ ಈತನ ಈ ಪಾತ್ರ ಎಲ್ಲರಿಗೂ ಬಹಳ ಇಷ್ಟವಾಗಿರುವುದರಿಂದ, ಮುಂದೆ ಈತನಿಗೆ ಛಾನ್ಸೋ ಛಾನ್ಸು!

Hum-to-pyar-me-hain

ವೀ ಆರ್ಇನ್ಲವ್!

7 ವರ್ಷಗಳ ಕಾಲ ಲಿವ್ ‌ಇನ್‌ ರಿಲೇಶನ್‌ ಶಿಪ್‌ ನಲ್ಲಿದ್ದ ಸೋನಾಕ್ಷಿ ತನ್ನ ಬಾಯ್‌ ಫ್ರೆಂಡ್‌ ಝಹೀರ್‌ ನನ್ನು ಹಲವು ವಿಧದಲ್ಲಿ ಒರೆಗೆ ಹಚ್ಚಿ, ಇದೀಗ ಮದುವೆಯ ಬಂಧನದಲ್ಲಿ ಬಂಧಿಸಲಿದ್ದಾಳೆ! ಸಾಮಾನ್ಯವಾಗಿ ಬಾಲಿವುಡ್‌ ನಲ್ಲಿ ಪರಸ್ಪರ ಬೇರೆ ಧರ್ಮೀಯರು ಲಗ್ನವಾದರೆ ದೊಡ್ಡ ರಂಪಾಟವೇನೂ ಆಗುವುದಿಲ್ಲ, ಆದರೆ ಇಲ್ಲಿ ಇವಳ ತಂದೆ ಶತ್ರುಘ್ನ ಸಿನ್ಹಾರಿಗೆ ಯಾಕೋ ಈ ಸಂಬಂಧ ಇಷ್ಟ ಆಗಲಿಲ್ಲ. ಆದರೆ ಸೋನಾಕ್ಷಿ ತಂದೆ ಮಾತನ್ನು ಮೀರಿ ಮದುವೆಗೆ ಸಿದ್ಧಳಾಗಿದ್ದಾಳೆ. ಮುಂದೆ ಝಹೀರ್‌ ಮನೆಯವರು ಬುರ್ಖಾ ಧರಿಸದ ಇವಳನ್ನು ಹೀಗೆ ಒಪ್ಪುತ್ತಾರೋ ಕಾದು ನೋಡಬೇಕು!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ